ಓಟಿಟಿಗೆ ಬಂದಿದೆ 2 ಹೊಸ ಕನ್ನಡ ಚಿತ್ರಗಳು; ವೀಕೆಂಡ್ ಮನೆಯಲ್ಲೇ ಸಿನಿಮಾ ನೋಡಿ

ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಸಂಭ್ರಮಕ್ಕೆ 'ಅಪ್ಪು' ಸಿನಿಮಾ ರೀ-ರಿಲೀಸ್ ಆಗಿದೆ. ಇನ್ನುಳಿದಂತೆ ಹಾರರ್ ಸಿನಿಮಾ 'ಅ!' ಸಿನಿಮಾ ಕೂಡ ಪ್ರೇಕ್ಷಕರ ಮುಂದೆ ಬಂದಿದೆ. ಕಳೆದ ಮೂರ್ನಾಲ್ಕು ವಾರ ಏಳೆಂಟು ಸಿನಿಮಾಗಳು ಒಟ್ಟೊಟ್ಟಿಗೆ ಬಿಡುಗಡೆ ಆಗಿದ್ದವು. ಈ ವಾರ ಸಂಖ್ಯೆ ಕಮ್ಮಿ ಆಗಿದೆ.

ಓಟಿಟಿಯಲ್ಲಿ ಕೂಡ ಕನ್ನಡ ಕಂಟೆಂಟ್ ಕಮ್ಮಿ ಎನ್ನುವ ವಾದ ಕೆಲವರದ್ದು. ಕನ್ನಡದಲ್ಲಿ ವೆಬ್‌ ಸೀರಿಸ್ ನಿರ್ಮಾಣದ ಪ್ರಯತ್ನಗಳೇ ನಡೆಯುತ್ತಿಲ್ಲ. ಸಣ್ಣ ಸಿನಿಮಾಗಳನ್ನು ಕೊಂಡುಕೊಳ್ಳುವವರಿಲ್ಲ. ಆಗೊಮ್ಮ ಈಗೊಮ್ಮೆ ಓಟಿಟಿಯಲ್ಲಿ ಕನ್ನಡ ಸಿನಿಮಾಗಳು ವೀಕ್ಷಣೆಗೆ ಸಿಗುತ್ತವೆ. ಇತ್ತೀಚೆಗೆ ಪರಭಾಷಾ ಸಿನಿಮಾ, ವೆಬ್ ಸೀರಿಸ್ ಕನ್ನಡಕ್ಕೆ ಡಬ್ ಆಗಿ ಬರುವುದು ಹೆಚ್ಚಾಗಿದೆ.

Two recently released Kannada movies have now started streaming on OTT

ಈ ವಾರ ಸದ್ದಿಲ್ಲದೇ 2 ಕನ್ನಡ ಸಿನಿಮಾಗಳು ಓಟಿಟಿಗೆ ಬಂದಿವೆ. ಅದರಲ್ಲಿ ಒಂದು ಈ ವರ್ಷ ತೆರೆಕಂಡು ಉತ್ತಮ ಪ್ರತಿಕ್ರಿಯೆ ಪಡೆದಿದ್ದ ಸಿನಿಮಾ ಕೂಡ ಇದೆ. ಆದರೆ ಚಿತ್ರಮಂದಿರಗಳಲ್ಲಿ ಈ ಸಿನಿಮಾ ದೊಡ್ಡದಾಗಿ ಸದ್ದು ಮಾಡಿರಲಿಲ್ಲ. ಇದೀಗ ಓಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಿದೆ.

ಫಾರೆಸ್ಟ್

ಚಂದ್ರ ಮೋಹನ್ ನಿರ್ದೇಶನದ 'ಫಾರೆಸ್ಟ್' ಸಿನಿಮಾ ಜನವರಿ 24ರಂದು ತೆರೆಗೆ ಬಂದಿತ್ತು. ಚಿತ್ರದಲ್ಲಿ ಚಿಕ್ಕಣ್ಣ, ರಂಗಾಯಣ ರಘು, ಅನೀಶ್, ಗುರುನಂದನ್, ಅರ್ಚನಾ ಕೊಟ್ಟಿಗೆ, ಶರಣ್ಯಾ ಶೆಟ್ಟಿ ಸೇರಿ ದೊಡ್ಡ ತಾರಾಗಣವಿದೆ. ಇದೊಂದು ಕಾಮೆಡಿ ಅಡ್ವೆಂಚರಸ್ ಥ್ರಿಲ್ಲರ್ ಸಿನಿಮಾ. ಕಥೆಗೆ ಪೂರಕವಾಗಿ ಇಲ್ಲಿ ಕಾಡನ್ನು ಕೇಂದ್ರವಾಗಿಟ್ಟುಕೊಳ್ಳಲಾಗಿದೆ.

Two recently released Kannada movies have now started streaming on OTT

ಮಾಕಲಪಟ್ಟಿ ಗೋಪಾಲಸ್ವಾಮಿ(ರಂಗಾಯಣ ರಘು), ಕುಮಾರ(ಚಿಕ್ಕಣ್ಣ), ಸತೀಶ(ಅನೀಶ್), ಸುನೀಲ್(ಗುರುನಂದನ್), ಮೀನಾಕ್ಷಿ(ಅರ್ಚನಾ ಕೊಟ್ಟಿಗೆ) ಈ ಐವರಿಗೆ ಬೇರೆ ಬೇರೆ ಸಮಸ್ಯೆಗಳು. ಅದಕ್ಕೆಲ್ಲಾ ಪರಿಹಾರ ಬೇಕು ಅಂದ್ರೆ ಹಣ ಬೇಕು. ಪಾಲ್ಲಿ ಬೆಟ್ಟದಲ್ಲಿರುವ 20 ಕೋಟಿ ರೂ. ಚಿನ್ನದ ರಹಸ್ಯ ಇವರಿಗೆಲ್ಲಾ ಗೊತ್ತಾಗುತ್ತದೆ. ಅದನ್ನು ಹುಡುಕುತ್ತಾ ಕಾಡು ಸೇರುತ್ತಾರೆ. ಅಲ್ಲಿ ಬೀರು ಎಂಬ ವಿಚಿತ್ರ ವ್ಯಕ್ತಿ ಎದುರಾಗುತ್ತಾರೆ. ಮುಂದೆ ಏನೆಲ್ಲಾ ನಡೆಯುತ್ತದೆ? ಅವರಿಗೆ ಆ ಚಿನ್ನ ಸಿಗುತ್ತಾ? ಬದುಕು ಬದಲಾಗುತ್ತಾ? ಎನ್ನುವುದು ಇನ್ನುಳಿದ ಕಥೆ.

'ಫಾರೆಸ್ಟ್' ಸಿನಿಮಾ 25 ದಿನ ಪೂರೈಸಿತ್ತು. ಚಿತ್ರತಂಡದ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ ದೊಡ್ಡಮಟ್ಟದಲ್ಲಿ ಜನ ಸಿನಿಮಾ ನೋಡಿರಲಿಲ್ಲ. ಇದೀಗ ಸಿನಿಮಾ ಅಮೇಜಾನ್ ಪ್ರೈಂ ವೀಡಿಯೋದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ವೀಕೆಂಡ್ ಮನೆಯಲ್ಲೇ ಕೂತು ಸಿನಿಮಾ ನೋಡಬಹುದು.

ಹಿರಣ್ಯ

ರಾಜವರ್ಧನ್ ಹಾಗೂ ರಿಹಾನಾ ನಟನೆಯ ಆಕ್ಷನ್ ಥ್ರಿಲ್ಲರ್ 'ಹಿರಣ್ಯ' ಸಿನಿಮಾ ಕಳೆದ ವರ್ಷ ತೆರೆಗೆ ಬಂದಿತ್ತು. ಇದೀಗ ಸಿನಿಮಾ ಓಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ಪ್ರವೀಣ್ ಅಯುಕ್ತ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಯಾರೋ ಒಬ್ಬರ ವ್ಯಕ್ತಿ ಕಾರಣಕ್ಕೆ ಕಟುಕನು ಕೂಡ ಬದಲಾಗಿಬಿಡುತ್ತಾನೆ. ಈ ರೀತಿ ಕಥೆ ಇರುವ ಸಾಕಷ್ಟು ಸಿನಿಮಾಗಳು ಬಂದೋಗಿದೆ. ಅದೇ ಸಾಲಿಗೆ 'ಹಿರಣ್ಯ' ಚಿತ್ರ ಸೇರುತ್ತದೆ.

ಸುಪಾರಿ ಕಿಲ್ಲರ್ ಆಗಿರುವ ರಾಣಾ(ರಾಜವರ್ಧನ್). ಹಣ ಕೊಟ್ಟರೆ ಏನು ಬೇಕಾದರೂ ಮಾಡುವ ಆಸಾಮಿ. ಕಟುಕನಂತಹ ಆತನ ಬದುಕಿಗೆ ಒಂದು ಪುಟ್ಟ ಮಗುವಿನ ಆಗಮನವಾಗುತ್ತದೆ. ತಾನೇ ಕಿಡ್ನ್ಯಾಪ್ ಮಾಡಿದ್ದ ಆ ಮಗುವಿನಿಂದ ಆತನ ಬದುಕು ಹೇಗೆಲ್ಲಾ ಬದಲಾಗುತ್ತದೆ ಎನ್ನುವ ಕಥೆ ಚಿತ್ರದಲ್ಲಿದೆ. ಸನ್‌ ನೆಕ್ಸ್ಟ್ ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಸಿನಿಮಾ ಲಭ್ಯವಿದೆ.

ಪೊನ್ಮನ್

ಜನವರಿ 30ರಂದು ತೆರೆಗೆ ಬಂದಿದ್ದ ಮಲಯಾಳಂ ಡಾರ್ಕ್ ಕಾಮೆಡಿ ಸಿನಿಮಾ 'ಪೊನ್ಮನ್'. ಇದೀಗ ಕನ್ನಡದಕ್ಕೆ ಡಬ್ ಆಗಿ ಜಿಯೋ ಹಾಟ್‌ಸ್ಟರ್‌ನಲ್ಲಿ ಸಿನಿಮಾ ವೀಕ್ಷಣೆಗೆ ಲಭ್ಯವಿದೆ. ಜೋತಿಶ್ ಶಂಕರ್ ನಿರ್ದೇಶನದ ಚಿತ್ರದಲ್ಲಿ ಬಾಸಿಲ್ ಜೋಸೆಫ್, ಸಜಿನ್ ಗೊಪು ಸೇರಿ ದೊಡ್ಡ ತಾರಾಗಣವಿದೆ.

More from Filmibeat

English summary
Two newly released Kannada movies are now available for streaming on OTT;
Read more about: filmibeat original chikkanna
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X