ಅಂದುಕೊಂಡಿದ್ದಕ್ಕಿಂತ ಮೊದ್ಲೆ ಓಟಿಟಿಗೆ ವಿವಾದಾತ್ಮಕ 'ಕೇರಳ ಸ್ಟೋರಿ'? ಎಲ್ಲಿ, ಯಾವಾಗ?

ಪಶ್ಚಿಮ ಬಂಗಾಳ, ತಮಿಳುನಾಡಿನಲ್ಲಿ ಭಾರೀ ವಿರೋಧದ ನಡುವೆಯೂ 'ದಿ ಕೇರಳ ಸ್ಟೋರಿ' ಸಿನಿಮಾ ಭರ್ಜರಿ ಪ್ರದರ್ಶನ ಕಾಣ್ತಿದೆ. 3 ರಾಜ್ಯಗಳಲ್ಲಿ ಚಿತ್ರಕ್ಕೆ ತೆರಿಗೆ ವಿನಾಯಿತಿ ಘೋಷಿಸಲಾಗಿದೆ. ಕೇವಲ 5 ದಿನಗಳಲ್ಲಿ ಸಿನಿಮಾ 56 ಕೋಟಿ ರೂ. ಕಲೆಕ್ಷನ್ ಮಾಡಿ ಸದ್ದು ಮಾಡ್ತಿದೆ. ಇದೆಲ್ಲದರ ನಡುವೆ ಸಿನಿಮಾ ಓಟಿಟಿ ಸ್ಟ್ರೀಮಿಂಗ್ ಯಾವಾಗ ಎನ್ನುವ ಚರ್ಚೆ ಶುರುವಾಗಿದೆ.

ಈಗಾಗಲೇ ಭಾರೀ ಮೊತ್ತಕ್ಕೆ 'ದಿ ಕೇರಳ ಸ್ಟೋರಿ' ಡಿಜಿಟಲ್ ರೈಟ್ಸ್ ಮಾರಾಟವಾಗಿದೆ. ಕೇರಳದಲ್ಲಿ ಬಲವಂತವಾಗಿ ಹಿಂದೂ ಹಾಗೂ ಕ್ರಿಶ್ಚಿಯನ್ ಯುವತಿಯರನ್ನು ಮಂತಾತರ ಮಾಡಿ ಭಯೋತ್ಪಾದನೆಗೆ ದೂಡಲಾಗುತ್ತಿದೆ ಎನ್ನು ಆರೋಪ ಇದೆ. ಇದೇ ಅಂಶವನ್ನು ಇಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ಅದೇ ಕಾರಣಕ್ಕೆ ರಾಜಕೀಯವಾಗಿಯೂ ಈ ಸಿನಿಮಾ ಭಾರೀ ಚರ್ಚೆ ಹುಟ್ಟಾಕ್ಕಿದೆ. ಕೇರಳದಲ್ಲಿ ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳು ಈ ಸಿನಿಮಾ ಬಿಡುಗಡೆಯನ್ನು ವಿರೋಧಿಸಿದ್ದವು. ಇದೇ ವಿಚಾರವಾಗಿ ಕೋರ್ಟ್ ಮೆಟ್ಟಿಲು ಏರಿದ್ದರು.

The Kerala Story OTT Release Date: controversial film Could Stream very soon on Zee 5
The Kerala Story OTT Release Date: controversial film Could Stream very soon on Zee 5

ಕೋರ್ಟ್‌ನಲ್ಲಿ ಸಿನಿಮಾ ಪ್ರದರ್ಶನಕ್ಕೆ ತಡೆ ಸಾಧ್ಯವಿಲ್ಲ ಎನ್ನುವ ತೀರ್ಪು ಬಂದಿತ್ತು. ಕಳೆದ ಶುಕ್ರವಾರ ಬಿಡುಗಡೆಯಾದ ಸಿನಿಮಾ ಪಶ್ಚಿಮ ಬಂಗಾಳ, ತಮಿಳುನಾಡು ಹೊರತುಪಡಿಸಿ ಬೇರೆ ರಾಜ್ಯಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಚಿತ್ರಕ್ಕೆ ಇಷ್ಟೆಲ್ಲಾ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಆದಷ್ಟು ಬೇಗ ಓಟಿಟಿಗೆ ಬರುವ ಸುಳಿವು ಸಿಗುತ್ತಿದೆ. ಜೀ5 ಸಂಸ್ಥೆ 'ದಿ ಕೇರಳ ಸ್ಟೋರಿ' ಡಿಜಿಟಲ್ ರೈಟ್ಸ್ ಕೊಂಡುಕೊಂಡಿದೆ. ಸಾಮಾನ್ಯವಾಗಿ ಯಾವುದೇ ಸಿನಿಮಾ ಥಿಯೇಟರ್‌ಗಳಲ್ಲಿ ರಿಲೀಸ್ ಆಗಿ 7 ವಾರಗಳ ನಂತರ ಓಟಿಟಿಗೆ ಬರುತ್ತದೆ. ಆದರೆ 'ದಿ ಕೇರಳ ಸ್ಟೋರಿ' ಅದಕ್ಕಿಂತ ಬೇಗ ಬರುವ ಸಾಧ್ಯತೆಯಿದೆ.

5 ದಿನಕ್ಕೆ 50 ಕೋಟಿ ರೂ. ಕಲೆಕ್ಷನ್

ಮೊದಲ ದಿನ ಸಾಧಾರಣ ಓಪನಿಂಗ್ ಪಡೆದುಕೊಂಡಿದ್ದ ನಿಧಾನವಾಗಿ ಕಲೆಕ್ಷನ್ ಹೆಚ್ಚಿಸಿಕೊಂಡು ಸಾಗಿದೆ. ಶುಕ್ರವಾರ 8.03 ಕೋಟಿ ರೂ. ಶನಿವಾರ 11.22 ಕೋಟಿ ರೂ. ಭಾನುವಾರ 16 ಕೋಟಿ ರೂ. ಸೋಮವಾರ 10.07 ಕೋಟಿ ರೂ. ಹಾಗೂ ಮಂಗಳವಾರ 11.14 ಕೋಟಿ ರೂ. ಸೇರಿ ಭಾರತದಲ್ಲಿ ಮೊದಲ 5 ದಿನಕ್ಕೆ ಒಟ್ಟು 56.86 ಕೋಟಿ ರೂ. ಗಳಿಸಿದೆ. ಬುಧವಾರ ಕೂಡ ಒಳ್ಳೆ ಮೊತ್ತವನ್ನೇ ಕಲೆಕ್ಟ್ ಮಾಡಿರುವ ಲೆಕ್ಕಾಚಾರ ನಡೀತಿದೆ.

3 ರಾಜ್ಯಗಳಲ್ಲಿ ಟ್ಯಾಕ್ಸ್ ಫ್ರೀ

'ದಿ ಕೇರಳ ಸ್ಟೋರಿ' ಮಧ್ಯಪ್ರದೇಶ ಸರ್ಕಾರ ಮೊದಲು ತೆರಿಗೆ ವಿನಾಯಿತಿ ಘೋಷಿಸಿತ್ತು. ನಂತರ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಕೂಡ ತಮ್ಮ ರಾಜ್ಯದಲ್ಲಿ ಟ್ಯಾಕ್ಸ್ ಫ್ರೀ ಎಂದರು. ಇದೀಗ ಹರಿಯಾಣ ರಾಜ್ಯದಲ್ಲೂ ತೆರೆಗೆ ವಿನಾಯಿತಿ ಘೋಷಿಸಿರುವ ಸುದ್ದಿ ಬಂದಿದೆ. ಇನ್ನು ಚಿತ್ರತಂಡವನ್ನು ಲಕ್ನೋಗೆ ಆಹ್ವಾನಿಸಿ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಸನ್ಮಾನಿಸಿದ್ದಾರೆ. ಚಿತ್ರತಂಡದ ಶ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

2 ರಾಜ್ಯಗಳಲ್ಲಿ ಪ್ರದರ್ಶನ ಇಲ್ಲ

ಪಶ್ಚಿಮ ಬಂಗಾಳದಲ್ಲಿ ಸರ್ಕಾರವೇ 'ದಿ ಕೇರಳ ಸ್ಟೋರಿ' ಚಿತ್ರವನ್ನು ನಿಷೇಧಿಸಿದೆ. ರಾಜ್ಯದಲ್ಲಿ ದ್ವೇಷ ಹಾಗೂ ಹಿಂಸಾಚಾರದ ಘಟನೆಗಳನ್ನು ತಪ್ಪಿಸಿ ಶಾಂತಿಯನ್ನು ಕಾಪಾಡುವ ಸಲುವಾಗಿ ಸರ್ಕಾರವು ಕೇರಳ ಸ್ಟೋರಿ ಚಿತ್ರವನ್ನು ನಿಷೇಧಿಸಲು ನಿರ್ಧರಿಸಿದೆ ಎಂದು ಹೇಳಿದ್ದಾರೆ. ಇನ್ನು ತಮಿಳುನಾಡು ಥಿಯೇಟರ್‌ ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ ಪ್ರೇಕ್ಷಕರು ಬರುತ್ತಿಲ್ಲ ಎನ್ನುವ ನೆಪವೊಡ್ಡಿ ಸಿನಿಮಾ ಪ್ರದರ್ಶನ ನಿಲ್ಲಿಸಲಾಗಿದೆ.

ಜೂನ್ ಮೊದಲ ವಾರ ಓಟಿಟಿಗೆ ಸಿನಿಮಾ

ಥಿಯೇಟರ್‌ಗೆ ಬಂದು 7 ವಾರಗಳ ನಂತರ ಸಿನಿಮಾಗಳು ಓಟಿಟಿಗೆ ಬರುತ್ತವೆ. ಆ ಲೆಕ್ಕದಲ್ಲಿ 'ದಿ ಕೇರಳ ಸ್ಟೋರಿ' ಜೂನ್ 3ನೇ ವಾರ ಸ್ಟ್ರೀಮಿಂಗ್ ಆಗಬೇಕು. ಆದರೆ ಸಿನಿಮಾ ಇಷ್ಟೆಲ್ಲಾ ವಿವಾದ ಸೃಷ್ಟಿಸಿರುವುದು, ಶೋಗಳು ಕ್ಯಾನ್ಸಲ್ ಆಗ್ತಿರುವುದು ನೋಡಿದರೆ ಮೇ ಕೊನೆಗೆ ಅಥವಾ ಜೂನ್ ಮೊದಲ ವಾರ ಸ್ಮಾಲ್ ಸ್ಕ್ರೀನ್‌ಗೆ ಬರುವ ಸುಳಿವು ಸಿಕ್ತಿದೆ. ಆದರೆ ತಮಿಳುನಾಡು ಹಾಗೂ ಪಶ್ಚಿಮ ಬಂಗಾಳದಲ್ಲಿ ಓಟಿಟಿಯಲ್ಲಿ ಸಿನಿಮಾ ಪ್ರದರ್ಶನಕ್ಕೆ ಅವಕಾಶ ಸಿಗುತ್ತಾ ಕಾದು ನೋಡಬೇಕಿದೆ.

More from Filmibeat

English summary
The Kerala Story OTT Release Date: controversial film Could Stream very soon on Zee 5. Adah Sharma Starrer The Kerala Story collects 54.25 cr in 5 days. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X