twitter
    For Quick Alerts
    ALLOW NOTIFICATIONS  
    For Daily Alerts

    ಒಟಿಟಿಗೆ ಬಂತು ಕಂಗನಾ ರಣಾವತ್ ನಟನೆಯ 'ತಲೈವಿ'

    |

    ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಬಯೋಪಿಕ್ ಚಿತ್ರ ತಲೈವಿ ಸೆಪ್ಟೆಂಬರ್ 10 ರಂದು ವರ್ಲ್ಡ್‌ವೈಡ್ ಅಧಿಕೃತವಾಗಿ ತೆರೆಕಂಡಿದೆ. ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದ್ದು, ವಿಶೇಷವಾಗಿ ಕಂಗನಾ ರಣಾವತ್ ಮತ್ತು ಅರವಿಂದ್ ಸ್ವಾಮಿ ನಟನೆ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ.

    ಜಯಲಲಿತಾ ಪಾತ್ರದಲ್ಲಿ ಕಂಗನಾ ರಣಾವತ್ ಅಭಿನಯಿಸಿದ್ದು, ಎಂಜಿಆರ್ ಪಾತ್ರದಲ್ಲಿ ಅರವಿಂದ್ ಸ್ವಾಮಿ ಕಾಣಿಸಿಕೊಂಡಿದ್ದು, ಇವರಿಬ್ಬರ ಪರ್ಫಾಮೆನ್ಸ್ ಚಿತ್ರವನ್ನು ಯಶಸ್ಸುಗೊಳಿಸಿದೆ. ಕೊರೊನಾ ಭೀತಿ ಹಾಗೂ ಶೇಕಡಾ 50ರಷ್ಟು ಅವಕಾಶಗಳ ನಡುವೆಯೇ ತಲೈವಿ ಸಿನಿಮಾ ಥಿಯೇಟರ್‌ಗೆ ಬಂದಿತ್ತು. ಕಲೆಕ್ಷನ್‌ನಲ್ಲಿ ದೊಡ್ಡ ಮಟ್ಟದಲ್ಲಿ ಆಗಿಲ್ಲವಾದರೂ ವಿರ್ಮಶಾತ್ಮಕವಾಗಿ ಚಿತ್ರ ಗೆದ್ದಿದೆ.

    'ತಲೈವಿ' ಯಶಸ್ಸಿನ ಬೆನ್ನಲ್ಲೆ ಭರ್ಜರಿ ಸುದ್ದಿ ನೀಡಿದ ನಿರ್ಮಾಪಕ'ತಲೈವಿ' ಯಶಸ್ಸಿನ ಬೆನ್ನಲ್ಲೆ ಭರ್ಜರಿ ಸುದ್ದಿ ನೀಡಿದ ನಿರ್ಮಾಪಕ

    ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡ ನಂತರ ತಲೈವಿ ಸಿನಿಮಾ ಈಗ ಒಟಿಟಿಗೆ ಬರ್ತಿದೆ. ಥಿಯೇಟರ್ ರಿಲೀಸ್ ಆದ ಎರಡು ವಾರಗಳ ಬಳಿಕ ಒಟಿಟಿಯಲ್ಲಿ ಪ್ರೀಮಿಯರ್ ಮಾಡಬಹುದು ಎಂಬ ಒಪ್ಪಂದವನ್ನು ಈ ಮೊದಲೇ ಚಿತ್ರ ಮಾಡಿಕೊಂಡಿತ್ತು. ಅದರಂತೆ ಈಗ ನೆಟ್‌ಫ್ಲಿಕ್ಸ್‌ನಲ್ಲಿ ತಲೈವಿ ಹಿಂದಿ ಅವತರಣಿಕೆ ಪ್ರದರ್ಶನವಾಗ್ತಿದೆ. ಮುಂದೆ ಓದಿ...

    ರಿಲೀಸ್‌ಗೆ ಮುಂಚೆನೇ ಭಾರಿ ಬಿಸಿನೆಸ್ ಮಾಡಿದ್ದ 'ತಲೈವಿ', ಗಳಿಸಿದ್ದೆಷ್ಟು?ರಿಲೀಸ್‌ಗೆ ಮುಂಚೆನೇ ಭಾರಿ ಬಿಸಿನೆಸ್ ಮಾಡಿದ್ದ 'ತಲೈವಿ', ಗಳಿಸಿದ್ದೆಷ್ಟು?

    ಹಿಂದಿಯಲ್ಲಿ ಬಂತು ತಲೈವಿ

    ಹಿಂದಿಯಲ್ಲಿ ಬಂತು ತಲೈವಿ

    ಸೆಪ್ಟೆಂಬರ್ 25 ರಿಂದ 'ತಲೈವಿ' ಹಿಂದಿ ವರ್ಷನ್ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗುತ್ತಿದೆ. ತಮಿಳು ಮತ್ತು ತೆಲುಗು ಭಾಷೆಯಲ್ಲೂ ತಲೈವಿ ಸಿನಿಮಾ ಒಟಿಟಿಗೆ ಸೇಲ್ ಆಗಿದ್ದು, ಇನ್ನೊಂದು ವಾರ ಕಾಯಬೇಕಿದೆ. ಸದ್ಯಕ್ಕೆ ಹಿಂದಿ ಮಾತ್ರ ಇಂದಿನಿಂದ ಪ್ರೀಮಿಯರ್ ಕಾಣ್ತಿದೆ. ಶೀಘ್ರದಲ್ಲಿ ದಕ್ಷಿಣ ಭಾಷೆಯಲ್ಲೂ ತಲೈವಿ ಚಿತ್ರವನ್ನು ಒಟಿಟಿಯಲ್ಲಿ ನೋಡಬಹುದು.

    55 ಕೋಟಿಗೆ ಒಟಿಟಿಗೆ ತಲೈವಿ ಸೇಲ್

    55 ಕೋಟಿಗೆ ಒಟಿಟಿಗೆ ತಲೈವಿ ಸೇಲ್

    ಎಕ್ಸ್‌ಕ್ಲೂಸಿವ್ ಆಗಿ ಒಟಿಟಿಯಲ್ಲೇ ರಿಲೀಸ್ ಮಾಡುವಂತೆ ತಲೈವಿ ಚಿತ್ರಕ್ಕೆ ಆಫರ್ ಮಾಡಲಾಗಿತ್ತು. ಆದರೆ, ಚಿತ್ರಮಂದಿರದಲ್ಲೇ ಬಿಡುಗಡೆ ಮಾಡಬೇಕು ಎಂದು ನಿರ್ಧರಿಸಿದ ಚಿತ್ರತಂಡ ಥಿಯೇಟರ್‌ನಲ್ಲಿ ರಿಲೀಸ್ ಮಾಡಿದೆ. ಜೊತೆಗೆ ಒಟಿಟಿಗೂ ಸಿನಿಮಾ ಮಾರಾಟ ಮಾಡಿದ್ದು ತಿಳಿದಿರುವ ವಿಚಾರ. ಈ ಹಿಂದೆ ಬಾಲಿವುಡ್ ಲೈಫ್ ವೆಬ್‌ಸೈಟ್ ವರದಿ ಮಾಡಿರುವಂತೆ ಅಮೇಜಾನ್ ಮತ್ತು ನೆಟ್‌ಪ್ಲಿಕ್ಸ್ ಎರಡೂ ಒಟಿಟಿಗಳು 55 ಕೋಟಿ ನೀಡಿ ತಲೈವಿ ಖರೀದಿಸಿತ್ತು. ಚಿತ್ರಮಂದಿರ ಮತ್ತು ಒಟಿಟಿ ಪ್ರದರ್ಶನದ ನಡುವಿನ ಅಂತರ ಬಹಳ ಚಿಕ್ಕದಿದೆ ಎಂದು ಕೆಲವು ಮಲ್ಟಿಫ್ಲೆಕ್ಸ್‌ ಸಂಸ್ಥೆಗಳು ಅಸಮಾಧಾನ ವ್ಯಕ್ತಪಡಿಸಿದ್ವು. ತಲೈವಿ ಚಿತ್ರವನ್ನು ನಾನು ರಿಲೀಸ್ ಮಾಡಲು ಎಂದು ಟೀಕಿಸಿದ್ದರು.

    ತಲೈವಿ 2 ಚಿತ್ರಕ್ಕೆ ಸಿದ್ಧತೆ

    ತಲೈವಿ 2 ಚಿತ್ರಕ್ಕೆ ಸಿದ್ಧತೆ

    ತಲೈವಿ ಸೀಕ್ವೆಲ್ ಮಾಡಲು ನಿರ್ಮಾಪಕ ಆಸಕ್ತಿ ತೋರಿದ್ದಾರೆ ಎನ್ನುವ ವಿಚಾರವೂ ಹೊರಬಿದ್ದಿದೆ. ಜಯಲಲಿತಾ ಅವರ ಜರ್ನಿ ಬಹಳ ವಿಸ್ತಾರವಾಗಿದೆ. ಎರಡೂವರೆ ಗಂಟೆಯಲ್ಲಿ ಎಲ್ಲವನ್ನು ತೋರಿಸಲು ಆಗಲ್ಲ. ಸಿನಿಮಾ ಜರ್ನಿಯಿಂದ ಸಿಎಂ ಕುರ್ಚಿವರೆಗೂ ಅವರು ನಡೆದು ಬಂದ ಕತೆಯನ್ನು ತಲೈವಿ ಬಿಂಬಿಸಿತ್ತು. ಸಿಎಂ ಆದ ಬಳಿಕ ಅವರ ಜರ್ನಿ ಇನ್ನು ದೊಡ್ಡದಿದೆ. ತಮಿಳುನಾಡು ರಾಜಕೀಯದಲ್ಲಿ ಬಹಳ ಪ್ರಮುಖ ಘಟನೆಗಳಿಗೆ ಜಯಲಲಿತಾ ಸಾಕ್ಷಿಯಾಗಿದ್ದರು. ಇದೆಲ್ಲವನ್ನು ತಲೈವಿ ಪರಿಪೂರ್ಣವಾಗಿ ಹೊಂದಿಲ್ಲ. ಹಾಗಾಗಿ, ಪಾರ್ಟ್ 2 ಮಾಡಲು ಚಿಂತಿಸಲಾಗಿದೆ. ಈ ಕುರಿತು ಸಹ ಬರಹಗಾರ ರಜತ್ ಆರೋರ ಪ್ರತಿಕ್ರಿಯೆ ನೀಡಿದ್ದು, ''ಸಿನಿಮಾದ ಹುಡುಗಿ ಸಿಎಂ ಸ್ಥಾನ ತಲುಪಿದ ಕಥೆಯನ್ನು ಹೇಳಲು ಬಯಸಿದ್ದೇವು. ಇದು ಮೊದಲೇ ನಿರ್ಧಾರವಾಗಿತ್ತು. ಅದಕ್ಕಾಗಿಯೇ ಪೋಸ್ಟರ್‌ನಲ್ಲೂ 'ಸಿನಿಮಾ ಸೆ ಸಿಎಂ ತಕ್ (ಸಿನಿಮಾದಿಂದ ಸಿಎಂಗೆ)' ಎಂದು ಉಲ್ಲೇಖಿಸಲಾಗಿದೆ. ಅವರ ರಾಜಕೀಯ ಜೀವನ 20-30 ವರ್ಷಗಳ ಇನ್ನೊಂದು ಅಧ್ಯಾಯವಾಗಿದೆ. ಅದನ್ನು 15 ನಿಮಿಷಗಳಲ್ಲಿ ತೋರಿಸಿದ್ದರೆ ನ್ಯಾಯ ಸಿಗುತ್ತಿರಲಿಲ್ಲ.'' ಎಂದಿದ್ದಾರೆ.

    ಎಎಲ್ ವಿಜಯ್ ನಿರ್ದೇಶನ

    ಎಎಲ್ ವಿಜಯ್ ನಿರ್ದೇಶನ

    ಎ ಎಲ್ ವಿಜಯ್ ನಿರ್ದೇಶಿಸಿರುವ 'ತಲೈವಿ' ಚಿತ್ರವನ್ನು ವಿಷ್ಣುವರ್ಧನ್ ಇಂದೂರಿ ಮತ್ತು ಶೈಲೇಶ್ ಆರ್ ಸಿಂಗ್ ಜಂಟಿಯಾಗಿದೆ ನಿರ್ಮಿಸಿದ್ದಾರೆ. ಹಿತೇಶ್ ಥಕ್ಕರ್ ಮತ್ತು ತಿರುಮಲ್ ರೆಡ್ಡಿ ಸಹ-ನಿರ್ಮಾಪಕರಾಗಿ ಸಾಥ್ ನೀಡಿದ್ದಾರೆ. ಸೆಪ್ಟೆಂಬರ್ 10 ರಂದು ಜೀ ಸ್ಟುಡಿಯೋಸ್ ಮೂಲಕ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ತಲೈವಿ ಬಿಡುಗಡೆಯಾಗಿದೆ.

    English summary
    Bollywood actress Kangana Ranaut starrer Thalaivi Hindi Version streaming from Sep 25th on netflix.
    Saturday, September 25, 2021, 11:44
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X