'ಝಂಡ್' ಸಿನಿಮಾ ಒಟಿಟಿ ಬಿಡುಗಡೆಗೆ ಸುಪ್ರೀಂಕೋರ್ಟ್‌ ಅಸ್ತು

ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಅಭಿನಯದ 'ಝಂಡ್‌' ಚಿತ್ರ ಒಟಿಟಿಯಲ್ಲಿ ಬಿಡುಗಡೆಯಾಗಲು ಸುಪ್ರೀಂ ಕೋರ್ಟ್‌ ಗುರುವಾರ ಅನುಮತಿ ನೀಡಿದೆ. ಸದ್ಯ ಕೋರ್ಟ್‌ನ ಈ ಆದೇಶದಿಂದ ಚಿತ್ರತಂಡ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ. ಚಿತ್ರದ ವಿರುದ್ಧ ತೆಲಂಗಾಣ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ಇಂದು(ಮೇ 05) ತಡೆ ನೀಡಿದ್ದು, ಮೇ 6 ರಂದು ಚಿತ್ರ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ.

ಈ ಹಿಂದೆ ತೆಲಂಗಾಣ ಹೈಕೋರ್ಟ್‌ 'ಝಂಡ್‌' ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಮಾಡುವುದನ್ನು ನಿಷೇಧಿಸಿ ತಡೆಯಾಜ್ಞೆ ನೀಡಿತ್ತು. ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು ಎಎಸ್‌ ಬೋಪಣ್ಣ ಅವರ ಪೀಠವು ಅರ್ಜಿ ವಿಚಾರಣೆ ನಡೆಸಿ 'ಝಂಡ್‌' ಸಿನಿಮಾ ಒಟಿಟಿಗೆ ಬರುವುದನ್ನು ತಡೆ ಹಿಡಿದಿತ್ತು.

ಹೈದರಾಬಾದ್ ಮೂಲದ ಚಲನಚಿತ್ರ ನಿರ್ಮಾಪಕ ನಂದಿ ಚಿನ್ನಿ ಕುಮಾರ್‌ ಎಂಬುವವರು ಸಿನಿಮಾ ತಡೆ ಹಿಡಿಯಬೇಕು ಅಂತ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಮನವಿ ಆಧಾರದ ಮೇಲೆ ಹೈಕೋರ್ಟ್ ಏಪ್ರಿಲ್ 29 ರಂದು ಮಧ್ಯಂತರ ಆದೇಶವನ್ನು ಹೊರಡಿಸುವ ಮೂಲಕ 'ಝಂಡ್‌' ಚಿತ್ರದ ಆನ್‌ಲೈನ್‌ ಸ್ಕ್ರೀಮಿಂಗ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಬಿಡುಗಡೆ ನಿಷೇಧ ಹೇರಿತ್ತು. ಅಲ್ಲದೆ ಈ ಪ್ರಕರಣ ಮುಂದಿನ ವಿಚಾರಣೆಯನ್ನು ಜೂನ್‌ 8 ರಂದು ನಡೆಸಲಾಗುವುದು ಎಂದು ಹೈಕೋರ್ಟ್‌ ತನ್ನ ಆದೇಶದಲ್ಲಿ ತಿಳಿಸಿತ್ತು.

Supreme Court gives green signal to OTT Release of Jhund Movie

ಆದರೆ, ಹೈಕೋರ್ಟ್‌ ತಡೆಯಾಜ್ಞೆ ಪ್ರಶ್ನಿಸಿ 'ಝಂಡ್' ಚಿತ್ರತಂಡ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ಕೊನೆಗೂ ಇಂದು ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ 'ಝಂಡ್‌' ಒಟಿಟಿ ಬಿಡುಗಡೆಗೆ ಇದ್ದ ತಡೆಯಾಜ್ಷೆಯನ್ನು ತೆರವು ಮಾಡಿದ್ದು, ಹೈಕೋರ್ಟ್ ಆದೇಶವನ್ನು ತಿರಸ್ಕರಿಸಿದೆ. ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಚಿತ್ರ ಬಿಡುಗಡೆಗೆ ಅನುಮತಿ ಮಾಡಿಕೊಟ್ಟಿದೆ. ಇನ್ನು ಸಿನಿ ಪ್ರೇಕ್ಷಕರು ಕೂಡ 'ಝಂಡ್‌' ಸಿನಿಮಾವನ್ನು ಒಟಿಟಿಯಲ್ಲಿಯೇ ನೋಡಿ ಕಣ್ತುಂಬಿಕೊಳ್ಳಬಹುದಾಗಿದೆ.

Supreme Court gives green signal to OTT Release of Jhund Movie

ಅಮಿತಾಭ್‌ ಬಚ್ಚನ್ ನಟನೆಯ 'ಝಂಡ್‌' ಸಿನಿಮಾ ಮಾರ್ಚ್ 4 ರಂದು ರಿಲೀಸ್‌ ಆಗಿತ್ತು, ವಿಜಯ್ ಬರ್ಸೆ ಅವರ ಬಯೋಪಿಕ್ ಇದಾಗಿದೆ. ವಿಜಯ್ ಬರ್ಸೆ 'ಸ್ಲಮ್ ಸಾಕರ್‌' ಹೆಸರಿನ ಎನ್‌ಜಿಒ ಆರಂಭಿಸಿದ್ದರು. ಈ ಮೂಲಕ ಬಡ ಮಕ್ಕಳಿಗೆ ಫುಟ್‌ಬಾಲ್ ಹೇಳಿಕೊಡುವ ಕೆಲಸ ಮಾಡುತ್ತಿದ್ದರು. ಸದ್ಯ ವಿಜಯ್‌ ಸರ್ಗೆ ಅವರ ಜೀವನಾಧಾರಿತ ಸಿನಿಮಾ ಆಗಿರುವುದಿರಿಂದ ಅಮಿತಾಭ್‌ ಬಚ್ಚನ್ ವಿಜಯ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

More from Filmibeat

English summary
Supreme Court gives green signal to OTT Release of Amitabh Bachchan Movie Jhund.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X