'ವಾರಿಸು' ಮತ್ತು 'ಥುನಿವು' ಓಟಿಟಿ ರಿಲೀಸ್ ಡೇಟ್ ಫಿಕ್ಸ್: ಆದರೆ ಶುರುವಾಯ್ತು ದೊಡ್ಡ ಸಮಸ್ಯೆ!

'ಸಂಕ್ರಾಂತಿ' ಸಂಭ್ರಮದಲ್ಲಿ ತೆರೆಗಪ್ಪಳಿಸಿದ್ದ 'ವಾರಿಸು' ಹಾಗೂ 'ಥುನಿವು' ಸಿನಿಮಾಗಳ ಓಟಿಟಿ ಸ್ಟ್ರೀಮಿಂಗ್ ಡೇಟ್ ಫಿಕ್ಸ್ ಆಗಿದೆ. ಆದರೆ ಬೇಗ ರಿಲೀಸ್ ಮಾಡಿ ಎಂದು ಅಭಿಮಾನಿಗಳು ಆಗ್ರಹಿಸುತ್ತಿದ್ದಾರೆ. ಎರಡೂ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ದೊಡ್ಡದಾಗಿ ಸೌಂಡ್ ಮಾಡಿದ್ದವು.

ದಳಪತಿ ವಿಜಯ್ ನಟನೆಯ ಫ್ಯಾಮಿಲಿ ಎಂಟರ್‌ಟೈನರ್ 'ವಾರಿಸು' ಹಾಗೂ ಥಲಾ ಅಜಿತ್ ನಟನರಯ ಆಕ್ಷನ್ ಥ್ರಿಲ್ಲರ್ 'ಥುನಿವು' ಜನವರಿ 11ಕ್ಕೆ ರಿಲೀಸ್ ಆಗಿತ್ತು. 2 ಚಿತ್ರಗಳಿಗೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತು. ಆದರೆ ಸಂಕ್ರಾಂತಿ ಸಂಭ್ರಮದಲ್ಲಿ ಸಿನಿಮಾಗಳು ಬಿಡುಗಡೆ ಆಗಿದ್ದರಿಂದ ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ನೋಡಿದ್ದರು. ರಿವ್ಯೂಗೂ ಬಾಕ್ಸಾಫೀಸ್‌ ಕಲೆಕ್ಷನ್‌ಗೂ ಸಂಬಂಧವೇ ಇಲ್ಲ ಎನ್ನುವಂತೆ ಕೋಟಿ ಕೋಟಿ ಕೊಳ್ಳೆ ಹೊಡೆದಿದ್ದವು. ಹೆಚ್. ವಿನೋದ್ 'ಥುನಿವು' ಸಿನಿಮಾ ಕಟ್ಟಿಕೊಟ್ಟರೆ, ವಂಶಿ ಪೈಡಿಪಲ್ಲಿ 'ವಾರುಸು' ಕಥೆ ಹೇಳಿದ್ದರು.

Thala Ajith Thunivu and thalapathy Vijay Varisu OTT Release Date Announced

'ವಾರಿಸು' ಹಾಗೂ 'ಥುನಿವು' 2 ಸಿನಿಮಾಗಳು 200 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿವೆ. ಎರಡೂ ಸಿನಿಮಾಗಳು ಸಂಕ್ರಾಂತಿ ಹಿಟ್ ಲಿಸ್ಟ್ ಸೇರಿಕೊಂಡಿದೆ. ಇದೀಗ ಸಿನಿಮಾಗಳ ಓಟಿಟಿ ರಿಲೀಸ್ ಯಾವಾಗ ಎನ್ನುವ ಪ್ರಶ್ನೆ ಎದ್ದಿದೆ. ಫೆಬ್ರವರಿ 8ಕ್ಕೆ ನೆಟ್‌ಫ್ಲಿಕ್ಸ್‌ನಲ್ಲಿ 'ಥುನಿವು' ರಿಲೀಸ್ ಮಾಡುವುದಾಗಿ ಚಿತ್ರತಂಡವೇ ಘೋಷಿಸಿದೆ. ಮತ್ತೊಂದು ಕಡೆ 'ವಾರಿಸು' ಚಿತ್ರವನ್ನು ಫೆಬ್ರವರಿ 22ಕ್ಕೆ ಅಮೇಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮಿಂಗ್ ಮಾಡುವುದಾಗಿ ಹೇಳಲಾಗುತ್ತಿದೆ. ಈ ಸುದ್ದಿ ಕೇಳಿ ಸಿನಿರಸಿಕರು ಖುಷಿಯಾಗಿದ್ದಾರೆ.

Thala Ajith Thunivu and thalapathy Vijay Varisu OTT Release Date Announced

ವಿಜಯ್, ಅಜಿತ್ ಸಿನಿಮಾಗಳು ಓಟಿಟಿಗ ಬರೋಕು ಮೊದ್ಲೆ ಹೆಚ್‌ಡಿ ಪ್ರಿಂಟ್‌ಗಳು ವೈರಲ್ ಆಗ್ತಿದೆ. ಹೌದು ಸಿನಿಮಾ ಪೈರಸಿ ಆಗಿ ಹೆಡ್‌ಡಿ ಪ್ರಿಂಟ್ ಕಾಪಿ ಲಿಂಕ್‌ಗಳು ಹರಿದಾಡುತ್ತಿದೆ. ಇದು ಹೀಗೆ ಮುಂದುವರೆದರೆ ಓಟಿಟಿ ಸ್ಟ್ರೀಮಿಂಗ್ ಆದಾಗ ಪೆಟ್ಟು ಬೀಳುತ್ತದೆ. ಹಾಗಾಗಿ ಬೇಗ ಸಿನಿಮಾ ಓಟಿಟಿಗೆ ಬಿಟ್ಟುಬಿಡಿ ಎಂದು ಅಭಿಮಾನಿಗಳು ಮನವಿ ಮಾಡಿಕೊಳ್ಳುತ್ತಿದ್ದಾರೆ. ಎರಡೂ ಚಿತ್ರತಂಡಗಳು ಯಾವ ನಿರ್ಧಾರ ತೆಗೆದುಕೊಳ್ಳುತ್ತವೋ ಕಾದು ನೋಡಬೇಕು.

More from Filmibeat

English summary
Thala Ajith Thunivu and thalapathy Vijay Varisu OTT Release Date Announced. And Also Varisu and Thunivu HD Print Leaked in online. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X