ಜನವರಿ 2025ರಲ್ಲಿ ಈ ಹಿಟ್ ಸಿನಿಮಾಗಳೆಲ್ಲಾ ಓಟಿಟಿಗೆ ಬರುತ್ತಾ?

ಹೊಸ ವರ್ಷ ಆರಂಭವಾಗುತ್ತಿದೆ. 2024ರಲ್ಲಿ ಬಿಡುಗಡೆಯಾದ ಸಿನಿಮಾಗಳು ಪ್ರೇಕ್ಷಕರನ್ನು ರಂಜಿಸಿದೆ. ಮುಂದಿನ ವರ್ಷ ಕೂಡ ಒಂದಷ್ಟು ದೊಡ್ಡ ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ. ಇದೆಲ್ಲದರ ನಡುವೆ ಓಟಿಟಿಯಲ್ಲಿ ಒಂದಷ್ಟು ಸಿನಿಮಾಗಳ ಸ್ಟ್ರೀಮಿಂಗ್ ಆಗಲಿದೆ. ವರ್ಷದ ಮೊದಲು ತಿಂಗಳ ಯಾವೆಲ್ಲಾ ಸಿನಿಮಾ, ಸೀರಿಸ್ ಬಿಡುಗಡೆ ಆಗುತ್ತದೆ ಗೊತ್ತಾ?

ಇತ್ತೀಚೆಗೆ ಕೆಲವರು ಚಿತ್ರಮಂದಿರಕ್ಕೆ ಹೋಗದೇ ಓಟಿಟಿಯಲ್ಲೇ ಸಿನಿಮಾ ನೋಡಲು ಮನಸ್ಸು ಮಾಡುತ್ತಿದ್ದಾರೆ. ದೊಡ್ಡ ಸಿನಿಮಾಗಳೇ 20 ದಿನಕ್ಕೆ ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಎಂಟ್ರಿ ಕೊಡುತ್ತಿವೆ. ಹೊಸ ವರ್ಷದ ಮೊದಲ ತಿಂಗಳು ಓಟಿಟಿ ವೀಕ್ಷಕರಿಗೆ ಭರ್ಜರಿ ಮನರಂಜನೆ ಕಾದಿದೆ. ದೊಡ್ಡ ಚಿತ್ರಗಳು ಸ್ಟ್ರೀಮಿಂಗ್ ಆರಂಭಿಸಲಿವೆ.

Super hit movies and web series ready to stream in January 2025

ಚಿತ್ರಮಂದಿರಗಳಲ್ಲಿ ಸೋತ ಕೆಲ ಸಿನಿಮಾಗಳು ಓಟಿಟಿಗೆ ಬಂದು ಗೆಲ್ಲುತ್ತಿವೆ. ಸ್ಮಾಲ್‌ ಸ್ಕ್ರೀನ್‌ನಲ್ಲಿ ಸಿನಿಮಾ ನೋಡಿ ಛೇ, ಇದನ್ನು ಬಿಗ್‌ ಸ್ಕ್ರೀನ್‌ನಲ್ಲಿ ಮಿಸ್ ಮಾಡಿಕೊಂಡೆ ಎನ್ನುವವರು ಇದ್ದಾರೆ. ಜನವರಿಯಲ್ಲಿ ಯಾವೆಲ್ಲಾ ಸಿನಿಮಾ, ವೆಬ್ ಸೀರಿಸ್ ಓಟಿಟಿಗೆ ಬರುತ್ತದೆ ಎನ್ನುವ ಲಿಸ್ಟ್ ಮುಂದೆ ಇದೆ ಓದಿ.

ಪುಷ್ಪ-2

ಅಲ್ಲು ಅರ್ಜುನ್ ನಟನೆಯ 'ಪುಷ್ಪ-2' ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೀತಿದೆ. ಚಿತ್ರವನ್ನು 56 ದಿನಗಳ ಬಳಿಕ ಓಟಿಟಿಗೆ ತರುವುದಾಗಿ ಚಿತ್ರತಂಡ ಘೋಷಿಸಿದೆ. ಹಾಗಾಗಿ ಜನವರಿ ಕೊನೆ ವಾರ ಅಥವಾ ಫೆಬ್ರವರಿಯಲ್ಲಿ ಸಿನಿಮಾ ಓಟಿಟಿಗೆ ಬರುವ ಸಾಧ್ಯತೆಯಿದೆ. ಈಗಾಗಲೇ ಸಿನಿಮಾ 1500 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ನೆಟ್‌ಫ್ಲಿಕ್ಸ್ ಚಿತ್ರದ ಓಟಿಟಿ ರೈಟ್ಸ್ ಕೊಂಡುಕೊಂಡಿದೆ.

Super hit movies and web series ready to stream in January 2025

ಮ್ಯಾಕ್ಸ್ ಹಾಗೂ ಯುಐ

ವರ್ಷ ಕೊನೆಗೆ ಕನ್ನಡದ ಎರಡು ದೊಡ್ಡ ಚಿತ್ರಗಳು ಬಂದು ಗೆದ್ದಿದೆ. 'ಮ್ಯಾಕ್ಸ್' ಹಾಗೂ 'ಯುಐ' ಸಿನಿಮಾಗಳ ಓಟಿಟಿ ಸ್ಟ್ರೀಮಿಂಗ್ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಆದರೆ ಜನವರಿ ಕೊನೆಗೆ ಸಿನಿಮಾಗಳು ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಎಂಟ್ರಿ ಕೊಟ್ಟರೂ ಅಚ್ಚರಿ ಪಡಬೇಕಿಲ್ಲ.

ವಿಡುತಲೈ-2

ವೆಟ್ರಿಮಾರನ್ ನಿರ್ದೇಶನದ 'ವಿಡುತಲೈ-2' ಸಿನಿಮಾ ಡಿಸೆಂಬರ್ 20ರಂದು ತೆರೆಗೆ ಬಂದಿತ್ತು. ಆದರೆ ನಿರೀಕ್ಷಿಸಿದ ಮಟ್ಟದಲ್ಲಿ ಸಿನಿಮಾ ಗೆಲ್ಲಲಿಲ್ಲ. ಹಾಗಾಗಿ ಸಾಕಷ್ಟು ಜನ ಓಟಿಟಿ ಸ್ಟ್ರೀಮಿಂಗ್‌ಗಾಗಿ ಕಾಯುತ್ತಿದ್ದಾರೆ. ವಿಜಯ್ ಸೇತುಪತಿ, ಸೂರಿ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಈ ಪೊಲಿಟಿಕಲ್ ಕ್ರೈಂ ಡ್ರಾಮಾ ಜನವರಿ 17ಕ್ಕೆ ಜೀ-5ಗೆ ಬರುತ್ತದೆ ಎನ್ನುವ ಚರ್ಚೆ ನಡೀತಿದೆ.

ಆಲ್‌ ವಿ ಇಮ್ಯಾಜಿನ್ ಆಸ್ ಲೈಟ್

ಪಾಯಲ್ ಕಪಾಡಿಯಾ ನಿರ್ದೇಶನದ 'ಆಲ್‌ ವಿ ಇಮ್ಯಾಜಿನ್ ಆಸ್ ಲೈಟ್' ಸಿನಿಮಾ ಜನವರಿ ಮೊದಲ ವಾರವೇ ಓಟಿಟಿಗೆ ಬರ್ತಿದೆ. ಕಣಿ ಕುಸೃತಿ, ದಿವ್ಯಾ ಪ್ರಭಾ, ಆನಂದ್ ಸಾಮಿ ಸೇರಿ ದೊಡ್ಡ ತಾರಗಣ ಚಿತ್ರದಲ್ಲಿದೆ. ದೇಶ ವಿದೇಶದ ಚಿತ್ರೋತ್ಸವಗಳಲ್ಲಿ ಈ ಸಿನಿಮಾ ಪ್ರದರ್ಶನ ಕಂಡಿದೆ. ಇದೀಗ ಓಟಿಟಿಗೆ ಎಂಟ್ರಿ ಕೊಡಲಿದೆ.

ಪಾತಾಳ್ ಲೋಕ್ ಸೀಸನ್‌-2

ಸುದೀಪ್ ಶರ್ಮಾ ನಿರ್ದೇಶನದ 'ಪಾತಾಳ್ ಲೋಕ್ ಸೀಸನ್‌-2' ಜನವರಿಯಲ್ಲೇ ಓಟಿಟಿಗೆ ಬರ್ತಿದೆ. ಮೊದಲ ಸೀಸನ್‌ನಲ್ಲಿ 9 ಎಪಿಸೋಡ್‌ಗಳು ಸ್ಟ್ರೀಮಿಂಗ್ ಆಗಿತ್ತು. ಅಮೇಜಾನ್‌ ಪ್ರೈಂನಲ್ಲೇ ಸೀಸನ್ 2 ಸಹ ಮೂಡಿ ಬರಲಿದೆ. ಜೈದೀಪ್ ಅಹ್ಲಾವತ್, ಗುಲ್ ಪನಾಗ್, ನೀರಜ್ ಕಬಿ ಸರಣಿಯ ತಾರಾಗಣದಲ್ಲಿದ್ದಾರೆ.

ಕನ್ನಡದ 'ಆನಂದ್ ಅರವಿಂದ ಸ್ವಾಮಿ', 'ಮರ್ಯಾದೆ ಪ್ರಶ್ನೆ' ಸೇರಿದಂತೆ ಮತ್ತಷ್ಟು ಸಿನಿಮಾಗಳು ಶೀಘ್ರದಲ್ಲೇ ಸ್ಟ್ರೀಮಿಂಗ್ ಆರಂಭಿಸಲಿದೆ. ತಮಿಳಿನ 'ಮಿಸ್‌ಯೂ' ಸಿನಿಮಾ ಕೂಡ ಜನವರಿಯಲ್ಲಿ ಓಟಿಟಿಗೆ ಬರುತ್ತದೆ ಎನ್ನಲಾಗ್ತಿದೆ. ಚಿತ್ರದಲ್ಲಿ ಸಿದ್ದಾರ್ಥ್‌ ಜೊತೆ ಅಶಿಕಾ ರಂಗನಾಥ್ ನಟಿಸಿದ್ದಾರೆ.

Disclaimer: ಈ ಎಲ್ಲಾ ಸಿನಿಮಾ ಹಾಗೂ ವೆಬ್‌ಸೀರಿಸ್ ಬಿಡುಗಡೆ ದಿನಾಂಕದ ಬಗ್ಗೆ ಅಧಿಕೃತ ಮಾಹಿತಿ ಬಂದಿಲ್ಲ. ಕೇವಲ ಸೋಶಿಯಲ್ ಮೀಡಿಯಾದಲ್ಲಿ ಈ ರೀತಿ ಚರ್ಚೆ ಆಗುತ್ತಿದೆ.

More from Filmibeat

English summary
Paatal Lok-2, All We Imagine As Light and many films and series ott release in january 2025;
Read more about: ott new year 2025 sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X