ಈ ವಾರ ಓಟಿಟಿಯಲ್ಲಿ ಚಿತ್ರೋತ್ಸವ: ಬಹುನಿರೀಕ್ಷಿತ ಸಿನಿಮಾ, ವೆಬ್‌ ಸೀರಿಸ್ ರಿಲೀಸ್, ಇಲ್ಲಿದೆ ಕಂಪ್ಲೀಟ್ ಲಿಸ್ಟ್

ಥಿಯೇಟರ್‌ಗಳು ಪ್ರೇಕ್ಷಕರ ಬರ ಎದುರಿಸುವಂತಾಗಿದೆ. ದೊಡ್ಡ ಸಿನಿಮಾಗಳು ರಿಲೀಸ್ ಆಗದೇ ಇರುವುದು ಇದಕ್ಕೆ ಮುಖ್ಯ ಕಾರಣ ಎನ್ನಬಹುದು. ಕಳೆದ ವಾರ 'ಆದಿಪುರುಷ್' ಆರ್ಭಟ ಜೋರಾಗಿತ್ತು. ಇನ್ನುಳಿದಂತೆ ಕನ್ನಡದ ಸಿನಿಮಾಗಳು ಅಷ್ಟಾಗಿ ಸದ್ದು ಮಾಡ್ತಿಲ್ಲ. ಇನ್ನು ಓಟಿಟಿಯಲ್ಲಿ ಈ ವಾರ ಯಾವ ಯಾವ ಸಿನಿಮಾಗಳು ರಿಲೀಸ್ ಆಗ್ತಿವೆ ಎನ್ನುವ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.

ಬರ್ತಾ ಬರ್ತಾ ಪ್ರೇಕ್ಷಕರು ಥಿಯೇಟರ್‌ಗೆ ಬರೋದು ಕಮ್ಮಿ ಆಗ್ತಿದೆ. ಎರಡು ವಾರ ಕಾದರೆ ಸಿನಿಮಾ ಓಟಿಟಿಗೆ ಬರುತ್ತೆ ಬಿಡು ಎನ್ನುವ ಮನೋಭಾವ ಹೆಚ್ಚಾಗುತ್ತಿದೆ. ಸ್ಟಾರ್‌ ನಟರು ವರ್ಷಕ್ಕೆ ಒಂದು ಸಿನಿಮಾ ಮಾಡೋದಕ್ಕೂ ಮೀಣಾಮೇಷ ಎಣಿಸುತ್ತಿದ್ದಾರೆ. ಕನ್ನಡ ಸಿನಿಮಾಗಳು ಇಲ್ಲದೇ ಥಿಯೇಟರ್‌ಗಳಲ್ಲಿ ಪರಭಾಷಾ ಸಿನಿಮಾಗಳ ಹಾವಳಿ ಹೆಚ್ಚಾಗಿದೆ. ಇದೆಲ್ಲದರ ನಡುವೆ ಜನ ಓಟಿಟಿ ಮೇಲೆ ಕಣ್ಣಿಟ್ಟಿದ್ದು ಪ್ರತಿ ವಾರ ಯಾವ ಸಿನಿಮಾ, ವೆಬ್ ಸೀರಿಸ್ ಬರುತ್ತೆ ಎಂದು ಕಾದು ಕೂತಿದ್ದಾರೆ. ನಿರ್ಮಾಪಕರು ಕೂಡ ಈಗ ಓಟಿಟಿ ಬ್ಯುಸಿನೆಸ್‌ನ ಬಹಳ ಗಂಭೀರವಾಗಿ ಪರಿಗಣಿಸಿದ್ದಾರೆ.

The kerala story to John Wick- 4: June 2023 Week 4 OTT movies, web series India releases

ಥಿಯೇಟರ್ ಮಾತ್ರವಲ್ಲ ಓಟಿಟಿ ಫ್ಲಾಟ್‌ಪಾರ್ಮ್‌ಗಳಲ್ಲೂ ಶುಕ್ರವಾರವೇ ಸಿನಿಮಾಗಳ ಹಾವಳಿ ಶುರುವಾಗುತ್ತದೆ. ಈ ವಾರ ಅಮೇಜಾನ್ ಪ್ರೈಂ, ನೆಟ್‌ಫ್ಲಿಕ್ಸ್, ಡಿಸ್ನಿ ಹಾಟ್‌ಸ್ಟರ್, ಜೀ5, ಸೋನಿ ಲಿವ್ ಫ್ಲಾಟ್‌ಪಾರ್ಮ್‌ಗೆ ಯಾವೆಲ್ಲಾ ಸಿನಿಮಾ, ಒರಿಜಿನಲ್ ಸೀರಿಸ್ ಬರ್ತಿವೆ ಎನ್ನುವ ಕಂಪ್ಲೀಟ್ ಲಿಸ್ಟ್ ಮುಂದೆ ಇದೆ ಓದಿ.

The kerala story to John Wick- 4: June 2023 Week 4 OTT movies, web series India releases


'ದಿ ಕೇರಳ ಸ್ಟೋರಿ'

ಈ ವರ್ಷ ಭಾರೀ ಸದ್ದು ಗದ್ದಲ ಮಾಡಿದ 'ದಿ ಕೇರಳ ಸ್ಟೋರಿ' ಸಿನಿಮಾ ಶುಕ್ರವಾರ ಓಟಿಟಿಗೆ ಬರುವ ನಿರೀಕ್ಷೆಯಿದೆ. ಈಗಾಗಲೇ ಜೀ5 ರೈಟ್ಸ್ ಖರೀದಿಸಿದೆ. ಅದಾ ಶರ್ಮಾ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಸಿನಿಮಾ ಭಾರೀ ವಿವಾದ ಸೃಷ್ಟಿಸಿದ್ದು ಮಾತ್ರವಲ್ಲ 200 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸಂಚಲನ ಸೃಷ್ಟಿಸಿತ್ತು. ಕೇರಳದಲ್ಲಿ ಯುವತಿಯರನ್ನು ಬಲವಂತವಾಗಿ ಮಂತಾಂತರ ಮಾಡಿ ಅವರನ್ನು ಭಯೋತ್ಪಾದನೆ ಚಟುವಟಿಗೆಗೆ ತೂಕಲಾಗುತ್ತಿದೆ ಎನ್ನುವ ವಿಚಾರವನ್ನಿಟ್ಟುಕೊಂಡು ಈ ಸಿನಿಮಾ ಮಾಡಿರುವುದಾಗಿ ಚಿತ್ರತಂಡ ಹೇಳಿತ್ತು. ಸುದೀಪ್ತೋ ಸೇನ್ ನಿರ್ದೇಶನದ ಈ ಚಿತ್ರಕ್ಕೆ ವಿಪುಲ್ ಅಮೃತ್‌ಲಾಲ್ ಬಂಡವಾಳ ಹೂಡಿದ್ದರು.

'ಕಿಸಿ ಕಾ ಭಾಯ್ ಕಿಸಿ ಕಿ ಜಾನ್'

ತಮಿಳಿನ 'ವೀರಂ' ಸಿನಿಮಾ ರೀಮೆಕ್ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಕೂಡ ಜೀ5ನಲ್ಲಿ ಈ ವಾರ ಸ್ಟ್ರೀಮಿಂಗ್ ಆಗಲಿದೆ. ಭಾರೀ ನಿರೀಕ್ಷೆ ಮೂಡಿಸಿದ್ದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಅಷ್ಟಾಗಿ ಸದ್ದು ಮಾಡಲಿಲ್ಲ. ಚಿತ್ರದಲ್ಲಿ ಸಲ್ಲು ಜೋಡಿಯಾಗಿ ಪೂಜಾ ಹೆಗ್ಡೆ ಮಿಂಚಿದ್ದರು. ತೆಲುಗು ನಟ ವೆಂಕಟೇಶ್ ಮುಖ್ಯ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ಹಾಡೊಂದರಲ್ಲಿ ರಾಮ್‌ಚರಣ್ ಹೆಜ್ಜೆ ಹಾಕಿದ್ದರು. ಆದರೆ ಯಾವುದೂ ಕೂಡ ಸಿನಿಮಾ ಗೆಲ್ಲಿಸಲಿಲ್ಲ. ಫಹಾದ್ ಸಮ್ಜಿ ನಿರ್ದೇಶನದ ಈ ಚಿತ್ರವನ್ನು ಸ್ವತ: ಸಲ್ಮಾನ್ ಖಾನ್ ನಿರ್ಮಿಸಿದ್ದರು.

ಸೋನಿ ಲಿವ್‌ನಲ್ಲಿ 'ಏಜೆಂಟ್'

ಅಖಿಲ್ ಅಕ್ಕಿನೇನಿ ನಟನೆಯ 'ಏಜೆಂಟ್' ಸಿನಿಮಾ ಕೂಡ ಇದೇ ವಾರ ಡಿಜಿಟಲ್ ಫ್ಲಾಟ್‌ಪಾರ್ಮ್‌ಗೆ ಬರ್ತಿದೆ. ಏಪ್ರಿಲ್ 28ರಂದು ತೆರಗಪ್ಪಳಿಸಿದ್ದ ಈ ಸಿನಿಮಾ ಹೀನಾಯವಾಗಿ ಸೋಲುಂಡಿತ್ತು. ಚಿತ್ರಕ್ಕೆ ಸುರೇಂದರ್ ರೆಡ್ಡಿ ಆಕ್ಷನ್ ಕಟ್ ಹೇಳಿದ್ದರೆ ಮಲಯಾಳಂ ನಟ ಮೊಮ್ಮಟ್ಟಿ ಮುಖ್ಯವಾದ ಪಾತ್ರಕ್ಕೆ ಜೀವ ತುಂಬಿದ್ದರು. ನಿರ್ಮಾಪಕ ಅಜಯ್ ಸುಂಕರ 'ಏಜೆಂಟ್' ಸಿನಿಮಾ ಸೋಲಿನ ಹೊಣೆ ಹೊತ್ತುಕೊಂಡಿದ್ದರು. ಶುಕ್ರವಾರ ಸೋನಿ ಲಿವ್‌ನಲ್ಲಿ ಈ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ.

'ಪೊನ್ನಿಯಿನ್ ಸೆಲ್ವನ್- 2' ಹಿಂದಿ

ಮಣಿರತ್ನಂ ನಿರ್ದೇಶನದ 'ಪೊನ್ನಿಯಿನ್ ಸೆಲ್ವನ್- 2' ಏಪ್ರಿಲ್ 28ಕ್ಕೆ ತೆರೆ ಕಂಡಿತ್ತು. ಒಳ್ಳೆ ಪ್ರತಿಕ್ರಿಯೆ ಸಿಕ್ಕರೂ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಅಷ್ಟಾಗಿ ಸದ್ದು ಮಾಡಲಿಲ್ಲ. ಚಿಯಾನ್ ವಿಕ್ರಂ, ಐಶ್ವರ್ಯ ರೈ, ಜಯಂ ರವಿ, ತ್ರಿಷಾ, ಕಾರ್ತಿ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿತ್ತು. ಈಗಾಗಲೇ 4 ಭಾಷೆಗಳಲ್ಲಿ ಈ ಸಿನಿಮಾ ಓಟಿಟಿಗೆ ಬಂದಿದೆ. ಈ ವಾರ ಹಿಂದಿ ವರ್ಷನ್ ಅಮೇಜಾನ್ ಪ್ರೈಂಗೆ ಎಂಟ್ರಿ ಕೊಡ್ತಿದೆ.

ನೆಟ್‌ಫ್ಲಿಕ್ಸ್

ಸ್ಲೀಪಿಂಗ್ ಡಾಗ್- ಇಂಗ್ಲೀಷ್ ಸೀರಿಸ್ (ಜೂನ್ 22)

ಸ್ಕಲ್ ಐಲ್ಯಾಂಡ್- ಇಂಗ್ಲೀಷ್ ಸೀರಿಸ್ (ಜೂನ್ 22)

ಗ್ಲಾಮರಸ್- ಇಂಗ್ಲೀಷ್ ಸೀರಿಸ್ (ಜೂನ್ 22)

ಸೋಷನ್ ಕರೆನ್ಸಿ- ಹಿಂದಿ ಸೀರಿಸ್ (ಜೂನ್ 22)

ಐ ನಂಬರ್- ಜೊಜಿ ಗೋಲ್ಡ್- ಇಂಗ್ಲೀಷ್ ಸಿಇನಿಮಾ (ಜೂನ್ 23)

ಥ್ರೂ ಮೈ ವಿಂಡೋ- ಇಂಗ್ಲೀಷ್ ಸಿನಿಮಾ (ಜೂನ್ 23)

ಕ್ಯಾಚಿಂಗ್ ಕಿಲ್ಲರ್ಸ್- ಸೀಸನ್-3, ಡಾಕ್ಯು (ಜೂನ್ 23)

ಟೇಕ್ ಕೇರ್ ಆಫ್ ಮಾಯಾ- ಇಂಗ್ಲೀಷ್ ಸಿನಿಮಾ (ಸ್ಟ್ರೀಮಿಂಗ್ ಆಗ್ತಿದೆ)

ನಾಟ್ ಕ್ವೈಟ್ ನಾರ್ವಲ್- ಇಂಗ್ಲೀಷ್ ಸೀರಿಸ್ (ಸ್ಟ್ರೀಮಿಂಗ್ ಆಗ್ತಿದೆ)


ಡಿಸ್ನಿ ಪ್ಲಸ್ ಹಾಟ್‌ಸ್ಟರ್

ಕ್ಲಾಸ್ ಆಫ್ '09'- ಇಂಗ್ಲೀಷ್ ಸೀರಿಸ್ (ಜೂನ್ 21)

ಸೀಕ್ರೆಟ್ ಇನ್ವೆಸ್ಟಿಗೇಷನ್- ಇಂಗ್ಲೀಷ್ ಸೀರಿಸ್ (ಜೂನ್ 21)

ಜಾಗ್ದ್ ಮೈಂಡ್- ಇಂಗ್ಲೀಷ್ ಸೀರಿಸ್ (ಜೂನ್ 23)

ಕೇರಳ ಕ್ರೈಂ ಫೈಲ್ಸ್- ಮಲಯಾಳಂ ಸಿನಿಮಾ (ಜೂನ್ 23)

ವರ್ಲ್ಡ್ಸ್ ಬೆಸ್ಟ್ - ಇಂಗ್ಲೀಷ್ ಸಿನಿಮಾ (ಜೂನ್ 23)

More from Filmibeat

English summary
The kerala story, Kisi Ka Bhai Kisi Ki Jaan,John Wick- 4: June 2023 Week 4 OTT movies, web series India releases. Check out the list of some new shows and movies. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X