ಜುಲೈ ತಿಂಗಳು ಒಟಿಟಿಯಲ್ಲಿ ಬರಲಿರುವ 6 ನಿರೀಕ್ಷೆಯ ಚಿತ್ರಗಳು

ದೇಶದಲ್ಲಿ ಅನ್‌ಲಾಕ್ ಪ್ರಕ್ರಿಯೆ ಆರಂಭವಾಗಿದ್ದರೂ ಥಿಯೇಟರ್ ತೆರೆಯಲು ಬಹುತೇಕ ರಾಜ್ಯಗಳಲ್ಲಿ ಅನುಮತಿ ಕೊಟ್ಟಿಲ್ಲ. ಒಂದು ವೇಳೆ ಅವಕಾಶ ಸಿಕ್ಕರೂ 100 ಪರ್ಸೆಂಟ್ ಆಸನ ಭರ್ತಿ ಹಾಗೂ ಮೊದಲಿನಂತೆ ಪರಿಸ್ಥಿತಿ ನಿರ್ಮಾಣವಾಗಲು ಸಾಕಷ್ಟು ಸಮಯ ಬೇಕು. ಹಾಗಾಗಿ, ದೊಡ್ಡ ಸಿನಿಮಾಗಳು ಒಟಿಟಿ ಕಡೆ ಒಲವು ತೋರಿವೆ.

ಈ ತಿಂಗಳು ಒಟಿಟಿಯಲ್ಲಿ ಹಲವು ನಿರೀಕ್ಷೆಯ ಸಿನಿಮಾ ರಿಲೀಸ್ ಆಗಲಿದೆ. ಹಿಂದಿ ಮತ್ತು ಇಂಗ್ಲಿಷ್ ಭಾಷೆಯ ಆರು ಚಿತ್ರಗಳು ಹೆಚ್ಚು ನಿರೀಕ್ಷೆ ಮೂಡಿಸಿದೆ. ಅಮೇಜಾನ್ ಪ್ರೈಮ್, ನೆಟ್‌ಫ್ಲಿಕ್ಸ್ ಸೇರಿದಂತೆ ಇನ್ನಿತರ ಒಟಿಟಿಯಲ್ಲಿ ಈ ತಿಂಗಳು ತೆರೆಕಾಣಲಿರುವ ನಿರೀಕ್ಷೆಯ ಸಿನಿಮಾಗಳ ವಿವರ ಇಲ್ಲಿದೆ. ಮುಂದೆ ಓದಿ...

ಅಮೇಜಾನ್‌ನಲ್ಲಿ ತೂಫಾನ್

ಅಮೇಜಾನ್‌ನಲ್ಲಿ ತೂಫಾನ್

ಬಾಲಿವುಡ್ ನಟ ಫರಾನ್ ಅಖ್ತರ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಆಕ್ಷನ್ ಡ್ರಾಮಾ 'ತೂಫಾನ್' ಈ ತಿಂಗಳಲ್ಲೇ ಪ್ರೇಕ್ಷಕರೆದುರು ಬರ್ತಿದೆ. ಜುಲೈ 18 ರಂದು ಅಮೇಜಾನ್ ಪ್ರೈಮ್‌ನಲ್ಲಿ 'ತೂಫಾನ್' ರಿಲೀಸ್ ಆಗುತ್ತಿದೆ. ಮುಂಬೈ ಗಲ್ಲಿಯ ಪ್ರತಿಭೆಯೊಬ್ಬ ಪ್ರಖ್ಯಾತ ಬಾಕ್ಸರ್ ಆಗುವ ಕಥೆ ಹೊಂದಿದ್ದು, ರಾಕೇಶ್ ಓಂ ಪ್ರಕಾಶ್ ನಿರ್ದೇಶಿಸಿದ್ದಾರೆ. ಇತ್ತೀಚಿಗಷ್ಟೆ ಟ್ರೈಲರ್ ಬಿಡುಗಡೆಯಾಗಿದ್ದು, ಬಹಳ ಮೆಚ್ಚುಗೆ ಪಡೆದುಕೊಂಡಿತ್ತು.

ಹಾಟ್‌ಸ್ಟಾರ್‌ನಲ್ಲಿ ಹಂಗಾಮ 2

ಹಾಟ್‌ಸ್ಟಾರ್‌ನಲ್ಲಿ ಹಂಗಾಮ 2

2003ರಲ್ಲಿ ರಿಲೀಸ್ ಆಗಿ ಸಕ್ಸಸ್ ಕಂಡಿದ್ದ ಹಂಗಾಮ ಸಿನಿಮಾದ ಸೀಕ್ವೆಲ್ ತಯಾರಾಗಿದ್ದು, ಜುಲೈ 23ಕ್ಕೆ ತೆರೆಗೆ ಬರಲಿದೆ. ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಹಂಗಾಮ 2 ದರ್ಶನ ಸಿಗಲಿದೆ. ಶಿಲ್ಪಾ ಶೆಟ್ಟಿ, ಪ್ರಣಿತಾ ಸುಭಾಷ್, ಪರೇಶ್ ರಾವಲ್, ಮೀಜಾನ್ ಜಾಫೇರಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಪ್ರಿಯ ದರ್ಶನ್ ನಿರ್ದೇಶಿಸಿದ್ದಾರೆ.

ಗನ್ ಫೌಡರ್ ಮಿಲ್ಕ್ ಶೇಕ್

ಗನ್ ಫೌಡರ್ ಮಿಲ್ಕ್ ಶೇಕ್

ಜುಲೈ 14 ರಂದು 'ಗನ್ ಫೌಡರ್ ಮಿಲ್ಕ್ ಶೇಕ್' ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್ ಆಗುತ್ತಿದೆ. ಮಹಿಳಾ ಪ್ರಧಾನ ಕಥೆ ಹೊಂದಿರುವ ಈ ಸಿನಿಮಾ ಆಕ್ಷನ್ ಎಂಟರ್‌ಟೈನ್‌ಮೆಂಟ್. ಕರೆನ್ ಗಿಲ್ಲನ್ ಮತ್ತು ಲೆನಾ ಹೆಡೆ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.

ದಿ ಪರ್ಸ್ಯೂಟ್ ಅಫ್ ಲವ್

ದಿ ಪರ್ಸ್ಯೂಟ್ ಅಫ್ ಲವ್

ಬ್ರಿಟಿಷ್ ಮೂಲದ ವೆಬ್ ಸಿರೀಸ್ 'ದಿ ಪರ್ಸ್ಯೂಟ್ ಅಫ್ ಲವ್' ಜುಲೈ 30 ರಂದು ಅಮೇಜಾನ್ ಪ್ರೈಮ್‌ನಲ್ಲಿ ತೆರೆಕಾಣಲಿದೆ. ಮೂರು ಭಾಗಗಳ ಸಿರೀಸ್ ಇದಾಗಿದ್ದು, ಲಿಲ್ಲಿ ಜೇಮ್ಸ್, ಎಮಿಲಿ ಬೀಚಮ್, ಡೊಮಿನಿಕ್ ವೆಸ್ಟ್, ಆಂಡ್ರ್ಯೂ ಸ್ಕಾಟ್ ಮತ್ತು ಎಮಿಲಿ ಮಾರ್ಟಿಮರ್ ನಟಿಸಿದ್ದಾರೆ.

ದಿ ಟುಮಾರೋ ವಾರ್

ದಿ ಟುಮಾರೋ ವಾರ್

ದಿ ಮಿಸ್ಟರಿ ಸೈನ್ಸ್ ಫಿಕ್ಷನ್ ಆಕ್ಷನ್ ಸಿನಿಮಾ 'ದಿ ಟುಮಾರೋ ವಾರ್' ಸಿನಿಮಾ ಜುಲೈ 2 ರಂದು ಅಮೇಜಾನ್ ಪ್ರೈಮ್‌ನಲ್ಲಿ ರಿಲೀಸ್ ಆಗಿದೆ. ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕ್ರಿಸ್ ಮೆಕ್ಕೆ ನಿರ್ದೇಶಿಸಿದ್ದಾರೆ.

ಫಿಯರ್ ಸ್ಟ್ರೀಟ್ ಟ್ರೈಲಾಜಿ

ಫಿಯರ್ ಸ್ಟ್ರೀಟ್ ಟ್ರೈಲಾಜಿ

ಆರ್‌ಎಲ್ ಸ್ಟೈನ್ ಬರೆದಿರುವ ಪುಸ್ತಕ ಅಧರಿಸಿ 'ಫಿಯರ್ ಸ್ಟ್ರೀಟ್ ಟ್ರೈಲಾಜಿ' ಎಂಬ ವೆಬ್ ಸಿರೀಸ್ ನಿರ್ಮಾಣ ಮಾಡಲಾಗಿದೆ. ಮರ್ಡರ್ ಮಿಸ್ಟರಿ, ಕ್ರೈಂ-ಥ್ರಿಲ್ಲಿಂಗ್ ಕಥಾಹಂದರ ಹೊಂದಿರುವ ಸಿನಿಮಾ ಕ್ರಮವಾಗಿ ಜುಲೈ 2, 9, 16 ರಂದು ಮೂರು ಪಾರ್ಟ್‌ಗಳಾಗಿ ತೆರೆಗೆ ಬರಲಿದೆ.

More from Filmibeat

English summary
Toofan, Fear Street, Gunpowder Milkshake....here is the top 6 movies to release in ott at july.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X