"ಜನರು ಇಷ್ಟಪಡಲಿ ಅಥವಾ ಇಷ್ಟಪಡದಿರಲಿ ಅದು ಹೀಗೆ ಇರುತ್ತದೆ": ತಮನ್ನಾ
ವಿಜಯ್ ವರ್ಮಾ ಜೊತೆಗಿನ ರಿಲೇಷನ್‌ಶಿಪ್ ಬಗ್ಗೆ ಇತ್ತೀಚೆಗೆ ನಟಿ ತಮನ್ನಾ ಮೌನ ಮುರಿದಿದ್ದರು. ಇನ್ನು ಮಿಲ್ಕಿಬ್ಯೂಟಿ ನಟನೆಯ 'ಜಿ ಕರ್ದಾ' ವೆಬ್ ಸೀರಿಸ್ ಸದ್ದು ಮಾಡ್ತಿದೆ. ಅದರಲ್ಲೂ ತಮನ್ನಾ ಬೆಡ್‌ರೂಂ ದೃಶ್ಯಗಳು ಆನ್‌ಲೈನ್ ಲೀಕ್ ಆಗಿ ವೈರಲ್ ಆಗ್ತಿದೆ. ಲಿಪ್‌ಲಾಕ್, ಇಂಟಿಮೇಟ್ ಸೀನ್‌ಗಳಿಗೆ ನೋ ಎನ್ನುತ್ತಿದ್ದ ಚೆಲುವೆ ಇದೀಗ ಮೈಚಳಿ ಬಿಟ್ಟು ನಟಿಸಿದ್ದಾರೆ.
ಅರುಣಿಮಾ ಶರ್ಮಾ ಹಾಗೂ ಹೋಮಿ ಅದಾಜಾನಿಯಾ ನಿರ್ದೇಶನದ 'ಜೀ ಕರ್ದಾ' ವೆಬ್ ಸೀರಿಸ್‌ನಲ್ಲಿ ತಮನ್ನಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸದ್ಯ ಅಮೇಜಾನ್ ಪ್ರೈಂನಲ್ಲಿ ಈ ವೆಬ್ ಸೀರಿಸ್ ಸ್ಟ್ರೀಮಿಂಗ್ ಆಗ್ತಿದೆ. ಕಥೆ, ಅಭಿನಯಕ್ಕಿಂತ ಮಿಲ್ಕಿ ಬ್ಯೂಟಿ ಬೋಲ್ಡ್ ಸೀನ್ಸ್ ಬಗ್ಗೆ ಹೆಚ್ಚು ಚರ್ಚೆ ಆಗುತ್ತಿದೆ. ಜೊತೆಗೆ ತಮನ್ನಾ ಹಾಟ್ ಸೀನ್‌ಗಳ ಬಗ್ಗೆ ಟೀಕೆ ಕೂಡ ವ್ಯಕ್ತವಾಗುತ್ತಿದೆ. ತಮನ್ನಾ ಈ ಹಿಂದೆ ಇಷ್ಟು ಬೋಲ್ಡ್ ಆಗಿ ನಟಿಸಿರಲಿಲ್ಲ. ಹಾಗಾಗಿ ಅದೇ ವಿಚಾರ ಈ ಹಾಟ್ ಟಾಪಿಕ್ ಆಗಿದೆ. ಟ್ರೈಲರ್ ನೋಡಿದಾಗಲೇ ಈ ಸೀರಿಸ್ ಬಗ್ಗೆ ಕುತೂಹಲ ಮೂಡಿತ್ತು. ಅದಕ್ಕೆ ತಕ್ಕಂತೆ ಈ ರೆಸ್ಪಾನ್ಸ್ ಸಿಕ್ತಿದೆ.

'ಜಿ ಕರ್ದಾ' ವೆಬ್ ಸೀರೀಸ್ ಕಥೆ ಏನು ಅನ್ನುವುದನ್ನು ನೋಡುವುದಾದರೆ ಶಾಲಾ ದಿನಗಳಿಂದ ಸ್ನೇಹಿತರಾಗಿರುವ ಲಾವಣ್ಯ (ತಮನ್ನಾ) ಮತ್ತು ರಿಷಬ್ (ಸುಹೇಲ್) ಲಿವ್-ಇನ್ ರಿಲೇಷನ್‌ಶಿಪ್‌ನಲ್ಲಿರುತ್ತಾರೆ. ರಿಷಬ್ ಒಮ್ಮೆ ಲಾವಣ್ಯ ಬಳಿ ಮದುವೆ ಪ್ರಸ್ತಾಪ ಮಾಡುತ್ತಾನೆ. ಅಲ್ಲಿಂದ ಮುಂದೆ ಏನೆಲ್ಲಾ ಆಗುತ್ತದೆ? ಅನ್ನೋದನ್ನು ಕಟ್ಟಿಕೊಡಲಾಗಿದೆ. ಸಚಿನ್- ಜಿಗರ್ ಸಂಗೀತ ನೀಡಿದ್ದಾರೆ. 8 ಎಪಿಸೋಡ್‌ಗಳಾಗಿ ಈ ವೆಬ್ ಸೀರಿಸ್ ರಿಲೀಸ್ ಆಗಿದೆ.
ಇದು ಬರೀ ರಿಷಬ್ ಹಾಗೂ ಲಾವಣ್ಯ ಕಥೆ ಮಾತ್ರ ಅಲ್ಲ. ಜೀವನ ಸಂಗಾತಿಯನ್ನು ಹುಡುಕುತ್ತಿರುವ ಪ್ರೀತ್ (ಅನ್ಯಾಸಿಂಗ್), ಮಧ್ಯಮ ವರ್ಗದ ಮನೆಯಲ್ಲಿ ಪತಿಯೊಂದಿಗೆ ಅಸಮಾಧಾನ ಹೊಂದಿರುವ ಶೀತಲ್ (ಸಂವೇದನಾ), ಆರ್ಥಿಕ ಸಮಸ್ಯೆಯಿಂದ ಬಳಲುತ್ತಿರುವ ಸಮಯದಲ್ಲಿ ವಿವಾಹಿತ ಮಹಿಳೆಯನ್ನು ಪ್ರೀತಿಸುವ ಶಾಹಿದ್ (ಹುಸೇನ್) ಮತ್ತು ಸೀಕ್ರೆಟ್ ಆಗಿ ರಿಲೇಷನ್‌ಶಿಪ್‌ನಲ್ಲಿರುವ ಮೆಲ್ರಾಯ್(ನಯಾನ್) ಹೀಗೆ ಲಾವಣ್ಯ ಸ್ಕೂಲ್‌ಮೇಟ್ಸ್ ಕಥೆಗಳು ಇಲ್ಲಿವೆ.
ಕಥೆಗೆ ಆ ಸನ್ನಿವೇಶಗಳು ಬೇಕಾಗಿತ್ತು
ಸದ್ಯ ಬೋಲ್ಡ್ ಸೀನ್‌ಗಳಲ್ಲಿ ನಟಿಸಿರುವ ಬಗ್ಗೆ ನಟಿ ತಮನ್ನಾ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. "ಇಂತಹ ದೃಶ್ಯಗಳು ಕಥೆಗೆ ತೀರಾ ಅಗತ್ಯ ಎನಿಸಿತು. ಒಂದು ಆತ್ಮೀಯ ಸಂಬಂಧವನ್ನು ನೈಜವಾಗಿ ತೋರಿಸುವ ಸಂದರ್ಭದಲ್ಲಿ ಈ ರೀತಿಯ ದೃಶ್ಯಗಳು ಬಹಳ ಮುಖ್ಯ, ಅದಕ್ಕಾಗಿಯೇ ಇಂತಹ ದೃಶ್ಯಗಳನ್ನು ಮಾಡಬೇಕಾಯಿತು. ಯಾರೇ ಟೀಕಿಸಲಿ, ಜನರು ಇಷ್ಟಪಡಲಿ ಅಥವಾ ಒಪ್ಪಿಕೊಳ್ಳದಿರಲಿ, ಅದನ್ನು ಕಥೆಯ ಭಾಗವಾಗಿ ಇದೇ ರೀತಿ ತೋರಿಸಲಾಗುತ್ತದೆ. ಇಬ್ಬರು ತಮ್ಮ ಜೀವನದಲ್ಲಿ ಒಬ್ಬರನ್ನೊಬ್ಬರು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳು ಸಂದರ್ಭದ್ಲಿ ಆ ದೃಶ್ಯಗಳು ಬರುತ್ತವೆ"
'ಲಸ್ಟ್ ಸ್ಟೋರಿಸ್'-2 ರಿಲೀಸ್‌ಗೆ ರೆಡಿ
"ನಮ್ಮ ನಿರ್ದೇಶಕಿ ಅರುಣಿಮಾ ನೀಡಿದ ಸಲಹೆಗಳಿಂದ ಅಂತಹ ದೃಶ್ಯಗಳಲ್ಲಿ ಸುಲಭವಾಗಿ ಮತ್ತು ಆರಾಮವಾಗಿ ನಟಿಸಲು ನಮಗೆ ಸಹಾಯವಾಯಿತು" ಎಂದು ತಮನ್ನಾ ಹೇಳಿದ್ದಾರೆ. ಸದ್ಯ ತಮನ್ನಾ ಹೇಳಿಕೆ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇನ್ನು ತಮನ್ನಾ ಶೀಘ್ರದಲ್ಲೇ ಮತ್ತೊಂದು ಬೋಲ್ಡ್ ವೆಬ್ ಸೀರಿಸ್ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಕೆಲ ವರ್ಷಗಳ ಹಿಂದೆ 'ಲಸ್ಟ್ ಸ್ಟೋರಿಸ್' ಸೀರಿಸ್ ಸದ್ದು ಮಾಡಿದ್ದು ಗೊತ್ತೇಯಿದೆ. ಇದೀಗ 'ಲಸ್ಟ್ ಸ್ಟೋರಿಸ್'-2 ರಿಲೀಸ್‌ಗೆ ರೆಡಿಯಾಗಿದೆ. ಇದರಲ್ಲಿ ಬಾಯ್‌ಫ್ರೆಂಡ್ ವಿಜಯ್ ವರ್ಮಾ ಜೊತೆ ತಮನ್ನಾ ಮತ್ತಷ್ಟು ಹಾಟ್ ಆಗಿ ನಟಿಸಿರುವ ಸುಳಿವು ಸಿಕ್ತಿದೆ.

'ಜೈಲರ್' ತಂಡಕ್ಕೆ ಬೇಸರ
ಸದ್ಯ ಮಿಲ್ಕಿ ಬ್ಯೂಟಿ ರಜನಿಕಾಂತ್ ಜೊತೆ 'ಜೈಲರ್' ಚಿತ್ರದಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಸಿನಿಮಾ ಚಿತ್ರೀಕರಣ ಮುಗಿದಿತ್ತು. ತಲೈವಾ ಜೊತೆ ತಮನ್ನಾ ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದರು. ಆದರೆ ತಮನ್ನಾ ಈಗ 'ಜಿ ಕರ್ದಾ' ವೆಬ್ ಸೀರೀಸ್‌ನಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಂಡಿರುವುದು 'ಜೈಲರ್' ತಂಡಕ್ಕೆ ಬೇಸರ ತಂದಿದೆಯಂತೆ. ಅದರಲ್ಲೂ ತಮನ್ನಾ ಬೋಲ್ಡ್ ಸೀನ್ಸ್ ಆನ್‌ಲೈನ್‌ನಲ್ಲಿ ಲೀಕ್ ಆಗಿರುವುದು ತಮ್ಮ ಸಿನಿಮಾ ಮೇಲೆ ಪರಿಣಾಮ ಬೀರುತ್ತದೆ ಎಂದು ಭಾವಿಸಿದ್ದಾರಂತೆ.
ಮಾಲಿವುಡ್‌ಗೂ ಎಂಟ್ರಿ
ಇನ್ನು ತಮನ್ನಾ ಈಗ ತೆಲುಗಿನ 'ಭೋಳಾ ಶಂಕರ್', ತಮಿಳಿನ 'ಜೈಲರ್', ಅರನ್ಮಣೈ- 4, ಹಿಂದಿಯ 'ಬೊಲೆ ಚೂಡಿಯಾ' ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಬಾಂದ್ರಾ' ಸಿನಿಮಾ ಮೂಲಕ ಮಾಲಿವುಡ್‌ಗೂ ಎಂಟ್ರಿ ಕೊಟ್ಟಿದ್ದಾರೆ. ವಿಜಯ್ ವರ್ಮಾ ಜೊತೆ ರಿಲೇಷನ್‌ಶಿಪ್‌ನಲ್ಲಿರುವುದಾಗಿ ಒಪ್ಪಿಕೊಂಡಿರುವ ಮಿಲ್ಕಿಬ್ಯೂಟಿ ಶೀಘ್ರದಲ್ಲೇ ಹಸೆಮಣೆ ಏರುತ್ತಾರಾ? ಕಾದು ನೋಡಬೇಕಿದೆ.


Click it and Unblock the Notifications