Karuppu OTT: ಬಾಕ್ಸಾಫೀಸ್‌ನಲ್ಲಿ ₹300 ಕೋಟಿ ದೋಚಿದ 'ಕರುಪ್ಪು' ಸಿನಿಮಾ ಓಟಿಟಿ ಸ್ಟ್ರೀಮಿಂಗ್ ಎಲ್ಲಿ? ಯಾವಾಗ?

ಸೂರ್ಯ ಹಾಗೂ ತ್ರಿಷಾ ನಟನೆಯ 'ಕರುಪ್ಪು' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ಈಗಾಗಲೇ ಈ ಫ್ಯಾಂಟಿ ಎಂಟರ್‌ಟೈನರ್ ಸಿನಿಮಾ 300 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. 12 ವರ್ಷಗಳ ಬಳಿಕ ಸೂರ್ಯ ಭರ್ಜರಿಯಾಗಿ ಕಂಬ್ಯಾಕ್ ಮಾಡಿದ್ದಾರೆ. ಕರ್ನಾಟಕದಲ್ಲಿ ಕೂಡ 'ಕರುಪ್ಪು' ಸಿನಿಮಾ ಕಲೆಕ್ಷನ್ ಜೋರಾಗಿದೆ.

ಚಿತ್ರದಲ್ಲಿ ವಕೀಲನಾಗಿ ಸೂರ್ಯ ನಟಿಸಿದ್ದಾರೆ. ಆಕ್ಷನ್ ಕಟ್ ಹೇಳುವುದರ ಜೊತೆಗೆ ಮುಖ್ಯವಾದ ಪಾತ್ರದಲ್ಲಿ ಆರ್‌ಜೆ ಬಾಲಾಜಿ ನಟಿಸಿದ್ದಾರೆ. ಅಂದಾಜು 130 ಕೋಟಿ ರೂ. ಬಜೆಟ್ ಸಿನಿಮಾ 300 ಕೋಟಿ ರೂ. ಕ್ಲಬ್ ಸೇರಿದೆ. ಮೇ 15ರಂದು ಸಿನಿಮಾ ತೆರೆಗೆ ಬಂದಿತ್ತು. ಮಿಶ್ರ ಪ್ರತಿಕ್ರಿಯೆ ಸಿಕ್ಕರೂ ಫ್ಯಾಮಿಲಿ ಆಡಿಯನ್ಸ್ ಸಿನಿಮಾ ನೋಡಲು ಮುಗಿಬಿದ್ದ ಪರಿಣಾಮ ಸಿನಿಮಾ ಗೆಲುವಿನ ದಡ ಸೇರಿದೆ. ಸದ್ಯ ಓಟಿಟಿ ಸ್ಟ್ರೀಮಿಂಗ್ ಬಗ್ಗೆ ಚರ್ಚೆ ಶುರುವಾಗಿದೆ.

Suriya and and Trisha s Karuppu Locks Its OTT Partner Streaming Date

ಓಟಿಟಿ ಸ್ಟ್ರೀಮಿಂಗ್?

'ಕರುಪ್ಪು' ಸಿನಿಮಾ ಡಿಜಿಟಲ್ ಪಾರ್ಟ್ನರ್ ಫಿಕ್ಸ್ ಆಗಿದ್ದಾರೆ. ಅಮೇಜಾನ್ ಪ್ರೈಂ ವೀಡಿಯೋದಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗುವುದು ಖಚಿತವಾಗಿದೆ. ಕನ್ನಡಕ್ಕೂ ಡಬ್ ಆಗಿ ಸಿನಿಮಾ ಓಟಿಟಿಯಲ್ಲಿ ವೀಕ್ಷಣೆಗೆ ಸಿಗಲಿದೆ. ಭರ್ಜರಿ ಬೆಲೆಗೆ ಈ ಓಟಿಟಿ ಡೀಲ್ ಕುದುರಿಸಲಾಗಿದೆ. ತಿಂಗಳಿಗೂ ಮುನ್ನ ದೊಡ್ಡ ಸಿನಿಮಾಗಳು ಓಟಿಟಿಗೆ ಬರ್ತಿದೆ. ಅದೇ ರೀತಿ 'ಕರುಪ್ಪು' ಸಿನಿಮಾ ಜೂನ್ 12ರಂದು ಆನ್ಲೈನ್ ಪ್ಲಾರ್ಟ್‌ಫಾರ್ಮ್‌ಗೆ ಎಂಟ್ರಿ ಕೊಡಬಹುದು ಎನ್ನಲಾಗ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಿಲ್ಲ.

ಸ್ಯಾಟಲೈಟ್ ರೈಟ್ಸ್

ಈಗಾಗಲೇ 'ಕರುಪ್ಪು' ಚಿತ್ರದ ಸ್ಯಾಟಲೈಟ್ ರೈಟ್ಸ್ ಕೂಡ ಸೇಲ್ ಆಗಿದೆ. ಜೀ ಸಂಸ್ಥೆ ಜೊತೆ ಈ ಬಗ್ಗೆ ಒಪ್ಪಂದವಾಗಿದೆ. ಓಟಿಟಿಗ ಬಂದ ಕೆಲವೇ ದಿನಗಳಲ್ಲಿ ಮನೆ ಮನೆಯ ಟಿವಿಯಲ್ಲಿ ಸಿನಿಮಾ ನೋಡಬಹುದು. 'ಕಂಗುವ', 'ರೆಟ್ರೊ' ರೀತಿಯ ಬಹುಕೋಟಿ ವೆಚ್ಚದ ಸಿನಿಮಾಗಳು ಕೈ ಹಿಡಿಯಲಿಲ್ಲ. ಆದರೆ 'ಕರುಪ್ಪು' ಸಿನಿಮಾ ಮ್ಯಾಜಿಕ್ ಮಾಡಿಬಿಟ್ಟಿದೆ.

ಬಾಲಾಜಿ ಮ್ಯಾಜಿಕ್

ಸಿಂಪಲ್ ಕಥೆಯನ್ನು ಪ್ರೇಕ್ಷಕರಿಗೆ ಇಷ್ಟವಾಗುವಂತೆ ಕಟ್ಟಿ ಕೊಡುವ ಪ್ರಯತ್ನ ಮಾಡಲಾಗಿದೆ. ನ್ಯಾಯಾಲಯಗಳಲ್ಲಿ ಅಮಾಯಕರಿಗೆ ಅಷ್ಟು ಸುಲಭವಾಗಿ ನ್ಯಾಯ ಸಿಗಲ್ಲ. ದುಡ್ಡಿಗಾಗಿ ವಕೀಲ ವೃತ್ತಿಯನ್ನು ಕೆಲವರು ದಂಧೆ ಮಾಡಿಕೊಂಡಿದ್ದಾರೆ. ನ್ಯಾಯ ಕೇಳಿ ಕೋರ್ಟ್ ಮೆಟ್ಟಿಲೇರುವ ವಯಸ್ಸಾದ ಅಜ್ಜ ಹಾಗೂ ಆತನ ಮೊಮ್ಮಗಳಿಗೆ ವಕೀಲ ಬೇಬಿ ಕಣ್ಣನ್ ನಂಬಿಸಿ ಮೋಸ ಮಾಡುತ್ತಾನೆ. ಆಗ ಅವರಿಬ್ಬರಿಗೆ ಸಹಾಯ ಮಾಡಲು 'ಕರುಪ್ಪು' ಸ್ವಾಮಿ(ಸೂರ್ಯ) ಬರ್ತಾನೆ. ವಕೀಲನ ಅವತಾರದಲ್ಲಿ ಬಂದು ಬೇಬಿ ಕಣ್ಣನ್‌ಗೆ ಸವಾಲು ಹಾಕುತ್ತಾನೆ. ಮುಂದೇನು ಎನ್ನುವುದು ಇನ್ನುಳಿದ ಕಥೆ. ದುಷ್ಠ ವಕೀಲ ಹಾಗೂ 'ಕರುಪ್ಪು' ಸ್ವಾಮಿ ನಡುವಿನ ಜಿದ್ದಾಜಿದ್ದಿನ ಪೈಪೋಟಿ ಕಥೆ ಚಿತ್ರದಲ್ಲಿದೆ.

ಚಿತ್ರತಂಡ ಖುಷ್

'ಕರುಪ್ಪು' ಸಿನಿಮಾ ಗೆಲುವು ಚಿತ್ರತಂಡದ ಸಂತಸಕ್ಕೆ ಕಾರಣವಾಗಿದೆ. ಸೀಕ್ವೆಲ್ ಮಾಡುವ ಸುಳಿವು ಸಿಕ್ಕಿದೆ. ಇದೇ ಖುಷಿಯಲ್ಲಿ ಚಿತ್ರದ ಛಾಯಾಗ್ರಾಹಕ ಜಿ. ಕೆ ವಿಷ್ಣು ಹಾಗೂ ಸಂಗೀತ ನಿರ್ದೇಶಕ ಸಾಯಿ ಅಭಯಂಕರ್‌ಗೆ ನಟ ಸೂರ್ಯ 25 ಲಕ್ಷ ಮೌಲ್ಯದ ಮಹೀಂದ್ರಾ ಬಿಇ 6 ಕಾರ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಅಭಿಮಾನಿಗಳು ಈ ಬಗ್ಗೆ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಸಿನಿಮಾ ಗೆದ್ದಾಗ ನಿರ್ದೇಶಕನಿಗೆ ಗಿಫ್ಟ್ ಕೊಡುವುದು ವಾಡಿಕೆ. ಆದರೆ ಬೇರೆ ತಂತ್ರಜ್ಞರನ್ನು ಗುರ್ತಿಸುವುದು ಮುಖ್ಯ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ವಿಶೇಷ ಸೂಚನೆ: 'ಕರುಪ್ಪು' ಸಿನಿಮಾ ಓಟಿಟಿ ರಿಲೀಸ್ ಡೇಟ್ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ಹೊರಬಂದಿಲ್ಲ. ಜೂನ್ 12ರಂದು ಸ್ಟ್ರೀಮಿಂಗ್ ಆಗಬಹುದು ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಿದೆ.

Read more about: suriya trisha kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X