ಒಟಿಟಿಗೆ ಲಗ್ಗೆ ಇಡುತ್ತಿದೆ ಟೈಗರ್ ಶ್ರಾಫ್ ಅಭಿನಯದ 'ಹೀರೋಪಂತಿ 2'

ನಟ ಟೈಗರ್ ಶ್ರಾಫ್ ಅಭಿನಯಿಸಿರುವ ಎಲ್ಲಾ ಸಿನಿಮಾಗಳಲ್ಲಿ ಹೆಚ್ಚಾಗಿ ಆಕ್ಷನ್ ದೃಶ್ಯಗಳಿಗೆ ಹೆಚ್ಚಿನ ಪೋಕಸ್‌ ಮಾಡಲಾಗುತ್ತೆ. ಯಾಕೆಂದರೆ ಈ ಹಿಂದೆ ರಿಲೀಸ್‌ ಆದ ಹಲವು ಸಿನಿಮಾಗಳಲ್ಲಿ ಟೈಗರ್ ಶ್ರಾಫ್‌ ಅವರ ಆಕ್ಷನ್ ದೃಶ್ಯಗಳನ್ನೇ ಜನರು ಹೆಚ್ಚಾಗಿ ಮೆಚ್ಚಿಕೊಂಡಿದ್ದಾರೆ. ಹೀಗಾಗಿ ಅವರ ಪ್ರತಿ ಸಿನಿಮಾದಲ್ಲೂ ಆಕ್ಷನ್ ದೃಶ್ಯ ಕಾಮನ್ ಆಗಿ ಇದ್ದೇ ಇರುತ್ತದೆ.

ಇತ್ತಚಿಗೆ ರಿಲೀಸ್ ಆದ 'ಹೀರೋಪಂತಿ 2' ಸಿನಿಮಾದಲ್ಲೂ ಕೂಡ ಆಕ್ಷನ್ ಸಿಕ್ವೇನ್ಸ್‌ಗಳನ್ನು ಇಡಲಾಗಿತ್ತು. ಆದರೆ, ಈ ಸಿನಿಮಾ ಪ್ರೇಕ್ಷಕರನ್ನು ಗೆಲ್ಲುವಲ್ಲಿ ಸೋತಿದೆ. ದಕ್ಷಿಣ ಭಾರತದ ಪ್ಯಾನ್ ಇಂಡಿಯಾ ಸಿನಿಮಾವಾದ 'ಕೆಜಿಎಫ್‌ 2' ಅಬ್ಬರಕ್ಕೆ 'ಹೀರೋಪಂತಿ 2' ಚಿತ್ರ ನೆಲಕಚ್ಚಿತ್ತು.

ಹೀಗಾಗಿ ಟೈಗರ್ ಶ್ರಾಫ್ ನಟನೆಯ ಈ ಸಿನಿಮಾ ಥಿಯೇಟರ್‌ನಲ್ಲಿ ಕೆಲವು ದಿನಗಳು ಇರದೇ ಎತ್ತಂಗಡಿ ಮಾಡಲಾಯಿತು. ಸದ್ಯ ಇದೇ ಸಿನಿಮಾ ಈಗ ಒಟಿಟಿ ಪ್ಲಾಟ್ ಫಾರ್ಮ್‌ಗೆ ಲಗ್ಗೆ ಇಡಲು ಸಿದ್ದವಾಗಿದೆ. ಒಟಿಟಿಯಲ್ಲದಾರೂ ಈ ಸಿನಿಮಾ ಸಕ್ಸಸ್ ಆಗುತ್ತಾ ನೋಡಬೇಕಿದೆ.

 ಒಟಿಟಿಗೆ ಲಗ್ಗೆ ಇಡಲಿರುವ 'ಟೈಗರ್ ಶ್ರಾಫ್' ಸಿನಿಮಾ

ಒಟಿಟಿಗೆ ಲಗ್ಗೆ ಇಡಲಿರುವ 'ಟೈಗರ್ ಶ್ರಾಫ್' ಸಿನಿಮಾ

ಥಿಯೇಟರ್‌ನಲ್ಲಿ ಅಷ್ಟು ಸದ್ದು ಮಾಡದ ಟೈಗರ್ ಶ್ರಾಫ್ ಸಿನಿಮಾ 'ಹೀರೋಪಂತಿ 2' ಈಗ ಒಟಿಟಿ ಪ್ಲಾಟ್‌ ಫಾರ್ಮ್‌ಗೆ ಲಗ್ಗೆ ಇಟ್ಟಿದೆ. ದೈತ್ಯ ಒಟಿಟಿ ಸಂಸ್ಥೆಯಾದ ಅಮೆಜಾನ್ ಪ್ರೈಮ್ ವಿಡಿಯೋನಲ್ಲಿ 'ಹೀರೋಪಂತಿ 2' ರಿಲೀಸ್ ಆಗಲಿದೆ. ಈಗಾಗಲೇ ಟ್ವಿಟರ್‌ನಲ್ಲಿ ಟೈಗರ್ ಶ್ರಾಫ್ ವಿಡಿಯೋವನ್ನು ಅಮೆಜಾನ್ ಪ್ರೈಮ್ ವಿಡಿಯೋ ಶೇರ್ ಮಾಡಿಕೊಂಡಿದೆ. ಈ ವಿಡಿಯೋದಲ್ಲಿ ಮೇ 27 ರಂದು ಒಟಿಟಿಯಲ್ಲಿ 'ಹೀರೋಪಂತಿ 2' ವೀಕ್ಷಿಸುವಂತೆ ಕೋರಿದ್ದಾರೆ. ವಿಡಿಯೋ ಕೂಡ ಸಖತ್ ಫನ್ನಿಯಾಗಿ ಮೂಡಿ ಬಂದಿದ್ದು, ಒಟಿಟಿಯಲ್ಲಿ ಜನರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ಕಾದು ನೋಡಬೇಕಿದೆ.

 ಕಲೆಕ್ಷನ್ ಇಲ್ಲದೆ ಕಂಗಲಾಗಿದ್ದ 'ಹೀರೋಪಂತಿ 2'

ಕಲೆಕ್ಷನ್ ಇಲ್ಲದೆ ಕಂಗಲಾಗಿದ್ದ 'ಹೀರೋಪಂತಿ 2'

ಏಪ್ರಿಲ್ 29 ರಂದು ಬಾಲಿವುಡ್‌ನಲ್ಲಿ ಟೈಗರ್ ಶ್ರಾಫ್ ನಟಿಸಿರುವ 'ಹೀರೋಪಂತಿ 2' ಚಿತ್ರ ರಿಲೀಸ್ ಆಗಿತ್ತು. ಸಿನಿಮಾ ರಿಲೀಸ್ ಆದ ಮೊದಲ ದಿನ ಉತ್ತಮ ಪ್ರದರ್ಶನ ಕಂಡರೂ ಬಳಿಕ 'ಕೆಜಿಎಫ್ 2' ಅಬ್ಬರಕ್ಕೆ ಸಿನಿಮಾ ಪ್ರದರ್ಶನ ಕಾಣಲಿಲ್ಲ. ಇದಲ್ಲದೆ 'ಹೀರೋಪಂತಿ 2' ಬಿಡುಗಡೆಯಾದ ದಿನವೇ ಅಜಯ್ ದೇವಗನ್ ಅಭಿನಯದ 'ರನ್‌ವೇ 34' ಸಿನಿಮಾ ಕೂಡ ರಿಲೀಸ್‌ ಆಗಿತ್ತು. ಆದರೆ ಈ ಎರಡು ಚಿತ್ರಗಳು ಹೇಳಿಕೊಳ್ಳುವಷ್ಟು ಗಳಿಕೆ ಮಾಡಿಕೊಳ್ಳಲಿಲ್ಲ. ಮೊದಲ ದಿನ 6.50 ಕೋಟಿ ರೂಪಾಯಿ ಕಲೆಕ್ಷನ್ ಮಾಡಿಕೊಂಡಿದ್ದ 'ಹೀರೋಪಂತಿ 2' 25 ಕೋಟಿ ರೂ ದಾಟಲಿಲ್ಲ. 'ಕೆಜಿಎಫ್‌ 2' ಆರ್ಭಟಕ್ಕೆ ಈ ಎರಡು ಸಿನಿಮಾಗಳು ಬಾಕ್ಸ್‌ಫೀಸ್‌ ಮಕಾಡೆ ಮಲಗಿದ್ದವು

 'ಹೀರೋಪಂತಿ 2' ಚಿತ್ರ ಮಾಡಿ ಕೈ ಸುಟ್ಟುಕೊಂಡ ನಿರ್ಮಾಪಕ

'ಹೀರೋಪಂತಿ 2' ಚಿತ್ರ ಮಾಡಿ ಕೈ ಸುಟ್ಟುಕೊಂಡ ನಿರ್ಮಾಪಕ

ಅಹ್ಮದ್ ಖಾನ್ ನಿರ್ದೇಶನ ಮಾಡಿರುವ 'ಹೀರೋಪಂತಿ 2' ಚಿತ್ರ ಬಾಲಿವುಡ್‌ ಬಾಕ್ಸ್‌ಆಫೀಸ್‌ನಲ್ಲಿ ಹೇಳಿಕೊಳ್ಳುವಷ್ಟು ಕಲೆಕ್ಷನ್ ಮಾಡಿಕೊಳ್ಳಲಿಲ್ಲ. 'ಕೆಜಿಎಫ್ 2' ಅಬ್ಬರಕ್ಕೆ ಈ ಸಿನಿಮಾ ರಿಲೀಸ್ ಆದ ಎರಡೇ ವಾರಕ್ಕೆ ಚಿತ್ರಮಂದಿರಗಳಿಂದ ಕಾಲ್ಕಿತ್ತಿತ್ತು. ಹೀಗಾಗಿ ಸಿನಿಮಾಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿದ್ದ ನಿರ್ಮಾಪಕರು ಲಾಭ ಸಿಗದೇ ಕೈ ಸುಟ್ಟುಕೊಳ್ಳುವಂತಾಯಿತು. ಬಾಲಿವುಡ್‌ನ ಖ್ಯಾತ ನಿರ್ಮಾಪಕ ಸಾಜಿದ್ ನಾಡಿಯಲ್ವಾಲಾ 'ಹೀರೋಪಂತಿ' ಚಿತ್ರದ ಮೂಲಕ ಟೈಗರ್ ಶ್ರಾಫ್‌ನನ್ನು ಲಾಂಚ್ ಮಾಡಿದ್ದರು. ಆದರೆ, ಸಿನಿಮಾ ಪ್ಲಾಪ್ ಆಗಿದ್ದರಿಂದ ಹಾಕಿದ್ದ ಬಂಡವಾಳ ಕೂಡ ವಾಪಾಸ್‌ ಬರದೇ ನಷ್ಟ ಅನುಭವಿಸಿದ್ದಾರೆ.

 ಟೈಗರ್ ಶ್ರಾಫ್ ಕೈ ಹಿಡಿಯುತ್ತಾರಾ ಪ್ರೇಕ್ಷಕರು?

ಟೈಗರ್ ಶ್ರಾಫ್ ಕೈ ಹಿಡಿಯುತ್ತಾರಾ ಪ್ರೇಕ್ಷಕರು?

ಚಿತ್ರಮಂದಿರದಲ್ಲಂತೂ ಟೈಗರ್ ಶ್ರಾಫ್ ನಟನೆಯ 'ಹೀರೋಪಂತಿ 2' ಓಡಲಿಲ್ಲ. ಈಗ ಒಟಿಟಿಯಲ್ಲಾದರೂ ಸಿನಿಮಾ ಹೇಗಾದರೂ ಗೆಲ್ಲಿಸಬೇಕು ಅಂತ ಚಿತ್ರತಂಡ ಇದೆ. ಹೀಗಾಗಿ ಟೈಗರ್ ಶ್ರಾಫ್ ಅಭಿಮಾನಿಗಳ ಬಳಿ ಒಟಿಟಿಯಲ್ಲಾದರೂ ಸಿನಿಮಾವನ್ನು ವೀಕ್ಷಣೆ ಮಾಡುವಂತೆ ವಿಶೇಷ ಮನವಿ ಮಾಡಿಕೊಂಡಿದ್ದಾರೆ. ಹೀಗಾಗಿ ನಾಳೆ ಅಂದರೆ ಮೇ 27 ರಂದು ಅಮೆಜಾನ್ ಪ್ರೈಮ್‌ನಲ್ಲಿ ಸಿನಿಮಾ ರಿಲೀಸ್ ಆಗುತ್ತಿದ್ದು, ಪ್ರೇಕ್ಷಕರು 'ಹೀರೋಪಂತಿ 2' ಚಿತ್ರಕ್ಕೆ ಉತ್ತಮ ಬೆಂಬಲ ನೀಡುತ್ತಾರಾ ಅಂತ ಕಾದು ನೋಡಬೇಕಿದೆ?

More from Filmibeat

English summary
Tiger Shroff Starrer Heropanti 2 Film May 27th OTT Release.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X