2 ಕೋಟಿ ಬಜೆಟ್, 25 ಕೋಟಿ ಕಲೆಕ್ಷನ್ ; ಬಿಡುಗಡೆಯಾದ 25 ದಿನಕ್ಕೆ ಓಟಿಟಿಗೆ ಬಂತು ಯೂಟ್ಯೂಬರ್‌ಗಳ ಸಿನಿಮಾ, ತಪ್ಪದೇ ನೋಡಿ

ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಸಾಮಾಜಿಕ ಜಾಲತಾಣ ಎಲ್ಲರನ್ನು ಆವರಿಸಿಕೊಂಡಿದೆ. ಇನ್ನೂ.. ಕಳೆದ ಎರಡು ವರ್ಷಗಳಿಂದ ಎಲ್ಲೆಡೆ ಯೂಟ್ಯೂಬ್ ಹಾವಳಿ ಇಡುತ್ತಿದೆ. ಅಬ್ಬರಿಸುತ್ತಿದೆ. ಹಲವರು ಈ ಯೂಟ್ಯೂಬ್ ಮೂಲಕ ಗೆದ್ದಿದ್ದಾರೆ. ಬದುಕು ರೂಪಿಸಿಕೊಂಡಿದ್ದಾರೆ. ಶ್ರಮ ಹಾಕಿದರೆ ಮಾತ್ರ ಯಶಸ್ಸು ಸಾಧ್ಯ ಎನ್ನುವುದನ್ನು ಕೂಡ ಸಾಬೀತು ಮಾಡಿದ್ದಾರೆ. ಇಷ್ಟೇ ಅಲ್ಲ ಇದೇ ಯೂಟ್ಯೂಬ್ ಚಿತ್ರರಂಗಕ್ಕೆ ಬರಬೇಕೆಂದು...

ಕನಸು ಕಾಣುವ ಹಲವರಿಗೆ ದಾರಿ ದೀಪವೂ ಆಗಿದೆ. ಚಿಕ್ಕ ಚಿಕ್ಕ ವಿಡಿಯೋಗಳನ್ನು ತಮಾಷೆಗಾಗಿ ಮಾಡುತ್ತಿದ್ದ ಹಲವರು ಈಗ ಚಿತ್ರರಂಗದತ್ತ ಮುಖ ಮಾಡುತ್ತಿದ್ದಾರೆ. ಇದಕ್ಕೆ ಕೈಗನ್ನಡಿ ಎಂಬಂತೆ ಕನ್ನಡದಲ್ಲಿ ನಕ್ಕು ನಗಿಸಿದ್ದ ''ಅಮೃತಾಂಜನ್'' ತಂಡ ಸದ್ಯ ''ಅಮೃತ್-ಅಂಜನ್'' ಹೆಸರಿನಲ್ಲಿ ಚಿತ್ರ ಮಾಡಲು ಅಣಿಯಾಗಿದೆ.

The Blockbuster That Broke Records Little Hearts OTT Release Date ANNOUNCED

ವಿಶೇಷ ಅಂದರೆ ಇಂತಹದ್ದೇ ಪ್ರಯತ್ನವನ್ನು ತೆಲುಗಿನಲ್ಲಿ ಯುವ ತಂಡ ಒಂದು ಕೆಲ ದಿನಗಳ ಹಿಂದೆ ಮಾಡಿತ್ತು. ಇವರ ಈ ಪ್ರಯತ್ನಕ್ಕೆ ಭಾರೀ ಜನ ಬೆಂಬಲ ಸಿಕ್ಕಿತ್ತು. ಬಾಕ್ಸಾಫೀಸ್‌ನಲ್ಲಿ ಹಣದ ಹೊಳೆ ಕೂಡ ಹರಿದಿತ್ತು. ಆ ಪ್ರಯತ್ನದ ಹೆಸರು ''ಲಿಟಲ್ ಹಾರ್ಟ್ಸ್''.

ಹೌದು. ''ಲಿಟಲ್ ಹಾರ್ಟ್ಸ್''.. ಸೆಪ್ಟೆಂಬರ್ 5ರಂದು ತೆರೆಗೆ ಬಂದಿದ್ದ ಚಿತ್ರ. ಯೂಟ್ಯೂಬರ್‌ಗಳೇ ಮಾಡಿದ್ದ ಚಿತ್ರ ಇದು. ಚಿತ್ರರಂಗದ ಯಾವ ಅನುಭವ ಇಲ್ಲದೇ.. ಹಿನ್ನೆಲೆ ಇಲ್ಲದೇ.. ತಮ್ಮಷ್ಟಕ್ಕೆ ತಾವು ತಮ್ಮ ಗೆಳೆಯರ ಜೊತೆ ಸೇರಿ ವಿಡಿಯೋ ಮಾಡುತ್ತಿದ್ದ ಮೌಳಿ ತನುಜ್ ಪ್ರಶಾಂತ್ ಈ ಚಿತ್ರದ ಮೂಲಕ ನಾಯಕನಾದರು. ಶಿವಾಣಿ ನಾಗರಾಮ್ ನಾಯಕಿಯಾದರು

ಮೌಳಿ ತನುಜ್ ಅವರ ಗೆಳೆಯರಲ್ಲಿ ಒಬ್ಬರಾದ ಸಾಯಿ ಮಾರ್ತಾಂಡ್ ಈ ಚಿತ್ರವನ್ನು ನಿರ್ದೇಶಕರಾದರು. ಇನ್ನೂ ಚಿತ್ರತಂಡದಲ್ಲಿ ಹಳೆಯ ಪರಿಚಿತ ಮುಖ ಎನ್ನುವುದು ಯಾವುದು ಇರಲಿಲ್ಲ. ಆದರೂ ಭಂಡ ಧೈರ್ಯ ಮಾಡಿ ಚಿತ್ರವನ್ನು ಮಾಡಿದ ಈ ತಂಡಕ್ಕೆ ಆ ನಂತರ ಕೈ ಹಿಡಿದಿದ್ದು ಖ್ಯಾತ ವಿತರಕರಾದ ಬನ್ನಿ ವಾಸು ಮತ್ತು ವಂಶಿ.

ಬನ್ನಿ ವಾಸು ಮತ್ತು ವಂಶಿ ಅವರ ಸಹಯೋಗ ಸಹಕಾರದ ಮೂಲಕ ಪವಾಡ ಮಾಡಿದ ಎರಡು ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾದ ಈ ಚಿತ್ರ ಬಾಕ್ಸಾಫೀಸ್‌ನಲ್ಲಿ ₹ 25 ಕೋಟಿ ಹಣ ಗಳಿಸಿದೆ ಎಂದು ''ಸ್ಯಾಕ್ನಿಲ್'' ವರದಿ ಮಾಡಿದೆ. ಇನ್ನೂ ''ಲಿಟಲ್ ಹಾರ್ಟ್ಸ್'' ಚಿತ್ರದ ವಿಕಿಪೀಡಿಯಾ ಪ್ರಕಾರ ಈ ಚಿತ್ರದ ಗಳಿಕೆ ₹ 38 ಕೋಟಿ.

The Blockbuster That Broke Records Little Hearts OTT Release Date ANNOUNCED

ಕೇವಲ ಪ್ರೇಕ್ಷಕರ ಹೃದಯವನ್ನು ಮಾತ್ರವಲ್ಲ ''ಲಿಟಲ್ ಹಾರ್ಟ್ಸ್'' ತೆಲುಗು ಚಿತ್ರರಂಗದ ಹಲವು ಸ್ಟಾರ್‌ಗಳ ಗಮನ ಕೂಡ ಸೆಳೆಯಿತು. ಮಹೇಶ್ ಬಾಬು.. ಅಲ್ಲು ಅರ್ಜುನ್.. ನಾನಿ.. ಮಂಚು ಮನೋಜ್.. ಅದಿವಿ ಶೇಷ್.. ಸೇರಿದಂತೆ ಹಲವು ಸೂಪರ್ ಸ್ಟಾರ್‌ಗಳೂ ಈ ಹೊಸ ತಂಡದ ಚಿತ್ರವನ್ನು ಮೆಚ್ಚಿಕೊಂಡರು. ಬೆನ್ನು ತಟ್ಟಿದರು.

ಕಥಾಹಂದರವೇನು ..?

ಮಧ್ಯಮ ವರ್ಗದ ಕುಟುಂಬದ ತಲ್ಲಣ ಮತ್ತು ಕನಸುಗಳ ಸುತ್ತ ಸುತ್ತುವ ಈ ಚಿತ್ರದಲ್ಲಿ ನಾಯಕನ ತಂದೆ (ರಾಜೀವ್ ಕನಕಲಾ ) ಎಲ್ಲರಂತೆ ತನ್ನ ಮಗ ಸಾಫ್ಟ್‌ವೇರ್ ಇಂಜಿನಿಯರ್ ಆಗಬೇಕೆಂದು ಬಯಸಿರುತ್ತಾರೆ. ಕನಸು ಕಂಡಿರುತ್ತಾರೆ. ತಂದೆಯ ಈ ಕನಸು ನನಸು ಮಾಡಲು ಮಗ ಅಖಿಲ್ (ಮೌಳಿ ತನುಜ್ ) ಹೆಣಗಾಡುತ್ತಿರುತ್ತಾನೆ. ಓದಿನಲ್ಲಿ ಹಿಂದೆ ಇರುವ ಅಖಿಲ್ ಪದೇ ಪದೇ ಎಡವುತ್ತಿರುತ್ತಾನೆ. ಆದರೂ.. ತಂದೆಯ ಇಚ್ಛೆಯಂತೆ ಎಂಜಿನಿಯರ್ ಆಗಲೇಬೇಕು ಎಂದುಕೊಂಡು ಕೋಚಿಂಗ್ ಪಡೆಯಲು ಮುಂದಾಗುತ್ತಾನೆ. ಇಲ್ಲಿ ಕಾತ್ಯಾಯನಿ ( ಶಿವಾನಿ) ಪರಿಚಯವಾಗುತ್ತೆ. ಇಬ್ಬರ ನಡುವೆ ಸ್ನೇಹ ಚಿಗುರುತ್ತೆ. ಆ ನಂತರ ಪ್ರೀತಿಯ ಸ್ವರೂಪ ಪಡೆಯುತ್ತೆ. ಮುಂದೇನಾಗುತ್ತೆ..? ಮನೆ- ಜವಾಬ್ಧಾರಿ-ಪ್ರೀತಿ ಇದರ ನಡುವೆ ಎದುರಾಗುವ ಸವಾಲುಗಳೇನು..? ಇವೆಲ್ಲವನ್ನು ನೀವು ಚಿತ್ರವನ್ನು ನೋಡಿಯೇ ಪಡೆಯಬೇಕು.

ಇಂಥಾ ''ಲಿಟಲ್ ಹಾರ್ಟ್ಸ್'' ಚಿತ್ರ ಸದ್ಯ ಓಟಿಟಿಗೆ ಬಂದಿದೆ. ದಸರಾ ಹಬ್ಬದ ಪ್ರಯುಕ್ತ ಇದೇ ಅಕ್ಟೋಬರ್ 1ರಿಂದ ETV Win ನಲ್ಲಿ ಪ್ರಸಾರವಾಗಲಿದೆ. ಆಸಕ್ತ ಚಿತ್ರಪ್ರೇಮಿಗಳು ಮನೆಯಲ್ಲಿಯೇ ತಮ್ಮ ಮನೆ ಮಂದಿ ಜೊತೆ ಕುಳಿತು ಈ ಚಿತ್ರವನ್ನು ನೋಡಬಹುದು.

More from Filmibeat

English summary
Get ready for a "longer, sweeter, and crazier" experience! Stream the Extended Cut of Mouli's blockbuster Little Hearts on ETV Win starting October 1.
Read more about: tollywood new face youtube
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X