For Quick Alerts
  ALLOW NOTIFICATIONS  
  For Daily Alerts

  The Family Man-2; ವಿವಾದದ ಬಳಿಕ 'ರಾಜಿ' ಪಾತ್ರದ ಬಗ್ಗೆ ಮೊದಲ ಬಾರಿಗೆ ಮೌನ ಮುರಿದ ಸಮಂತ?

  |

  ಭಾರಿ ಕುತೂಹಲ ಮೂಡಿಸಿದ್ದ 'ದಿ ಫ್ಯಾಮಿಲಿ ಮ್ಯಾನ್-2' ವೆಬ್ ಸರಣಿ ಬಿಡುಗಡೆಯಾಗಿ ಸೂಪರ್ ಸಕ್ಸಸ್ ಆಗಿದೆ. ಈ ಸರಣಿ ಮೂಲಕ ಟಾಲಿವುಡ್ ಸ್ಟಾರ್ ನಟಿ ಸಮಂತಾ ಡಿಜಿಟಲ್ ಲೋಕದಲ್ಲೂ ಸ್ಟಾರ್ ಆಗಿದ್ದಾರೆ. ಸಮಂತಾ, ರಾಜಿ ಆಗಿ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.

  'ದಿ ಫ್ಯಾಮಿಲಿ ಮ್ಯಾನ್-2'ನಲ್ಲಿ ಪ್ರೇಕ್ಷಕರನ್ನು ಹೆಚ್ಚು ಕಾಡಿದ ಪಾತ್ರ ರಾಜಿ. ಡಿ ಗ್ಲಾಮ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಸಮಂತಾ ಅಭಿನಯಕ್ಕೆ ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ. ವೆಬ್ ಸರಣಿ ಜೊತೆಗೆ ತನ್ನ ಪಾತ್ರವೂ ಸೂಪರ್ ಸಕ್ಸಸ್ ಆದ ಖುಷಿಯನ್ನು ಸಮಂತಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  'ಫ್ಯಾಮಿಲಿ ಮ್ಯಾನ್-2' ಟ್ವಿಟ್ಟರ್ ವಿಮರ್ಶೆ; ಮನೋಜ್ ಬಾಜಪೇಯಿ-ಸಮಂತಾಗೆ ಅಭಿಮಾನಿಗಳು ಫಿದಾ 'ಫ್ಯಾಮಿಲಿ ಮ್ಯಾನ್-2' ಟ್ವಿಟ್ಟರ್ ವಿಮರ್ಶೆ; ಮನೋಜ್ ಬಾಜಪೇಯಿ-ಸಮಂತಾಗೆ ಅಭಿಮಾನಿಗಳು ಫಿದಾ

  ಅಂದಹಾಗೆ ವೆಬ್ ಸರಣಿ ಬಿಡುಗಡೆಗೂ ಮೊದಲು ಭಾರಿ ವಿವಾದ ಸೃಷ್ಟಿ ಮಾಡಿತ್ತು. ಸಮಂತಾ ಪಾತ್ರದ ಬಗ್ಗೆ ಈಳಂ ತಮಿಳರು ಆಕ್ರೋಶ ಹೊರಹಾಕಿದ್ದರು. ಆದರೆ ಸಮಂತಾ ಯಾವುದೇ ಪ್ರತಿಕ್ರಿಯೆ ನೀಡರಲಿಲ್ಲ. ಇದೀಗ ಮೊದಲ ಬಾರಿಗೆ ತನ್ನ ಪಾತ್ರದ ಬಗ್ಗೆ ಮಾತನಾಡಿದ್ದಾರೆ. ರಾಜಿ ಪಾತ್ರದ ಬಗ್ಗೆ ಸಮಂತಾ ಹೇಳಿದ್ದೇನು? ಮುಂದೆ ಓದಿ..

  ಎಲ್ಲಾ ಕಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ

  ಎಲ್ಲಾ ಕಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ

  'ಎಲ್ಲ ಕಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವುದು ತುಂಬಾ ಸಂತೋಷವಾಗಿದೆ. ರಾಜಿ ಯಾವಾಗಲು ವಿಶೇಷ. ಈ ಪಾತ್ರ ಮಾಡಲು ರಾಜ್ ಮತ್ತು ಡಿಕೆ ಸಂಪರ್ಕಿಸಿದಾಗ, ಈ ಪಾತ್ರವನ್ನು ನಿಭಾಯಿಸಲು ಸೂಕ್ಷ್ಮತೆ ಮತ್ತು ಬ್ಯಾಲೆನ್ಸ್ ಆಗಿರಬೇಕು ಎನ್ನುವುದು ಗೊತ್ತಾಯಿತು' ಎಂದಿದ್ದಾರೆ.

  ಸಾಕ್ಷ್ಯಚಿತ್ರಗಳನ್ನು ನೋಡಿ ಶಾಕ್ ಆಗಿದ್ದೆ

  ಸಾಕ್ಷ್ಯಚಿತ್ರಗಳನ್ನು ನೋಡಿ ಶಾಕ್ ಆಗಿದ್ದೆ

  'ಸೃಜನಶೀಲ ತಂಡವೂ ಕೆಲವು ಸಾಕ್ಷ್ಯಚಿತ್ರಗಳನ್ನು ಕಳುಹಿಸಿ ನೋಡಲು ಹೇಳಿದರು. ಅದರಲ್ಲಿ ಈಳಂ ಯುದ್ಧದಲ್ಲಿ ತಮಿಳು ಮಹಿಳೆಯರ ಸಾವು ನೋವಿನ ಕಥೆಗಳು ಇತ್ತು. ನಾನು ಸಾಕ್ಷ್ಯಚಿತ್ರಗಳನ್ನು ನೋಡಿದಾಗ ಈಳಂ ತಮಿಳರು ದೀರ್ಘಕಾಲದವರೆಗೆ ಅನುಭವಿಸಿದ ತೊಂದರೆ ಮತ್ತು ಕಷ್ಟ ನೋಡಿ ಶಾಕ್ ಆದೆ.'

  ಲಕ್ಷಾಂತರ ಜನರು ಪ್ರಾಣ ಕಳೆದುಕೊಂಡಿದ್ದಾರೆ

  ಲಕ್ಷಾಂತರ ಜನರು ಪ್ರಾಣ ಕಳೆದುಕೊಂಡಿದ್ದಾರೆ

  'ಈ ಸಾಕ್ಷ್ಯಚಿತ್ರಗಳು ಕೆಲವೇ ಸಾವಿರ ವೀಕ್ಷಣೆ ಕಂಡಿದ್ದನ್ನು ಗಮನಿಸಿದೆ. ಈಳಂ ಸಾವಿರಾರು ಜನ ಪ್ರಾಣ ಕಳೆದುಕೊಂಡಾಗ ಜಗತ್ತು ಸುಮ್ಮನೆ ದೂರದಿಂದ ನೋಡುತ್ತಿತ್ತು. ಲಕ್ಷಾಂತರ ಜನರು ತಮ್ಮ ಜೀವನ ಕಳೆದುಕೊಂಡಿದ್ದಾರೆ. ಅಸಂಖ್ಯಾತ ಜನರು ದೂರ ದೇಶಗಳಲ್ಲಿ ವಾಸಿಸುತ್ತಿದ್ದಾರೆ.

  ಆ ಗಾಯ ಅವರ ಹೃದಯದಲ್ಲಿ, ಮನಸ್ಸಿನಲ್ಲಿ ಇನ್ನೂ ಹಾಗೆ ಇದೆ.'

  ಯುದ್ಧದಲ್ಲಿ ಮಡಿದವರಿಗೆ ಈ ಪಾತ್ರ ಗೌರವ ಸಲ್ಲಿಸುತ್ತದೆ

  ಯುದ್ಧದಲ್ಲಿ ಮಡಿದವರಿಗೆ ಈ ಪಾತ್ರ ಗೌರವ ಸಲ್ಲಿಸುತ್ತದೆ

  'ರಾಜಿ ಕಥೆ ಒಂದು ಕಾಲ್ಪನಿಕವಾಗಿದ್ದರೂ, ಅಸಮಾನತೆ ಯುದ್ಧದಲ್ಲಿ ಮರಣಹೊಂದಿದವರಿಗೆ ಮತ್ತು ಯುದ್ಧದ ನೋವಿನ ನೆನಪಿನಲ್ಲಿ ಇರುವವರಿಗೆ ಈ ಪಾತ್ರ ಗೌರವ ಸಲ್ಲಿಸುತ್ತದೆ. ರಾಜಿ ಪಾತ್ರವನ್ನು ಸೂಕ್ಷ್ಮವಾಗಿ ಬಿಂಬಿಸುವುದು ನನ್ನ ಉದ್ದೇಶವಾಗಿತ್ತು. ಒಂದು ವೇಳೆ ನಾವು ವಿಫಲವಾಗಿದ್ದರೆ ಅವರು ಅಸಂಖ್ಯಾತ ಜನರ ತಿರಸ್ಕಾರಕ್ಕೆ ಒಳಗಾಗುತ್ತಿದ್ದರು' ಎಂದು ಸಮಂತಾ ಹೇಳಿದ್ದಾರೆ.

  ಇಂಥ ಪರಿಸ್ಥಿತಿ ಯಾವ ಕಲಾವಿದರಿಗೂ ಬರಬಾರದು | Senior Actress B Jayamma | Filmibeat Kannada
  ತಮಿಳ ವಿರೋಧ ವ್ಯಕ್ತವಾಗಿತ್ತು

  ತಮಿಳ ವಿರೋಧ ವ್ಯಕ್ತವಾಗಿತ್ತು

  ಈ ವೆಬ್ ಸರಣಿಯ ಟ್ರೈಲರ್ ಬಿಡುಗಡೆಯಾಗುತ್ತಿದ್ದಂತೆ ತಮಿಳು ಜನಸಮುದಾಯದ ಮನೋಭಾವನೆಗೆ ನೋವುಂಟುಮಾಡುವ ದೃಶ್ಯಗಳು ಹೊಂದಿದೆ ಎಂದು ಭಾರಿ ವಿರೋಧ ವ್ಯಕ್ತವಾಗಿತ್ತು. ಆದರೀಗ ಬಿಡುಗಡೆ ಬಳಿಕ ಎಲ್ಲರೂ ಮೆಚ್ಚಿಕೊಂಡು ಹಾಡಿ ಹೊಗಳುತ್ತಿದ್ದಾರೆ.

  English summary
  The Family Man-2; Samantha Akkineni opens up about Raji role after controversy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X