OTT Releases This Week; ಈ ವಾರ ಓಟಿಟಿಯಲ್ಲಿ ಬ್ಲಾಕ್‌ಬಸ್ಟರ್ ಚಿತ್ರಗಳು; ಈ 3 ಸಿನಿಮಾ ಮಿಸ್ ಮಾಡ್ಬೇಡಿ

ಮತ್ತೊಂದು ವೀಕೆಂಡ್ ಕಳೆದು ಹೋಗಿದೆ. ಸೆಪ್ಟೆಂಬರ್ ಎರಡವೇ ವೀಕೆಂಡ್ ಹತ್ತಿರವಾಗ್ತಿದೆ. ಚಿತ್ರಮಂದಿರಗಳಲ್ಲಿ ಕಳೆದ ವಾರ ಒಂದಷ್ಟು ಇಂಟ್ರೆಸ್ಟಿಂಗ್ ಸಿನಿಮಾಗಳು ಬಿಡುಗಡೆಯಾಗಿವೆ. ಕನ್ನಡದ 'ಏಳುಮಲೆ' ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ತಿದೆ. ಮಲಯಾಳಂ 'ಲೋಕಾ' ಸಿನಿಮಾ ಕೂಡ ಬಾಕ್ಸಾಫೀಸ್ ಶೇಕ್ ಮಾಡ್ತಿದೆ.

ಇತ್ತ ಈ ವಾರ ಓಟಿಟಿಯಲ್ಲಿ ಬ್ಲಾಕ್‌ಬಸ್ಟರ್ ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿದೆ. ಆರಂಭದಲ್ಲೇ ಕನ್ನಡದ 'ಸು ಫ್ರಮ್ ಸೋ' ಸಿನಿಮಾ ಸ್ಟ್ರೀಮಿಂಗ್ ಆಗಲಿದೆ. ರಜನಿಕಾಂತ್ ನಟನೆಯ ಮಲ್ಟಿಸ್ಟಾರರ್ 'ಕೂಲಿ' ಸಿನಿಮಾ ಕೂಡ ಲಿಸ್ಟ್‌ನಲ್ಲಿದೆ. ಈ ವರ್ಷ ಬಾಲಿವುಡ್ ಬಾಕ್ಸಾಫೀಸ್ ಕೊಳ್ಳೆ ಹೊಡೆದ ಸಿನಿಮಾ ಸಹ ಓಟಿಟಿ ವೇದಿಕೆಗೆ ಬರಲು ಸಜ್ಜಾಗಿದೆ.

Top 3 OTT releases this week From Coolie to Su From so check full list

ಈ ವಾರ ಅಮೇಜಾನ್ ಪ್ರೈಂ, ನೆಟ್‌ಫ್ಲಿಕ್ಸ್, ಜಿಯೋ ಹಾಟ್‌ಸ್ಟರ್, ಜೀ-5ನಲ್ಲಿ ಯಾವೆಲ್ಲಾ ಸಿನಿಮಾಗಳು ಬಿಡುಗಡೆ ಆಗ್ತಿವೆ. ಅದರಲ್ಲಿ ಇಂಟ್ರೆಸ್ಟಿಂಗ್ ಯಾವ್ದು ಮುಂದೆ ಓದಿ.

ಸು ಫ್ರಮ್ ಸೋ

ರಾಜ್ ಬಿ ಶೆಟ್ಟಿ ನಿರ್ಮಿಸಿ ನಟಿಸಿರುವ 'ಸು ಫ್ರಮ್ ಸೋ' ಸಿನಿಮಾ ಗೆಲುವಿನ ಓಟ ಮುಂದುವರೆದಿದೆ. ಜುಲೈ 25ರಂದು ತೆರೆಗೆ ಬಂದಿದ್ದ ಸಿನಿಮಾ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದೆ. 100 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸಂಚಲನ ಸೃಷ್ಟಿಸಿದೆ. ಹೆಚ್ಚು ಪ್ರಚಾರ ಇಲ್ಲದೇ ಹೊಸಬರ ತಂಡವೇ ಮಾಡಿದ್ದ ಸಿನಿಮಾ ಎಲ್ಲರ ಹುಬ್ಬೇರಿಸುವಂತೆ ಗಳಿಕೆ ಕಂಡಿದೆ.

ಜೆಪಿ ತುಮ್ಮಿನಾಡು ಚಿತ್ರಕ್ಕೆ ಆಕ್ಷನ್ ಕಟ್ ಹೇಳಿ ಲೀಡ್ ರೋಲ್‌ನಲ್ಲಿ ನಟಿಸಿದ್ದರು. ಕರಾವಳಿ ಭಾಗದ ಹಳ್ಳಿಯೊಂದರಲ್ಲಿ ನಡೆಯುವ ಕಥೆ ಚಿತ್ರದಲ್ಲಿದೆ. ತೆಲುಗು, ಮಲಯಾಳಂ ಭಾಷೆಗೂ ಡಬ್ ಆಗಿ ಸಿನಿಮಾ ಸಕ್ಸಸ್ ಕಂಡಿತ್ತು. ಹಿಂದಿಗೂ ರೀಮೆಕ್ ಆಗುವ ಸಾಧ್ಯತೆಯಿದೆ. ಜಿಯೋ ಹಾಟ್‌ಸ್ಟರ್‌ನಲ್ಲಿ ಸೆಪ್ಟೆಂಬರ್ 9ರಂದು ಸಿನಿಮಾ ಸ್ಟ್ರೀಮಿಂಗ್ ಆರಂಭಿಸಲಿದೆ. ಈ ಕಾಮೆಡಿ ಚಿತ್ರವನ್ನು ಓಟಿಟಿಯಲ್ಲಿ ನೋಡಲು ಬಹಳ ಜನ ಕಾಯುತ್ತಿದ್ದಾರೆ.

Top 3 OTT releases this week From Coolie to Su From so check full list

ಕೂಲಿ

ಲೋಕೇಶ್ ಕನಕರಾಜ್ ನಿರ್ದೇಶನದಲ್ಲಿ ರಜನಿಕಾಂತ್ ನಟನೆಯ 'ಕೂಲಿ' ಸಿನಿಮಾ ಈ ವೀಕೆಂಡ್ ಓಟಿಟಿಗೆ ಲಗ್ಗೆ ಇಡ್ತಿದೆ. ಉಪೇಂದ್ರ, ನಾಗಾರ್ಜುನ, ಆಮೀರ್ ಖಾನ್ ಹಾಗೂ ರಚಿತಾ ರಾಮ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಆಗಸ್ಟ್ 14ರಂದು ಸಿನಿಮಾ ತೆರೆಗೆ ಬಂದು ಮಿಶ್ರ ಪ್ರತಿಕ್ರಿಯೆ ಪಡೆದಿತ್ತು. ಹಾಗಾಗಿ ಬಹಳ ಬೇಗನೆ ಓಟಿಟಿಗೆ ಬರ್ತಿದೆ.

ಆಕ್ಷನ್ ಥ್ರಿಲ್ಲರ್ 'ಕೂಲಿ' ಸಿನಿಮಾ ಅಂದಾಜು 500 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದೆ ಎನ್ನಲಾಗ್ತಿದೆ. ಸೆಪ್ಟೆಂಬರ್ 11ರಂದು ಅಮೇಜಾನ್ ಪ್ರೈಂ ವೀಡಿಯೊದಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ. ಕನ್ನಡಕ್ಕೂ ಡಬ್ ಆಗಿ ವೀಕ್ಷಣೆಗೆ ಸಿಗಲಿದೆ. ಸನ್ ಪಿಕ್ಚರ್ಸ್ ಸಂಸ್ಥೆ ಚಿತ್ರವನ್ನು ನಿರ್ಮಾಣ ಮಾಡಿತ್ತು. ಭಾರೀ ನಿರೀಕ್ಷೆ ಹುಟ್ಟಾಕಿದ್ದ ಸಿನಿಮಾ ಪ್ರೇಕ್ಷಕರ ನಿರೀಕ್ಷೆ ತಲುಪುವಲ್ಲಿ ವಿಫಲವಾಗಿತ್ತು.

ಸಯ್ಯಾರ

ಬಾಲಿವುಡ್ ರೊಮ್ಯಾಂಟಿಕ್ ಎಂಟರ್‌ಟೈನರ್ 'ಸಯ್ಯಾರ' ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆದಿದ್ದು ಗೊತ್ತೇಯಿದೆ. ಜುಲೈ 18ಕ್ಕೆ ತೆರೆಗೆ ಬಂದಿದ್ದ ಸಿನಿಮಾ ಇನ್ನು ಓಟಿಟಿ ಕಡೆ ಮುಖ ಮಾಡಿಲ್ಲ. ಮೋಹಿತ್ ಸೂರಿ ನಿರ್ದೇಶನದ ಸಿನಿಮಾ 500 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ಸಿಂಪಲ್ ಲವ್ ಸ್ಟೋರಿ ಸಿನಿಮಾ ತೆರೆಮೇಲೆ ಮ್ಯಾಜಿಕ್ ಮಾಡಿತ್ತು.

ಅನೀತ್ ಪಡ್ಡಾ ಹಾಗೂ ಅಹಾನ್ ಪಾಂಡೆ ಚಿತ್ರದ ಲೀಡ್ ರೋಲ್‌ಗಳಲ್ಲಿ ಮಿಂಚಿದ್ದಾರೆ. ಯಾವುದೇ ನಿರೀಕ್ಷೆ ಇಲ್ಲದೇ ಬಂದಿದ್ದ ಸಿನಿಮಾ ಅಚ್ಚರಿಯ ಗೆಲುವು ಕಂಡಿದೆ. ಭಾರೀ ಮೊತ್ತಕ್ಕೆ ನೆಟ್‌ಫ್ಲಿಕ್ಸ್ ಡಿಜಿಟಲ್ ರೈಟ್ಸ್ ಕೊಂಡುಕೊಂಡಿದೆ. ಸೆಪ್ಟೆಂಬರ್ 12ಕ್ಕೆ ಸಿನಿಮಾ ಸ್ಟ್ರೀಮಿಂಗ್ ಆರಂಭಿಸಬಹುದು ಎನ್ನಲಾಗ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಇನ್ನುಳಿದಂತೆ ಯಾವೆಲ್ಲಾ ಸಿನಿಮಾ, ವೆಬ್ ಸೀರಿಸ್ ಓಟಿಟಿಗೆ ಬರುತ್ತೆ ಮುಂದೆ ಲಿಸ್ಟ್ ಇದೆ ನೋಡಿ.

ನೆಟ್‌ಫ್ಲಿಕ್ಸ್

1. ಡಾಕ್ಟರ್ ಸೆನ್ ರೆಡ್ ಫಿಶ್, ಬ್ಲೂ ಫಿಶ್(ಇಂಗ್ಲೀಷ್ ವೆಬ್ ಸೀರಿಸ್) ಸೆಪ್ಟೆಂಬರ್ 8

ಹಾಟ್‌ಸ್ಟರ್

1. ರ್ಯಾಂಬೊ ಇನ್ ಲವ್(ತೆಲುಗು ವೆಬ್ ಸೀರಿಸ್) ಸೆಪ್ಟೆಂಬರ್ 12

2. ಓನ್ಲಿ ಮರ್ಡರ್ಸ್ ಇನ್ ದಿ ಬಿಲ್ಡಿಂಗ್ ಸೀಸನ್-5 (ಇಂಗ್ಲೀಷ್ ವೆಬ್ ಸೀರಿಸ್) ಸೆಪ್ಟೆಂಬರ್ 9

ಸನ್ ನೆಕ್ಸ್ಟ್

1. ಬಕಾಸುರ ರೆಸ್ಟೋರೆಂಟ್(ತೆಲುಗು ಸಿನಿಮಾ) ಸೆಪ್ಟೆಂಬರ್ 12

2. ಮಿಷಾ (ಮಲಯಾಳಂ ಸಿನಿಮಾ) ಸೆಪ್ಟೆಂಬರ್ 12

ಪ್ರೈಂ ವಿಡಿಯೋ

1. ದಿ ಗರ್ಲ್ ಫ್ರೆಂಡ್ (ಇಂಗ್ಲೀಷ್ ವೆಬ್ ಸೀರಿಸ್) ಸೆಪ್ಟೆಂಬರ್ 10

2. ಡು ಯು ವಾನ್ನ ಪಾರ್ಟ್ನರ್ (ಹಿಂದಿ ವೆಬ್ ಸೀರಿಸ್) ಸೆಪ್ಟೆಂಬರ್ 12

3. ಲ್ಯಾರಿ ದಿ ಕೆಬುಲ್ ಗಾಯ್ (ಇಂಗ್ಲೀಷ್ ಸಿನಿಮಾ) ಸೆಪ್ಟೆಂಬರ್ 10

4. ಜೆನ್ ವಿ ಸೀಸನ್-2 (ಇಂಗ್ಲೀಷ್ ವೆಬ್ ಸೀರಿಸ್) ಸೆಪ್ಟೆಂಬರ್ 12

More from Filmibeat

English summary
coolie to su from so: New OTT releases this week
Read more about: rajinikanth raj b shetty
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X