ಕೇವಲ ನಾಲ್ಕೇ ವಾರಕ್ಕೆ ಓಟಿಟಿಗೆ ಬಂತು ಕೆಜಿಎಫ್ ಕ್ವೀನ್ ಶ್ರೀನಿಧಿ ಶೆಟ್ಟಿ ಸಿನಿಮಾ..!

ಚಿತ್ರಮಂದಿರಕ್ಕೆ ಚಿತ್ರವೊಂದು ಬಂದು ಒಂದು ತಿಂಗಳಾಗಿರುವುದಿಲ್ಲ. ಅಷ್ಟರಲ್ಲಿಯೇ ಚಿತ್ರ ಓಟಿಟಿಯ ಅಂಗಳಕ್ಕೆ ಬಂದಿರುತ್ತೆ. ಕೇವಲ ಹೊಸಬರ ಚಿತ್ರಗಳು ಮಾತ್ರವಲ್ಲ ಸೂಪರ್ ಸ್ಟಾರ್ ಗಳ ಚಿತ್ರಗಳದ್ದು ಕೂಡ ಇದೇ ಕಥೆ. ಹೀಗಾಗಿಯೇ ಮನೆಯಲ್ಲಿಯೇ ನೋಡುವ ಸೌಲಭ್ಯ ಇದ್ದಾಗ ಚಿತ್ರಮಂದಿರಕ್ಕೆ ಹೋಗುವ ಅವಶ್ಯಕತೆಯಾದರು ಏನು ಎಂಬ ಆಲೋಚನೆಯಲ್ಲಿ ಅನೇಕರು ಈಗ ಓಟಿಟಿಯಲ್ಲಿ ಚಿತ್ರ ಪ್ರಸಾರವಾಗುವ ದಿನವನ್ನೇ ಎದುರು ನೋಡುತ್ತಿರುತ್ತಾರೆ.

ಮತ್ತೊಂದು ಕಡೆ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಿಲ್ಲ ಎಂದು ಚಿತ್ರರಂಗದವರು ಗೊಣಗುತ್ತಿರುತ್ತಾರೆ. ಸಂದರ್ಭ- ಸನ್ನಿವೇಶ ಹೀಗಿರುವಾಗ ಕಳೆದ ತಿಂಗಳಷ್ಟೇ ದೀಪಾವಳಿ ಹಬ್ಬದ ಪ್ರಯುಕ್ತ ಬಿಡುಗಡೆಯಾಗಿದ್ದ ತೆಲುಗಿನ "ತೆಲುಸು ಕದ " ಕೇವಲ ನಾಲ್ಕೇ ವಾರಕ್ಕೆ ಓಟಿಟಿಗೆ ಬಂದಿದೆ.‌

telusu-kada-ott-date-confirmed-siddhu-jonnalagaddas-emotional-drama-hits-netflix-on-november-14

ಹೌದು, ''ತೆಲುಸು ಕದ" ... ಟಾಲಿವುಡ್ ನ ನಯಾ ಸೂಪರ್ ಸ್ಟಾರ್ ಸಿದ್ದು ಜೊನ್ನಲಗುಡ್ಡ ಅಭಿನಯದ ಸಿನಿಮಾ. ರಾಶಿ ಖನ್ನಾ ಮತ್ತು ಕೆಜಿಎಫ್ ಕ್ವೀನ್ ಶ್ರೀನಿಧಿ ಶೆಟ್ಟಿ ಈ ಚಿತ್ರದ ಕಥಾನಾಯಕಿಯರು.

ಟ್ರೇಲರ್ ಮತ್ತು ಹಾಡುಗಳ ಮೂಲಕ ಬಿಡುಗಡೆಗೆ ಮುನ್ನ ವಿಪರೀತ ಸದ್ದು ಮಾಡಿದ್ದ ಸಿನಿಮಾ ಇದು. ಇದಕ್ಕೆ ಪೂರಕವಾಗಿ ಚಿತ್ರತಂಡ ಕೂಡ ಹಾಗೇ ಪ್ರಚಾರವನ್ನು ಕೂಡ ಮಾಡಿತ್ತು. ಹದಿಹರೆಯದ ಯುವಕ ಯುವತಿಯರ ಹೃದಯಕ್ಕೆ ಮುಟ್ಟುವ ಸಿನಿಮಾ ಎಂದೆಲ್ಲಾ ಚಿತ್ರತಂಡ ಮಾತನಾಡಿತ್ತು. ಗೆಲ್ಲುವ ಭರವಸೆಯನ್ನು ಕೂಡ ವ್ಯಕ್ತಪಡಿಸಿತ್ತು.

ಆದರೆ, ದುರಾದೃಷ್ಟ.. ಪ್ರಚಾರ ಮಾಡಿದರೂ.. ಕಂಡ ಕಂಡವರನ್ನೆಲ್ಲಾ ಕರೆದು ಸಂದರ್ಶನ ನೀಡಿದರೂ ಕೂಡ, "ತೆಲುಸು ಕದ" ಎಂಬ ಹೆಸರಿನ ಚಿತ್ರವೊಂದು ತೆರೆಗೆ ಬಂದಿದೆ ಎಂಬ ವಿಚಾರ ತೆಲುಗು ಚಿತ್ರಪ್ರೇಮಿಗಳಿಗೆ ತಿಳಿಯಲೇ ಇಲ್ಲ.

telusu-kada-ott-date-confirmed-siddhu-jonnalagaddas-emotional-drama-hits-netflix-on-november-14

ಇದಕ್ಕೆ ಕೈಗನ್ನಡಿ ಎಂಬಂತೆ ಬಿಡುಗಡೆಯಾದ ಮೊದಲ ದಿನವೇ ಚಿತ್ರಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಕೆಲವರಿಗೆ ಚಿತ್ರ ಇಷ್ಟ ಆಯಿತು. ಹಲವರಿಗೆ ಇಷ್ಟವಾಗಲೇ ಇಲ್ಲ.

''Koi Moi'' ವರದಿಯ ಪ್ರಕಾರ ಬರೋಬ್ಬರಿ 45 ಕೋಟಿ ಬಜೆಟ್ ನಲ್ಲಿ ನಿರ್ಮಾಣವಾದ ಈ ಚಿತ್ರ ಬಾಕ್ಸಾಫೀಸ್ ನಲ್ಲಿ ಗಳಿಸಿದ್ದು ಕೇವಲ 9.35 ಕೋಟಿ ಮಾತ್ರ.

ಇಂಥಾ "ತೆಲುಸು ಕದ" ಈಗ ಬಿಡುಗಡೆಯಾಗಿ ಕೇವಲ ಒಂದು ತಿಂಗಳಿನಲ್ಲಿಯೇ ಓಟಿಟಿಗೆ ಬಂದಿದೆ. ಇದೇ ನವೆಂಬರ್ 14ರಿಂದ ನೆಟ್ ಪ್ಲಿಕ್ಸ್ ನಲ್ಲಿ ಪ್ರಸಾರವಾಗಲಿದೆ. ಈ ಕುರಿತು ನೆಟ್ ಫ್ಲಿಕ್ಸ್ ಅಧಿಕೃತ ಘೋಷಣೆಯನ್ನು ಕೂಡ ಮಾಡಿದೆ. ಆಸಕ್ತ ಸಿನಿಮಾ ಪ್ರೇಮಿಗಳು ಮನೆಯಲ್ಲಿಯೇ ಕುಳಿತು ಮನೆ ಮಂದಿಯ ಜೊತೆ ನೋಡಬಹುದು.

More from Filmibeat

English summary
Get ready! Siddhu Jonnalagadda's Telusu Kada is officially coming to Netflix on November 14. Don't miss this highly anticipated film!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X