For Quick Alerts
  ALLOW NOTIFICATIONS  
  For Daily Alerts

  ಈ ತಿಂಗಳು ಅಮೇಜಾನ್‌ನಲ್ಲಿ ರಿಲೀಸ್ ಆಗಲಿರುವ ನಿರೀಕ್ಷೆಯ ಸಿನಿಮಾಗಳು

  |

  ಈ ತಿಂಗಳು ಅಮೇಜಾನ್ ಪ್ರೈಮ್‌ನಲ್ಲಿ ನಿರೀಕ್ಷೆಯ ಸಿನಿಮಾಗಳು ತೆರೆಗೆ ಬರ್ತಿದೆ. ಹಿಂದಿ, ಕನ್ನಡ, ತಮಿಳು ಹಾಗೂ ಇಂಗ್ಲಿಷ್ ಸೇರಿದಂತೆ ಹೆಚ್ಚು ಕುತೂಹಲ ಮೂಡಿಸಿರುವ ಚಿತ್ರಗಳು ಎಕ್ಸ್‌ಕ್ಲೂಸಿವ್ ಆಗಿ ಅಮೇಜಾನ್‌ನಲ್ಲಿ ಪ್ರೀಮಿಯರ್ ಕಾಣ್ತಿದೆ.

  ಜುಲೈ 15 ಮಲ್ಲಿಕ್
  ಮಲಯಾಳಂ ನಟ ಫಾಹದ್ ಫಾಸಿಲ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಮಲ್ಲಿಕ್ ಸಿನಿಮಾ ಜುಲೈ 15 ರಂದು ಅಮೇಜಾನ್ ಪ್ರೈಮ್‌ನಲ್ಲಿ ಪ್ರದರ್ಶನ ಕಾಣಲಿದೆ. ಈ ಚಿತ್ರವನ್ನು ಮಹೇಶ್ ನಾರಾಯಣನ್ ನಿರ್ದೇಶಿಸಿದ್ದು, ಇತ್ತೀಚಿಗಷ್ಟೆ ಟ್ರೈಲರ್ ರಿಲೀಸ್ ಆಗಿ ಭಾರಿ ಮೆಚ್ಚುಗೆ ಪಡೆದುಕೊಂಡಿತ್ತು.

  ಜುಲೈ 16 ತೂಫಾನ್
  ರಾಕೇಶ್ ಓಂ ಪ್ರಕಾಶ್ ಮೆಹ್ರಾ ನಿರ್ದೇಶನದಲ್ಲಿ ತಯಾರಾಗಿರುವ ತೂಫಾನ್ ಸಿನಿಮಾ ಜುಲೈ 16 ರಂದು ಅಮೇಜಾನ್ ಪ್ರೈಮ್‌ನಲ್ಲಿ ತನ್ನ ಪ್ರದರ್ಶನ ಕಾಣ್ತಿದೆ. ಫರಾನ್ ಅಖ್ತರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದು, ನಿರೀಕ್ಷೆ ಹೆಚ್ಚಿದೆ.

  ಜುಲೈ 22 ಸರ್ಪಟ್ಟು
  ಪಾ ರಂಜಿತ್ ನಿರ್ದೇಶನದಲ್ಲಿ ತಯಾರಾಗಿರುವ ಸರ್ಪಟ್ಟು ಪರಂಪರೈ ಸಿನಿಮಾ ಜುಲೈ 22ರಂದು ಅಮೇಜಾನ್ ಪ್ರೈಮ್‌ನಲ್ಲಿ ರಿಲೀಸ್ ಆಗುತ್ತಿದೆ. ಆರ್ಯ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ ದಶರಾ ವಿಜಯನ್, ಅನುಪಮಾ ಕುಮಾರನ್, ಪಶುಪತಿ ಸೇರಿದಂತೆ ಹಲವರು ಅಭಿನಯಿಸಿದ್ದಾರೆ.

  ಜುಲೈ 21 ಇಕ್ಕಟ್
  ಕನ್ನಡ ನಟ ನಾಗಭೂಷಣ ಮತ್ತು ಭೂಮಿ ಶೆಟ್ಟಿ ನಟಿಸಿರುವ 'ಇಕ್ಕಟ್' ಸಿನಿಮಾ ಜುಲೈ 21 ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಲಿದೆ. ಇಶಮ್ ಮತ್ತು ಹಸೀನ್ ಖಾನ್ ನಿರ್ದೇಶಿಸಿದ್ದಾರೆ.

  this-month-release-movies-in-amazon-prime-india

  ಜುಲೈ 10 ಟಾಮ್ ಅಂಡ್ ಜೆರ್ರಿ
  ಅಮೆರಿಕನ್ ಕಾರ್ಟೂನ್ ಸಿನಿಮಾ ಟಾಮ್ ಅಂಡ್ ಜೆರ್ರಿ ಜುಲೈ 10 ಅಮೇಜಾನ್ ಪ್ರೈಮ್‌ನಲ್ಲಿ ಪ್ರದರ್ಶನ ಕಾಣ್ತಿದೆ. ಅಮೆರಿಕನ್ ಬ್ಲ್ಯಾಕ್ ಪ್ಯಾಂಥರ್ ಪಾರ್ಟಿ ಅಧ್ಯಕ್ಷರಾದ ಫ್ರೆಡ್ ಹ್ಯಾಂಪ್ಟನ್ ಕುರಿತಾದ 'ಜುಡಾಸ್ ಅಂಡ್ ದಿ ಬ್ಲಾಕ್ ಮ್ಯಾಸಿಹ್' ಸಿನಿಮಾ ಜುಲೈ 25 ಅಮೇಜಾನ್‌ನಲ್ಲಿ ರಿಲೀಸ್ ಆಗಲಿದೆ.

  ಹಿಂದಿ ವೆಬ್ ಸಿರೀಸ್ 'ಹಾಸ್ಟೆಲ್ ಡೇಸ್' ಜುಲೈ 23 ರಂದು ಅಮೇಜಾನ್ ಪ್ರೈಮ್‌ನಲ್ಲಿ ಪ್ರೀಮಿಯರ್ ಕಾಣ್ತಿದೆ.

  English summary
  Toofan, Ikkat, Sarpattu, Hostel daze, judas and the black messiah and tom and jerry movies set to release in amazon prime india this month.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X