OTT releases this week: 'ತಂಗಲಾನ್' ಸೇರಿ ಈ ವಾರ ಓಟಿಟಿಗೆ ಬರ್ತಿರೋ ಚಿತ್ರಗಳ ಲಿಸ್ಟ್ ಇಲ್ಲಿದೆ ನೋಡಿ

ಮತ್ತೊಂದು ವೀಕೆಂಡ್ ಹತ್ತಿರವಾಗುತ್ತಿದೆ. ಚಿತ್ರಮಂದಿರದಲ್ಲಿ ಮಾತ್ರವಲ್ಲ ಓಟಿಟಿಯಲ್ಲಿ ಒಂದಷ್ಟು ಸಿನಿಮಾಗಳು ಸ್ಟ್ರೀಮಿಂಗ್‌ಗೆ ಸಜ್ಜಾಗಿದೆ. ಭಾರೀ ನಿರೀಕ್ಷೆ ಮೂಡಿಸಿದ್ದ ಸಿನಿಮಾಗಳು ಈ ವಾರ ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ರಿಲೀಸ್ ಆಗುತ್ತಿವೆ.

ಸದ್ಯಕ್ಕೆ ಕನ್ನಡದಲ್ಲಿ ದೊಡ್ಡ ಸಿನಿಮಾಗಳು ತೆರೆಗೆ ಬರ್ತಿಲ್ಲ. ಕಳೆದ ವಾರ ತೆರೆಕಂಡ 'ಕಾಲಾಪತ್ಥರ್' ಹಾಗೂ ಗಣೇಶ ಹಬ್ಬಕ್ಕೆ ಬಂದ 'ಇಬ್ಬನಿ ತಬ್ಬಿದ ಇಳೆಯಲಿ' ಚಿತ್ರಗಳು ಈ ವಾರವೂ ಸದ್ದು ಮಾಡ್ತಿವೆ. ತಿಂಗಳಾಂತ್ಯಕ್ಕೆ 'ದೇವರ' ಕನ್ನಡಕ್ಕೂ ಡಬ್ ಆಗಿ ಬರ್ತಿದೆ. ದಸರಾ ಸಂಭ್ರಮದಲ್ಲಿ 'ಮಾರ್ಟಿನ್' ಬರ್ತಿದ್ದಾನೆ. ಅಲ್ಲಿಯವರೆಗೂ ಓಟಿಟಿ ಸಿನಿಮಾಗಳ ಆರ್ಭಟವೇ ಮುಂದುವರೆಯಲಿದೆ.

Thangalaan to Maruthi nagar subramanyam this week new ott Releases list

ಉಪೇಂದ್ರ ಹಾಗೂ ಸಾಹಸಸಿಂಹ ವಿಷ್ಣುವರ್ಧನ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಕೆಲ ಚಿತ್ರಗಳು ರೀ-ರಿಲೀಸ್ ಆಗುತ್ತಿದೆ. ರಿಯಲ್ ಸ್ಟಾರ್ ನಿರ್ದೇಶಿಸಿ ನಟಿಸಿದ 'ಉಪೇಂದ್ರ' ಸಿನಿಮಾ 25 ವರ್ಷಗಳ ಬಳಿಕ ಮತ್ತೆ ತೆರೆಗಪ್ಪಳಿಸಲಿದೆ. ವಿಷ್ಣುದಾದ ನಟನೆಯ 'ಖೈದಿ' ಸಿನಿಮಾ ಕೂಡ ಈ ವಾರ(ಸೆಪ್ಟೆಂಬರ್ 18) ರಿಲೀಸ್ ಆಗುತ್ತಿದೆ. ಇನ್ನು ಈ ವಾರ ಓಟಿಟಿಗೆ ಬರ್ತಿರೋ ಸಿನಿಮಾಗಳ ಲಿಸ್ಟ್ ಮುಂದೆ ಇದೆ ಓದಿ.

ನೆಟ್‌ಫ್ಲಿಕ್ಸ್

1. ತಂಗಲಾನ್

ಪಾ. ರಂಜಿತ್ ನಿರ್ದೇನದಲ್ಲಿ ವಿಕ್ರಂ ನಟನೆಯ 'ತಂಗಲಾನ್' ಚಿತ್ರ ಭಾರೀ ಸದ್ದು ಮಾಡಿತ್ತು. ಆಗಸ್ಟ್ 15ಕ್ಕೆ ತೆರೆಗೆ ಬಂದಿದ್ದ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕೆಲವರಿಗೆ ಬಹಳವಾಗಿ ಇಷ್ಟವಾದರೆ ಮತ್ತೆ ಕೆಲವರು ಸಿನಿಮಾ ಚೆನ್ನಾಗಿಲ್ಲ ಎಂದು ಬಿಟ್ಟಿದ್ದರು. ಪಾರ್ವತಿ ಮೆನನ್, ಮಾಳವಿಕಾ ಮೋಹನನ್ ಕೂಡ ತಾರಾಗಣದಲ್ಲಿದ್ದಾರೆ. ಕೆಜಿಎಫ್ ಚಿತ್ರದ ಗಣಿಯಲ್ಲಿ ಬ್ರಿಟೀಷರು ಚಿನ್ನದ ನಿಕ್ಷೇಪ ಹುಡುಕುವ ಹಿನ್ನೆಲೆಯಲ್ಲಿ ಚಿತ್ರ ಮೂಡಿ ಬಂದಿತ್ತು.

Thangalaan to Maruthi nagar subramanyam this week new ott Releases list

'ತಂಗಲಾನ್' ಚಿತ್ರವನ್ನು ಸಾಕಷ್ಟು ಜನ ಓಟಿಟಿಯಲ್ಲಿ ನೋಡಲು ಕಾಯುತ್ತಿದ್ದಾರೆ. ಚಿತ್ರಮಂದಿರದಲ್ಲಿ ನೋಡಿದ ಕೆಲವರಿಗೆ ಸಿನಿಮಾ ಅರ್ಥವಾಗಿಲ್ಲ. ಅಂತಹವರು ಮತ್ತೊಮ್ಮೆ ನೋಡುವ ಲೆಕ್ಕಾಚಾರದಲ್ಲಿದ್ದಾರೆ. ಸೆಪ್ಟೆಂಬರ್ 19ಕ್ಕೆ ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ. ಕನ್ನಡದಲ್ಲೂ ಡಬ್ ಆಗಿ ಬರಲಿದೆ.

2. ಹಿಸ್ ತ್ರೀ ಡಾಟರ್ಸ್(ಇಂಗ್ಲೀಷ್ ಸಿನಿಮಾ) ಸೆಪ್ಟೆಂಬರ್ 20

3. ದಿ ಕ್ವೀನ್ ಆಫ್ ವಿಲನ್ಸ್(ಜಪಾನೀಸ್ ವೆಬ್ ಸೀರಿಸ್) ಸೆಪ್ಟೆಂಬರ್ 19

4. ಕಲಿನರಿಕ ಕ್ಲಾಸ್ ವಾರ್ಸ್ (ಕೊರಿಯನ್ ಸೀರಿಸ್) - ಸೆಪ್ಟೆಂಬರ್ 17

ಅಮೇಜಾನ್ ಪ್ರೈಂ

1. ಫ್ಯಾಮಿಲಿ ಡ್ರಾಮಾ

ಆಕರ್ಷ್ ನಿರ್ದೇಶನದ 'ಫ್ಯಾಮಿಲಿ ಡ್ರಾಮಾ' ಕನ್ನಡ ಸಿನಿಮಾ ಈ ವಾರ ಓಟಿಟಿಗೆ ಬಂದಿದೆ. ಪ್ರೈಂ ವೀಡಿಯೋದಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ. ಅಭಯ್, ಪೂರ್ಣಚಂದ್ರ ಮೈಸೂರು, ಸಿಂಧು ಶ್ರೀನಿವಾಸ್ ಮೂರ್ತಿ ಚಿತ್ರದಲ್ಲಿ ನಟಿಸಿದ್ದಾರೆ. ಒಂದೇ ಮನೆಯ ಮೂವರು ಒಬ್ಬರಿಗೆ ಗೊತ್ತಿಲ್ಲದಂತೆ ಮತ್ತೊಬ್ಬರು ಸುಪಾರಿ ಪಡೆದು ಹತ್ಯೆಗೆ ಯತ್ನಿಸುವ ಕಥೆ ಚಿತ್ರದಲ್ಲಿದೆ. ಜುಲೈ ಕೊನೆವಾರ ತೆರೆಗೆ ಬಂದಿದ್ದ ಸಿನಿಮಾ ಈಗ ಓಟಿಟಿಯಲ್ಲಿ ಲಭ್ಯವಿದೆ.

2. ಎ ವೆರಿ ರಾಯಲ್ ಸ್ಕ್ಯಾಂಡಲ್(ಇಂಗ್ಲೀಷ್ ಸೀರಿಸ್) ಸೆಪ್ಟೆಂಬರ್ 19

ಅಹಾ ಓಟಿಟಿ

1. ಮಾರುತಿ ನಗರ್ ಸುಬ್ರಮಣ್ಯಂ

ರಾವು ರಮೇಶ್ ಹಾಗೂ ಇಂದ್ರಜ ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ತೆಲುಗಿನ 'ಮಾರುತಿ ನಗರ್ ಸುಬ್ರಮಣ್ಯಂ' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿತ್ತು. ಆಗಸ್ಟ್ 23ಕ್ಕೆ ಸಿನಿಮಾ ತೆರೆಗೆ ಬಂದಿತ್ತು. ಆದರೆ ದೊಡ್ಡದಾಗಿ ಸದ್ದು ಮಾಡಲಿಲ್ಲ. ಈ ಕಾಮಿಡಿ ಎಂಟರ್‌ಟ್ರೈನರ್ ಸಿನಿಮಾ ಇದೀಗ ಓಟಿಟಿ ಸ್ಟ್ರೀಮಿಂಗ್‌ಗೆ ಸಜ್ಜಾಗಿದೆ. ಅಹಾ ಓಟಿಟಿಯಲ್ಲಿ ಸೆಪ್ಟೆಂಬರ್ 20ಕ್ಕೆ ರಿಲೀಸ್ ಆಗ್ತಿದೆ.

2. ಹೈ ಆನ್ ಕಾದಲ್(ತಮಿಳು ಸಿನಿಮಾ) ಸೆಪ್ಟೆಂಬರ್ 16

3. ತಿರಗಬಡರಾ ಸಾಮಿ(ತೆಲುಗು ಸಿನಿಮಾ) ಸೆಪ್ಟೆಂಬರ್ 19

ಜಿಯೋ ಸಿನಿಮಾ

1. ಜೋ ತೇರಾ ಹೈ ವೋ ಮೇರಾ ಹೈ (ಹಿಂದಿ ಸಿನಿಮಾ)- ಸೆಪ್ಟೆಂಬರ್ 20

2. ಪೆಂಗ್ವಿನ್ (ಇಂಗ್ಲಿಷ್ ವೆಬ್ ಸೀರಿಸ್) - ಸೆಪ್ಟೆಂಬರ್ 20

ಹಾಟ್‌ಸ್ಟಾರ್

1. ಅಗಾಥಾ: ಹೌಸ್ ಆಫ್ ಹಾರ್ಕ್ನೆಸ್ (ಇಂಗ್ಲಿಷ್ ಸೀರಿಸ್) - ಸೆಪ್ಟೆಂಬರ್ 18

2. ಅನ್ ಪ್ರಿಸನ್ಡ್ ಸೀಸನ್ 2 (ಇಂಗ್ಲಿಷ್ ಸೀರೀಸ್) - ಸೆಪ್ಟೆಂಬರ್ 16

3. ದಿ ಮಿಸ್ಟರಿ ಆಫ್ ಮೋಕ್ಷ ಐಲ್ಯಾಂಡ್ (ತೆಲುಗು ವೆಬ್ ಸೀರಿಸ್) - ಸೆಪ್ಟೆಂಬರ್ 20

4. ತಲೈವೆಟ್ಟಯಮಾಪಾಳ್ಯಂ (ತಮಿಳು ಸೀರಿಸ್) - ಸೆಪ್ಟೆಂಬರ್ 20

5. ದಿ ಜಡ್ಜ್ ಫ್ರಮ್ ಹೆಲ್(ಇಂಗ್ಲಿಷ್ ಸೀರಿಸ್) - ಸೆಪ್ಟೆಂಬರ್ 21

More from Filmibeat

English summary
15 New OTT Releases to Catch Up on This Weekend;
Read more about: ott vikram kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X