twitter
    For Quick Alerts
    ALLOW NOTIFICATIONS  
    For Daily Alerts

    ದೇವಾಲಯದಲ್ಲಿ ಚುಂಬನ ದೃಶ್ಯ: ನೆಟ್‌ಫ್ಲಿಕ್ಸ್‌ ಬೆಂಬಲಕ್ಕೆ ನಿಂತ ನಟಿ

    |

    ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗುತ್ತಿರುವ 'ಎ ಸೂಟೆಬಲ್ ಬಾಯ್' ವೆಬ್ ಸರಣಿಯು ವಿವಾದಕ್ಕೆ ಈಡಾಗಿದೆ. ವೆಬ್ ಸರಣಿಯಲ್ಲಿ ಮುಸ್ಲಿಂ ಪಾತ್ರಧಾರಿಯೊಬ್ಬ, ಹಿಂದು ಯುವತಿ ಪಾತ್ರಧಾರಿಗೆ ದೇವಾಲಯದಲ್ಲಿ ಚುಂಬಿಸುವ ದೃಶ್ಯವಿದೆ. ಇದರ ವಿರುದ್ಧ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಬಿಜೆಪಿ ಕೇಂದ್ರ ಸಚಿವರು, ಯುವಮೋರ್ಚಾ ರಾಷ್ಟ್ರೀಯ ಕಾರ್ಯದರ್ಶಿ ಸೇರಿದಂತೆ ಹಲವರು ನೆಟ್‌ಫ್ಲಿಕ್ಸ್‌ ನ ಇಬ್ಬರು ಹಿರಿಯ ಅಧಿಕಾರಿಗಳ ವಿರುದ್ಧ ದೂರು ನೀಡಿದ್ದು, ಎಫ್‌ಐಆರ್ ಸಹ ದಾಖಲಾಗಿದೆ.

    ದೇವಸ್ಥಾನದಲ್ಲಿ ಚುಂಬನ: ಕೇಂದ್ರ ಸಚಿವ ಗರಂ, ವೆಬ್ ಸರಣಿ ವಿರುದ್ಧ ಪ್ರಕರಣ ದಾಖಲುದೇವಸ್ಥಾನದಲ್ಲಿ ಚುಂಬನ: ಕೇಂದ್ರ ಸಚಿವ ಗರಂ, ವೆಬ್ ಸರಣಿ ವಿರುದ್ಧ ಪ್ರಕರಣ ದಾಖಲು

    ಇದೀಗ ನಟಿ ಸ್ವರಾ ಭಾಸ್ಕರ್, ಎ ಸೂಟೆಬಲ್ ಬಾಯ್ ವೆಬ್ ಸರಣಿಯ ಚುಂಬನ ದೃಶ್ಯ ಎಬ್ಬಿಸಿರುವ ವಿವಾದದ ಬಗ್ಗೆ ಮಾತನಾಡಿದ್ದು, ಕಟುವ ಅತ್ಯಾಚಾರ ಹಾಗೂ ಈಗಿನ ವಿವಾದವನ್ನು ಸಮೀಕರಿಸಿ ಹೇಳಿಕೆ ನೀಡಿದ್ದಾರೆ. ಸ್ವರಾ ಟ್ವೀಟ್ ಸಹ ಸಖತ್ ವೈರಲ್ ಆಗಿದೆ.

    ದೇವಾಲಯದಲ್ಲಿ ಚುಂಬನ ದೃಶ್ಯ: ನೆಟ್‌ಫ್ಲಿಕ್ಸ್‌ನ ಇಬ್ಬರು ಅಧಿಕಾರಿಗಳ ವಿರುದ್ಧ ಎಫ್‌ಐಆರ್‌ದೇವಾಲಯದಲ್ಲಿ ಚುಂಬನ ದೃಶ್ಯ: ನೆಟ್‌ಫ್ಲಿಕ್ಸ್‌ನ ಇಬ್ಬರು ಅಧಿಕಾರಿಗಳ ವಿರುದ್ಧ ಎಫ್‌ಐಆರ್‌

    'ದೇವಾಲಯದಲ್ಲಿ ಅತ್ಯಾಚಾರವಾದಾಗ ನಿಮ್ಮ ರಕ್ತ ಕುದಿಯಲಿಲ್ಲವೇಕೆ?'

    'ದೇವಾಲಯದಲ್ಲಿ ಅತ್ಯಾಚಾರವಾದಾಗ ನಿಮ್ಮ ರಕ್ತ ಕುದಿಯಲಿಲ್ಲವೇಕೆ?'

    ಕಠುವಾದಲ್ಲಿ ಎಂಟು ವರ್ಷದ ಹೆಣ್ಣುಮಗಳನ್ನು ದೇವಾಲಯದ ಒಳಗೆ ಅತ್ಯಾಚಾರ ಮಾಡಲಾಯಿತು, ಆಗ ಕುದಿಯದಿದ್ದ ನಿಮ್ಮ ರಕ್ತ ಈಗ ದೇವಾಲಯದಲ್ಲಿ ಚುಂಬಿಸುವ ದೃಶ್ಯ ನೋಡಿದಾಗ ಕುದಿಯುತ್ತಿದ್ದೆಯೇ ಎಂದು ಸ್ವರಾ ಭಾಸ್ಕರ್ ಪ್ರಶ್ನಿಸಿದ್ದಾರೆ.

    2018 ರಲ್ಲಿ ನಡೆದ ಘಟನೆ

    2018 ರಲ್ಲಿ ನಡೆದ ಘಟನೆ

    2018 ರಲ್ಲಿ ಕಠುವಾದ ರಸಾನಾ ಎಂಬ ಹಳ್ಳಿಯಲ್ಲಿ ಎಂಟು ವರ್ಷದ ಬಾಲಕಿಯ ಮೇಲೆ ದೇವಾಲಯದ ಒಳಗೆ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿತ್ತು. ಈ ಪ್ರಕರಣ ದೇಶದೆಲ್ಲೆಡೆ ಸದ್ದು ಮಾಡಿತ್ತು. ಸ್ವರಾ ಭಾಸ್ಕರ್ ಸಹ ಕಠವಾ ಘಟನೆಯನ್ನು ಖಂಡಿಸಿ ಪ್ರತಿಭಟಿಸಿದ್ದರು.

    ಬಾಯ್‌ಕಾಟ್ ನೆಟ್‌ಫ್ಲಿಕ್ಸ್‌ ಟ್ರೆಂಡ್

    ಬಾಯ್‌ಕಾಟ್ ನೆಟ್‌ಫ್ಲಿಕ್ಸ್‌ ಟ್ರೆಂಡ್

    ಇದೀಗ ದೇವಾಲಯದಲ್ಲಿ ಚುಂಬನ ದೃಶ್ಯದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ನೆಟ್‌ಫ್ಲಿಕ್ಸ್ ಅನ್ನು ಬ್ಯಾನ್ ಮಾಡುವಂತೆ ಅಭಿಯಾನ ನಡೆಸಲಾಗುತ್ತಿದೆ. ಆದರೆ ನೆಟ್‌ಫ್ಲಿಕ್ಸ್‌ ಪರವಾಗಿ ಸಹ ಹಲವಾರು ಮಂದಿ ಟ್ವೀಟ್ ಮಾಡಿ ಅಭಿಪ್ರಾಯ ಹೊರಹಾಕುತ್ತಿದ್ದಾರೆ.

    Recommended Video

    6 - 5 = 2 ನಿರ್ಮಾಪಕರಿಂದ ಮತ್ತೊಂದು ಹಾರಾರ್ ಸಿನಿಮಾ | Mane Number 13 | Horror Movie
    'ದೇವಾಲಯಗಳ ಮೇಲೆ ಮಿಥುನ ಶಿಲ್ಪಗಳಿವೆ'

    'ದೇವಾಲಯಗಳ ಮೇಲೆ ಮಿಥುನ ಶಿಲ್ಪಗಳಿವೆ'

    ಭಾರತದ ಹಲವು ದೇವಾಲಯಗಳಲ್ಲಿಯೇ ಮಿಥುನ ಶಿಲ್ಪಗಳು ಸಾಕಷ್ಟು ಇವೆ. ಕಾಮ ಭಂಗಿಗಳನ್ನು ದೇವಾಲಯದ ಗೋಡೆಗಳ ಮೇಲೆ ಕೆತ್ತಲಾಗಿದೆ. ಹೀಗಿದ್ದ ಮೇಲೆ ದೇವಾಲಯದ ಒಳಗೆ ಮುತ್ತಿನ ದೃಶ್ಯ ಚಿತ್ರೀಕರಿಸಿದ್ದು ಹೇಗೆ ತಪ್ಪು ಎಂದು ಪ್ರಶ್ನೆ ಮಾಡಲಾಗುತ್ತಿದೆ.

    English summary
    Swara Bhaskar Tweets in support of Netflix and A Suitable Boy web series which is in news for its kissing scene in temple.
    Thursday, November 26, 2020, 15:09
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X