ಈ ವಾರ ಓಟಿಟಿ ಹಾಗೂ ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿರುವ ಚಿತ್ರಗಳ ಪಟ್ಟಿ

ಯುಗಾದಿ ಸಂಭ್ರಮದಲ್ಲಿ ಕೂಡ ಕಳೆದ ವೀಕೆಂಡ್ ಯಾವುದೇ ದೊಡ್ಡ ಸಿನಿಮಾಗಳು ತೆರೆಗೆ ಬಂದಿಲ್ಲ. ಈ ವಾರವೂ ಅಂತಹ ಲಕ್ಷಣಗಳು ಕಾಣುತ್ತಿಲ್ಲ. ಇನ್ನು ಮತ್ತೊಂದು ವಾರ ಕಳೆದ್ದಿದ್ದು ಓಟಿಟಿಯಲ್ಲಿ ಹೊಸ ಹೊಸ ಕಂಟೆಂಟ್ ಅಪ್‌ಲೋಡ್ ಆಗುತ್ತಿದೆ.

ಈಗಾಗಲೇ ಕೆಲ ವೆಬ್ ಸೀರಿಸ್ ಈ ವಾರ ಸ್ಟ್ರೀಮಿಂಗ್ ಆರಂಭಿಸಿವೆ. ಇನ್ನು ಗುರುವಾರ, ಶುಕ್ರವಾರ, ಶನಿವಾರ ಒಂದಷ್ಟು ಸಿನಿಮಾ, ಸೀರಿಸ್ ರಿಲೀಸ್‌ಗೆ ಸಜ್ಜಾಗಿವೆ. ಕನ್ನಡದ ಕಂಟೆಂಡ್ ಅಭಾವ ಎಂದಿನಂತೆ ಮುಂದುವರೆದಿದೆ. ಥಿಯೇಟರ್‌ಗಳಲ್ಲಿ 'ಯುವ', 'ಬ್ಲಿಂಕ್' ಸಿನಿಮಾಗಳ ದರ್ಬಾರ್ ನಡೀತಿದೆ.

Theatre OTT releases this week List of movies to watch this week

ಕನ್ನಡದ ಕೆಲ ಸಿನಿಮಾಗಳು ಥಿಯೇಟರ್‌ಗೆ ಬಂದು ಹೋಗಿದ್ದರೂ ಇನ್ನು ಓಟಿಟಿಗೆ ಬಂದಿಲ್ಲ. ಒಂದಷ್ಟು ಸಿನಿಮಾಗಳ ಓಟಿಟಿ ಸ್ಟ್ರೀಮಿಂಗ್‌ಗಾಗಿ ಕಾಯುತ್ತಲೇ ಇದ್ದಾರೆ. ಅದನ್ನೆಲ್ಲಾ ಪಕ್ಕಕ್ಕಿಟ್ಟರೆ ಈ ವಾರ ಥಿಯೇಟರ್ ಹಾಗೂ ಓಟಿಟಿಗೆ ಬರುವ ಸಿನಿಮಾ, ಸೀರಿಸ್ ಲಿಸ್ಟ್ ಮುಂದೆ ಇದೆ ಓದಿ.

1. ಬಡೇ ಮಿಯಾನ್ ಚೋಟೆ ಮಿಯಾನ್

ಅಲಿ ಅಬ್ಬಾಸ್ ಜಾಫರ್ ನಿರ್ದೇಶನದ 'ಬಡೇ ಮಿಯಾನ್ ಚೋಟೆ ಮಿಯಾನ್' ಈ ವಾರ ತೆರೆಗಪ್ಪಳಿಸುತ್ತಿದೆ. ಅಕ್ಷಯ್ ಕುಮಾರ್ ಜೊತೆ ಟೈಗರ್ ಶ್ರಾಫ್ ಚಿತ್ರದಲ್ಲಿ ಅಬ್ಬರಿಸಿದ್ದಾರೆ. ಮಾನುಷಿ ಚಿಲ್ಲಾರ್, ಸೋನಾಕ್ಷಿ ಸಿನ್ಹಾ ಮುಖ್ಯಭೂಮಿಕೆಯಲ್ಲಿದ್ದಾರೆ. ಇದೊಂದು ಆಕ್ಷನ್ ಎಂಟರ್‌ಟೈನರ್ ಸಿನಿಮಾ ಆಗಿದ್ದು ಭರ್ಜರಿ ಮನರಂಜನೆ ನಿರೀಕ್ಷಿಸಬಹುದಾಗಿದೆ.

2. ಮೈದಾನ್

ಈದ್ ಸಂಭ್ರಮದಲ್ಲಿ ಸಾಮಾನ್ಯವಾಗಿ ಸಲ್ಮಾನ್ ಖಾನ್ ಸಿನಿಮಾಗಳು ಬಿಡುಗಡೆ ಆಗುತ್ತಿದ್ದವು. ಆದರೆ ಈ ಬಾರಿ ಸಲ್ಲು ನಿರಾಸೆ ಮೂಡಿಸಿದ್ದಾರೆ. 'ಬಡೇ ಮಿಯಾನ್ ಚೋಟೆ ಮಿಯಾನ್' ಜೊತೆಗೆ ಅಜಯ್ ದೇವಗನ್ ನಟನೆಯ 'ಮೈದಾನ್' ಸಿನಿಮಾ ಬಾಲಿವುಡ್ ಪ್ರೇಕ್ಷಕರ ಮುಂದೆ ಬರ್ತಿದೆ. ಇದೊಂದು ಸ್ಪೋರ್ಟ್ಸ್ ಬಯೋಗ್ರಫಿ ಸಿನಿಮಾ ಆಗಿದ್ದು ಪ್ರಿಯಾಮಣಿ ಕೂಡ ನಟಿಸಿದ್ದಾರೆ.

3. ಪ್ರೇಮಲು

ಸಣ್ಣ ಬಜೆಟ್‌ನಲ್ಲಿ ನಿರ್ಮಾಣವಾಗಿ ಹಿಟ್ ಆಗಿದ್ದ ಮಲಯಾಳಂನ 'ಪ್ರೇಮಲು' ಸಿನಿಮಾ ಈ ವಾರ ಓಟಿಟಿಗೆ ಬರ್ತಿದೆ. ಮಲಯಾಳಂ ವರ್ಷನ್ ಹಾಟ್‌ಸ್ಟರ್‌ನಲ್ಲಿ ಸ್ಟ್ರೀಮಿಂಗ್ ಆಗುವ ನಿರೀಕ್ಷೆಯಿದೆ. ಇನ್ನು ಚಿತ್ರ ತೆಲುಗಿಗೂ ಡಬ್ ಆಗಿ ಹಿಟ್ ಆಗಿತ್ತು. ತೆಲುಗು ವರ್ಷನ್ ಅಹಾ ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ.

3. ಕರುಂಗಾಪಿಯಂ

ಕಾಜಲ್ ಅಗರ್‌ವಾಲ್ ಹಾಗೂ ರೆಗಿಮಾ ಕಸೆಂದ್ರಾ ನಟನೆಯ 'ಕರುಂಗಾಪಿಯಂ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೀನಾಯವಾಗಿ ಸೋತಿತ್ತು. 'ಕಾಜಲ್ ಕಾರ್ತಿಕಾ' ಸಿನಿಮಾ ತೆಲುಗಿಗೂ ಡಬ್ ಆಗಿತ್ತು. ಈ ವಾರವೇ ತೆಲುಗು ವರ್ಷನ್ ಓಟಿಟಿ ಸ್ಟ್ರೀಮಿಂಗ್ ಆಗುತ್ತಿದೆ. ಅಹಾ ಡಿಜಿಟಲ್ ವೇದಿಕೆಯಲ್ಲಿ ತೆಲುಗು ವರ್ಷನ್ ಏಪ್ರಿಲ್ 9ರಿಂದ ಲಭ್ಯವಿದೆ.

ಅಮೇಜಾನ್ ಪ್ರೈಂ

1. ದಿ ಎಕ್ಸಾರ್ಸಿಸ್ಟ್: ಬಿಲಿವರ್(ಹಾರರ್ ಸಿನಿಮಾ) ಏಪ್ರಿಲ್ 9

2. ಫಾಲ್ ಔಟ್(ಹಾಲಿವುಡ್ ಸೀರಿಸ್) ಏಪ್ರಿಲ್ 1

3. ಎನ್‌ಡಬ್ಲೂಎಸ್‌ಎಲ್(ಒರಿಜಿನಲ್ ಸೀರಿಸ್) ಏಪ್ರಿಲ್ 12

4. ಅನ್‌ಫರ್ಗಟನ್ ಸೀಸನ್-5(ಸೀರಿಸ್) ಏಪ್ರಿಲ್ 8

Theatre OTT releases this week List of movies to watch this week

ನೆಟ್‌ಫ್ಲಿಕ್ಸ್

1. ದಿ ಹೈಜಾಕಿಂಗ್ ಆಫ್ ಫ್ಲೈಟ್ 601(ವೆಬ್ ಸೀರಿಸ್) ಏಪ್ರಿಲ್ 10

2. ಅನ್‌ಲಾಕ್ಡ್: ಎ ಜೈಲ್ ಎಕ್ಸ್‌ಪೆರಿಮೆಂಟ್(ಡಾಕ್ಯೂ ಸೀರಿಸ್) ಏಪ್ರಿಲ್ 10

3. ಸ್ಟೋಲೆನ್(ಸ್ವಿಡಿಶ್ ಸಿನಿಮಾ) ಏಪ್ರಲ್ 12

4. ಮಿಡ್ ಸಮ್ಮರ್ ನೈಟ್- ಸೀಸನ್-1(ನಾರ್ವೆ ಥ್ರಿಲ್ಲರ್ ಸೀರಿಸ್) ಏಪ್ರಿಲ್ 11

5. ಯಾಜ್ ದಿ ಕ್ರೋ ಫೈಲ್ಸ್- ಸೀಸನ್-3(ಟರ್ಕಿಸ್ ವೆಬ್ ಸೀರಿಸ್) ಏಪ್ರಿಲ್ 11

6. ಜೆನ್ನಿಫರ್ ವಾಟ್ ಡಿಡ್(ಕ್ರೈಂ ಡಾಕ್ಯುಮೆಂಟರಿ) ಏಪ್ರಿಲ್ 10

7. ಆಂತ್ರಾಸೈಟ್(ಫ್ರೆಂಚ್ ವೆಬ್ ಸೀರಿಸ್) ಏಪ್ರಿಲ್ 10

8.ಸ್ಪಿರಿಟ್ ರೇಂಜರ್ಸ್-ಸೀಸನ್-3(ಆನಿಮೇಟೆಡ್ ಸೀರಿಸ್) ಏಪ್ರಿಲ್ 8

9. ಹಾರ್ಟ್‌ಬ್ರೇಕ್ ಹೈ- ಸೀಸನ್-2 (ಟೀನ್ ಬೆವ್ ಸೀರಿಸ್) ಏಪ್ರಿಲ್ 11

10. ಅಮರ್ ಸಿಂಗ್ ಚಮ್ಕಿಲಾ(ಹಿಂದಿ ಸಿನಿಮಾ) ಏಪ್ರಿಲ್ 12

ಜೀ-5

1. ಗಾಮಿ(ತೆಲುಗು ಸಿನಿಮಾ) ಏಪ್ರಿಲ್ 12

More from Filmibeat

English summary
From Premalu to Maidaan: OTT and theatre releases this week
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X