ಪ್ರೈಂ ವೀಡಿಯೋ ಚಂದಾದಾರರಿಗೆ ಬಿಗ್‌ ಶಾಕ್; ಇನ್ಮುಂದೆ ನೀವು ಹೆಚ್ಚು ಹಣ ಕಟ್ಟಬೇಕು!

ಬರ್ತಾ ಬರ್ತಾ ಪ್ರೇಕ್ಷಕರು ಓಟಿಟಿಗೆ ಹೆಚ್ಚು ಅಡಿಕ್ಟ್ ಆಗುತ್ತಿದ್ದಾರೆ. ಸಿನಿಮಾ ನೋಡಲು ಚಿತ್ರಮಂದಿರಗಳಿಗೆ ಹೋಗಲು ಹಿಂದೇಟು ಹಾಕುತ್ತಾರೆ. ಅಮೇಜಾನ್ ಪ್ರೈಂ ವೀಡಿಯೋ ಜನಪ್ರಿಯ ಓಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದು. ಆದರೆ ಇನ್ಮುಂದೆ ಪ್ರೈಂ ಚಂದಾದಾರರು ನಿಶ್ಚಿಂತೆಯಿಂದ ಸಿನಿಮಾ, ವೆಬ್ ಸೀರಿಸ್ ನೋಡೋಕೆ ಆಗುವುದಿಲ್ಲ.

ಭಾರತದಲ್ಲಿ 6.5 ಕೋಟಿಗೂ ಹೆಚ್ಚು ಪ್ರೈಂ ವೀಡಿಯೋ ಚಂದಾದಾರರಿದ್ದಾರೆ. ಕನ್ನಡ ಫಿಲ್ಮ್ ಮೇಕರ್ಸ್ ಹೆಚ್ಚು ಪ್ರೈ ವೀಡಿಯೋವನ್ನೇ ನಂಬಿಕೊಂಡಿದ್ದಾರೆ. ಕಾರಣದ ಕನ್ನಡ ಬಹುತೇಕ ಸಿನಿಮಾಗಳು ಇದೇ ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತದೆ. ಆದರೆ ಇದೀಗ ಪ್ರೈಂ ವೀಡಿಯೋ ಚಂದಾದಾರರಿಗೆ ಒಂದು ಕಹಿ ಸುದ್ದಿ ಸಿಕ್ಕಿದೆ.

The ad-free experience on Amazon Prime Video is coming to an end

ಟಿವಿಯಲ್ಲಿ ಸಿನಿಮಾ ಅಥವಾ ಬೇರೆ ಕಾರ್ಯಕ್ರಮಗಳು ಪ್ರಸಾರವಾಗುವಾಗ ಜಾಹೀರಾತು ಬಂದು ಅಡಚಣೆ ಉಂಟು ಮಾಡುತ್ತವೆ. ಪ್ರೈಂ ವೀಡಿಯೋ ಹೊಸ ನಿಯಮದ ಪ್ರಚಾರ ಇನ್ನು ಮುಂದೆ ಪ್ರೈಂ ಸಿನಿಮಾ ಮತ್ತು ವೆಬ್ ಸೀರಿಸ್‌ಗಳ ನಡುವೆ ಜಾಹಿರಾತು ಪ್ರದರ್ಶನವಾಗುತ್ತದೆ. ಈ ಬಗ್ಗೆ ಸಂಸ್ಥೆ ಅಧಿಕೃತವಾಗಿ ಮಾಹಿತಿ ನೀಡಿದೆ. ಇದು ಸಹಜವಾಗಿಯೇ ಪ್ರೈಂ ಚಂದಾದಾರಿಗೆ ಬೇಸರ ತಂದಿದೆ.

ಹೆಚ್ಚಿನ ಹಣ ಕೊಟ್ಟು ವೀಕ್ಷಕರು ಯಾವುದೇ ಜಾಹಿರಾತು ಇಲ್ಲದೇ ತಮ್ಮಿಷ್ಟದ ಕಾರ್ಯಕ್ರಮಗಳನ್ನು ಪ್ರೈಂನಲ್ಲಿ ನೋಡುವ ಅವಕಾಶವನ್ನು ಕಲ್ಪಿಸಲಾಗಿದೆ. ಇದು ಸಹಜವಾಗಿಯೇ ಚಂದಾದಾರರ ಜೇಬಿಗೆ ಹೊರೆಯಾಗಲಿದೆ. ಇಲ್ಲದಿದ್ದರೆ ಸಹಿಸಿಕೊಂಡು ಜಾಹೀರಾತು ನೋಡಬೇಕಾದ ಅನಿವಾರ್ಯತೆ ಎದುರಾಗಿದೆ.

"ಆತ್ಮೀಯ ಪ್ರೈಮ್ ಸದಸ್ಯರೇ, ನಿಮ್ಮ ಪ್ರೈಮ್ ವೀಡಿಯೊ ಅನುಭವದಲ್ಲಿ ಮುಂಬರುವ ಬದಲಾವಣೆಯ ಕುರಿತು ನಾವು ಇಂದು ನಿಮಗೆ ಮಾಹಿತಿ ನೀಡುತ್ತಿದ್ದೇವೆ. ಜೂನ್ 17, 2025 ರಿಂದ, ಪ್ರೈಮ್ ವೀಡಿಯೊ ಚಲನಚಿತ್ರಗಳು ಮತ್ತು ವೆಬ್‌ ಸೀರಿಸ್‌ಗಳು ಸೀಮಿತ ಜಾಹೀರಾತುಗಳನ್ನು ಒಳಗೊಂಡಿರುತ್ತವೆ. ಇದು ನಮಗೆ ಮತ್ತಷ್ಟು ಹೊಸ ಕಂಟೆಂಟ್‌ಗಾಗಿ ಹೂಡಿಕೆ ಮಾಡಲು ಹಾಗೂ ದೀರ್ಘಕಾಲದವರೆಗೆ ಆ ಹೂಡಿಕೆಯನ್ನು ಹೆಚ್ಚಿಸಲು ಅನುವು ಮಾಡಿಕೊಡುತ್ತದೆ. ಟಿವಿ ವಾಹಿನಿಗಳಿಗಿಂತ ಅರ್ಥಪೂರ್ಣವಾಗಿ ಕಡಿಮೆ ಜಾಹೀರಾತುಗಳನ್ನು ಪ್ರಸಾರ ಮಾಡುವ ಗುರಿಯನ್ನು ನಾವು ಹೊಂದಿದ್ದೇವೆ. ನಿಮ್ಮ ಪ್ರೈಮ್ ಸದಸ್ಯತ್ವದ ಪ್ರಸ್ತುತ ಬೆಲೆಯಲ್ಲಿ ಯಾವುದೇ ಬದಲಾವಣೆಯಿಲ್ಲ.

"ಜೂನ್ 17, 2025 ರಿಂದ ಅಮೆಜಾನ್ ಪ್ರೈಮ್ ಚಂದಾದಾರರು ವರ್ಷಕ್ಕೆ ರೂ 699 ಅಥವಾ ತಿಂಗಳಿಗೆ ರೂ 129 ಹೆಚ್ಚುವರಿ ವೆಚ್ಚದಲ್ಲಿ ಜಾಹೀರಾತು-ಮುಕ್ತವಾಗಿ ಸಿನಿಮಾ, ವೆಬ್ ಸೀರಿಸ್ ವೀಕ್ಷಿಸಬಹುದು" ಎಂದು ಮಾಹಿತಿ ನೀಡಿದ್ದಾರೆ. ಅನುಭವವನ್ನು ನೀಡುತ್ತದೆ. ಪ್ರೈಂ ವೀಡಿಯೋ ಹೊಸ ನಿಯಮ ಚಂದಾದಾರರಿಗೆ ಬೇಸರ ತಂದಿರುವುದು ನಿಜ. ಕಾರಣ ಟಿವಿಯಲ್ಲಿ ಜಾಹೀರಾತು ಬರುತ್ತದೆ ಎಂದು ಜನ ಓಟಿಟಿ ಸಬ್‌ಸ್ಕ್ರಿಪ್ಷನ್ ತೆಗೆದುಕೊಳ್ಳುತ್ತಿದ್ದರು. ಯಾವುದೇ ಅಡೆತಡೆ ಇಲ್ಲದೇ ಸಿನಿಮಾ, ವೆಬ್ ಸೀರಿಸ್ ನೋಡುತ್ತಿದ್ದರು. ಈಗ ಅದರಲ್ಲಿ ಕೂಡ ಜಾಹೀರಾತು ಬರುತ್ತದೆ, ಬೇಡ ಎಂದರೆ ಹೆಚ್ಚು ಹಣ ಕೊಡಬೇಕು ಎನ್ನುವುದು ಯಾವ ನ್ಯಾಯ ಎನ್ನುತ್ತಿದ್ದಾರೆ.

ಸದ್ಯ ಭಾರತದಲ್ಲಿ ಅಮೆಜಾನ್ ಪ್ರೈಮ್ ವಾರ್ಷಿಕ ಚಂದಾದಾರಿಕೆ ಯೋಜನೆಯು 1,499 ಕ್ಕೆ ಲಭ್ಯವಿದೆ. ಒಂದು ತಿಂಗಳ ಪ್ಲ್ಯಾನ್‌ಗೆ 299 ರೂ. ಮತ್ತು ಮೂರು ತಿಂಗಳ ಯೋಜನೆಗೆ 599 ರೂ. ಪಾವತಿಸಬೇಕಿದೆ. ಜಾಹೀರಾತು ಇಲ್ಲದೇ ನೋಡಬೇಕು ಅಂದರೆ ಹೆಚ್ಚು ಹೆಚ್ಚು ಹಣ ವ್ಯಯಿಸಬೇಕಿದೆ. ಯುಎಸ್‌, ಯುಕೆ, ಕೆನಡಾ, ಮೆಕ್ಸಿಕೋ ಹಾಗೂ ಆಸ್ಟ್ರೇಲಿಯಾದಲ್ಲಿರುವ ಪ್ರೈಂ ವೀಡಿಯೋ ಚಂದಾದಾರಿಗೆ ಈಗಾಗಲೇ ಈ ಜಾಹೀರಾತು ನಿಯಮ ಚಾಲನೆಯಲ್ಲಿದೆ. ಇದೀಗ ಭಾರತದಲ್ಲಿ ಕೂಡ ಆರಂಭವಾಗುತ್ತಿದೆ. ಇದೆಕ್ಕೆ ಯಾವ ರೀತಿಯ ರೆಸ್ಪಾನ್ಸ್ ಸಿಗುತ್ತದೆ ಎಂದು ಕಾದು ನೋಡಬೇಕಿದೆ.

More from Filmibeat

English summary
Ads are being introduced to Amazon Prime Video content;
Read more about: sandalwood kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X