ರಿಲೀಸ್‌ಗೆ ಮುಂಚೆನೇ ಭಾರಿ ಬಿಸಿನೆಸ್ ಮಾಡಿದ್ದ 'ತಲೈವಿ', ಗಳಿಸಿದ್ದೆಷ್ಟು?
ಕೊರೊನಾ ವೈರಸ್ ಕಾಟ ಇಲ್ಲದಿದ್ದರೆ ಅಥವಾ ಥಿಯೇಟರ್‌ಗಳಲ್ಲಿ 100 ಪರ್ಸೆಂಟ್ ಅವಕಾಶ ಇದ್ದಿದ್ದರೆ 'ತಲೈವಿ' ಚಿತ್ರಕ್ಕೆ ಅದ್ಧೂರಿ ಓಪನಿಂಗ್ ಸಿಕ್ತಿತ್ತು ಎನ್ನುವುದರಲ್ಲಿ ಯಾವುದೇ ಅನುಮಾನ ಇಲ್ಲ. ಆದರೆ ಕೋವಿಡ್ ಮೂರನೇ ಅಲೆಯ ಭೀತಿ, 50 ಪರ್ಸೆಂಟ್ ಪರಿಸ್ಥಿತಿಯ ನಡುವೆ ತೆರೆಕಂಡಿರುವ ಚಿತ್ರಕ್ಕೆ ನಿರೀಕ್ಷಿತ ರೆಸ್‌ಪಾನ್ಸ್ ಸಿಗುತ್ತಾ ಎಂಬ ಪ್ರಶ್ನೆಯೂ ಇತ್ತು. ಈ ಎಲ್ಲಾ ಮುಂದಾಲೋಚನೆಯಿಂದ ಸೂಕ್ತ ಸಮಯಕ್ಕೆ ಸೂಕ್ತ ನಿರ್ಧಾರಗಳನ್ನು ತೆಗೆದುಕೊಂಡ ತಲೈವಿ ಸಿನಿಮಾ ಗಳಿಕೆ ವಿಚಾರದಲ್ಲಿ ಸೇಫ್ ಆಗಿದೆ ಎನ್ನುವ ವಿಚಾರ ಬಹಿರಂಗವಾಗಿದೆ.
Recommended Video
ಮಹಾರಾಷ್ಟ್ರ, ಕೇರಳದಲ್ಲಿ ಚಿತ್ರಮಂದಿರಗಳು ಬಂದ್ ಆಗಿದ್ದರೂ ತಮಿಳುನಾಡು, ಕರ್ನಾಟಕ ಹಾಗೂ ಆಂಧ್ರಪ್ರದೇಶ ಸುಮಾರು 700-800 ಚಿತ್ರಮಂದಿರದಲ್ಲಿ ತಲೈವಿ ತೆರೆಕಂಡಿದೆ. ಸದ್ಯದ ವರದಿಗಳ ಪ್ರಕಾರ ತಲೈವಿ ಚಿತ್ರಕ್ಕೆ 100 ಕೋಟಿ ಬಜೆಟ್ ಆಗಿದೆ ಎನ್ನಲಾಗಿದೆ. ಇನ್ನು ಸಾಕಷ್ಟು ಗೊಂದಲಗಳ ನಡುವೆ ಚಿತ್ರ ರಿಲೀಸ್ ಮಾಡಿದ ನಿರ್ಮಾಪಕರು ''ನಮ್ಮ ಬಂಡವಾಳ ವಾಪಸ್ ಆಗಿದೆ, ನಾವು ಸೇಫ್ ಆಗಿದ್ದೇವೆ'' ಎಂದಿದ್ದಾರೆ. ಈ ಚಿತ್ರದಿಂದ ಹೆಚ್ಚು ದುಡ್ಡ ಮಾಡುವ ಉದ್ದೇಶ ನಮಗಿಲ್ಲ, ಈ ಸಿನಿಮಾ ಎಲ್ಲರಿಗೂ ತಲುಪಬೇಕು ಹಾಗೂ ಚಿತ್ರಮಂದಿರದಲ್ಲಿ ನೋಡುವ ಅವಕಾಶ ಸಿಗಬೇಕು ಎಂದು ಹೇಳಿದ್ದಾರೆ. ಹಾಗಾದ್ರೆ, ತಲೈವಿ ಚಿತ್ರ ಗಳಿಸಿದ್ದೆಷ್ಟು? ಮುಂದೆ ಓದಿ...

85 ಕೋಟಿ ಪ್ರಿ-ರಿಲೀಸ್ ಬಿಸಿನೆಸ್
ಕಂಗನಾ ರಣಾವತ್ ನಟಿಸಿರುವ ತಲೈವಿ ಸಿನಿಮಾ ಬಿಡುಗಡೆಗೆ ಮುಂಚೆಯೇ 85 ಕೋಟಿ ಬಿಸಿನೆಸ್ ಮಾಡಿದೆ ಎಂದು ವರದಿಯಾಗಿದೆ. ಚಿತ್ರದ ಡಿಜಿಟಲ್ ಹಕ್ಕು, ಸ್ಯಾಟ್‌ಲೈಟ್ ಹಕ್ಕು ಹಾಗೂ ಆಡಿಯೋ ಹಕ್ಕು ಸೇರಿ 85 ಕೋಟಿ ಬಾಚಿಕೊಂಡಿದೆಯಂತೆ. ಈ ಹಣದಿಂದಲೇ ಸಿನಿಮಾದ ನಿರ್ಮಾಪಕರು ಸೇಫ್ ಹಂತಕ್ಕೆ ತಲುಪಿದರು ಎಂದು ಹೇಳಲಾಗಿದೆ.

55 ಕೋಟಿಗೆ ಒಟಿಟಿಗೆ ಸೇಲ್
ಮೊದಲಿನಿಂದಲೂ ಎಕ್ಸ್‌ಕ್ಲೂಸಿವ್ ಆಗಿ ಒಟಿಟಿಯಲ್ಲೇ ರಿಲೀಸ್ ಮಾಡುವಂತೆ ತಲೈವಿ ಚಿತ್ರಕ್ಕೆ ಆಫರ್ ಮಾಡಲಾಗಿತ್ತು. ಆದರೆ, ಚಿತ್ರಮಂದಿರದಲ್ಲೇ ಬಿಡುಗಡೆ ಮಾಡಬೇಕು ಎಂದು ನಿರ್ಧರಿಸಿದ ಚಿತ್ರತಂಡ ಥಿಯೇಟರ್‌ನಲ್ಲಿ ರಿಲೀಸ್ ಮಾಡಿದೆ. ಜೊತೆಗೆ ಒಟಿಟಿಗೂ ಸಿನಿಮಾ ಮಾರಾಟ ಮಾಡಿದೆ. ಥಿಯೇಟರ್‌ನಲ್ಲಿ ಬಂದ ಕೆಲವು ವಾರಗಳ ಬಳಿಕ ಒಟಿಟಿಯಲ್ಲಿ ಪ್ರೀಮಿಯರ್ ಮಾಡುವಂತೆ ಒಪ್ಪಂದ ಮಾಡಿಕೊಂಡಿದೆ. ಬಾಲಿವುಡ್ ಲೈಫ್ ವೆಬ್‌ಸೈಟ್ ವರದಿ ಮಾಡಿರುವಂತೆ ಅಮೇಜಾನ್ ಮತ್ತು ನೆಟ್‌ಪ್ಲಿಕ್ಸ್ ಎರಡೂ ಒಟಿಟಿಗಳು ತಲೈವಿ ಸಿನಿಮಾ ಖರೀದಿಸಿದ್ದು, 55 ಕೋಟಿ ನೀಡಿದೆಯಂತೆ.

ವಿಳಂಬವಾಗಿದ್ದರೆ ನಷ್ಟ ಅನುಭವಿಸಬೇಕಿತ್ತು
ಈ ಬಗ್ಗೆ ಮಾತನಾಡಿರುವ ನಿರ್ಮಾಪಕ ವಿಷ್ಣುವರ್ಧನ್ ಇಂದುರಿ, ''55 ಕೋಟಿ ಸಣ್ಣ ಮೊತ್ತ. ನನಗೆ ಅದಕ್ಕೂ ಮೀರಿದ ಆಫರ್‌ಗಳು ಇದ್ದವು. ಆದರೆ ಚಿತ್ರಮಂದಿರದಲ್ಲೇ ತಲೈವಿ ನೋಡಬೇಕು ಎನ್ನುವ ಆಸೆಯಿಂದ ಅದನ್ನು ಒಲ್ಲೆ ಎಂದೆವು. ಈ ಕುರಿತು ನಾನು ಹೆಚ್ಚು ವಿವರ ನೀಡಲು ಬಯಸುವುದಿಲ್ಲ. ಆದರೆ ನನ್ನ ಬಂಡವಾಳ ವಾಪಸ್ ಆಗಿದೆ. ಬಹುಶಃ ಇನ್ನಷ್ಟು ತಡವಾಗಿದ್ದರೆ ನಾನು ಹಣ ಕಳೆದುಕೊಳ್ಳುತ್ತಿದ್ದೆ. ಹಾಗಾಗಿ, ಈ ನಿರ್ಧಾರ ಮಾಡಬೇಕಾಯಿತು'' ಎಂದಿದ್ದಾರೆ.

ಕಮರ್ಷಿಯಲ್ ಆಗಿ ಮೂರ್ಖನಾಗಲು ತಯಾರಿಲ್ಲ
"ನಾವು ಒಂದು ಉತ್ತಮ ಚಿತ್ರವನ್ನು ತಯಾರಿಸಿದ್ದೇವೆ. ಅದನ್ನು ದೇಶದಾದ್ಯಂತ ಎಲ್ಲರಿಗೂ ತೋರಿಸಲು ಬಯಸುತ್ತೇವೆ. ಉತ್ತರ ಭಾಗದ ಕೆಲವು ಭಾಗಗಳು ಇನ್ನೂ ಮುಚ್ಚಲ್ಪಟ್ಟಿವೆ. ಚಿತ್ರ ಮತ್ತು ಪ್ರೇಕ್ಷಕರ ಮೇಲಿನ ಪ್ರೀತಿಯಿಂದ ಮಾತ್ರ ನಾವು ಥಿಯೇಟರ್‌ಗೆ ಹೋಗಿದ್ದೇವೆ. ಹಾಗಂದ ಮಾತ್ರಕ್ಕೆ ಕಮರ್ಷಿಯಲ್ ಆಗಿ ಮೂರ್ಖರಾಗಲು ತಯಾರಿಲ್ಲ. ಮಹಾರಾಷ್ಟ್ರದಲ್ಲಿ ಚಿತ್ರಮಂದಿರ ತೆರೆದಿದ್ದರೆ ಮಲ್ಟಿಪ್ಲೆಕ್ಸ್ ಜೊತೆ 4 ವಾರಗಳ ಒಪ್ಪಂದ ಮಾಡುತ್ತಿದ್ವಿ. ಅನೇಕ ಕಡೆ ನೈಟ್ ಶೋ ಇಲ್ಲ. ಒಬ್ಬ ನಿರ್ಮಾಪಕನಾಗಿ ನನ್ನ ಹೂಡಿಕೆಯನ್ನು ವಾಪಸ್ ಗಳಿಸಬೇಕು. ಆಗ ಮಾತ್ರ ನಾನು ಇನ್ನಷ್ಟು ಒಳ್ಳೆಯ ಸಿನಿಮಾಗಳನ್ನು ಮಾಡಲು ಸಾಧ್ಯವಾಗುತ್ತದೆ. ನನ್ನ ಬಂಡವಾಳ ಹಿಂಪಡೆಯದಿದ್ದರೆ, ನಾನು ತೊಂದರೆ ಅನುಭವಿಸುತ್ತೇನೆ. ಈಗ ನಾನು ಮಾಡಿಕೊಂಡಿರುವ ಒಪ್ಪಂದಂತೆ ಹೂಡಿಕೆಯ ಮೊತ್ತವನ್ನು ಹಿಂಪಡೆದಿದ್ದೇನೆ." ಎಂದು ನಿರ್ಮಾಪಕರು ಹೇಳಿದ್ದಾರೆ.

ಜಯಲಲಿತಾ ಬಯೋಪಿಕ್
ತಲೈವಿ ಸಿನಿಮಾ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಬಯೋಪಿಕ್. ಪುರುಚ್ಚಿ ತಲೈವಿ ಪಾತ್ರದಲ್ಲಿ ಕಂಗನಾ ನಟಿಸಿದ್ದಾರೆ. ಎಂಜಿಆರ್ ಪಾತ್ರದಲ್ಲಿ ಅರವಿಂದ್ ಸ್ವಾಮಿ ಅಭಿನಯಿಸಿದ್ದಾರೆ. ಎಎಲ್ ವಿಜಯ್ ಈ ಚಿತ್ರ ನಿರ್ದೇಶಿಸಿದ್ದು, ಎಲ್ಲೆಡೆ ಮಿಶ್ರಪ್ರತಿಕ್ರಿಯೆ ಪಡೆದುಕೊಂಡಿದೆ.


Click it and Unblock the Notifications











