ಮದುವೆಗೂ ಮುನ್ನ ಟೆಸ್ಟ್ ಡ್ರೈವ್? ಅಜ್ಜಿ ಡೈಲಾಗ್‌ಗೆ ಫಿದಾ: ತಮನ್ನಾ, ಮೃಣಾಲ್ 'ಲಸ್ಟ್ ಸೋರಿಸ್ 2'ನಲ್ಲಿ ಬಿಟ್ಟಿ ಸಲಹೆ
ಸಿನಿಮಾ ಪ್ರಿಯರು ಓಟಿಟಿ ಮೊರೆ ಹೋಗುತ್ತಿರುವುದು ಸರಿಯೇ. ಆದರೆ, ಓಟಿಟಿಗಂತಾನೇ ನಿರ್ಮಾಣ ಆಗುವ ವೆಬ್ ಸೀರಿಸ್‌ಗಳು ಸಿನಿಮಾಗಳ ಕಂಟೆಂಟ್ ಒಂದು ಹೆಜ್ಜೆ ಮುಂದೆ ಇಟ್ಟಿವೆಯೇ ಅನ್ನೋ ಪ್ರಶ್ನೆಗೆ ಸಾಕಷ್ಟು ಕಂಟೆಂಟ್ ಉದಾಹರಣೆಯಾಗಿ ಸಿಗುತ್ತವೆ. ಅದರಲ್ಲೊಂದು 'ಲಸ್ಟ್ ಸ್ಟೋರೀಸ್'.
ನೆಟ್‌ಫ್ಲಿಕ್ಸ್‌ನಲ್ಲಿ ಕೆಲವು ವರ್ಷಗಳ ಹಿಂದಷ್ಟೇ 'ಲಸ್ಟ್ ಸ್ಟೋರೀಸ್' ಸ್ಟ್ರೀಮಿಂಗ್ ಆಗಿತ್ತು. ಕಿಯಾರಾ ಅಡ್ವಾಣಿ, ಭೂಮಿ ಪೆಡ್ನೇಕರ್, ರಾಧಿಕಾ ಆಪ್ಟೆ ಹಾಗೂ ಮನಿಶಾ ಕೊಯಿರಾಲಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಇವರು ಹಸಿ ಬಿಸಿ ದೃಶ್ಯಗಳಲ್ಲಿ ನಟಿಸಿ ಅಂದೇ ಸಂಚಲನವನ್ನು ಸೃಷ್ಟಿಸಿದ್ದರು. ರೊಮ್ಯಾನ್ಸ್ ಇಷ್ಟ ಪಡೋರಿಗೆ ಈ ವೆಬ್ ಸೀರಿಸ್ ಹಿಡಿಸಿತ್ತು. ಕೆಲವರಿಗೆ ಕೋಪ ತರಿಸಿತ್ತು.

'ಲಸ್ಟ್ ಸ್ಟೋರೀಸ್' ರಿಲೀಸ್ ಆದ ಬಳಿಕ ಓಟಿಟಿಯಲ್ಲಿ ಬೋಲ್ಡ್ ಕಂಟೆಂಟ್ ಮತ್ತಷ್ಟು ಹೆಚ್ಚಾದವು. ಈಗ ಇದೇ 'ಲಸ್ಟ್ ಸ್ಟೋರೀಸ್' ಎರಡನೇ ಆವೃತ್ತಿ ಬಿಡುಗಡೆಗೆ ಸಜ್ಜಾಗುತ್ತಿದೆ. ಮಿಲ್ಕಿ ಬ್ಯೂಟಿ ತಮನ್ನಾ, ಬಾಯ್‌ಫ್ರೆಂಡ್ ವಿಜಯ್ ವರ್ಮಾ, ಮೃಣಾಲ್ ಠಾಕೂರ್, ಕಾಜೋಲ್ ಹಾಗೂ ನೀನಾ ಗುಪ್ತಾ ನಟಿಸಿದ್ದಾರೆ. 'ಲಸ್ಟ್ ಸ್ಟೋರೀಸ್ 2' ಮೊದಲ ಟೀಸರ್‌ನ ಮೊದಲ ಡೈಲಾಗ್ ಸಂಚಲನ ಸೃಷ್ಟಿಸಿದೆ.
ಮದುವೆಗೂ ಮುನ್ನ ಟೆಸ್ಟ್ ಡ್ರೈವ್?
ಯಾರ ಬಳಿ ನೆಟ್‌ಫ್ಲಿಕ್ಸ್ ಇದೆಯೋ? ಯಾರು ನಿರಂತರವಾಗಿ ನೆಟ್‌ಫ್ಲಿಕ್ಸ್ ಬಳಸುತ್ತಾರೋ ಅವರು 'ಲಸ್ಟ್ ಸ್ಟೋರೀಸ್' ನೋಡಿರಬಹುದು. ಈಗ ಅದರ ಪಾರ್ಟ್ 2 ರೆಡಿಯಾಗಿದ್ದು, ಶೀಘ್ರದಲ್ಲಿಯೇ ಸ್ಟ್ರೀಮಿಂಗ್ ಆಗುತ್ತಿದೆ. 'ಲಸ್ಟ್ ಸ್ಟೋರೀಸ್ 2' ಸದ್ಯ ಟೀಸರ್ ರಿಲೀಸ್ ಆಗಿದ್ದು, ಆರಂಭದ ಒಂದು ಡೈಲಾಗ್ ಹೀಗಿದೆ..

"ನೀವು ಚಿಕ್ಕದೊಂದು ಕಾರನ್ನು ಖರೀದಿಸುವ ಮೊದಲು ಟೆಸ್ಟ್ ಡ್ರೈವ್ ಮಾಡುತ್ತೀರ. ಅಂದ್ಮೇಲೆ ಮದುವೆಗೂ ಮುನ್ನ ಟೆಸ್ಟ್ ಡ್ರೈವ್ ಮಾಡೋದಿಲ್ಲವೇ?" ಇದು 'ಲಸ್ಟ್ ಸ್ಟೋರೀಸ್ 2'ನ ಆರಂಭಿಕ ಡೈಲಾಗ್. ವಿಶೇಷ ಅಂದರೆ, ಈ ಡೈಲಾಗ್ ಅನ್ನು ಅಜ್ಜಿ ಪಾತ್ರದಲ್ಲಿ ನಟಿಸಿರೋ ಬಾಲಿವುಡ್ ನಟಿ ನೀನಾ ಗುಪ್ತಾ ಹೇಳುತ್ತಾರೆ. ಈಗ ಇದೇ ಡೈಲಾಗ್ ಬಗ್ಗೆ ಚರ್ಚೆ ಆರಂಭ ಆಗಿದೆ.
ಅಜ್ಜಿ ಡೈಲಾಗ್‌ಗೆ ಹುಡುಗರು ಫಿದಾ
'ಲಸ್ಟ್ ಸ್ಟೋರೀಸ್ 2'ನಲ್ಲಿ ಬಾಲಿವುಡ್ ನಟಿ ನೀನಾ ಗುಪ್ತಾ ಅಜ್ಜಿಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಟೀಸರ್‌ನ ಆರಂಭಿಕ ಬೋಲ್ಡ್ ಡೈಲಾಗ್ ಹೇಳೋದು ಇವರೇ. 'ಲಸ್ಟ್ ಸ್ಟೋರೀಸ್ 2' ಟೀಸರ್ ರಿಲೀಸ್ ಆಗುತ್ತಿದ್ದಂತೆ ನೆಟ್ಟಿಗರು ಫಿದಾ ಆಗಿದ್ದಾರೆ. ನೀನಾ ಗುಪ್ತಾಗೆ ಹುಡುಗರ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. "ನೀನಾಜೀ ಈ ಪಾತ್ರದಲ್ಲಿ ಅಬ್ಬರಿಸಿದ್ದಾರೆ. 'ಲಸ್ಟ್ ಸ್ಟೋರೀಸ್ 2' ನೋಡುವುದಕ್ಕೆ ಕಾಯುತ್ತಿದ್ದೇನೆ" ಎಂದೆಲ್ಲ ಟ್ವೀಟ್ ಮಾಡಿದ್ದಾರೆ.
ಹಾಗೇ ತಮನ್ನಾ ಹಾಗೂ ಬಾಯ್‌ಫ್ರೆಂಡ್ ವಿಜಯ್ ವರ್ಮಾ ಅವರ ರೊಮ್ಯಾಂಟಿಕ್ ಸನ್ನಿವೇಶಗಳು, ಮೃಣಾಲ್ ಠಾಕೂರ್ ಹಸಿಬಿಸಿ ದೃಶ್ಯಗಳ ಬಗ್ಗೆನೂ ಕಮೆಂಟ್ ಮಾಡಿದ್ದಾರೆ. "ತಮನ್ನಾ, ವಿಜಯ್ ವರ್ಮಾ ಹಾಗೂ ಮೃಣಾಲ್ ಠಾಕೂರ್ ನೋಡುವುದಕ್ಕೆ ಕಾಯುತ್ತಿದ್ದೇವೆ" ಎಂದು ಬಹಳಷ್ಟು ಮಂದಿ ಟೀಸರ್‌ಗೆ ಕಮೆಂಟ್ ಮಾಡುತ್ತಿದ್ದಾರೆ.
ಜೂನ್ 29 ರಿಂದ ಸ್ಟ್ರೀಮಿಂಗ್
ಮೊದಲ ಸೀಸನ್‌ನಂತೆ 'ಲಸ್ಟ್ ಸ್ಟೋರೀಸ್ 2' ಒಟ್ಟು ನಾಲ್ಕು ಕಥೆಗಳನ್ನು ಸೇರಿಸಿ ನಿರ್ಮಾಣ ಮಾಡಲಾಗಿದೆ. ಒಂದೊಂದು ಕಥೆಗೂ ಒಬ್ಬೊಬ್ಬ ನಿರ್ದೇಶಕ. ಬಾಲಿವುಡ್‌ನ ಹೆಸರಾಂತ ನಿರ್ದೇಶಕರು ಕೆಲಸ ಮಾಡಿದ್ದಾರೆ. ಆರ್.ಬಾಲ್ಕಿ, ಸುಜೋಯ್ ಘೋಷ್, ಕೊಂಕಣ್ ಸೇನ್ ಶರ್ಮಾ ಹಾಗೂ ಅಮಿತ್ ರವೀಂದ್ರನಾಥ್ ಶರ್ಮಾ ಆಕ್ಷನ್ ಕಟ್ ಹೇಳಿದ್ದಾರೆ.
'ಲಸ್ಟ್ ಸ್ಟೋರೀಸ್'ಗೆ ಪ್ರಶಂಸೆ ಜೊತೆ ಟೀಕೆಗೂ ಗುರಿಯಾಗಿತ್ತು. ಹಾಗೇ 'ಲಸ್ಟ್ ಸ್ಟೋರೀಸ್ 2'ಗೆ ರೆಸ್ಪಾನ್ಸ್ ಹೇಗಿರುತ್ತೆ ಅನ್ನೋದು ಜೂನ್ 29ಕ್ಕೆ ಗೊತ್ತಾಗಲಿದೆ. ಹಿಂದಿ ಜೊತೆ ದಕ್ಷಿಣ ಭಾರತದ ಭಾಷೆಗಳಲ್ಲಿ ಡಬ್ ಮಾಡಲಾಗಿದೆ ಎನ್ನಲಾಗಿದೆ.


Click it and Unblock the Notifications











