twitter
    For Quick Alerts
    ALLOW NOTIFICATIONS  
    For Daily Alerts

    ಒಟಿಟಿಗಳ ಮೇಲೆ ಏನು ಕ್ರಮ ಕೈಗೊಂಡಿರಿ? ಕೇಂದ್ರಕ್ಕೆ ಸುಪ್ರೀಂ ಪ್ರಶ್ನೆ

    |

    ಅಮೆಜಾನ್, ನೆಟ್‌ಫ್ಲಿಕ್ಸ್, ಆಲ್ಟ್ ಬಾಲಾಜಿ, ಊಲು, ಆಹಾ, ಸೋನಿ ಲಿವ್ ಇನ್ನೂ ಹಲವಾರು ಒಟಿಟಿಗಳು ಭಾರತದಲ್ಲಿ ಸೇವೆ ನೀಡುತ್ತಿವೆ. ಈ ಒಟಿಟಿಗಳಲ್ಲಿ ಪ್ರಸಾರವಾಗುವ ವೆಬ್ ಸರಣಿಗಳು, ಸಿನಿಮಾಗಳ ಬಗ್ಗೆ ಸಾಕಷ್ಟು ದೂರುಗಳು ಇತ್ತೀಚೆಗೆ ಕೇಳಿಬಂದಿವೆ.

    ಈ ನಿಟ್ಟಿನಲ್ಲಿ ಕೇಂದ್ರದ ಮಾಹಿತಿ ಮತ್ತು ಪ್ರಸಾರ ಇಲಾಖೆಯು ಒಟಿಟಿಗಳ ಮೇಲೆ ನಿಯಂತ್ರಣ ಹೇರುವುದಾಗಿ ಈಗಾಗಲೇ ಹೇಳಿದೆ. ಈ ನಡುವೆ ಸುಪ್ರೀಂಕೋರ್ಟ್ ಸಹ ಒಟಿಟಿಗಳ ಮೇಲೆ ನಿಯಂತ್ರಣ ಹೇರುವ ವಿಷಯದ ಬಗ್ಗೆ ಕೇಂದ್ರವನ್ನು ಪ್ರಶ್ನಿಸಿದೆ.

    ಒಟಿಟಿಗಳ ಕಂಟೆಂಟ್‌ ಮೇಲೆ ನಿಯಂತ್ರಣ ಹೇರಬೇಕೆಂದು ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿದ್ದು, ಆ ಬಗ್ಗೆ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಈ ಬಗ್ಗೆ ಏನೇನು ಕ್ರಮ ಕೈಗೊಂಡಿದ್ದಾರೆಂದು ಆರು ವಾರಗಳ ಒಳಗಾಗಿ ನ್ಯಾಯಾಲಯಕ್ಕೆ ಉತ್ತರ ನೀಡುವಂತೆ ಸೂಚಿಸಿದೆ.

     Supreme Court Asks Center To File Affidavit About Regulation Of OTT

    ನ್ಯಾಯಾಲಯಕ್ಕೆ ಉತ್ತರ ನೀಡಿದ ಸರ್ಕಾರದ ಪರ ವಕೀಲರು, ಕೇಂದ್ರ ಸರ್ಕಾರವು ಒಟಿಟಿಗಳ ಮೇಲೆ ನಿಯಂತ್ರಣ ಹೇರಿ, ಅವಕ್ಕಾಗಿ ಪ್ರತ್ಯೇಕ ಮಾರ್ಗದರ್ಶಿ ರೂಪಿಸಲು ಚಿಂತಿಸಲಾಗುತ್ತಿದೆ ಎಂದು ಹೇಳಿದ್ದಾರೆ.

    ವಕೀಲರ ಉತ್ತರಕ್ಕೆ ತೃಪ್ತಿಯಾಗದ ನ್ಯಾಯಮೂರ್ತಿಗಳು 'ಕೇವಲ ಚಿಂತನೆ'ಯಿಂದ ಏನೂ ಆಗುವುದಿಲ್ಲ. ಕೂಡಲೇ ಕಾರ್ಯ ಪ್ರವೃತ್ತರಾಗಿ ಎಂದು ಹೇಳಿದ್ದಾರೆ.

    ಒಟಿಟಿಗಳ ವಿರುದ್ಧ ಇತ್ತೀಚೆಗೆ ಸಾಕಷ್ಟು ದೂರುಗಳು ದಾಖಲಾಗಿವೆ. ಅದರಲ್ಲಿಯೂ 'ತಾಂಡವ್' ವೆಬ್ ಸರಣಿ ಪ್ರಸಾರವಾದ ನಂತರ ಒಟಿಟಿಗಳ ಬಗ್ಗೆ ದೂರು ನೀಡುವವರ ಸಂಖ್ಯೆ ಹೆಚ್ಚಾಗಿದೆ. ತಾಂಡವ್ ವೆಬ್ ಸರಣಿಯಲ್ಲಿ ಹಿಂದೂ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಆರೋಪಿಸಲಾಗಿತ್ತು. ವೆಬ್ ಸರಣಿಯ ನಿರ್ದೇಶಕ ಹಾಗೂ ನಿರ್ಮಾಪಕರಿಗೆ ನೊಟೀಸ್ ಸಹ ನೀಡಲಾಗಿದೆ.

    ಈ ಕುರಿತಾಗಿ ಕೆಲವು ದಿನಗಳ ಹಿಂದೆ ಪತ್ರಿಕಾಗೋಷ್ಠಿ ನಡೆಸಿದ್ದ ಮಾಹಿತಿ ಮತ್ತು ಪ್ರಸಾರ ಇಲಾಖೆ ಚಿವ ಪ್ರಕಾಶ್ ಜಾವಡೇಕರ್, 'ಒಟಿಟಿಗಳ ಮೇಲೆ ಮಾಹಿತಿ ಮತ್ತು ಪ್ರಸಾರ ಇಲಾಖೆಯು ನಿಯಂತ್ರಣ ಹೇರುತ್ತಿದ್ದು, ಒಟಿಟಿಯ ವೆಬ್ ಸರಣಿಗಳು, ಸಿನಿಮಾಗಳು, ಡಾಕ್ಯುಮೆಂಟರಿಗಳು ಹೇಗಿರಬೇಕು, ಹಾಗೂ ಯಾವ ನಿಯಮಗಳಡಿ ಕಾರ್ಯ ನಿರ್ವಹಿಸಬೇಕು ಎಂದು ಮಾರ್ಗೂಚಿ ಹೊರಡಿಸಲಾಗುತ್ತದೆ' ಎಂದು ಹೇಳಿದ್ದಾರೆ.

    English summary
    Supreme court asks center government to file affidavit about regulating OTT.
    Tuesday, February 16, 2021, 16:51
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X