"ಬೋಲ್ಡ್ ಸೀನ್ಸ್‌ನಲ್ಲಿ ನಟಿಸೋಕೆ ನಾಚಿಕೆ ಆಗಲ್ವಾ? ಭಾರತೀಯ ಸಂಸ್ಕೃತಿ ಹಾಳು ಮಾಡ್ತಿದ್ದೀರಾ": ಫ್ಯಾನ್ಸ್ ಆಕ್ರೋಶ
ಮಿಲ್ಕಿ ಬ್ಯೂಟಿ ತಮನ್ನಾ ಬರ್ತಾ ಬರ್ತಾ ಸಿಕ್ಕಾಪಟ್ಟೆ ಬೋಲ್ಡ್ ಆಗಿ ತೆರೆಮೇಲೆ ಕಾಣಿಸಿಕೊಳುತ್ತಿದ್ದಾರೆ. ಇತ್ತೀಚೆಗೆ ಬಂದ 'ಜೀ ಕರ್ದಾ' ವೆಬ್ ಸೀರಿಸ್‌ನಲ್ಲಿ ಮುಂಬೈ ಚೆಲುವೆ ಹಾಟ್ ಸೀನ್ಸ್ ನೋಡಿ ಅಭಿಮಾನಿಗಳು ಶಾಕ್ ಆಗಿದ್ದರು. ಇದೀಗ 'ಲಸ್ಟ್ ಸ್ಟೋರಿಸ್- 2' ಅದಕ್ಕಿಂತಲೂ ಹಸಿಬಿಸಿ ದೃಶ್ಯಗಳಲ್ಲಿ ನಟಿಸಿದ್ದಾರೆ. ಇದೇ ವಿಚಾರಕ್ಕೆ ಅಭಿಮಾನಿಗಳು ಆಕೆಯನ್ನು ಟ್ರೋಲ್ ಮಾಡ್ತಿದ್ದಾರೆ.
ಕೆಲ ವರ್ಷಗಳ ಹಿಂದೆ ಬಂದ 'ಲಸ್ಟ್ ಸ್ಟೋರಿಸ್' ಸೀರಿಸ್ ಬೋಲ್ಡ್ ದೃಶ್ಯಗಳಿಂದಲೇ ಹೆಚ್ಚು ಸದ್ದು ಮಾಡಿತ್ತು. ಅದನ್ನೂ ಮೀರಿಸುವಂತೆ ಸೀಕ್ವೆಲ್ ಸೀರಿಸ್ ಬರ್ತಿದೆ. ಇನ್ನು ತಮನ್ನಾ ತಮ್ಮ ಪ್ರಿಯಕರ ವಿಜಯ್ ವರ್ಮಾ ಜೊತೆ ತೆರೆ ಹಂಚಿಕೊಂಡಿದ್ದಾರೆ. ಇಷ್ಟು ದಿನ ಲಿಪ್‌ಲಾಕ್ ಸೀನ್‌ಗೆ ಒಲ್ಲೆ ಎಂದಿದ್ದ ಮಿಲ್ಕಿಬ್ಯೂಟಿ ಈ ಸೀರಿಸ್‌ನಲ್ಲಿ ತುಟಿಗೆ ತುಟಿ ಸೇರಿಸಿದ್ದಾರೆ ಎನ್ನಲಾಗ್ತಿದೆ. ಪ್ರಿಯಕರನ ಜೊತೆ ನಟಿಸಿರೋದ್ರಿಂದ ಕೊಂಚ ಹೆಚ್ಚೇ ಇಂಟಿಮೆಂಟ್ ಸೀನ್ಸ್‌ಗಳಲ್ಲಿ ನಟಿಸಿದ್ದಾರೆ.

ಬೋಲ್ಡ್ ಡೈಲಾಗ್ಸ್ ಮತ್ತು ದೃಶ್ಯಗಳಿಂದ ಈಗಾಗಲೇ 'ಲಸ್ಟ್ ಸ್ಟೋರಿಸ್- 2' ಟೀಸರ್, ಟ್ರೈಲರ್ ಗಮನ ಸೆಳೆದಿದೆ. ಈ ವಾರವೇ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಆದರೆ ಮಿಲ್ಕಿಬ್ಯೂಟಿಯ ತಮಿಳು, ತೆಲುಗು ಅಭಿಮಾನಿಗಳಿಗೆ ಮಾತ್ರ ಆಕೆ ಇಷ್ಟು ಬೋಲ್ಡ್ ಆಗಿ ನಟಿಸಿರೋದು ಇಷ್ಟವಾಗಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ. ಕೆಲವರು ಬೇಸರಗೊಂಡು ಇದೆಲ್ಲಾ ನಿನಗೆ ಬೇಕಾ ಎಂದು ಪ್ರಶ್ನಿಸುತ್ತಿದ್ದಾರೆ.

ವಿಜಯ್ ವರ್ಮಾ ಜೊತೆ ಕಿಸ್ಸಿಂಗ್ ಸೀನ್
'ಲಸ್ಟ್ ಸ್ಟೋರಿಸ್- 2' ಪ್ರಮೋಷನ್‌ಗಾಗಿ ಒಂದು ವಿಡಿಯೋ ಶೇರ್ ಮಾಡಿದ್ದಾರೆ. ಇದರಲ್ಲಿ ತಮನ್ನಾ ಮಾತನಾಡಿ ಈ ಸೀರಿಸ್‌ನಲ್ಲಿ ಬರೀ ಬೋಲ್ಡ್ ಸೀನ್ಸ್ ಇಲ್ಲ. ಅಪ್ಪ, ಅಮ್ಮ ಎಲ್ಲರ ಪ್ರೀತಿ ಇದೆ. ಜೂನ್ 29ಕ್ಕೆ ಬರ್ತಿದೆ. ಎಲ್ಲರೂ ನೋಡಿ ಎಂದು ಹೇಳಿದ್ದಾರೆ. ಆದರೆ ಈ ಪ್ರೋಮೊ ಆರಂಭದಲ್ಲೇ ವಿಜಯ್ ವರ್ಮಾ ಜೊತೆಗಿನ ಕಿಸ್ಸಿಂಗ್ ಸೀನ್ ಇದೆ. ಇದನ್ನು ನೋಡಿ ನೆಟ್ಟಿಗರು ಗರಂ ಆಗಿದ್ದಾರೆ. ತಮನ್ನಾ ಇಲ್ಲಿಯವರೆಗೂ ಇಂತಹ ಸನ್ನಿವೇಶಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಏನು ತಮನ್ನಾ ಇದೆಲ್ಲಾ ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ.
ನಿನ್ನ ಹೀಗೆ ನೋಡಲು ನಾಚಿಕೆ ಆಗ್ತಿದೆ
ಕೆಲವರು "ನೀವು ಭಾರತೀಯ ಸಂಸ್ಕೃತಿ ನಾಶ ಮಾಡುತ್ತಿದ್ದೀರಾ" ಎಂದು ಕಾಮೆಂಟ್ ಮಾಡಿದ್ದಾರೆ. "ನಿನ್ನನ್ನು ಈ ರೀತಿ ನೋಡಲು ನಾಚಿಕೆ ಆಗುತ್ತಿದೆ" ಎಂದು ಮತ್ತೊಬ್ಬರು ಬರೆದಿದ್ದಾರೆ. "ನೀವು ಸೀ ಗ್ರೇಡ್ ನಟನ ಜೊತೆ ಇಂತಹ ಸನ್ನಿವೇಶದಲ್ಲಿ ಹೇಗಾದರೂ ನಟಿಸ್ತೀರಾ?" ಅಂತ ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. ಕೆಲವರಂತೂ "ತಮನ್ನಾ ದಯವಿಟ್ಟು ಬಾಲಿವುಡ್ ಬಿಟ್ಟು ಕಾಲಿವುಡ್, ಟಾಲಿವುಡ್‌ಗೆ ಬಂದುಬಿಡು" ಎಂದು ಸಲಹೆ ನೀಡುತ್ತಿದ್ದಾರೆ.
ವಿಜಯ್ ವರ್ಮಾ ಜೊತೆ ಡೇಟಿಂಗ್
ಕಳೆದ ಕೆಲ ದಿನಗಳಿಂದ ತಮನ್ನಾ ಬಾಲಿವುಡ್ ನಟ ವಿಜಯ್ ವರ್ಮಾ ಜೊತೆ ಡೇಟಿಂಗ್ ನಟಿಸುತ್ತಿದ್ದಾರೆ ಎನ್ನುವ ಗುಸುಗುಸು ಕೇಳಿಬಂದಿತ್ತು. ಇತ್ತೀಚೆಗೆ ಸ್ವತಃ ತಮನ್ನಾ ಇದನ್ನು ಖಚಿತಪಡಿಸಿದ್ದಾರೆ. ಹೌದು ನಾವಿಬ್ಬರು ಡೇಟಿಂಗ್ ಮಾಡ್ತಿದ್ದೇವೆ ಎಂದಿದ್ದರು. ವಿಜಯ್ ವರ್ಮಾ ಕುರಿತು ಪ್ರಶಂಸೆಗಳ ಮಳೆ ಸುರಿಸಿದ್ದರು. ಇನ್ನು ಆತನೊಟ್ಟಿಗೆ ಎಷ್ಟು ಬೋಲ್ಡ್ ಆಗಿ ಬೇಕಾದರೂ ನಟಿಸೋಕೆ ಸಿದ್ಧ ಎನ್ನುವ ಅರ್ಥದಲ್ಲಿ ಮಾತನಾಡಿದ್ದರು.
ಸಾಲು ಸಾಲು ಚಿತ್ರಗಳಲ್ಲಿ ನಟನೆ
ನಟಿ ತಮನ್ನಾ ಕಾಲಿವುಡ್, ಟಾಲಿವುಡ್ ಜೊತೆಗೆ ಬಾಲಿವುಡ್‌ನಲ್ಲೂ ಬ್ಯುಸಿಯಾಗಿದ್ದಾರೆ. ರಜನಿಕಾಂತ್ ಜೊತೆ 'ಜೈಲರ್', ಚಿರಂಜೀವಿ ಜೊತೆ 'ಭೋಳಾ ಶಂಕರ್' ಚಿತ್ರಗಳಲ್ಲಿ ನಟಿಸಿದ್ದಾರೆ. ಸದ್ಯ ಬ್ಯಾಕ್ ಟು ಬ್ಯಾಕ್ 2 ಹಿಂದಿ ವೆಬ್ ಸೀರಿಸ್ ರಿಲೀಸ್ ಆಗುತ್ತಿದೆ. ಮುಂಬೈನಲ್ಲಿ ಹುಟ್ಟಿಬೆಳೆದ ತಮನ್ನಾ ಮೊದಲು ದಕ್ಷಿಣ ಭಾರತ ಚಿತ್ರರಂಗದಲ್ಲಿ ಸಕ್ಸಸ್ ಕಂಡರು. ಸ್ಟಾರ್ ನಟರ ಜೊತೆ ನಟಿಸಿ ಗೆದ್ದರು. ಕೊನೆಗೆ ಬಾಲಿವುಡ್ ಮಂದಿ ಕರೆದು ಅವಕಾಶ ಕೊಟ್ಟರು.


Click it and Unblock the Notifications











