ತಮನ್ನಾ ಬೆಡ್ ರೂಂ ದೃಶ್ಯಗಳು ಆನ್‌ಲೈನ್‌ನಲ್ಲಿ ಲೀಕ್: 'ಜಿ ಕರ್ದಾ' ರಿಲೀಸ್ ಆದ ಎರಡೇ ದಿನಗಳಲ್ಲಿ ವೈರಲ್

By ಫಿಲ್ಮಿ ಬೀಟ್ ಡೆಸ್ಕ್

ತಮನ್ನಾಗೆ ದಕ್ಷಿಣ ಭಾರತದಲ್ಲಿಯೇ ಹೆಚ್ಚು ಅಭಿಮಾನಿಗಳಿದ್ದಾರೆ. ತೆಲುಗು, ತಮಿಳು ಸಿನಿಮಾಗಳಲ್ಲಿ ಗ್ಲಾಮರಸ್ ಆಗಿ ನಟಿಸಿದ್ದರೂ, ಬೆಡ್ ರೂಂ ದೃಶ್ಯಗಳಲ್ಲಿ, ಹಸಿಬಿಸಿ ದೃಶ್ಯಗಳಲ್ಲಿ ನಟಿಸಿರಲಿಲ್ಲ. ಕಿಸ್ಸಿಂಗ್ ದೃಶ್ಯಗಳಲ್ಲಿ ಕಾಣಿಸಿಕೊಂಡಿರಲಿಲ್ಲ.

ಆದರೆ, ಕಳೆದ ಕೆಲವು ದಿನಗಳಿಂದ ತಮನ್ನಾ ಅಭಿನಯದ ಎರಡು ಪ್ರಾಜೆಕ್ಟ್‌ಗಳು ಸಿಕ್ಕಾಪಟ್ಟೆ ಚರ್ಚೆಯಲ್ಲಿದೆ. ಈಗಾಗಲೇ ಒಂದು ವೆಬ್ ಸೀರಿಸ್ 'ಜೀ ಕರ್ದ' ಅಮೆಜಾನ್ ಪ್ರೈಂ ವಿಡಿಯೋದಲ್ಲಿ ರಿಲೀಸ್ ಆಗಿದೆ.

Tamannaahs bold scenes from Amazon Prime Videos Jee Karda web series leaked

ತಮನ್ನಾಗೆ ಸಿನಿಮಾಗಳಲ್ಲಿ ಅವಕಾಶಗಳು ಕಡಿಮೆಯಾಗುತ್ತಿದ್ದಂತೆ ಬಾಲಿವುಡ್‌ನಲ್ಲಿ ಸೆಟಲ್ ಆದಂತಿದೆ. ಆದರೆ, ಇತ್ತೀಚೆಗೆ ತಮನ್ನಾಗೆ ಓಟಿಟಿಯಲ್ಲಿ ಬೇಡಿಕೆ ಹೆಚ್ಚಾಗಿದೆ. ಅಮೆಜಾನ್ ಪ್ರೈಂನಲ್ಲಿ ರಿಲೀಸ್‌ ಆಗಿರೋ 'ಜೀ ಕರ್ದ' ವೆಬ್ ಸೀರಿಸ್‌ನಲ್ಲಿ ಬೋಲ್ಡ್ ಸೀನ್ ಹಾಗೂ ಹಸಿಬಿಸಿ ದೃಶ್ಯಗಳಲ್ಲಿ ನಟಿಸಿದ್ದಾರೆ. ಕೆಲವೇ ದಿನಗಳ ಹಿಂದಷ್ಟೇ ಈ ವೆಬ್ ಸೀರಿಸ್ ರಿಲೀಸ್ ಆಗಿದ್ದು, ಬೋಲ್ಡ್ ಸೀನ್‌ಗಳು ಆನ್‌ಲೈನ್‌ನಲ್ಲಿ ಲೀಕ್ ಆಗಿವೆ.

'ಜೀ ಕರ್ದಾ'ದಲ್ಲಿ ತಮನ್ನಾ ಬೋಲ್ಡ್ ಲುಕ್

ಅಮೆಜಾನ್ ಪ್ರೈಂ ವೆಬ್ ಸೀರಿಸ್ 'ಜೀ ಕರ್ದಾ'ದಲ್ಲಿ ತಮನ್ನಾ ಲೀಡ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೆಬ್‌ ಸೀರಿಸ್‌ನ ಟ್ರೈಲರ್ ರಿಲೀಸ್ ಆದಾಗಲೇ ಸಂಚಲನ ಸೃಷ್ಟಿಯಾಗಿತ್ತು. ಈಗ ಅಮೆಜಾನ್ ಪ್ರೈಂನಲ್ಲಿ ಈ ವೆಬ್ ಸೀರಿಸ್ ಸ್ಟ್ರೀಮಿಂಗ್ ಆಗುತ್ತಿದೆ.

ಮಿಲ್ಕಿ ಬ್ಯೂಟಿ ತಮನ್ನಾಳನ್ನು ಹಸಿಬಿಸಿ ದೃಶ್ಯಗಳಲ್ಲಿ ಕಂಡು ನೆಟ್ಟಿಗರು ತಲೆ ಕೆಡಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಕೇವಲ ಗ್ಲಾಮರಸ್ ರೋಲ್‌ಗೆ ಮೀಸಲಾಗಿದ್ದ ನಟಿ, ಓಟಿಟಿಗಾಗಿ ಇಷ್ಟೊಂದು ಬದಲಾಗಿದ್ದು ಪ್ರೇಕ್ಷಕರಲ್ಲಿ ಅಚ್ಚರಿ ಮೂಡಿಸಿದೆ. ಸದ್ಯ ಇದೇ ವೆಬ್ ಸೀರಿಸ್‌ನ ಬೋಲ್ಡ್ ಸೀನ್‌ಗಳು ಆನ್‌ಲೈನ್‌ನಲ್ಲಿ ಲೀಕ್ ಆಗಿವೆ.

Tamannaahs bold scenes from Amazon Prime Videos Jee Karda web series leaked

ತಮನ್ನಾ ಬೋಲ್ಡ್ ಸೀನ್ಸ್ ಆನ್‌ಲೈನ್‌ನಲ್ಲಿ ಲೀಕ್

'ಜೀ ಕರ್ದಾ' ವೆಬ್ ಸೀರಿಸ್‌ಗಾಗಿ ತಮನ್ನಾ ಎಕ್ಸ್‌ಟ್ರಾ ಬೋಲ್ಡ್ ಆಗಿದ್ದರು. ಈ ವೆಬ್ ಸೀರಿಸ್‌ನಲ್ಲಿ ಅಂದ್ಕೊಂಡಿದ್ದಕ್ಕಿಂಗ ಹೆಚ್ಚು ಬೆಡ್ ರೂಮ್ ಸೀನ್‌ಗಳಿವೆ. ಟೀಸರ್‌, ಟ್ರೈಲರ್‌ನಲ್ಲಿ ಒಂದು ಝಲಕ್ ತೋರಿಸಿ ಹಲ್‌ಚಲ್ ಎಬ್ಬಿಸಲಾಗಿತ್ತು. ಆದ್ರೀಗ ವೆಬ್ ಸೀರಿಸ್ ಅಮೆಜಾನ್ ಪ್ರೈಂನಲ್ಲಿ ಪ್ರಸಾರ ಆಗುತ್ತಿದ್ದಂತೆ ಕಿಡಿಗೇಡಿಗಳು ಬೋಲ್ಡ್ ಸೀನ್ ಮೇಲೆ ಕಣ್ಣಿಟ್ಟಿದ್ದಾರೆ.

ಸದ್ಯ 'ಜೀ ಕರ್ದಾ' ವೆಬ್ ಸೀರಿಸ್‌ನಲ್ಲಿ ತಮನ್ನಾ ನಟಿಸಿದ ಹಸಿ ಬಿಸಿ ದೃಶ್ಯಗಳನಷ್ಟೇ ಕಟ್ ಮಾಡಿ ಆನ್‌ಲೈನ್‌ ಬೇರೆ ಬೇರೆ ಪ್ಲಾಟ್‌ಫಾರ್ಮ್‌ಗಳಲ್ಲಿ ಲೀಕ್ ಮಾಡಲಾಗಿದೆ. ಈ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲೆಲ್ಲಾ ಹರಿದಾಡುವುದಕ್ಕೆ ಶುರು ಮಾಡಿದೆ. ತಮನ್ನಾ ಬೋಲ್ಡ್ ಸೀನ್‌ಗಳನ್ನು ಕಣ್ತುಂಬಿಕೊಂಡ ಬಳಿಕ ನೆಟ್ಟಿಗರು ಕಂಗಾಲಾಗಿದ್ದಾರೆ.

ಭಾಯ್‌ಫ್ರೆಂಡ್ ಜೊತೆ ಫೋಟೊಶೂಟ್

ಇತ್ತೀಚೆಗಷ್ಟೇ ತಮನ್ನಾ ತನ್ನ ಪ್ರೇಮ ಪ್ರಕರಣವನ್ನು ರಿವೀಲ್ ಮಾಡಿದ್ದರು. ಬಾಲಿವುಡ್ ನಟ ವಿಜಯ್ ವರ್ಮಾ ಜೊತೆ ಪ್ರೀತಿಯಲ್ಲಿ ಬಿದ್ದಿರುವ ಬಗ್ಗೆ ಸ್ಪಷ್ಟನೆ ನೀಡಿದ್ದರು. ವಿಜಯ್ ವರ್ಮಾ ಪ್ರೀತಿ ಬಗ್ಗೆ ಮುಕ್ತವಾಗಿ ಮಾತಾಡಿದ್ದು,"ನನ್ನ ಹ್ಯಾಪಿ ಪ್ಲೇಸ್" ಎಂದು ಹೇಳಿದ್ದರು.

ಇಲ್ಲಿಂದ ತಮನ್ನಾ ಹಾಗೂ ವಿಜಯ್ ವರ್ಮಾ ಬಾಲಿವುಡ್‌ನಲ್ಲಿ ಹೊಸ ಲವ್ ಬರ್ಡ್ಸ್ ಆಗಿ ಹೊರಹೊಮ್ಮಿದ್ದಾರೆ. ಇದೇ ಖುಷಿಯಲ್ಲಿ ವಿಜಯ್ ವರ್ಮಾ, ತಮನ್ನಾ ತೊಡೆಯ ಮೇಲೆ ಕಾಲಿಟ್ಟು ನೆಮ್ಮದಿಯಾಗಿ ಫೋಟೊ ಶೂಟ್ ಮಾಡಿಸಿಕೊಂಡಿದ್ದಾರೆ.

More from Filmibeat

English summary
Tamannaah's bold scenes from Amazon Prime Video's Jee Karda webseries leaked, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X