For Quick Alerts
  ALLOW NOTIFICATIONS  
  For Daily Alerts

  ನಟ ಸೂರ್ಯ ಸಿನಿಮಾಗಳನ್ನು ಪ್ರದರ್ಶಿಸುವುದಿಲ್ಲ: ಚಿತ್ರಮಂದಿರಗಳಿಂದ ಬಹಿಷ್ಕಾರ

  |

  ತಮಿಳಿನ ಖ್ಯಾತ ನಟ ಸೂರ್ಯ ಸಿನಿಮಾಗಳನ್ನು ಪ್ರದರ್ಶನ ಮಾಡದಿರುವುದಾಗಿ ತಮಿಳುನಾಡು ಚಲನಚಿತ್ರ ಮಂದಿರ ಮಾಲೀಕರ ಸಂಘ ನಿರ್ಧಾರ ಮಾಡಿದೆ.

  Tamil Actor Suriya becomes emotional after hearing Gayathri story

  ನಟ ಸೂರ್ಯ ಮಡದಿ ಜ್ಯೂತಿಕಾ ಅಭಿನಯದ 'ಪೊನ್ಮಗಳ್ ವಂದಾಳ್' ಸಿನಿಮಾವನ್ನು ಚಿತ್ರಮಂದಿರಗಳಿಗೆ ಬಿಡುಗಡೆ ಮಾಡುವ ಮುನ್ನವೇ ನೇರವಾಗಿ ಅಮೆಜಾನ್ ಪ್ರೈಂ ನಲ್ಲಿ ಬಿಡುಗಡೆ ಮಾಡಿದ್ದಕ್ಕೆ ಚಿತ್ರಮಂದಿರಗಳ ಮಾಲೀಕರ ಸಂಘ ಆಕ್ಷೇಪ ವ್ಯಕ್ತಪಡಿಸಿದೆ.

  ಇದೇ ಕಾರಣಕ್ಕೆ ನಟ ಸೂರ್ಯ ಮತ್ತು ಸನ್ ನ 2ಡಿ ಎಂಟರ್ಟೇನ್‌ಮೆಂಟ್ ಸಂಸ್ಥೆಯ ಸಿನಿಮಾಗಳಣ್ನು ಸಿನಿಮಾ ಮಂದಿರಗಳಲ್ಲಿ ಪ್ರದರ್ಶಿಸದೇ ಇರುವುದಾಗಿ ನಿರ್ಧಾರವನ್ನು ಇಂದು ಪ್ರಟಿಸಿದ್ದಾರೆ.

  ನೇರವಾಗಿ ಪ್ರೈಂ ಗೆ ಬಿಡುಗಡೆ ಮಾಡಿದ ಸೂರ್ಯ

  ನೇರವಾಗಿ ಪ್ರೈಂ ಗೆ ಬಿಡುಗಡೆ ಮಾಡಿದ ಸೂರ್ಯ

  'ಪೊನ್ಮಗಳ್ ವಂದಾಳ್' ಸಿನಿಮಾದಲ್ಲಿ ಜ್ಯೋತಿಕ ನಟಿಸಿದ್ದು, ಸಿನಿಮಾವನ್ನು ಸೂರ್ಯಾ ನಿರ್ಮಾಣ ಸಂಸ್ಥೆಯಾದ 2ಡಿ ಎಂಟರ್ಟೇನ್‌ಮೆಂಟ್ ನಿರ್ಮಿಸಿದೆ. ಸಿನಿಮಾವನ್ನು ನೇರವಾಗಿ ಅಮೆಜಾನ್ ಪ್ರೈಂ ಗೆ ಬಿಡುಗಡೆ ಮಾಡಲಾಗುತ್ತಿದೆ. ಇದನ್ನು ತಡೆಯುವಂತೆ ಚಿತ್ರಮಂದಿರಗಳ ಮಾಲೀಕರ ಸಂಘ ಕೋರಿದ್ದರೂ ಸಹ ಅದಕ್ಕೆ ಯಾವುದೇ ಪ್ರತಿಕ್ರಿಯೆನ್ನು ನೀಡಲಾಗಿಲ್ಲ.

  ಚಿತ್ರಮಂದಿರ, ಮಲ್ಟಿಫ್ಲೆಕ್ಸ್ ಮಾಲೀಕರ ಸಂಘ ನಿರ್ಧಾರ

  ಚಿತ್ರಮಂದಿರ, ಮಲ್ಟಿಫ್ಲೆಕ್ಸ್ ಮಾಲೀಕರ ಸಂಘ ನಿರ್ಧಾರ

  ಈ ಬಗ್ಗೆ ಇಂದು ವಿಡಿಯೋ ಬಿಡುಗಡೆ ಮಾಡಿರುವ ತಮಿಳುನಾಡು ರಾಜ್ಯ ಚಿತ್ರಮಂದಿರ ಮತ್ತು ಮಲ್ಟಿಫ್ಲೆಕ್ಸ್ ಮಾಲೀಕರ ಸಂಘದ ಕಾರ್ಯದರ್ಶಿ ಪನ್ನೀರ ಸೆಲ್ವಂ, 'ಸೂರ್ಯ ಅಭಿನಯಿಸಿರುವ ಯಾವುದೇ ಸಿನಿಮಾ ಹಾಗೂ ಸೂರ್ಯ ಮಾಲೀಕತ್ವದ 2 ಡಿ ಸಂಸ್ಥೆಯ ಯಾವುದೇ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ಪ್ರದರ್ಶನ ಮಾಡುವುದಿಲ್ಲ' ಎಂದು ಹೇಳಿದ್ದಾರೆ.

  ಸಾಮಾಜಿಕ ಜಾಲತಾಣದಲ್ಲಿ ವಿರೋಧ

  ಸಾಮಾಜಿಕ ಜಾಲತಾಣದಲ್ಲಿ ವಿರೋಧ

  ಸೂರ್ಯ ಸಿನಿಮಾ ನಿಷೇಧಕ್ಕೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಚಿತ್ರಮಂದಿರಗಳ ಮಾಲೀಕರು ತಮ್ಮ ಕಾಲ ಮೇಲೆ ಕಲ್ಲು ಹಾಕಿಕೊಳ್ಳುತ್ತಿದ್ದಾರೆ ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ.

  ಸೂರರೈ ಪೊಟ್ರು ಮೇಲೆ ಭಾರಿ ಭರವಸೆ

  ಸೂರರೈ ಪೊಟ್ರು ಮೇಲೆ ಭಾರಿ ಭರವಸೆ

  ಸೂರ್ಯ ಅವರು ಮುಂಬರುವ ಚಿತ್ರ 'ಸೂರರೈ ಪೊಟ್ರು' ಸಿನಿಮಾ ಭಾರಿ ಕ್ರೇಜ್ ಹುಟ್ಟಿಸಿದ್ದು, ಬ್ಲಾಕ್ ಬಸ್ಟರ್ ಆಗುವ ಸಂಭವ ಇದೆ. ಆದರೆ ಈ ಸಮಯದಲ್ಲಿ ಸೂರ್ಯ ಮೇಲೆ ನಿಷೇಧ ಹೇರಿರುವುದು ಸಿನಿಮಾಕ್ಕೆ ಭಾರಿ ಹೊಡೆತ ಬೀಳಲಿದೆ. ಸೂರ್ಯ ಏನು ಮಾಡುತ್ತಾರೋ ಕಾದು ನೋಡಬೇಕಿದೆ. ಈ ಸಿನಿಮಾ ಕನ್ನಡಿಗ ಕ್ಯಾಪ್ಟನ್ ಗೋಪಿನಾಥ್ ಜೀವನ ಆಧಾರಿತವಾಗಿದೆ.

  English summary
  Actor Suriya movies banned by theater and multiflex owners association in Tamil Nadu because Suriya releases his wife's movie directly to OTT

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X