'ವೈ ಐ ಕಿಲ್ಡ್ ಗಾಂಧಿ' ಸಿನಿಮಾ ಬಿಡುಗಡೆಗೆ ತಡೆ ಇಲ್ಲ

'ವೈ ಐ ಕಿಲ್ಡ್ ಗಾಂಧಿ' ಕಿರು ಚಿತ್ರ ವಿವಾದ ಎಬ್ಬಿಸಿದ್ದು, ಕಿರುಚಿತ್ರದ ಬಿಡುಗಡೆಗೆ ತಡೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ.

ಸುಪ್ರೀಂಕೋರ್ಟ್, ಸಿನಿಮಾ ಬಿಡುಗಡೆಗೆ ತಡೆ ನೀಡಲು ನಿರಾಕರಿಸಿದೆ ಆದರೂ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ. 'ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುವ ಮೊದಲು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಬೇಕಿತ್ತು. ಆರ್ಟಿಕಲ್ 226ರ ಅಡಿಯಲ್ಲಿ ಇಂಥಹಾ ಪ್ರಕರಣಗಳನ್ನು ವಿಚಾರಣೆ ನಡೆಸಿ ನ್ಯಾಯ ಒದಗಿಸುವ ಅಧಿಕಾರ ವ್ಯಾಪ್ತಿ ಹೈಕೋರ್ಟ್‌ ಇದೆ' ಎಂದು ಸುಪ್ರೀಂಕೋರ್ಟ್ ಹೇಳಿದೆ.

ಕೆಲವು ದಿನಗಳ ಹಿಂದೆ ಆಲ್ ಇಂಡಿಯಾ ಸಿನಿ ವರ್ಕರ್ಸ್ ಅಸೋಸಿಯೇಷನ್ ಅವರು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದು ಸಿನಿಮಾ ಬಿಡುಗಡೆ ತಡೆ ಹಿಡಿಯಲು ಒತ್ತಾಯಿಸಿದ್ದರು. ಸಿನಿಮಾವನ್ನು ಬಿಡುಗಡೆ ಮಾಡಬಾರದೆಂದು ಕಾಂಗ್ರೆಸ್ ಪಟ್ಟು ಹಿಡಿದಿತ್ತು. ಸಿನಿಮಾ ಬಿಡುಗಡೆ ತಡೆ ಹಿಡಿಯುವಂತೆ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರಿಗೆ ಕಾಂಗ್ರೆಸ್ ಮನವಿ ಮಾಡಿತ್ತು.

Supreme Court Refuses To Stay Release Of Why I Killed Gandhi Movie

ಮಹಾತ್ಮಾ ಗಾಂಧಿ ಪುಣ್ಯ ತಿಥಿ (ಜನವರಿ 30)ರಂದೇ ಈ ಕಿರುಚಿತ್ರ ಬಿಡುಗಡೆ ಆಗಿದೆ. ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಆದಾಗಿನಿಂದಲೂ ಸಿನಿಮಾದ ಬಗ್ಗೆ ವಿವಾದಗಳು ಎದ್ದಿದ್ದವು.

ಸಿನಿಮಾದಲ್ಲಿ ನಾಥೋರಾಮ್ ಗೋಡ್ಸೆಯನ್ನು ನಾಯಕನಂತೆ ಬಿಂಬಿಸಲಾಗಿದೆ. ಇದರ ಬಗ್ಗೆ ತೀವ್ರ ಆಕ್ಷೇಪ ಕೇಳಿಬಂದಿದೆ. ಮಹಾತ್ಮಾ ಗಾಂಧಿಯನ್ನು ಕೊಂದ ನಾಥೋರಾಮ್ ಗೋಡ್ಸೆ ಒಬ್ಬ ಕೊಲೆಗಾರ, ದೇಶದ ಮೊದಲ ಭಯೋತ್ಪಾದಕ ಆತನನ್ನು ನಾಯಕನಂತೆ ತೋರಿಸುವುದು, ಆತ ಮಾಡಿದ ಕೊಲೆಯನ್ನು ಸಮರ್ಥಿಸಿಕೊಳ್ಳುವುದು ಸೂಕ್ತವಲ್ಲ ಎಂಬುದು ಸಿನಿಮಾ ಬಿಡುಗಡೆಗೆ ವಿರೋಧಿಸುತ್ತಿರುವವರ ವಾದ.

More from Filmibeat

English summary
Supreme court refuses to stay on release of Why I Killed Gandhi short movie on OTT. It allows petitioner to approach high court.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X