ಈ ವಾರಾಂತ್ಯಕ್ಕೆ ಅಖಂಡ-ಶ್ಯಾಮ್ ಸಿಂಗ್ ರಾಯ್ OTTಯಲ್ಲಿ ರಿಲೀಸ್!
ಸಿನಿಮಾಗಳಿಗೆ ಒಟಿಟಿಯಲ್ಲಿ ಸುಗ್ಗಿಕಾಲ ಆರಂಭ ಆಗಿದೆ. ಸಿನಿಮಾವನ್ನು ಚಿತ್ರ ಮಂದಿರದಲ್ಲಿ ರಿಲೀಸ್ ಮಾಡಿದರೂ, ಮಾಡದಿದ್ದರೂ ಕೂಡ ನೇರವಾಗಿ ಸಿನಿಮಾಗಳು ಒಟಿಟಿಗೆ ಎಂಟ್ರಿ ಕೊಡುತ್ತಿವೆ. ಕೊರೊನಾ ಕಾಟದಿಂದಾಗಿ ಪ್ರೇಕ್ಷಕರು ಕೂಡ ಓಟಿಟಿಯಲ್ಲಿ ಸಿನಿಮಾ ನೋಡುವ ಅಭ್ಯಾಸ ಮಾಡಿಕೊಂಡಿದ್ದಾರೆ.
Recommended Video
ಓಟಿಟಿಯಲ್ಲಿ ಸಿನಿಮಾ ರಿಲೀಸ್‌ಗಾಗಿ ವಾರಗಟ್ಟಲೆ ಕಾಯಬೇಕಾಗಿಲ್ಲ. ವಾರಕ್ಕೊಂದು ಸಿನಿಮಾ ಅಂತ ರಿಲಿಸ್ ಆಗುವುದಿಲ್ಲ. ಕಾಲ ಕೂಡಿ ಬಂದಾಗಲೇ ಸಿನಿಮಾಗಳು ಓಟಿಟಿಯಲ್ಲಿ ರಿಲೀಸ್ ಆಗೇ ಬಿಡುತ್ತವೆ. ಈ ವಾರದ ಅಂತ್ಯಕ್ಕೆ ಎರಡು ದೊಡ್ಡ ಚಿತ್ರಗಳು ಓಟಿಟಿಗೆ ಬರ್ತಿವೆ.
ಲಾಕ್‌ಡೌನ್‌ನಿಂದಾಗಿ ಈ ಬಾರಿ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿದ ಸಿನಿಮಾಗಳು ತೀರಾ ಕಡಿಮೆ. ಹಾಗೆ ಸಕ್ಸಸ್ ಕಂಡ ಸಿನಿಮಾಗಳು ಅಂದರೆ ಅಖಂಡ, ಪುಷ್ಪ ಜೊತೆಗೆ ಶ್ಯಾಮ್ ಸಿಂಗ್ ರಾಯ್. ಪುಷ್ಪ ಈಗಾಗಲೇ ಓಟಿಟಿಯಲ್ಲಿ ತೆರೆ ಕಂಡಿದೆ. ಈಗ ಉಳಿದ ಚಿತ್ರಗಳ ಸರದಿ.

ಬಾಲಯ್ಯನ ಜೊತೆಗೆ ನಾನಿ ಓಟಿಟಿ ಅಖಾಡಕ್ಕೆ!
ಈಗಾಗಲೇ ಓಟಿಟಿಯಲ್ಲಿ ಎಲ್ಲಾ ಸಿನಿಮಾಗಳನ್ನು ನೋಡಿ ಮುಗಿಸಿದ್ದೀರಾ ಎಂದಾದರೆ ಈ ವಾರದ ಅಂತ್ಯಕ್ಕೆ ನಿಮ್ಮನ್ನು ರಂಜಿಸಲು ತೆಲುಗಿನ ಎರಡು ಬಿಗ್ ಸಿನಿಮಾಗಳು ಬರುತ್ತಿವೆ. ಅದರಲ್ಲಿ ಒಂದು ನಂದಮೂರಿ ಬಾಲಕೃಷ್ಣ ಅಭಿನಯದ ಅಖಂಡ. ಮತ್ತೊಂದು ಸಾಯಿ ಪಲ್ಲವಿ ಮತ್ತು ನಾನಿ ಅಭಿನಯದ ಶ್ಯಾಮ್ ಸಿಂಗ್ ರಾಯ್. ಈ ಚಿತ್ರಗಳು ಓಟಿಟಿಯಲ್ಲಿ ರಿಲೀಸ್ ಆಗುತ್ತಿವೆ.

ಮೊದಲು ಬರಲಿದ್ದಾನೆ ಶ್ಯಾಮ್ ಸಿಂಗ್ ರಾಯ್!
ಶ್ಯಾಮ್ ಸಿಂಗ್ ರಾಯ್ ಸಿನಿಮಾ ರಿಲೀಸ್ ಬಳಿಕ ಉತ್ತಮ ಪ್ರಶಂಸೆ ಪಡೆದುಕೊಂಡ ಸಿನಿಮಾ. ಈ ಚಿತ್ರ ಓಟಿಟಿ ವೇದಿಕೆ ಆದ ನೆಟ್‌ಫ್ಲಿಕ್ಸ್‌ನಲ್ಲಿ ತೆರೆಕಾಣುತ್ತಿದೆ. ಇಂದು (ಜನವರಿ20) ಮಧ್ಯರಾತ್ರಿ 12 ಗಂಟೆಗೆ ತೆರೆ ಕಾಣಲಿದೆ. ಕೊರೊನಾ ಲಾಕ್‌ಡೌ್ ನಡುವೆ ಸಿನಿಮಾ ರಿಲೀಸ್ ಆದರು ಅಂದು ಕೊಂಡ ಮಟ್ಟಿಗೆ ಸಿನಿಮಾ ಯಶಸ್ಸು ಕಂಡಿದೆ. 70 ಕೋಟಿ ರೂ ಗಳಿಕೆಯತ್ತ ಬಾಕ್ಸಾಫೀಸ್‌ನಲ್ಲಿ ಸಾಗುತ್ತಿದೆ. ಇದೇ ಬೆನ್ನಲೇ ಈಗ ಓಟಿಟಿಗೂ ಎಂಟ್ರಿ ಕೊಡುತ್ತಿದೆ.

ಜನವರಿ 21ರ ಸಂಜೆ ಅಖಂಡ ಎಂಟ್ರಿ!
ಅಖಂಡ ಸಿನಿಮಾ ರಿಲೀಸ್ ಆಗಿ ಊಹೆಗೂ ಮೀರಿದ ರೀತಿಯಲ್ಲಿ ಕಲೆಕ್ಷನ್ ಮಾಡಿದೆ. ಯಶಸ್ವಿ 50 ದಿನಗಳನ್ನು ಚಿತ್ರ ಮಂದಿರದಲ್ಲಿ ಪೂರೈಸಿದೆ. ಜೊತೆಗೆ ಬಾಕ್ಸಾಫೀಸ್‌ನಲ್ಲಿಯೂ ಅಖಂಡ ದೊಡ್ಡ ಮಟ್ಟದ ದಾಖಲೆ ಬರೆದಿದ್ದಾನೆ. ಅಖಂಡ ಸಿನಿಮಾ ಒಟ್ಟಾರೆ ಇಲ್ಲಿ ತನಕ 73 ಕೋಟಿಗೂ ಅಧಿಕ ಮೊತ್ತ ಕಲೆ ಹಾಕಿದೆ ಎನ್ನಲಾಗಿದೆ. ಬಾಕ್ಸಾಫೀಸ್ ರೆಕಾರ್ಡ್ ಬಳಿಕಾ ಬಾಲಯ್ಯ ಓಟಿಟಿಯಲ್ಲಿ ರೆಕಾರ್ಡ್ ಮಾಡಲು ಬರ್ತಿದ್ದಾರೆ. ಅಖಂಡ ಸಿನಿಮಾ ಜನವರಿ 21 ಸಂಜೆ 6 ಗಂಟೆಗೆ, ಡಿಸ್ನಿ ಪ್ಲಸ್ ಹಾಟ್ ಸ್ಟಾರ್‌ನಲ್ಲಿ ತೆರೆ ಕಾಣುತ್ತಿದೆ.

ಬಾಲಯ್ಯ, ನಾನಿಗೆ ಹೆಸರು ತಂದು ಕೊಟ್ಟ ಚಿತ್ರಗಳು!
ಕೊರೊನಾ ಹಾವಳಿ ಮತ್ತು ಲಾಕ್ ಡೌನ್ ಎಫೆಕ್ಟ್ ಇದ್ದ ಕಾರಣ ಈ ಚಿತ್ರಗಳು ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗುತ್ತವೆ ಎಂದು ಹೇಳಲಾಗಿತ್ತು. ಆದರೆ ಅಂಖಡ ಸಿನಿಮಾ ಮೊದಲ ದಿನವೇ ಬಿಗ್ ಓಪನಿಂಗ್ ಪಡೆದು ಎಲ್ಲರಿಗೂ ಶಾಕ್ ಕೊಟ್ಟಿತ್ತು. ಇನ್ನು ಶ್ಯಾಮ್ ಸಿಂಗ್ ರಾಯ್ ಸಿನಿಮಾ ಕಥೆಯನ್ನು ಜನ ಮೆಚ್ಚಿಕೊಂಡಿದ್ದಾರೆ. ಹಾಗಾಗಿ ಈ ಎರಡೂ ಚಿತ್ರಗಳು ನಾನಿ ಮತ್ತು ಬಾಲಯ್ಯನಿಗೆ ಸಿನಿಮಾರಂಗದಲ್ಲಿ ಹೊಸ ಅಧ್ಯಾಯ ತೆರೆಯಲು ಅನುವು ಮಾಡಿಕೊಟ್ಟಿವೆ.


Click it and Unblock the Notifications











