ಫ್ಯಾಮಿಲಿ ಮ್ಯಾನ್-2 ವಿವಾದ; ಪ್ರತಿಕ್ರಿಯೆ ನೀಡಿದ ಮನೋಜ್ ಬಾಜಪಾಯಿ ಮತ್ತು ನಿರ್ದೇಶಕರು

ಚಿತ್ರಪ್ರೇಕ್ಷಕರು ಭಾರಿ ಕುತೂಹಲದಿಂದ ಕಾಯುತ್ತಿರುವ ದಿ ಫ್ಯಾಮಿಲಿ ಮ್ಯಾನ್-2 ಬಿಡುಗಡೆಗೂ ಮೊದಲೇ ವಿವಾದ ಸೃಷ್ಟಿಸಿದೆ. ಇತ್ತೀಚಿಗೆ ವೆಬ್ ಸೀರಿಸ್ ನ ಟ್ರೈಲರ್ ಬಿಡುಗಡೆಯಾಗುತ್ತಿದ್ದಂತೆ ತಮಿಳು ಜನಸಮುದಾಯದ ಮನೋಭಾವನೆಗೆ ನೋವುಂಟು ಮಾಡುವ ದೃಶ್ಯಗಳು ಹೊಂದಿದೆ ಎಂದು ಭಾರಿ ವಿರೋಧ ವ್ಯಕ್ತವಾಗುತ್ತಿದೆ.

ಇದಕ್ಕೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ನಟ ಮನೋಜ್ ಬಾಜಪಾಯಿ ಮತ್ತು ನಿರ್ದೇಶಕರಾದ ರಾಜ್ ಮತ್ತು ಕೃಷ್ಣ ಡಿಕೆ ತಮಿಳು ಜನರ ಭಾವನೆಯನ್ನು ಗೌರವಿಸುತ್ತೇವೆ ಎಂದಿದ್ದಾರೆ. ತಾಂಡವ್, ಮಿರ್ಜಾಪುರ್ ಸರಣಿಗಳಂತೆ ಫ್ಯಾಮಿಲಿ ಮ್ಯಾನ್-2 ಸುತ್ತ ವಿವಾದ ಎದ್ದಿದ್ದು, ಸರಣಿ ಬಹಿಷ್ಕರಿಸುವಂತೆ ತಮಿಳರಿಂದ ಆಕ್ರೋಶ ವ್ಯಕ್ತವಾಗುತ್ತಿದೆ.

ಈಳಂ ತಮಿಳರನ್ನು ನೆಗೆಟಿವ್ ಆಗಿ ತೋರಿಸಲಾಗಿದೆ ಎನ್ನುವ ಆರೋಪದ ಮೇರೆಗೆ ತಮಿಳು ನಾಡು ಸರ್ಕಾರ ದಿ ಫ್ಯಾಮಿಲಿ ಮ್ಯಾನ್-2 ಬಿಡುಗಡೆ ಮಾಡಬಾರದು ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಪತ್ರ ಬರೆದಿದೆ. 'ಟ್ರೈಲರ್ ನಲ್ಲಿ ಈಳಂ ತಮಿಳರನ್ನು ಆಕ್ಷೇಪಾರ್ಹ ರೀತಿಯಲ್ಲಿ ತೋರಿಸಲಾಗಿದೆ. ಇದು ಶ್ರೀಲಂಕಾದಲ್ಲಿನ ಈಳಂ ತಮಿಳರ ಹೋರಾಟವನ್ನು ಅಪಖ್ಯಾತಿಗೊಳಿಸುವ ಪ್ರಯತ್ನವಾಗಿದೆ' ಎಂದು ಹೇಳಿದ್ದಾರೆ.

The Family Man 2 Directors Raj and Dk Respond to controversy

ಇದೀಗ ವೆಬ್ ಸರಣಿ ನಾಯಕ ಮನೋಜ್ ಮತ್ತು ನಿರ್ದೇಶಕರಾದ ರಾಜ್ ನಿದಿಮೋರ್ ಮತ್ತು ಕೃಷ್ಣ ಡಿಕೆ ತಮ್ಮ ಹೇಳಿಕೆ ಬಿಡುಗೆಡೆ ಮಾಡಿದ್ದು ತಮಿಳು ಜನರ ಭಾವನೆಗಳನ್ನು ಗೌರವಿಸುತ್ತೇವೆ ಎಂದಿದ್ದಾರೆ.' ಟ್ರೈಲರ್ ನಲ್ಲಿ ಕೆಲವು ದೃಶ್ಯಗಳನ್ನು ನೋಡಿ ವಿವಾದ ಮಾಡಲಾಗಿದೆ. ತಮ್ಮ ತಂಡದ ಪ್ರಮುಖ ಸದಸ್ಯರು ತಮಿಳರು. ನಾವು ತಮಿಳು ಜನರ ಭಾವನೆಗಳನ್ನು ಮತ್ತು ಸಂಸ್ಕೃತಿಯನ್ನು ತಿಳಿದುಕೊಂಡಿದ್ದೇವೆ. ಮತ್ತು ತಮಿಳರ ಬಗ್ಗೆ ಅತ್ಯಂತ ಪ್ರೀತಿ ಗೌರವವನ್ನು ಹೊಂದಿದ್ದೇವೆ' ಎಂದು ಹೇಳಿದ್ದಾರೆ.

ಸರಣಿಗೆ ನಾವು ಅನೇಕ ವರ್ಷಗಳಿಂದ ಶ್ರಮಿಸಿದ್ದೇವೆ. ಸರಣಿ ರಿಲೀಸ್ ಆಗುವ ವರೆಗೂ ಕಾಯಿರಿ ಎಂದು ಮನವಿ ಮಾಡುತ್ತೇವೆ. ನಾವು ಸರಣಿ ನೋಡಿದ ಬಳಿಕ ಖಂಡಿತ ಮೆಚ್ಚುಗೆ ವ್ಯಕ್ತಪಡಿಸುತ್ತೀರಿ' ಎಂದಿದ್ದೀರಿ.

The Family Man 2 Directors Raj and Dk Respond to controversy

ದಿ ಫ್ಯಾಮಿಲಿ ಮ್ಯಾನ್-2 ಸರಣಿಯಲ್ಲಿ ನಟಿ ಸಮಂತಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಟ್ರೈಲರ್ ನಲ್ಲಿ ಸಮಂತಾರನ್ನು ತಮಿಳು ಮಾತನಾಡುವ ಭಯೋತ್ಪಾದಕಳಾಗಿ ತೋರಿಸಲಾಗಿದೆ. ಇದು ನೇರವಾಗಿ ತಮಿಳರ ಹೆಮ್ಮೆಯ ಮೇಲಿನ ಆಕ್ರಮಣವಾಗಿದೆ ಇದನ್ನು ತಮಿಳರು ಸಹಿಸುವುದಿಲ್ಲ ಎಂದು ಟಿ ಎನ್ ಸಚಿವರು ಹೇಳಿದ್ದಾರೆ.

More from Filmibeat

English summary
The Family Man 2 Directors Raj and Dk Respond to controversy.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X