ಓಟಿಟಿಗೆ ಬಂತು ವಿವಾದಾತ್ಮಕ 'ದಿ ಕೇರಳ ಸ್ಟೋರಿ 2' ; ಎಲ್ಲಿ ನೋಡಬಹುದು ? ಇಲ್ಲಿದೆ ಮಾಹಿತಿ

ಕನ್ನಡ ಚಿತ್ರರಂಗವನ್ನು ಹೊರತು ಪಡಿಸಿದರೆ ಅಕ್ಕ-ಪಕ್ಕದ ರಾಜ್ಯಗಳಲ್ಲಿನ ಚಿತ್ರರಂಗದವರಿಗೆ ಸದ್ಯ ಸಿಕ್ವೆಲ್ ಜ್ವರ ಹಿಡಿದಿದೆ. ನಿಜಾ.. ನಮ್ಮಲ್ಲಿ ಕೂಡ ಈ ಟ್ರೆಂಡ್ ಇದೆ. ಆದರೆ.. ಅನ್ಯ ಭಾಷೆಯವರಿಗೆ ಹೋಲಿಸಿದರೆ ಪ್ರಯತ್ನಗಳು ನಡೆಯುತ್ತಿರುವುದು ಕಡಿಮೆ.

ಬೇರೆ ಭಾಷೆಗಳಲ್ಲಿ ಹಳೆಯ ಗೆಲುವನ್ನೇ ಟ್ರಂಪ್ ಕಾರ್ಡ್‌ ಆಗಿ ಉಪಯೋಗಿಸಿಕೊಂಡು ಹಲವರು ಇಲ್ಲಿ ದುಡ್ಡು ಬಾಚಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಯಾರನ್ನೇ ಕೇಳಿ ಎಲ್ಲರಲ್ಲಿಯೂ ತಮ್ಮದೇ ಆದ ಯೂನಿವರ್ಸ್‌ ರೆಡಿಯಾಗಿರುತ್ತೆ. ಆ ಪೈಕಿ ''ದಿ ಕೇರಳ ಸ್ಟೋರಿ'' ಕೂಡ ಒಂದು.

The Kerala Story 2 Sets ZEE5 Premiere When to Watch This Thriller

ಹೌದು, 2023ರಲ್ಲಿ ಬಂದ ''ದಿ ಕೇರಳ ಸ್ಟೋರಿ'' ಬಾಕ್ಸಾಫೀಸ್‌ ಕೊಳ್ಳೆ ಹೊಡೆದಿತ್ತು. ಬಾಕ್ಸಾಫೀಸ್‌ನ ಅಂಕಿ ಅಂಶ ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ 300 ಕೋಟಿ + ಹಣ ದೋಚಿತ್ತು. ಚಿತ್ರಕ್ಕೆ ಸಿಕ್ಕ ಈ ಅಭೂತಪೂರ್ವ ಪ್ರತಿಕ್ರಿಯೆ ''ದಿ ಕೇರಳ ಸ್ಟೋರಿ'' ಫ್ರಾಂಚೈಸಿಯ ಉಗಮಕ್ಕೂ ಕಾರಣವಾಯ್ತು. ಆ ನಂತರ ಬಂದಿದ್ದೇ '' ದಿ ಕೇರಳ ಸ್ಟೋರಿ 2- ಗೋಸ್ ಬಿಯಾಂಡ್''.

ಈ ವರ್ಷದ ಆರಂಭದಲ್ಲಿ ಅಂದರೆ ಫೆಬ್ರವರಿ 27ರಂದು ತೆರೆಗೆ ಬಂದ '' ದಿ ಕೇರಳ ಸ್ಟೋರಿ 2- ಗೋಸ್ ಬಿಯಾಂಡ್'' ಚಿತ್ರದ ಮೇಲೆಯೂ ಕೂಡ ವಿವಾದದ ನೆರಳು ಬಿದ್ದಿತ್ತು. ಪ್ರೊಪಗಂಡಾ ಸಿನಿಮಾ ಎಂದು ಒಂದು ವರ್ಗ ಕರೆಯಿತು. ಆದರೆ, ಬಾಕ್ಸಾಫೀಸ್‌ನಲ್ಲಿ ಇದರ ಪರಿಣಾಮವೇನು ಆಗಲಿಲ್ಲ.

ಬದಲಿಗೆ ಚಿತ್ರಕ್ಕೆ ಇನ್ನೂ ಹೆಚ್ಚಿನ ಪ್ರಚಾರ ಸಿಕ್ಕಿತ್ತು. ಇದರ ಪರಿಣಾಮ ₹25-30 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ '' ದಿ ಕೇರಳ ಸ್ಟೋರಿ 2- ಗೋಸ್ ಬಿಯಾಂಡ್'' 60 ಕೋಟಿಯನ್ನು ಗಳಿಸಿತು. ಸದ್ಯ ಈ ಚಿತ್ರ ಬಿಡುಗಡೆಯಾಗಿ 57 ದಿನಗಳಾಗಿವೆ. ಓಟಿಟಿಯಲ್ಲಿ ಈ ಚಿತ್ರದ ಪ್ರಸಾರಕ್ಕೆ ಮುಹೂರ್ತ ನಿಗದಿ ಮಾಡಲಾಗಿದೆ.

ಹೌದು, ಸಾಮಾನ್ಯವಾಗಿ ಬದಲಾದ ಈ ಕಾಲದಲ್ಲಿ ಚಿತ್ರವೊಂದು ಚಿತ್ರಮಂದಿರಕ್ಕೆ ಬಂದು ನಾಲ್ಕು ವಾರ ಕಳೆದಿರುವುದಿಲ್ಲ. ಆದರೆ ಅಷ್ಟರಲ್ಲಿಯೇ ಚಿತ್ರ ಓಟಿಟಿಯ ಅಂಗಳಕ್ಕೆ ಬಂದು ಬಿಡುತ್ತೆ. '' ದಿ ಕೇರಳ ಸ್ಟೋರಿ 2 -ಗೋಸ್ ಬಿಯಾಂಡ್'' ಕೂಡ ಬಂದಿದೆ. ಆದರೆ ನಾಲ್ಕು ವಾರಕ್ಕೆ ಅಲ್ಲ ಬದಲಿಗೆ 62 ದಿನಗಳ ನಂತರ ಅನ್ನೋದು ವಿಶೇಷ. ಚಿತ್ರ ಇದೇ ಮೇ 1ರಿಂದ ಓಟಿಟಿಯಲ್ಲಿ ಪ್ರಸಾರವಾಗಲಿದೆ.

The Kerala Story 2 Sets ZEE5 Premiere When to Watch This Thriller

ತಾರಾಬಳಗ

ಉಲ್ಕಾ ಗುಪ್ತಾ, ಅದಿತಿ ಭಾಟಿಯಾ, ಐಶ್ವರ್ಯ ಓಜಾ, ಸುಮಿತ್ ಗಹ್ಲಾವತ್, ಅರ್ಜುನ್ ಸಿಂಗ್ ಔಜ್ಲಾ, ಯುಕ್ತಮ್ ಖೋಸ್ಲಾ, ಅಲ್ಕಾ ಅಮೀನ್, ಮುಂತಾದವರು

ನಿರ್ದೇಶನ - ಕಾಮಾಖ್ಯ ನಾರಾಯಣ್ ಸಿಂಗ್

ಕಥೆ : ವಿಪುಲ್ ಅಮೃತಲಾಲ್ ಶಾ ಮತ್ತು ಅಮರನಾಥ್ ಝಾ

ನಿರ್ಮಾಣ: ವಿಪುಲ್ ಅಮೃತಲಾಲ್ ಶಾ

ಛಾಯಾಗ್ರಹಣ :ಅಭಿಜೀತ್ ಚೌಧರಿ

ಸಂಕಲನ : ಸಂಜಯ್ ಶರ್ಮಾ

ಹಿನ್ನೆಲೆ ಸಂಗೀತ : ಮನ್ನನ್ ಶಾ

ಸಂಗೀತ : ಮನ್ನನ್ ಶಾ ಮತ್ತು ರಾಹುಲ್ ಸುಹಾಸ್

ಎಲ್ಲಿ ನೋಡಬಹುದು ?

ಬಾಕ್ಸಾಫೀಸ್‌ನಲ್ಲಿ ಭರ್ಜರಿ ಪ್ರದರ್ಶನ ಕಂಡಿರುವ ''ದಿ ಕೇರಳ ಸ್ಟೋರಿ 2-ಗೋಸ್ ಬಿಯಾಂಡ್'' ಇದೇ ಮೇ 1ರಿಂದ ಜೀ5ನಲ್ಲಿ ಪ್ರಸಾರವಾಗಲಿದೆ. ಚಿತ್ರದ ಅವಧಿ 2 ಗಂಟೆ 11 ನಿಮಿಷಗಳಿದ್ದು ಹಿಂದಿ ಭಾಷೆಯಲ್ಲಿ ನೋಡುವ ಅವಕಾಶ ಇದೆ. ಬೇರೆ ಭಾಷೆಗಳಿಗೆ ಡಬ್ ಮಾಡಲಾಗಿದೆಯಾ..? ಎನ್ನುವುದಕ್ಕೆ ಉತ್ತರ ಸದ್ಯಕ್ಕಿಲ್ಲ.

ಒಟ್ನಲ್ಲಿ ಸದ್ಯ ''ದಿ ಕೇರಳ ಸ್ಟೋರಿ 2-ಗೋಸ್ ಬಿಯಾಂಡ್'' ಓಟಿಟಿ ಅಂಗಳಕ್ಕೆ ಬರುತ್ತಿದ್ದು, ಚಿತ್ರಮಂದಿರದಲ್ಲಿ ವಿವಾದದ ಕಿಡಿ ಹೊತ್ತಿಸಿದ್ದ ಈ ಚಿತ್ರ ಸೋಶಿಯಲ್ ಮೀಡಿಯಾದಲ್ಲಿ ಈಗ ಮತ್ತೊಮ್ಮೆ ಚರ್ಚೆಗೆ ನಾಂದಿ ಹಾಡಲಿದೆ. ಓಟಿಟಿಯಲ್ಲಿ ಈ ಚಿತ್ರವನ್ನು ನೋಡಿದವರ ಪ್ರತಿಕ್ರಿಯೆ ಹೇಗಿರುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.

English summary
Wondering where to watch The Kerala Story 2 online? Get the latest updates on the ZEE5 digital premiere and see how to stream this intense social thriller today.
Read more about: bollywood the kerala story
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X