For Quick Alerts
  ALLOW NOTIFICATIONS  
  For Daily Alerts

  ಆಹಾ! ಕನ್ನಡಕ್ಕೆ ಬರುತ್ತಿದೆ ಹೊಸ ಒಟಿಟಿ!

  |

  ಇದು ಒಟಿಟಿಗಳ ಕಾಲ. ಸ್ಟಾರ್ ನಟರ ಸಿನಿಮಾಗಳು ಸಹ ಚಿತ್ರಮಂದಿರಗಳಿಗೆ ಬದಲಾಗಿ ಒಟಿಟಿಗಳಲ್ಲಿ ಬಿಡುಗಡೆ ಆಗುತ್ತಿವೆ. ಚಿತ್ರಮಂದಿರಗಳಿಗಿಂತಲೂ ಹೆಚ್ಚಿನ ಹಣವನ್ನು ಒಟಿಟಿಗಳಿಂದ ಗಳಿಸಿರುವ ಉದಾಹರಣೆಯೂ ಇದೆ.

  ಒಟಿಟಿಗಳ ಶಕ್ತಿಯನ್ನು ಭಾರತದ ಕೆಲವು ಚಿತ್ರರಂಗಗಳು ಬಹುಬೇಗನೆ ಅರಿತು ಅವುಗಳನ್ನು ಬಳಸಿಕೊಳ್ಳಲು ಆರಂಭಿಸಿವೆ. ತೆಲುಗಿನ 'ಆಹಾ', ಮಲಾಯಳಂನಲ್ಲಿ 'ಕೂಡೆ', ಬೆಂಗಾಲಿಗೆ 'ಹೋಯ್‌ಚೋಯ್', 'ಅಡ್ಡಾಟೈಮ್ಸ್', ತಮಿಳಿಗೆ 'ರೆಗಾಲ್ ಟಾಕೀಸ್' ಹೀಗೆ ಹಲವು ಪ್ರಾದೇಶಿಕ ಭಾಷೆಗಳಿಗೆ ಅದರದ್ದೇ ಆದ ಒಟಿಟಿಗಳಿವೆ. ಆದರೆ ಕನ್ನಡಕ್ಕೆ ತನ್ನದೇ ಆದ ಪ್ರಬಲವಾದ ಒಟಿಟಿ ಫ್ಲಾಟ್‌ಫಾರ್ಮ್‌ ಇಲ್ಲ. ಈ ಬಗ್ಗೆ ಚರ್ಚೆಗಳು ನಡೆಯುತ್ತಿದೆಯಾದರೂ ಯಾವ ಚರ್ಚೆಯೂ ಫಲಪ್ರಧವಾಗಿಲ್ಲ.

  ಆದರೆ ಇದೀಗ ತೆಲುಗಿನಲ್ಲಿ ಜನಪ್ರಿಯವಾಗಿರುವ 'ಆಹಾ' ಒಟಿಟಿ ಕನ್ನಡಕ್ಕೆ ಬರಲು ಸಜ್ಜಾಗಿದೆ. ಪ್ರಸ್ತುತ 'ಆಹಾ' ಒಟಿಟಿಯು ತೆಲುಗು ಭಾಷೆಯ ಸಿನಿಮಾ, ವೆಬ್ ಸರಣಿ, ಟಾಕ್ ಶೋಗಳಿಗೆ ಮಾತ್ರವೇ ಸೀಮಿತವಾಗಿದೆ. ಆದರೆ ವ್ಯಾಪ್ತಿ ವಿಸ್ತರಿಸುವ ಯೋಜನೆ ಹಾಕಿಕೊಂಡಿರುವ 'ಆಹಾ' ತಮಿಳು, ಮಲಯಾಳಂನಲ್ಲಿಯೂ ಸೇವೆ ಆರಂಭಿಸಲಿದ್ದು, ಕನ್ನಡದಲ್ಲಿಯೂ ಸೇವೆ ನೀಡುವ ಇಚ್ಛೆ ಹೊಂದಿದೆ.

  'ಆಹಾ' ಒಟಿಟಿಗಾಗಿ 'ಕುಡಿ ಎಡಮೈತೆ' ಹೆಸರಿನ ವೆಬ್ ಸೀರೀಸ್ ನಿರ್ದೇಶನ ಮಾಡಿರುವ ಕನ್ನಡ ಸಿನಿಮಾ ನಿರ್ದೇಶಕ ಪವನ್ ಕುಮಾರ್, ಇತ್ತೀಚೆಗೆ ವಿಡಿಯೋ ಒಂದರಲ್ಲಿ ಮಾತನಾಡಿ, ''ಆಹಾ' ಕನ್ನಡಕ್ಕೆ ಬರಲು ಯೋಜನೆ ಹಾಕಿದೆ ಎಂಬ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಈಗಿರುವ 'ಆಹಾ' ತೆಲುಗು ಒಟಿಟಿಗೆ ಕರ್ನಾಟಕದಲ್ಲಿ ಎಷ್ಟು ಜನ ಸಬ್‌ಸ್ಕ್ರೈಬರ್ಸ್ ಇದ್ದಾರೆ ಎಂಬುದರ ಆಧಾರದಲ್ಲಿ 'ಆಹಾ' ಕನ್ನಡಕ್ಕೆ ಬರುವುದೋ ಬೇಡವೊ ಎಂಬ ನಿರ್ಣಯ ಮಾಡಲಿದೆ'' ಎಂದಿದ್ದಾರೆ.

  ಕನ್ನಡದಲ್ಲಿ ಈಗಾಗಲೇ ಕೆಲವು ಒಟಿಟಿಗಳು ಇವೆ. 'ನಮ್ಮಫ್ಲಿಕ್ಸ್, 'ಕಟ್ಟೆ' ಇನ್ನೂ ಕೆಲವು ಇದ್ದಾವಾದರೂ ಉತ್ತಮ ಗುಣಮಟ್ಟವನ್ನು ಈ ಒಟಿಟಿಗಳು ಹೊಂದಿಲ್ಲ ಮತ್ತು ಈ ಒಟಿಟಿಗಳಿಗೆ ದೊಡ್ಡ ಮಟ್ಟದ ಜನಪ್ರಿಯತೆಯ ಕೊರತೆ, ಸಬ್‌ಸ್ಕ್ರೀಬರ್‌ಗಳ ಕೊರತೆ ಇದೆ.

  'ಆಹಾ' ಈಗಾಗಲೆ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿದ್ದು, 'ಆಹಾ' ಒರಿಜಿನಲ್ ಸಿನಿಮಾಗಳು, ವೆಬ್ ಸರಣಿಗಳನ್ನು ಬಿಡುಗಡೆ ಮಾಡಿದೆ. ಆಹಾಗಾಗಿ ವಿಶೇಷವಾಗಿ ಸಮಂತಾ ಅಕ್ಕಿನೇನಿ ನಡೆಸಿಕೊಟ್ಟ 'ಸ್ಯಾಮ್-ಜ್ಯಾಮ್' ಭಾರಿ ಯಶಸ್ವಿಯಾಯಿತು. ರಾಣಾ ದಗ್ಗುಬಾಟಿ 'ನಂಬರ್ ಒನ್ ಯಾರಿ' ನಡೆಸಿಕೊಡುತ್ತಿದ್ದಾರೆ. ಇನ್ನೂ ದೊಡ್ಡ ಸ್ಟಾರ್ ನಟರ ಕಾರ್ಯಕ್ರಗಳು 'ಆಹಾ'ನಲ್ಲಿ ಪ್ರಸಾರವಾಗಲಿದೆ.

  English summary
  Telugu OTT Aha planing to launch in Kannada also. It has plan to provide all South Indian language contents.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X