'ದಿ ಫ್ಯಾಮಿಲಿ ಮ್ಯಾನ್-3'; ಸಮಂತಾ ಬಳಿಕ ಮತ್ತೋರ್ವ ಸೌತ್ ಸ್ಟಾರ್ ಮೇಲೆ ಕಣ್ಣಿಟ್ಟ ತಂಡ

'ದಿ ಫ್ಯಾಮಿಲಿ ಮ್ಯಾನ್' ವೆಬ್ ಸರಣಿ ಚಿತ್ರಪ್ರೇಕ್ಷಕರ ನೆಚ್ಚಿನ ಸರಣಿಗಳಲ್ಲಿ ಒಂದಾಗಿದೆ. 'ದಿ ಫ್ಯಾಮಿಲಿ ಮ್ಯಾನ್-2' ಸೂಪರ್ ಸಕ್ಸಸ್ ಬಳಿಕ ದಿ ಫ್ಯಾಮಿಲಿ ಮ್ಯಾನ್-3ಗೆ ಸಿದ್ಧತೆ ನಡೆಯುತ್ತಿದೆ. ಈಗಾಗಲೇ ದಿ ಫ್ಯಾಮಿಲಿ ಮ್ಯಾನ್-3 ಸದ್ದು ಮಾಡುತ್ತಿದ್ದು, ಯಾರೆಲ್ಲ ಕಲಾವಿದರು ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಕುತೂಹಲ ಹೆಚ್ಚಾಗಿದೆ.

ರಾಜ್ ಮತ್ತು ಡಿಕೆ ಜೋಡಿಯ ದಿ ಫ್ಯಾಮಿಲಿ ಮ್ಯಾನ್ ಆನ್ ಲೈನ್ ನಲ್ಲಿ ಸಂಚಲನ ಸೃಷ್ಟಿ ಮಾಡಿದೆ. ವೆಬ್ ಸರಣಿಯ 2ನೇ ಸೀಸನ್ ಮೂಲಕ ನಟಿ ಸಮಂತಾ ಮೊದಲ ಬಾರಿಗೆ ಒಟಿಟಿಗೆ ಎಂಟ್ರಿ ಕೊಟ್ಟರು. ಮೊದಲ ವೆಬ್ ಸರಣಿಯಲ್ಲೇ ದೊಡ್ಡ ಮಟ್ಟದ ಸಕ್ಸಸ್ ಕಂಡು ಸಂಭ್ರಮಿಸುತ್ತಿದ್ದಾರೆ ಸಮಂತಾ.

ರಾಜಿ ಪಾತ್ರದ ಮೂಲಕ ಸಮಂತಾ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಇದೀಗ ದಿ ಫ್ಯಾಮಿಲಿ ಮ್ಯಾನ್ ತಂಡ ಮತ್ತೋರ್ವ ಸೌತ್ ಸ್ಟಾರ್ ಮೇಲೆ ಕಣ್ಣಿಟ್ಟಿದೆ. ಅದು ಮತ್ಯಾರು ಅಲ್ಲ ಮಕ್ಕಳ್ ಸೆಲ್ವನ್ ವಿಜಯ್ ಸೇತುಪತಿ. ಹೌದು, ತಮಿಳು ನಟ ವಿಜಯ್ ಸೇತುಪತಿಯನ್ನು ದಿ ಫ್ಯಾಮಿಲಿ ಮ್ಯಾನ್ 3ಗೆ ಕರೆತರಲು ತಂಡ ಪ್ರಯತ್ನ ಪಡುತ್ತಿದೆ.

Tamil Star Vijay Sethupathi likely to join the cast The Family Man-3

ವೆಬ್ ಸರಣಿಯ ಪ್ರಮುಖ ಪಾತ್ರದಲ್ಲಿ ವಿಜಯ್ ಸೇತುಪತಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಮೂಲಗಳ ಪ್ರಕಾರ ವಿಜಯ್ ಸೇತುಪತಿ ಸೀಸನ್ ಎರಡರಲ್ಲೇ ನಟಿಸಬೇಕಿತ್ತು. ಆದರೆ ಸಖತ್ ಬ್ಯುಸಿಯಿದ್ದ ಕಾರಣ 2ನೇ ಸೀಸನ್ ನಿಂದ ದೂರ ಉಳಿಯಬೇಕಾಯಿತು ಎನ್ನುವ ಮಾತು ಕೇಳಿಬರುತ್ತಿದೆ. ಆದರೀಗ ದಿ ಫ್ಯಾಮಿಲಿ ಮ್ಯಾನ್-3ನಲ್ಲಿ ಕಾಣಿಸಿಕೊಳ್ಳುವುದು ಪಕ್ಕಾ ಎನ್ನುತ್ತಿವೆ ಮೂಲಗಳು.

ಶ್ರೀಕಾಂತ್ ತಿವಾರಿಯಾಗಿ ಮತ್ತೆ ಅಭಿಮಾನಿಗಳ ಮುಂದೆ ಬರಲು ಮನೋಜ್ ಬಾಜಪೇಯಿ ಕೂಡ ಸಿದ್ಧರಾಗಿದ್ದಾರೆ. ಇತ್ತೀಚಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ಮನೋಜ್ ಬಾಜಪೇಯಿ, "ಸದ್ಯದಲ್ಲೇ ಸೀಸನ್ 3 ಪ್ರಾರಂಭವಾಗಲಿದೆ. ಇನ್ನೊಂದುವರೆ ವರ್ಷಗದಲ್ಲಿ ದಿ ಫಯಾಮಿಲಿ ಮ್ಯಾನ್-3 ಸಿದ್ಧವಾಗಬಹುದು" ಎಂದು ಹೇಳಿದ್ದರು.

'ದಿ ಫ್ಯಾಮಿಲಿ ಮ್ಯಾನ್-3'ನಲ್ಲಿ ಚೀನಾ ಲಿಂಕ್ ಇರುವ ಬಗ್ಗೆ ಸೀಸನ್ 2ರಲ್ಲಿ ಸುಳಿವು ನೀಡಿದ್ದಾರೆ. ಈಗಾಗಲೇ ಕುತೂಹಲ ಮೂಡಿಸಿರುವ ದಿ ಫ್ಯಾಮಿಲಿ ಮ್ಯಾನ್-3 ವಿಜಯ್ ಸೇತುಪತಿ ಎಂಟ್ರಿ ಕೊಟ್ಟರೆ ಮತ್ತಷ್ಟು ರೋಚಕವಾಗಿರುವುದರಲ್ಲಿ ಯಾವುದೇ ಅನುಮಾನವಿಲ್ಲ.

More from Filmibeat

English summary
Tamil star Vijay Sethupathi likely to join the cast The Family Man-3.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X