ಪ್ರೇಮಾ ನಟನೆಯ ವಿವಾದಾತ್ಮಕ 'ರಜಾಕರ್' ಸಿನಿಮಾ ಓಟಿಟಿ ಸ್ಟ್ರೀಮಿಂಗ್ ಡೇಟ್ ಘೋಷಣೆ
ಐತಿಹಾಸಿಕ ಕಥಾಹಂದರದ ತೆಲುಗಿನ 'ರಜಾಕರ್' ಸಿನಿಮಾ ಕಳೆದ ವರ್ಷ ತೆರೆಗೆ ಬಂದಿತ್ತು. ಇದೀಗ ಸಿನಿಮಾ ಓಟಿಟಿ ಸ್ಟ್ರೀಮಿಂಗ್‌ಗೆ ಸಜ್ಜಾಗಿದೆ. ಯೇಟ ಸತ್ಯನಾರಾಯಣ ನಿರ್ದೇಶನದ ಸಿನಿಮಾ ಪ್ರೇಕ್ಷಕರಿಂದ ಭರ್ಜರಿ ಪ್ರತಿಕ್ರಿಯೆ ಪಡೆದಿತ್ತು. ಸಾಕಷ್ಟು ಚಿತ್ರ ಓಟಿಟಿ ರಿಲೀಸ್‌ಗಾಗಿ ಕಾಯುತ್ತಿದ್ದಾರೆ.
ಬಾಬಿ ಸಿಂಹ, ತೇಜ್ ಸಪ್ರು, ಮಕರಂದ್ ದೇಶ್‌ಪಾಂಡೆ, ಅನುಸೂಯ ಭಾರಧ್ವಜ್ ಸೇರಿದಂತೆ ದೊಡ್ಡ ತಾರಾಗಣ ಈ ಚಿತ್ರದಲ್ಲಿದೆ. ಮಾರ್ಚ್ 15ಕ್ಕೆ ತೆರೆಗೆ ಬಂದಿದ್ದ ಸಿನಿಮಾ ಬಹಳ ತಡವಾಗಿ ಓಟಿಟಿಗೆ ಬರ್ತಿದೆ. ಚಿತ್ರವನ್ನು ಕೆಲವರು ಟೀಕಿಸಿದ್ದರು. ಅದನ್ನೆಲ್ಲಾ ಮೀರಿ ಸಿನಿಮಾ ಯಶಸ್ವಿ ಪ್ರದರ್ಶನ ಕಂಡಿತ್ತು.

1947ರಲ್ಲಿ ಭಾರತ ದೇಶ ಸ್ವಾತಂತ್ರ್ಯ ಪಡೆದಿತ್ತು. ಆ ಬಳಿಕ ಕೂಡ ಆಂಧ್ರದಲ್ಲಿ ಭಾರೀ ಹೋರಾಟಗಳು ನಡೀತು. ಅಂತಹ ವಿಚಾರಗಳ ಸುತ್ತಾ ಈ ಸಿನಿಮಾ ಕತೆ ಸುತ್ತುತ್ತದೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕರೂ ಹೈದರಾಬಾದ್ ನಿಜಾಂ ಸಂಸ್ಥಾನ ಪಾಕಿಸ್ತಾನಕ್ಕೆ ಬೆಂಬಲ ಸೂಚಿಸಿ ಪ್ರತ್ಯೇಕವಾಗಿರಲು ತೀರ್ಮಾನಿಸಿತು. ಬಹುತೇಕ ಜನ ಇದಕ್ಕೆ ಸಿದ್ಧರಿರಲಿಲ್ಲ. ಭಾರತ ಒಕ್ಕೂಟಕ್ಕೆ ಅವರು ಬೆಂಬಲ ಸೂಚಿದ್ದರು. ಅಂತಹವರನ್ನು ರಜಾಕರರ ಸೇನೆ ರೂಪುಗೊಂಡಿತು.
ನಿಜಾಂ ದೊರೆ ಮೀರ್ ಉಸ್ಮಾನ್ ಅಲಿಖಾನ್ ಆಳ್ವಿಕೆ ಅವಧಿಯಲ್ಲಿ ತನ್ನ ಬಳಿಯಿಂದ ಖಾಸಗಿ ಸೇನೆಯನ್ನು ಬಳಸಿ ಹೈದರಾಬಾದ್ ಸಂಸ್ಥಾನವನ್ನು ಪ್ರತ್ಯೇಕ ದೇಶವನ್ನಾಗಿ ಮಾರ್ಪಾಟು ಮಾಡಲು ಮುಂದಾಗುತ್ತಾನೆ. ಅದಕ್ಕೆ ಕೆಲವರು ಬಲವಂತವಾಗಿ ಮತಾಂತರ ಮಾಡುತ್ತಾರೆ. ಉರ್ದುವನ್ನು ಅಲ್ಲಿನ ಅಧಿಕೃತ ಭಾಷೆಯನ್ನಾಗಿ ಪ್ರಕಟಿಸಿ ಬೇರೆ ಭಾಷೆಗಳನ್ನು ನಿಷೇಧಿಸುತ್ತಾರೆ. ಆದರೆ ಸರ್ದಾರ್ ವಲ್ಲಭಾಯ್ ಪಟೇಲ್ ಹೈದರಾಬಾದ್ ಅನ್ನು ಭಾರತ ಒಕ್ಕೂಟದ ಜೊತೆ ಹೇಗೆ ವಿಲೀನ ಮಾಡುವಲ್ಲಿ ಯಶಸ್ವಿಯಾದರು ಎನ್ನುವ ಕಥೆ ಚಿತ್ರದಲ್ಲಿದೆ.
ರಜಾಕರ್ ಸೇನೆಯ ಆರ್ಭಟವನ್ನು ಕಣ್ಣಿಗೆ ಕಟ್ಟಿದಂತೆ ಚಿತ್ರದಲ್ಲಿ ತೋರಿಸಲಾಗಿದೆ. ಫಸ್ಟಾಫ್ ರಜಕಾರರ ಅನ್ಯಾಮ, ಅಕ್ರಮ, ಅನಾಚಾರವನ್ನು ತೆರೆಗೆ ತರಲಾಗಿದೆ. ಸೆಕೆಂಡ್ ಹಾಫ್‌ನಲ್ಲಿ ತಿರುಗಿಬಿದ್ದ ಜನರ ಹೋರಾಟದ ಕಥೆಯನ್ನು ನೋಡಬಹುದು. ಇತ್ತೀಚಿನ ವರ್ಷಗಳಲ್ಲಿ ರಜಾಕರ್ ಒಂದು ವಿಭಿನ್ನ ಪ್ರಯತ್ನ. ಒಂದಷ್ಟು ವಿವಾದದ ನಡುವೆಯೂ ಸಿನಿಮಾ ಪ್ರೇಕ್ಷಕರನ್ನು ರಂಜಿಸಿತ್ತು.
ಚಿತ್ರದಲ್ಲಿ ನಾಯಕ, ನಾಯಕಿ ಎನ್ನುವುದು ಬಿಟ್ಟು ಪ್ರಮುಖ ಪಾತ್ರದಲ್ಲಿ ಅನುಭವಿ ಕಲಾವಿದರು ನಟಿಸಿದ್ದರು. ಇತ್ತೀಚಿನ ವರ್ಷಗಳಲ್ಲಿ ನಟಿ ಪ್ರೇಮಾ ಸಿನಿಮಾಗಳಲ್ಲಿ ನಟಿಸುವುದು ಕಮ್ಮಿ ಮಾಡಿದ್ದಾರೆ. ಆದರೆ 'ರಜಾಕರ್' ಚಿತ್ರದ ಬಹಳ ಪವರ್‌ಫುಲ್ ಅಂತಮ್ಮ ಪಾತ್ರವನ್ನು ನಿಭಾಯಿಸಿ ಗೆದ್ದಿದ್ದರು. ರಾಮೋಜಿ ಫಿಲ್ಮ್‌ಸಿಟಿಯಲ್ಲಿ ಸೆಟ್ ಹಾಕಿ ಬಹುತೇಕ ಚಿತ್ರೀಕರಣ ನಡೆಸಲಾಗಿತ್ತು.
ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ 'ರಜಾಕರ್' ಸಿನಿಮಾ ತೆರೆಗೆ ಬಂದಿತ್ತು. ಇದೀಗ ಅಹಾ ಓಟಿಟಿಯಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ. ಈ ಬಗ್ಗೆ ಸಂಸ್ಥೆ ಅಧಿಕೃತ ಮಾಹಿತಿ ನೀಡಿದೆ. ಜನವರಿ 24ರಂದು ಸಿನಿಮಾ ಓಟಿಟಿಗೆ ಬರಲಿದೆ. ಕನ್ನಡದಲ್ಲೂ ವೀಕ್ಷಕರು ಈ ಐತಿಹಾಸಿಕ ಸಿನಿಮಾ ವೀಕ್ಷಿಸಬಹುದು.
ಗಣರಾಜ್ಯೋತ್ಸವ ಸಂಭ್ರಮದಲ್ಲೇ 'ರಜಾಕರ್' ಸಿನಿಮಾ ಸ್ಮಾಲ್‌ಸ್ಕ್ರೀನ್‌ಗೆ ಬರುತ್ತಿರುವುದ ಮತ್ತೊಂದು ವಿಶೇಷ. ಕರ್ನಾಟಕ ಮೂಲದ ನಟಿ ವೇದಿಕಾ ಚಿತ್ರದಲ್ಲಿ ಸಂತವ್ವ ಎಂಬ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಬರೋಬ್ಬರಿ 9 ತಿಂಗಳ ಬಳಿಕ ಸಿನಿಮಾ ಓಟಿಟಿ ಸ್ಟ್ರೀಮಿಂಗ್‌ಗೆ ಮುಂದಾಗಿದೆ. ಅಂತೂ ಇಂತೂ ಸಿನಿಮಾ ಡಿಜಿಟಪ್ ಪ್ಲಾಟ್‌ಫಾರ್ಮ್‌ಗೆ ಬರ್ತಿರೋದು ಸಿನಿರಸಿಕರಿಗೆ ಸಂತಸ ತಂದಿದೆ.


Click it and Unblock the Notifications











