ಫರ್ಜಿ, ಪಠಾಣ್ ಹಿಂದಿಕ್ಕಿದ ಕಬ್ಜ; ಭಾರತದ ನಂಬರ್ 1 ಚಿತ್ರ ಎನಿಸಿಕೊಂಡ ಆರ್ ಚಂದ್ರು ಸಿನಿಮಾ!

ಕಳೆದ ಮಾರ್ಚ್ 17ರಂದು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಹುಟ್ಟುಹಬ್ಬದ ದಿನದ ಅಂಗವಾಗಿ ಆರ್ ಚಂದ್ರು ನಿರ್ದೇಶನದ, ರಿಯಲ್ ಸ್ಟಾರ್ ಉಪೇಂದ್ರ, ಸೆಂಚುರಿ ಸ್ಟಾರ್ ಶಿವ ರಾಜ್ ಕುಮಾರ್ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಬಹು ನಿರೀಕ್ಷಿತ ಚಿತ್ರ ಕಬ್ಜ ಬಿಡುಗಡೆಯಾಗಿತ್ತು.

ಚಿತ್ರ ಬಿಡುಗಡೆಗೊಂಡು ಸಿನಿ ರಸಿಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡರೂ ಸಹ ನಾಲ್ಕೇ ದಿನಗಳಲ್ಲಿ ಬಾಕ್ಸ್ ಆಫೀಸ್‌ನಲ್ಲಿ ನೂರು ಕೋಟಿ ಗಳಿಸಿದೆ ಎಂದು ಚಿತ್ರತಂಡ ಅಧಿಕೃತವಾಗಿ ಹೇಳಿಕೊಂಡಿತ್ತು. ಹೀಗೆ ದೊಡ್ಡ ಮಟ್ಟದ ನಿರೀಕ್ಷೆಯೊಂದಿಗೆ ಬಿಡುಗಡೆಗೊಂಡಿದ್ದ ಕಬ್ಜ ಚಿತ್ರ 25 ದಿನಗಳ ಥಿಯೇಟ್ರಿಕಲ್ ಓಟವನ್ನು ಪೂರೈಸಿದ ಬಳಿಕ ಇದೀಗ ಓಟಿಟಿಗೆ ಬಂದಿದೆ.

Top 10 trending films on Amazon Prime Video in India: Kabzaa tops the list

ಹೌದು, ನಿನ್ನೆ ( ಏಪ್ರಿಲ್ 14 ) ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ ಕಬ್ಜ ಚಿತ್ರದ ಎಲ್ಲಾ ವರ್ಷನ್ ಬಿಡುಗಡೆಗೊಂಡಿದ್ದು ದೇಶಾದ್ಯಂತ ಸಿನಿ ರಸಿಕರಿಂದ ವೀಕ್ಷಿಸಲ್ಪಡುತ್ತಿದೆ. ಈ ಪರಿಣಾಮವಾಗಿ ಚಿತ್ರ ಒಳ್ಳೆಯ ವ್ಯೂಸ್ ಪಡೆದುಕೊಳ್ಳುತ್ತಿದ್ದು, ಸದ್ಯ ಅಮೆಜಾನ್ ಪ್ರೈಮ್ ವಿಡಿಯೊನ ಭಾರತದ ಟ್ರೆಂಡಿಂಗ್ ಚಿತ್ರಗಳ ಪಟ್ಟಿಯಲ್ಲಿ ಅಗ್ರಸ್ಥಾವನ್ನು ಪಡೆದುಕೊಂಡಿದೆ. ಹಾಗಿದ್ದರೆ ಇಂದು ( ಏಪ್ರಿಲ್ 15 ) ಅಮೆಜಾನ್ ಪ್ರೈಮ್ ವಿಡಿಯೊನ ಭಾರತದ ಟಾಪ್ 10 ಟ್ರೆಂಡಿಂಗ್ ಚಿತ್ರಗಳ ಪಟ್ಟಿಯಲ್ಲಿ ಯಾವ ಚಿತ್ರಗಳು ಸ್ಥಾನ ಪಡೆದುಕೊಂಡಿವೆ ಎಂಬ ಮಾಹಿತಿ ಈ ಕೆಳಕಂಡಂತಿದೆ..

1. ರಿಯಲ್ ಸ್ಟಾರ್ ಉಪೇಂದ್ರ, ಆರ್ ಚಂದ್ರು ಕಾಂಬಿನೇಶನ್‌ನ ಮೂರನೇ ಚಿತ್ರ ಕಬ್ಜ ಟ್ರೆಂಡಿಂಗ್ ಪಟ್ಟಿಯಲ್ಲಿ ಪ್ರಥಮ ಸ್ಥಾನದಲ್ಲಿದೆ.

2. ವಿಕ್ರಮಾದಿತ್ಯ ಮೊಟ್ವಾನೆ ಹಾಗೂ ಸೌಮಿಕ್ ಸೇನ್ ನಿರ್ದೇಶನದ ನೂತನ ವೆಬ್ ಸರಣಿ ಜುಬಿಲಿ ಭಾರತದ ಟ್ರೆಂಡಿಂಗ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಈ ವೆಬ್ ಸರಣಿಯಲ್ಲಿ ಅದಿತಿ ರಾವ್ ಹೈದರಿ ಹಾಗೂ ವಮಿಖಾ ಗಬ್ಬಿ ನಾಯಕಿಯರಾಗಿ ನಟಿಸಿದ್ದು, ಪ್ರಸೇಂಜಿತ್ ಚಟರ್ಜಿ ನಾಯಕನಾಗಿ ನಟಿಸಿದ್ದಾರೆ.

Top 10 trending films on Amazon Prime Video in India: Kabzaa tops the list

3. ಈ ವರ್ಷ ಬಿಡುಗಡೆಗೊಂಡು ಬಾಕ್ಸ್ ಆಫೀಸ್‌ನಲ್ಲಿ ಸಾವಿರ ಕೋಟಿ ಬಾಚಿದ ಶಾರುಖ್ ಖಾನ್, ದೀಪಿಕಾ ಪಡುಕೋಣೆ ಹಾಗೂ ಜಾನ್ ಅಬ್ರಹಾಮ್ ನಟನೆಯ ಪಠಾಣ್ ಚಿತ್ರ ಅಮೆಜಾನ್ ಪ್ರೈಮ್ ವಿಡಿಯೊನ ಟ್ರೆಂಡಿಂಗ್ ಇನ್ ಇಂಡಿಯಾ ಚಿತ್ರಗಳಲ್ಲಿ ಮೂರನೇ ಸ್ಥಾನದಲ್ಲಿದೆ.

4. ರಾಜ್ ಹಾಗೂ ಡಿಕೆ ನಿರ್ದೇಶಿಸಿ, ನಿರ್ಮಿಸಿರುವ ಫರ್ಜಿ ವೆಬ್ ಸರಣಿ ಅಮೆಜಾನ್ ಪ್ರೈಮ್ ವಿಡಿಯೊನ ಟ್ರೆಂಡಿಂಗ್ ಇನ್ ಇಂಡಿಯಾ ಚಿತ್ರಗಳಲ್ಲಿ 4ನೇ ಸ್ಥಾನದಲ್ಲಿದೆ. ಈ ವೆಬ್ ಸರಣಿಯಲ್ಲಿ ಶಾಹಿದ್ ಕಪೂರ್, ವಿಜಯ್ ಸೇತುಪತಿ, ಕಾಯ್ ಕಾಯ್ ಮೆನನ್, ರಾಶಿ ಖನ್ನಾ ಹಾಗೂ ಭುವನ್ ಆರೋರಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.

5. ಪ್ರಕಾಶ್ ರಾಜ್, ರಮ್ಯಾಕೃಷ್ಣ ಹಾಗೂ ಬ್ರಹ್ಮಾನಂದಂ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ತೆಲುಗು ಚಿತ್ರ ರಂಗಮಾರ್ತಾಂಡ ಅಮೆಜಾನ್ ಪ್ರೈಮ್ ವಿಡಿಯೊನ ಟ್ರೆಂಡಿಂಗ್ ಇನ್ ಇಂಡಿಯಾ ಚಿತ್ರಗಳಲ್ಲಿ ಐದನೇ ಸ್ಥಾನದಲ್ಲಿದ್ದು, ಈ ಚಿತ್ರಕ್ಕೆ ಕೃಷ್ಣ ವಂಶಿ ಆಕ್ಷನ್ ಕಟ್ ಹೇಳಿದ್ದಾರೆ.

6. ಅಮೆರಿಕಾದ ಸಿಟ್ ಕಾಮ್ 'ಯಂಗ್ ಶೆಲ್ಡನ್' ಆರನೇ ಸರಣಿ ಅಮೆಜಾನ್ ಪ್ರೈಮ್ ವಿಡಿಯೊನ ಟ್ರೆಂಡಿಂಗ್ ಇನ್ ಇಂಡಿಯಾ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ.

7. ವೇಣು ಟಿಲ್ಲು ನಿರ್ದೇಶನದ ತೆಲುಗು ಸೂಪರ್ ಹಿಟ್ ಚಿತ್ರ ಬಲಗಂ ಅಮೆಜಾನ್ ಪ್ರೈಮ್ ವಿಡಿಯೊನ ಟ್ರೆಂಡಿಂಗ್ ಇನ್ ಇಂಡಿಯಾ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. ಪ್ರಿಯದರ್ಶಿ ಹಾಗೂ ಕಾವ್ಯ ಕಲ್ಯಾಣ್ ರಾಮ್ ನಾಯಕ ಹಾಗೂ ನಾಯಕಿಯಾಗಿ ನಟಿಸಿರುವ ಈ ಚಿತ್ರ ಕುಟುಂಬದ ಮೌಲ್ಯವನ್ನು ತಿಳಿಸುವ ಒಳ್ಳೆಯ ಕಥೆ ಇರುವ ಸಿನಿಮಾವಾಗಿದೆ. ಕುಟುಂಬ ಸಮೇತರಾಗಿ ಕುಳಿತು ನೋಡಬಹುದಾದ ಅಚ್ಚುಕಟ್ಟದ ಸಿನಿಮಾ ಇದಾಗಿದೆ.

8. ಹ್ಯಾಪಿ ಫ್ಯಾಮಿಲಿ ಕಂಡೀಷನ್ಸ್ ಅಪ್ಲೈ ಎಂಬ ಹಿಂದಿ ವೆಬ್ ಸರಣಿ ಅಮೆಜಾನ್ ಪ್ರೈಮ್ ವಿಡಿಯೊನ ಟ್ರೆಂಡಿಂಗ್ ಇನ್ ಇಂಡಿಯಾ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ.

9. ಅಮೆರಿಕನ್ ಸೂಪರ್ ಹೀರೊ ಚಿತ್ರ ಬ್ಲಾಕ್ ಆಡಂ ಅಮೆಜಾನ್ ಪ್ರೈಮ್ ವಿಡಿಯೊನ ಟ್ರೆಂಡಿಂಗ್ ಇನ್ ಇಂಡಿಯಾ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ.

10. ವಿಜಯ್ ಹಾಗೂ ರಶ್ಮಿಕಾ ಮಂದಣ್ಣ ನಾಯಕ ಹಾಗೂ ನಾಯಕಿಯಾಗಿ ಕಾಣಿಸಿಕೊಂಡಿರುವ ಚಿತ್ರ ವಾರಿಸು ಅಮೆಜಾನ್ ಪ್ರೈಮ್ ವಿಡಿಯೊನ ಟ್ರೆಂಡಿಂಗ್ ಇನ್ ಇಂಡಿಯಾ ಪಟ್ಟಿಯಲ್ಲಿ ಹತ್ತನೇ ಸ್ಥಾನದಲ್ಲಿದೆ.

More from Filmibeat

English summary
Top 10 trending films on Amazon Prime Video in India: Kabzaa tops the list. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X