ಸುಶಾಂತ್‌ ಸಿಂಗ್ ಕೊನೆಯ ಸಿನಿಮಾ ಬಿಡುಗಡೆ: ಉಚಿತವಾಗಿ ನೋಡಿ!

ನಟ ಸುಶಾಂತ್ ಸಿಂಗ್ ನಟಿಸಿದ್ದ ಕೊನೆಯ ಸಿನಿಮಾ 'ದಿಲ್ ಬೇಚಾರ' ಇಂದು (ಜುಲೈ 24) ಸಂಜೆ 7:30 ಕ್ಕೆ ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆ ಆಗುತ್ತಿದೆ.

ಸುಶಾಂತ್ ಸಿಂಗ್ ನಟಿಸಿರುವ ಕೊನೆಯ ಸಿನಿಮಾ ಇದು ಎಂಬ ಕಾರಣಕ್ಕೆ ಸಿನಿಮಾ ಭಾರಿ ಕುತೂಹಲ ಕೆರಳಿಸಿದೆ. ಕೆಲವು ದಿನಗಳ ಹಿಂದೆ ಬಿಡುಗಡೆ ಆಗಿದ್ದ ದಿಲ್ ಬೇಚಾರಾ ಸಿನಿಮಾದ ಟ್ರೇಲರ್ ಈಗಾಗಲೇ ಭಾರಿ ಹಿಟ್ ಆಗಿದೆ. ಕೆಲವು ದಾಖಲೆಗಳನ್ನೂ ನಿರ್ಮಿಸಿದೆ.

ಸಿನಿಮಾ ದಿಲ್ ಬೇಚಾರ ಸಹ ಒಟಿಟಿಯಲ್ಲಿ ಹೊಸ ದಾಖಲೆ ನಿರ್ಮಿಸಲಿದೆ ಎಂಬ ಅಂದಾಜಿದೆ. ಇದಕ್ಕೆ ತಕ್ಕಂತೆ ಡಿಸ್ನಿ ಹಾಟ್‌ಸ್ಟಾರ್ ಸಹ ಉಚಿತವಾಗಿ ಸಿನಿಮಾವನ್ನು ಪ್ರದರ್ಶಿಸುತ್ತಿದೆ.

ಉಚಿತವಾಗಿ ಸಿನಿಮಾ ನೋಡಬಹುದು

ಉಚಿತವಾಗಿ ಸಿನಿಮಾ ನೋಡಬಹುದು

ಹೌದು, ದಿಲ್ ಬೇಚಾರ ಸಿನಿಮಾವನ್ನು ಉಚಿತವಾಗಿ ಎಲ್ಲರೂ ನೋಡಬಹುದಾಗಿದೆ. ಡಿಸ್ನಿ ಹಾಟ್‌ಸ್ಟಾರ್ ಆಪ್ ಹೊಂದಿರುವ ಎಲ್ಲರೂ ಸಬ್‌ಸ್ಕ್ರೈಬ್ ಆಗಿರಲಿ, ಆಗಿರದೇ ಇದ್ದರೂ ಸಹ ಸಿನಿಮಾ ನೋಡಬಹುದಾಗಿದೆ. ಈ ಸಿನಿಮಾವನ್ನು ಉಚಿತವಾಗಿ ತನ್ನ ಆಪ್‌ನಲ್ಲಿ ಬಿಡುಗಡೆ ಮಾಡಿದೆ ಹಾಟ್‌ಸ್ಟಾರ್.

ಸಂಜನಾ ಸಂಘಿ ನಾಯಕಿ

ಸಂಜನಾ ಸಂಘಿ ನಾಯಕಿ

ದಿಲ್ ಬೇಚಾರಾ ಸಿನಿಮಾದಲ್ಲಿ ಸುಶಾಂತ್ ಜೊತೆ ಸಂಜನಾ ಸಂಘಿ, ಸೈಫ್ ಅಲಿ ಖಾನ್ ನಟಿಸಿದ್ದಾರೆ. ಸಿನಿಮಾದ ನಿರ್ದೇಶನವನ್ನು ಮುಖೇಶ್ ಚಬ್ರಾ ಮಾಡಿದ್ದು, ಸಂಗೀತ ನಿರ್ದೇಶನ ಎ.ಆರ್.ರೆಹಮಾನ್. ಹಾಡುಗಳು ಈಗಾಗಲೇ ಸೂಪರ್ ಹಿಟ್ ಆಗಿದೆ.

ಸ್ವಜನಪಕ್ಷಪಾತ, ಗುಂಪುಗಾರಿಕೆ ವಿರುದ್ಧ ದನಿ

ಸ್ವಜನಪಕ್ಷಪಾತ, ಗುಂಪುಗಾರಿಕೆ ವಿರುದ್ಧ ದನಿ

ಸುಶಾಂತ್ ಸಿಂಗ್ ಸಾವು ಬಾಲಿವುಡ್‌ನಲ್ಲಿ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ. ಸುಶಾಂತ್ ಆತ್ಮಹತ್ಯೆಗೆ ಸ್ವಜನಪಕ್ಷಪಾತ ಹಾಗೂ ಬಾಲಿವುಡ್‌ನ ಗುಂಪುಗಾರಿಕೆಯೇ ಕಾರಣ ಎಂದು ಹಲವರು ಆರೋಪಿಸಿದ್ದಾರೆ. ಕೆಲವು ಬಾಲಿವುಡ್ ಸೆಲೆಬ್ರಿಟಿಗಳ ಮೇಲೆ ದೂರು ಸಹ ದಾಖಲಾಗಿತ್ತು.

ಸಂಜಯ್ ಲೀಲಾ ಬನ್ಸಾಲಿ ವಿಚಾರಣೆ

ಸಂಜಯ್ ಲೀಲಾ ಬನ್ಸಾಲಿ ವಿಚಾರಣೆ

ಸುಶಾಂತ್ ಸಿಂಗ್ ಸಾವಿನ ತನಿಖೆಯನ್ನು ಮುಂಬೈ ಪೊಲೀಸರು ಮಾಡುತ್ತಿದ್ದು, ಸುಶಾಂತ್ ಸಿಂಗ್ ಗೆಳತಿಯರು, ಕುಟುಂಬ, ಸಿಬ್ಬಂದಿ ಜೊತೆಗೆ ಸಂಜಯ್ ಲೀಲಾ ಬನ್ಸಾಲಿ ಸೇರಿ ಇನ್ನೂ ಕೆಲವು ಬಾಲಿವುಡ್ ಸೆಲೆಬ್ರಿಟಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಸುಶಾಂತ್ ಪ್ರಕರಣವನ್ನು ಸಿಬಿಐ ಗೆ ಒಪ್ಪಿಸುವಂತೆ ಒತ್ತಾಯಗಳು ಕೇಳಿಬರುತ್ತಿವೆ.

More from Filmibeat

English summary
Sushant Singh's last movie Dil Bechara movie releasing on hotstar on July 24. Non subscribers also can watch it for free.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X