ವಿಶ್ವ ನಗುವಿನ ದಿನ 2025: ಕನ್ನಡದ ಟಾಪ್ 10 ಕಾಮಿಡಿ ಚಿತ್ರಗಳನ್ನು ಓಟಿಟಿಯಲ್ಲಿ ನೋಡಿ

'ನಗೋದಕ್ಕೂ ಯಾಕೆ ಚೌಕಾಸಿ' ಎನ್ನುವಂತೆ ನಕ್ಕು ಹಗುರಾಗಿ. ಮನುಷ್ಯನಿಗೆ ನಗು ಎಷ್ಟು ಮುಖ್ಯ, ಅದರ ಪ್ರಯೋಜನಗಳೇನು ಎನ್ನುವ ಬಗ್ಗೆ ಅರಿವು ಮೂಡಿಸಲು ಪ್ರತಿ ವರ್ಷ ಮೇ ತಿಂಗಳ ಮೊದಲ ಭಾನುವಾರವನ್ನು ವಿಶ್ವ ನಗುವಿನ ದಿನ ಎಂದು ಆಚರಿಸುತ್ತಾರೆ. 1988ರಲ್ಲಿ ಡಾ. ಮದನ್ ಕಟಾರಿಯಾ ಇದನ್ನು ಆರಂಭಿಸಿದ್ದರು.

ಆಧುನಿಕ ಪ್ರಪಂಚದಲ್ಲಿ ಜನ ನಗೋದನ್ನೇ ಮರೆತುಬಿಟ್ಟಿದ್ದಾರೆ. ಸದಾ ಒಂದಿಲ್ಲೊಂದು ಆತಂಕದಲ್ಲಿ ದಿನದೂಡುತ್ತಿದ್ದಾರೆ. ಯಾರಾದರೂ ಜೋಕ್ಸ್ ಹೇಳಿದರೆ, ತಮಾಷೆ ಮಾಡಿದರೆ ಅಥವಾ ಕಾಮಿಡಿ ಶೋ, ಸಿನಿಮಾ ನೋಡಿದರೆ ನಗು ಬರುತ್ತದೆ. ಕೆಲವರು ನಗುವುದಕ್ಕೆ ಪಾರ್ಕ್‌ಗಳಿಗೆ ಹೋಗುತ್ತಾರೆ. ಸ್ಯ್ಯಾಂಡಪ್‌ ಕಾಮೆಡಿ ಶೋಗಳಿಗೆ ಭೇಟಿ ನೀಡುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ನೋಡಿ ಎಂಜಾಯ್ ಮಾಡುತ್ತಾರೆ.

Top 10 kannada comedy movies To Watch This World Laughter Day On OTT

ಕನ್ನಡದಲ್ಲಿ ಸಾಕಷ್ಟು ಕಾಮಿಡಿ ಸಿನಿಮಾಗಳು ಬಂದು ಹೋಗಿದೆ. ಕೆಲ ಸಿನಿಮಾಗಳಂತೂ ಆರಂಭದಿಂದ ಕೊನೆಯವರೆಗೂ ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತದೆ. ಕನ್ನಡದ ಟಾಪ್ 10 ಕನ್ನಡ ಸಿನಿಮಾಗಳು ಯಾವ ಓಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿದೆ ಬನ್ನಿ ನೋಡೋಣ.

1. ಕೋತಿಗಳು ಸಾರ್ ಕೋತಿಗಳು

ರಾಜೇಂದ್ರ ಸಿಂಗ್ ಬಾಬು ನಿರ್ದೇಶನದಲ್ಲಿ 'ಕುರಿಗಳು ಸಾರ್ ಕುರಿಗಳು', 'ಕೋತಿಗಳು ಸಾರ್ ಕೋತಿಗಳು' ಹಾಗೂ 'ಕತ್ತೆಗಳು ಸಾರ್ ಕತ್ತೆಗಳು' ಸಿನಿಮಾಗಳು ಸಖತ್ ಸದ್ದು ಮಾಡಿತ್ತು. ಅದರಲ್ಲೂ 'ಕುರಿಗಳು ಸಾರ್ ಕುರಿಗಳು' ಪ್ರೇಕ್ಷಕರನ್ನು ಕೊಂಚ ಹೆಚ್ಚೇ ನಗಿಸಿತ್ತು. ಹೊರಗಿನ ಪ್ರಪಂಚದ ಜಂಜಾಟವೇ ಬೇಡ ಎಂದು ರಮ್ಮಿ(ರಮೇಶ್) ನಾಣಿ(ನಾರಾಯಣ್) ಮೋನಿ(ಮೋಹನ್) ಜೈಲಿನಲ್ಲಿ ಆರಾಮಾಗಿ ಇರ್ತಾರೆ. ಆದರೆ ಜೈಲ್ ವಾರ್ಡನ್ ಅವರನ್ನು ಹೊಸ ಮನಷ್ಯರನ್ನಾಗಿ ನೋಡಲು ಬಯಸುತ್ತಾರೆ.

ಜೈಲಿನಿಂದ ಬಿಡುಗಡೆಯಾಗಿ ಬಂದ ಮೂವರು ಬದುಕು ಕಟ್ಟಿಕೊಳ್ಳಲು ಏನೆಲ್ಲಾ ಸಾಹಸ ಮಾಡುತ್ತಾರೆ. ಮದುವೆ, ಸಂಸಾರ ಕಟ್ಟಿಕೊಳ್ಳಲು ಹೋಗಿ ಹೇಗೆಲ್ಲಾ ಹೆಣಗುತ್ತಾರೆ ಎನ್ನುವುದು ಇನ್ನುಳಿದ ಕಥೆ. 2001ರಲ್ಲಿ ಸಿನಿಮಾ ತೆರೆಕಂಡು ಗೆದ್ದಿತ್ತು. ಸನ್‌ನೆಕ್ಸ್ಟ್‌ ಓಟಿಟಿಯಲ್ಲಿ ಈ ಸಿನಿಮಾ ನೋಡಬಹುದು.

Top 10 kannada comedy movies To Watch This World Laughter Day On OTT

2. ಭಾಗ್ಯದ ಲಕ್ಷ್ಮಿ ಬಾರಮ್ಮ

ನಟಸಾರ್ವಭೌಮ ರಾಜ್‌ಕುಮಾರ್ ಭಿನ್ನ ವಿಭಿನ್ನ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಾಮಿಡಿಯನ್ನು ಬಹಳ ಎಂಜಾಯ್ ಮಾಡುತ್ತಿದ್ದ ಅಣ್ಣಾವ್ರ ಕಾಮಿಡಿ ಟೈಮಿಂಗ್ ಕೂಡ ಸೊಗಸಾಗಿತ್ತು. 'ಮೇಯರ್ ಮುತ್ತಣ್ಣ', 'ಬಂಗಾರದ ಪಂಜರ', 'ಕವಿರತ್ನ ಕಾಳಿದಾಸ' ಸೇರಿದಂತೆ ಕೆಲ ಸಿನಿಮಾಗಳಲ್ಲಿ ತಮ್ಮ ಹಾಸ್ಯರಸದಿಂದ ಪ್ರೇಕ್ಷಕರ ಮನಗೆದ್ದಿದ್ದರು. 'ಭಾಗ್ಯದ ಲಕ್ಷ್ಮಿಬಾರಮ್ಮ' ಸಿನಿಮಾ ಅಂತೂ ಆರಂಭದಿಂದ ಕೊನೆಯವರೆಗೂ ನಿಮ್ಮನ್ನು ನಗಿಸುತ್ತದೆ.

ಹಣಕ್ಕಾಗಿ ಮದುವೆ ಆಗದಿದ್ದರೆ ನಾವಿಬ್ಬರು ಗಂಡ- ಹೆಂಡತಿ ಎಂದು ಹೇಳಿಕೊಂಡು ಪಾಂಡುರಂಗ(ರಾಜ್‌ಕುಮಾರ್) ಹಾಗೂ ಪಾರ್ವತಿ(ಮಾಧವಿ) ಆದರ್ಶ ದಂಪತಿಗಳು ಕಾರ್ಯಕ್ರಮದಲ್ಲಿ ಭಾಗಿ ಆಗುವ ಕಥೆ ಚಿತ್ರದಲ್ಲಿದೆ. ಸಿಂಗೀತಂ ಶ್ರೀನಿವಾಸ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಸನ್‌ನೆಕ್ಸ್ಟ್‌ನಲ್ಲೇ ಈ ಸಿನಿಮಾ ಕುಡ ನೋಡಬಹುದು.

3. ತರ್ಲೆ ನನ್ಮಗ

ಉಪೇಂದ್ರ ನಿರ್ದೇಶನದ ಚೊಚ್ಚಲ ಸಿನಿಮಾ 'ತರ್ಲೆ ನನ್ಮಗ'. ಜಗ್ಗೇಶ್ ಚಿತ್ರದಲ್ಲಿ ಹೀರೊ ಆಗಿ ನಟಿಸಿದ್ದರು. ಪುನೀತ್ ರಾಜ್‌ಕುಮಾರ್ ಅವರಿಗೆ ಬಹಳ ಇಷ್ಟವಾಗಿದ್ದ ಸಿನಿಮಾ ಇದು. ನಿತ್ಯಾ ಹಾಗೂ ಅಂಜಲಿ ಚಿತ್ರದಲ್ಲಿ ನಾಯಕಿಯರಾಗಿ ಮಿಂಚಿದ್ದಾರೆ. ವಿ. ಮನೋಹರ್ ಸಂಗೀತದಲ್ಲಿ ಆಲ್ಬಮ್ ಕೂಡ ಹಿಟ್ ಆಗಿತ್ತು. ಅಮೇಜಾನ್ ಪ್ರೈಂ ವೀಡಿಯೋದಲ್ಲಿ ಸಿನಿಮಾ ವೀಕ್ಷಣೆಗೆ ಲಭ್ಯವಿದೆ.

4. ಗುರುಶಿಷ್ಯರು

ಶರಣ್ ನಟನೆಯ 'ಗುರುಶಿಷ್ಯರು' ಇತ್ತೀಚೆಗೆ ತೆರೆಗೆ ಬಂದಿತ್ತು. ಆದರೆ ದಶಕಗಳ ಹಿಂದೆ ಬಂದಿದ್ದ ರಾಜಗುರು ಪೂರ್ಣಾನಂದಯ್ಯನವರ ಶಿಷ್ಯರ ಕಥೆಯನ್ನು ಮರೆಯೋಕೆ ಸಾಧ್ಯವಿಲ್ಲ. ಭಾರ್ವಗ ನಿರ್ದೇಶನದಲ್ಲಿ ವಿಷ್ಣುವರ್ಧನ್, ಮಂಜುಳ, ದ್ವಾರಕೀಶ್, ಬಾಲಕೃಷ್ಣ ಸೇರಿ ಘಟಾನುಘಟಿ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ.

ತೆಲುಗಿನ 'ಪರಮಾನಂದಯ್ಯ ಶಿಷ್ಯುಲ ಕಥ' ಚಿತ್ರದ ರೀಮೆಕ್ ಆಗಿದ್ದರೂ ಕನ್ನಡದಲ್ಲಿ ಸಿನಿಮಾ ಬಹಳ ಯಶಸ್ಸು ಸಾಧಿಸಿತ್ತು. ತಮ್ಮದಲ್ಲದ ತಪ್ಪಿಗೆ 7 ಜನ ಮುನಿಕುಮಾರರು ಗಂಧರ್ವ ಕನ್ಯೆ ಚಿತ್ರಲೇಖಾ(ಮಂಕು:)ಳಿಂದ ಶಾಪ ಪಡೆಯುವಂತಾಗುತ್ತದೆ. ಜ್ಞಾನ ಕಳೆದುಕೊಂಡು ದಡ್ಡರಂತಾಗುತ್ತಾರೆ. ಕೊನೆಗೆ ಅವರಿಗೆ ಮತ್ತೆ ಶಾಪ ವಿಮೋಚನೆ ಹೇಗೆ ಆಗುತ್ತದೆ ಎನ್ನುವುದು ಇನ್ನುಳಿದ ಕತೆ. ದ್ವಾರಕೀಶ್, ಶಿವರಾಂ, ಉಮೇಶ್, ರತ್ನಾಕರ್ ಹೀಗೆ ಘಟಾನುಘಟಿ ಕಲಾವಿದರು ಚಿತ್ರದಲ್ಲಿದ್ದಾರೆ. ಪ್ರೈಂ ವೀಡಿಯೋದಲ್ಲಿ ಸಿನಿಮಾ ನೋಡಬಹುದು.

5. ಗೌರಿ ಗಣೇಶ

ಫಣಿ ರಾಮಚಂದ್ರ ನಿರ್ದೇಶನದ ಕಾಮೆಡಿ ಎಂಟರ್‌ಟೈನರ್ 'ಗೌರಿ ಗಣೇಶ'. ಅನಂತ್ ನಾಗ್ ಹಾಗೂ ಮಾಸ್ಟರ್ ಆನಂದ್ ಈ ಚಿತ್ರ ಲೀಡ್ ರೋಲ್‌ಗಳಲ್ಲಿ ನಟಿಸಿದ್ದಾರೆ. ಬೇರೆಯವರಿಗೆ ಟೋಪಿ ಹಾಕಿ ಬದುಕುವುದನ್ನೇ ಕಾಯಕ ಮಾಡಿಕೊಂಡ ಲಂಬೋದರ(ಅನಂತ್ ನಾಗ್) ಕೊನೆಗೆ ತೀರಿಹೋದ ಗೌರಿ ಎಂಬ ಅನಾಥೆಯ ಜೀವನದ ಕಹಿ ಸತ್ಯ ತಿಳಿದುಕೊಳ್ಳುತ್ತಾನೆ. ಆಕೆಯ ಬಾಳಿನಲ್ಲಿ ಬಂದು ಹೋದ ಮೂವರಿಗೆ ಪತ್ರ ಬರೆದು ಆ ಮೂಲಕ ಹಣ ಮಾಡಲು ಆರಂಭಿಸುತ್ತಾನೆ.

ಸುಳ್ಳಿನ ಮೇಲೆ ಸುಳ್ಳು ಹೇಳಿ, ಅದನ್ನು ರುತುವಾತುಪಡಿಸಲು ಅನಾಥಶ್ರಮದಿಂದ ಒಂದು ಮಗು(ಮಾಸ್ಟರ್ ಆನಂದ್)ವನ್ನು ಕರೆದುಕೊಂಡು ನಾಟಕ ಮಾಡಿಸುತ್ತಾನೆ. ಮುಂದೆ ಏನೆಲ್ಲಾ ಅವಾಂತಗಳಾಗುತ್ತದೆ ಎನ್ನುವುದು ಸಿನಿಮಾ ಕಥೆ. ಪ್ರೈಂ ವೀಡಿಯೋದಲ್ಲಿ 'ಗೌರಿ-ಗಣೇಶ' ಸಿನಿಮಾ ನೋಡಿ ಎಂಜಾಯ್ ಮಾಡಿ.

6. ಡಕೋಟ ಎಕ್ಸ್‌ಪ್ರೆಸ್

ಮಲಯಾಳಂನ 'ಈ ಪರಾಕ್ಕುಮ್ ಥಲಿಕಾ' ಚಿತ್ರದ ರೀಮೆಕ್ 'ಡಕೋಟ ಎಕ್ಸ್‌ಪ್ರೆಸ್' 2 ವರ್ಷಗಳ ಹಿಂದೆ ಸಖತ್ ಸದ್ದು ಮಾಡಿತ್ತು. ರಾಕ್‌ಲೈನ್ ವೆಂಕಟೇಶ್ ಹಾಗೂ ಓಂಪ್ರಕಾಶ್ ರಾವ್ ಜೋಡಿ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿತ್ತು. ಎಂ. ಎಸ್ ರಾಜಶೇಖರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಸ್ವತಃ ರಾಕ್‌ಲೈನ್ ವೆಂಕಟೇಶ್ ಸಿನಿಮಾ ನಿರ್ಮಿಸಿ ಸಕ್ಸಸ್ ಕಂಡಿದ್ದರು. ಜೀ5ನಲ್ಲಿ ಈ ಸಿನಿಮಾ ವೀಕ್ಷಿಸಬಹುದು.

7. ಮಠ

ಗುರುಪ್ರಸಾದ್ ನಿರ್ದೇಶನದಲ್ಲಿ ಜಗ್ಗೇಶ್ ನಟಿಸಿದ್ದ 'ಮಠ' ಸಿನಿಮಾ ಆ ಕಾಲಕ್ಕೆ ಹಿಟ್ ಲಿಸ್ಟ್ ಸೇರಿತ್ತು. ಅಮೇಜಾನ್ ಪ್ರೈಂ ವೀಡಿಯೋದಲ್ಲಿ ಸಿನಿಮಾ ವೀಕ್ಷಣಗೆ ಲಭ್ಯವಿದೆ. ಮಠಗಳಲ್ಲಿ ನಡೆಯುವ ಪ್ರಸಂಗಗಳನ್ನು ತಮ್ಮದೇ ಶೈಲಿಯಲ್ಲಿ ಬಹಳ ವಿಡಂಬನಾತ್ಮಕವಾಗಿ ಗುರುಪ್ರಸಾದ್ ಚಿತ್ರದಲ್ಲಿ ಕಟ್ಟಿಕೊಟ್ಟಿದ್ದರು. ಬಿರಾದಾರ್, ಸುದರ್ಶನ್, ಮಂಡ್ಯ ರಮೇಶ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ.

8. ರಾಮಶಾಮಭಾಮ

ತಮಿಳಿನ 'ಸತಿ ಲೀಲಾವತಿ' ರೀಮೆಕ್ 'ರಾಮಶಾಮಭಾಮ' ಚಿತ್ರದಲ್ಲಿ ಕಮಲ್ ಹಾಸನ್ ಸಹ ನಟಿಸಿದ್ದರು. ರಮೇಶ್ ಅರವಿಂದ್ ತಾವೇ ಸಿನಿಮಾ ನಿರ್ದೇಶನ ಮಾಡಿ ಹೀರೊ ಆಗಿ ಮಿಂಚಿದ್ದರು. ಊವರ್ಶಿ, ಡೈಸಿ ಬೋಪಣ್ಣ, ಶ್ರುತಿ ಕೂಡ ತಾರಾಗಣದಲ್ಲಿದ್ದಾರೆ. ಸನ್‌ನೆಕ್ಸ್ಟ್‌ನಲ್ಲಿ ಸಿನಿಮಾ ನೋಡಬಹುದು.

9. ಅಧ್ಯಕ್ಷ

ಶರಣ್ ಹಾಗೂ ಚಿಕ್ಕಣ್ಣ ಜೋಡಿಯ 'ಅಧ್ಯಕ್ಷ' ಸಿನಿಮಾ ಆರಂಭದಿಂದ ಕೊನೆಯವರೆಗೆ ಪ್ರೇಕ್ಷಕರನ್ನು ನಗಿಸುತ್ತದೆ. ತಮಿಳಿನ 'ವರಿಥಪಡಾಥ ವಾಲಿಬಾರ್ ಸಂಗಮ್' ಚಿತ್ರದ ರೀಮೆಕ್ ಆಗಿದ್ದ ಈ ಚಿತ್ರಕ್ಕೆ ನಂದ ಕಿಶೋರ್ ಆಕ್ಷನ್ ಕಟ್ ಹೇಳಿದ್ದಾರೆ. 11 ವರ್ಷಗಳ ಹಿಂದೆ ಈ ಕಾಮೆಡಿ ಎಂಟರ್‌ಟ್ರೈನರ್ ಪ್ರೇಕ್ಷಕರ ಮನಗೆದ್ದಿತ್ತು. ಚಿಕ್ಕಣ್ಣ ಜೊತೆಗೆ ಆರ್ಮುಗ ರವಿಶಂಕರ್ ಕಾಮಿಡಿ ಹೈಲೆಟ್.

10. ಎದ್ದೇಳು ಮಂಜುನಾಥ

ಜಗ್ಗೇಶ್ ಹಾಗೂ ಗುರುಪ್ರಸಾದ್ ಜೋಡಿಯಾ ಮತ್ತೊಂದು ಫನ್ ಎಂಟರ್‌ಟೈನರ್ ಸಿನಿಮಾ 'ಎದ್ದೇಳು ಮಂಜುನಾಥ'. ಮತ್ತೊಮ್ಮೆ ಗುರುಪ್ರಸಾದ್ ತಮ್ಮ ಬರವಣಿಗೆ ಹಾಗೂ ಜಗ್ಗೇಶ್ ತನ್ನ ನಟನೆಯಲ್ಲಿ ಪೈಪೋಟಿಗೆ ಬಿದ್ದು ಕೆಲಸ ಮಾಡಿದ ಸಿನಿಮಾ ಇದು. ಜೀ5ನಲ್ಲಿ ಈ ಸಿನಿಮಾ ನೋಡಲು ಸಿಗುತ್ತದೆ.

More from Filmibeat

English summary
World Laughter Day 2025; Here is top 10 comedy films list and ott platforms details
Read more about: comedy sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X