ಈ ಟಾಪ್ 10 ದೇಶಭಕ್ತಿ ಸಿನಿಮಾಗಳನ್ನು ಮನೆಯಲ್ಲೇ ಕೂತು ಓಟಿಟಿಯಲ್ಲಿ ನೋಡಿ
ದೇಶ 78ನೇ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿದೆ. ಬ್ರಿಟೀಷರಿಂದ ಮುಕ್ತಿ ಪಡೆದು ದೇಶ ಸ್ವತಂತ್ರ ಪಡೆದ ಸಂಭ್ರಮವನ್ನು ಪ್ರತಿ ವರ್ಷ ಬಹಳ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ದೇಶಭಕ್ತಿ ಉಕ್ಕಿಸುವ ಸಾಕಷ್ಟು ಸಿನಿಮಾಗಳು, ವೆಬ್ ಸೀರಿಸ್‌ಗಳು ಬಂದಿವೆ. ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಕಥೆಗಳು ದೃಶ್ಯರೂಪ ಪಡೆದಿವೆ.
ಸದ್ಯ ಓಟಿಟಿ ಜಮಾನ ನಡೀತಿದೆ. ಹಳೇ ಸಿನಿಮಾಗಳನ್ನು ಕೂಡ ಡಿಜಿಟಲ್ ಫ್ಲಾಟ್‌ಫಾರ್ಮ್‌ಗಳಲ್ಲಿ ನೋಡುವ ಅವಕಾಶವಿದೆ. ಸ್ವಾತಂತ್ರ್ಯ ದಿನಾಚರಣೆ ಹೊತ್ತಲ್ಲಿ ಒಂದಷ್ಟು ದೇಶಭಕ್ತಿ ಸ್ಫುರಿಸುವ ಸಿನಿಮಾಗಳನ್ನು ಮನೆಯಲ್ಲಿ ಕೂತು ಓಟಿಟಿಯಲ್ಲಿ ನೋಡಿ. ಅಂತಹ ಕೆಲ ಸಿನಿಮಾಗಳ ಲಿಸ್ಟ್ ಮುಂದೆ ಇದೆ ನೋಡಿ.

1. ಲಗಾನ್
ಅಶುತೋಷ್ ಗೋವಾರಿಕರ್ ನಿರ್ದೇಶನದ 'ಲಗಾನ್' ಎವರ್‌ಗ್ರೀನ್ ಸಿನಿಮಾಗಳಲ್ಲಿ ಒಂದು. ಆಮೀರ್ ಖಾನ್ ನಟನೆಯ ಈ ಸಿನಿಮಾ 2001ರಲ್ಲಿ ತೆರೆಗೆ ಬಂದಿತ್ತು. ದೇಶಪ್ರೇಮದ ಜೊತೆಗೆ ಕ್ರಿಕೆಟ್ ಆಟವನ್ನು ಬೆರೆಸಿ ಕಟ್ಟಿಕೊಟ್ಟಿರುವ ಸಿನಿಮಾ ಇದು. ನೆಟ್‌ಫ್ಲಿಕ್ಸ್‌ನಲ್ಲಿ ಈ ಸಿನಿಮಾ ವೀಕ್ಷಣೆಗೆ ಲಭ್ಯವಿದೆ.
2. ರಾಜಿ
ಆರು ವರ್ಷಗಳ ಹಿಂದೆ ಬಂದ 'ರಾಜಿ' ಸಿನಿಮಾ ಮೋಡಿ ಮಾಡಿತ್ತು. ಆಲಿಯಾ ಭಟ್ ಲೀಡ್ ರೋಲ್‌ನಲ್ಲಿ ನಟಿಸಿದ್ದ ಚಿತ್ರಕ್ಕೆ ಮೇಘನಾ ಗುಲ್ಜರ್ ಆಕ್ಷನ್ ಕಟ್ ಹೇಳಿದ್ದರು. 1971 ರ ಭಾರತ-ಪಾಕಿಸ್ತಾನ ಯುದ್ಧದ ಮೊದಲು ಪಾಕಿಸ್ತಾನದ ಮಿಲಿಟರಿ ಕುಟುಂಬವನ್ನು ಮದುವೆಯಾಗುವ ಮೂಲಕ ಭಾರತಕ್ಕೆ ಮಾಹಿತಿಯನ್ನು ರವಾನಿಸುವ ರಾ ಏಜೆಂಟ್ ಪಾತ್ರದಲ್ಲಿ ಆಲಿಯಾ ನಟಿಸಿದ್ದಾರೆ. ಪ್ರೈಂ ವೀಡಿಯೋದಲ್ಲಿ ಈ ಸಿನಿಮಾ ನೋಡಬಹುದು.
3. ಉರಿ: ಸರ್ಜಿಕಲ್ ಸ್ಟ್ರೈಕ್
ಇತ್ತೀಚಿನ ವರ್ಷಗಳಲ್ಲಿ ಬಾಕ್ಸಾಫೀಸ್ ಶೇಕ್ ಮಾಡಿ ಸಿನಿಮಾ 'ಉರಿ'. 2016ರಲ್ಲಿ ಉರಿ ಸೇನಾ ನೆಲೆಯ ಮೇಲೆ ಪಾಕಿಸ್ತಾನದ ನಾಲ್ವರು ಭಯೋತ್ಪಾದಕರು ದಾಳಿ ಮಾಡುತ್ತಾರೆ. ಇದರಲ್ಲಿ ಭಾರತದ ವೀರ ಯೋಧರು ಹುತಾತ್ಮರಾಗುತ್ತಾರೆ. ಇದಕ್ಕೆ ಪ್ರತ್ಯುತ್ತರವಾಗಿ ಭಾರತೀಯ ಸೇನೆ ಸರ್ಜಿಕಲ್ ಸ್ಟ್ರೈಕ್ ನಡೆಸಿದ ಕಥೆ ಈ ಚಿತ್ರದಲ್ಲಿ. ವಿಕ್ಕಿ ಕೌಶಲ್ ಹೀರೊ ಆಗಿ ನಟಿಸಿದ್ದರು. ಜೀ-5ನಲ್ಲಿ ಈ ಸಿನಿಮಾ ವೀಕ್ಷಿಸಬಹುದು.
4. ಸರ್ದಾರ್ ಉದ್ದಾಮ್
ವಿಕ್ಕಿ ಕೌಶಲ್ ನಟನೆಯ ಮತ್ತೊಂದು ಸಿನಿಮಾ 'ಸರ್ದಾರ್ ಉದ್ದಾಮ್' 3 ವರ್ಷಗಳ ಹಿಂದೆ ತೆರೆಗೆ ಬಂದಿತ್ತು. ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ರೂವಾರಿ ಜನರಲ್ ಡಯರ್‌ನನ್ನು ಹತ್ಯೆಗೈದ ಸಾಧಕ ಉದ್ದಾಮ್ ಸಿಂಗ್ ಜೀವನಗಾಥೆಯನ್ನು ಈ ಚಿತ್ರದಲ್ಲಿ ಹೇಳಲಾಗಿದೆ. ಪ್ರೈಂ ವೀಡಿಯೋದಲ್ಲಿ ಈ ಸಿನಿಮಾ ಕೂಡ ನೋಡಬಹುದು.

5. ಬಾರ್ಡರ್
ಲೊಂಗೆವಾಲಾ ಕದನದ ಸುತ್ತಾ ಹೆಣೆದ 'ಬಾರ್ಡರ್' ಮತ್ತೊಂದು ದೇಶಭಕ್ತಿ ಉಕ್ಕಿಸುವ ಸಿನಿಮಾ. ನೈಜ ಘಟನೆಗಳನ್ನು ಆಧರಿಸಿ ಜೆ. ಪಿ ದತ್ತ ಈ ಕಥೆ ಕಟ್ಟಿಕೊಟ್ಟಿದ್ದರು. ಸನ್ನಿ ಡಿಯೋಲ್, ಸುನೀಲ್ ಶೆಟ್ಟಿ, ಜಾಕಿಶ್ರಾಫ್ ಮುಖ್ಯಭೂಮಿಕೆಯಲ್ಲಿ ಈ ಸಿನಿಮಾ 1997ರಲ್ಲಿ ತೆರೆಗೆ ಬಂದಿತ್ತು. ಪ್ರೈಂ ವೀಡಿಯೋದಲ್ಲಿ ಈ ಸಿನಿಮಾ ಸಿಗುತ್ತದೆ.
6. ಸೈರಾ ನರಸಿಂಹ ರೆಡ್ಡಿ
ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೂ ಮುನ್ನ ಬ್ರಿಟೀಷರ ವಿರುದ್ಧ ವಿರುದ್ಧ ಹೋರಾಡಿದ ಉಯ್ಯಾಲವಾಡ ನರಸಿಂಹ ರೆಡ್ಡಿ ಕಥೆಯನ್ನು ತೆಲುಗಿನಲ್ಲಿ ತೆರೆಗೆ ತರಲಾಗಿತ್ತು. ಚಿರಂಜೀವಿ ನರಸಿಂಹರೆಡ್ಡಿ ಆಗಿ ನಟಿಸಿದ್ದರು. ಸುರೇಂದ್ರ ರೆಡ್ಡಿ ನಿರ್ದೇಶನದ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಪಡೆದುಕೊಂಡಿತ್ತು. ಪ್ರೈಂ ವೀಡಿಯೋದಲ್ಲಿ ಈ ಸಿನಿಮಾ ಇದೆ.
7. RRR
ರಾಜಮೌಳಿ ನಿರ್ದೇಶನದ 'RRR' ಬಾಕ್ಸಾಫೀಸ್ ಶೇಕ್ ಮಾಡಿತ್ತು. ಅಲ್ಲೂರಿ ಸೀತಾರಾಮರಾಜು ಹಾಗೂ ಕೋಮುರಂ ಭೀಮ್ ಪಾತ್ರಗಳನ್ನು ಮಾತ್ರ ಬಳಸಿಕೊಂಡು ಒಂದು ಕಾಲ್ಪನಿಕ ಕಥೆಯನ್ನು ಜಕ್ಕಣ್ಣ ಈ ಚಿತ್ರದಲ್ಲಿ ಹೇಳಿದ್ದರು. ಬ್ರಿಟೀಷರ ವಿರುದ್ಧದ ಹೋರಾಟದ ಕಥೆಯೇ ಈ ಚಿತ್ರದಲ್ಲೂ ಇದೆ. ಡಿಸ್ನಿ ಹಾಟ್‌ಸ್ಟರ್ ಮತ್ತು ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ನೋಡಬಹುದು.
ಇನ್ನುಳಿದಂತೆ ಇತ್ತೀಚೆಗೆ ಬಂದ ಶೇರ್‌ಷಾ, ರಾಕೆಟ್ರಿ: ದಿ ನಂಬಿ ಎಫೆಕ್ಟ್, ದಿ ಲೆಜೆಂಡ್ ಆಫ್ ಭಗತ್ ಸಿಂಗ್, ಘಾಜಿ ಅಟ್ಯಾಕ್, ಕೇಸರಿ ಸೇರಿದಂತೆ ಕೆಲ ದೇಶಭಕ್ತಿ ಸಿನಿಮಾಗಳು ಪ್ರೈಂ ವೀಡಿಯೋದಲ್ಲಿ ವೀಕ್ಷಣೆಗೆ ಸಿಗುತ್ತವೆ.


Click it and Unblock the Notifications











