UI Movie OTT: ಉಪೇಂದ್ರ 'ಯುಐ' ಓಟಿಟಿ ರಿಲೀಸ್ ಯಾವಾಗ; ಮತ್ತೆ 'ಮ್ಯಾಕ್ಸ್' ತಂತ್ರ?

ಉಪೇಂದ್ರ 10 ವರ್ಷಗಳ ಬಳಿಕ ನಿರ್ದೇಶಿಸಿ ನಟಿಸಿದ ಸಿನಿಮಾ 'ಯುಐ'. ಕಳೆದ ವರ್ಷದ ಕೊನೆಗೆ ಕ್ರಿಸ್‌ಮಸ್ ಸಂಭ್ರಮದಲ್ಲಿ ಸಿನಿಮಾ ಬಿಡುಗಡೆ ಆಗಿ ಸಕ್ಸಸ್ ಕಂಡಿತ್ತು. ಕಿಚ್ಚನ 'ಮ್ಯಾಕ್ಸ್' ಸಿನಿಮಾ ಆರ್ಭಟದ ನಡುವೆಯೂ ಸಿನಿಮಾ ಪ್ರೇಕ್ಷಕರನ್ನು ಸೆಳೆದಿತ್ತು. ಆದರೆ ಸಿನಿಮಾ ಬಿಡುಗಡೆ ಆಗಿ 3 ತಿಂಗಳು ಕಳೆದರೂ ಒಟಿಟಿಗೆ ಬಂದಿಲ್ಲ.

ದೊಡ್ಡ ದೊಡ್ಡ ಸಿನಿಮಾಗಳೇ ತೆರೆಗೆ ಬಂದ ತಿಂಗಳಲ್ಲಿ ಓಟಿಟಿಗೆ ಬರ್ತಿವೆ. ಆದರೆ 'ಯುಐ' ಸಿನಿಮಾ ಮಾತ್ರ ತಡವಾಗುತ್ತಿದೆ. ಅಂತೂ ಇಂತು ಸಿನಿಮಾ ಟಿವಿಯಲ್ಲಿ ಪ್ರೀಮಿಯರ್ ಆಗುವ ದಿನಾಂಕ ನಿಗದಿಯಾಗಿದೆ. ಯುಗಾದಿ ಹಬ್ಬದ ಸಂಭ್ರಮದಲ್ಲಿ ಮಾರ್ಚ್ 30ರಂದು ಸೈಕಲಾಜಿಕಲ್ ಸಿನಿಮಾ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಈಗಾಗಲೇ ಅಧಿಕೃತವಾಗಿ ಪ್ರೋಮೊ ಸಹ ಬಿಡುಗಡೆ ಆಗಿದೆ.

UI Ott Release date Upendra film following Sudeep s Max Strategy

ಜಿ.ಮನೋಹರನ್, ಶ್ರೀಕಾಂತ್ ಕೆ.ಪಿ. ಹಾಗೂ ಭೌಮಿಕ್ ಗೊಂದಲಿಯಾ ಜಂಟಿಯಾಗಿ 'ಯುಐ' ಸಿನಿಮಾ ನಿರ್ಮಾಣ ಮಾಡಿದ್ದರು. ಸಿನಿಮಾದೊಳಗೆ ನಿರ್ದೇಶಕ ಉಪೇಂದ್ರ ಮತ್ತೊಂದು ಸಿನಿಮಾ ಕಥೆ ಹೇಳಿದ್ದರು. ಕೆಲವರಿಗೆ ಮೊದಲ ಬಾರಿಗೆ ಸಿನಿಮಾ ಅರ್ಥವಾಗಿತ್ತು. ಮತ್ತೆ ಕೆಲವರು ಅರ್ಥವಾಗಲಿಲ್ಲ, ಮತ್ತೆ ನೋಡಬೇಕು ಎಂದು ಗೊಂದಲಗೊಂಡಿದ್ದರು. ಓಟಿಟಿಯಲ್ಲಿ ಸಿನಿಮಾ ನೋಡುವುದಕ್ಕೆ ಬಹಳ ಜನ ಕಾಯುತ್ತಿದ್ದಾರೆ. ಆದರೆ ಪದೇ ಪದೆ ಓಟಿಟಿ ಸ್ಟ್ರೀಮಿಂಗ್ ಡೇಟ್ ಬದಲಾಗುತ್ತಿದೆ.

ಉಪೇಂದ್ರ ಜೊತೆ 'ಯುಐ' ಚಿತ್ರದಲ್ಲಿ ರೀಷ್ಮಾ ನಾಣಯ್ಯ ನಾಯಕಿಯಾಗಿ ಮಿಂಚಿದ್ದಾರೆ. ಸಾಧು ಕೋಕಿಲ, ಮುರಳಿ ಶರ್ಮಾ, ಅಚ್ಯುತ್‌ ಕುಮಾರ್, ಆರ್ಮುಗ ರವಿಶಂಕರ್ ಸೇರಿದಂತೆ ದೊಡ್ಡ ತಾರಾಗಣ ಇದೆ. ಆದರೆ ಚಿತ್ರದ ತುಂಬಾ ಉಪೇಂದ್ರ ಆವರಿಸಿಕೊಂಡಿದ್ದಾರೆ. ಸತ್ಯ, ಕಲ್ಕಿ ಆಗಿ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲ ನಿರ್ದೇಶಕ ಉಪೇಂದ್ರ ಆಗಿಯೂ ಕೆಲವೊತ್ತು ತೆರೆಮೇಲೆ ಬರ್ತಾರೆ.

ಉಪ್ಪಿ 'ಯುಐ' ಪ್ರಪಂಚ ಕೆಲವರಿಗೆ ಅದ್ಭುತ ಎನಿಸಿತು. ಉಪೇಂದ್ರ ವಿಭಿನ್ನ ಆಲೋಚನೆ, ಅದನ್ನು ತೆರೆಗೆ ತಂದಿರುವ ಪರಿ ಇಷ್ಟವಾಗಿತ್ತು. ಆದರೆ ಕೆಲವರಿಗೆ ಸಿನಿಮಾ ಬಹಳ ಬೇಸರ ತಂದಿತ್ತು. ಒಟ್ಟಾರೆ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದ್ದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಿತ್ತು. ಅಷ್ಟರಲ್ಲೇ ಸುದೀಪ್ ನಟನೆಯ 'ಮ್ಯಾಕ್ಸ್' ಸಿನಿಮಾ ಬಿಡುಗಡೆ ಆಗಿ ಪೆಟ್ಟು ಕೊಟ್ಟಿತ್ತು. 'ಮ್ಯಾಕ್ಸ್' ಆರ್ಭಟದ ಬಳಿಕ 'ಯುಐ' ಕ್ರೇಜ್ ಕೊಂಚ ಕಮ್ಮಿ ಆಗಿತ್ತು.

UI Ott Release date Upendra film following Sudeep s Max Strategy

ವಿಭಿನ್ನ ಕಾನ್ಸೆಪ್ಟ್‌ನಲ್ಲಿ ಉಪೇಂದ್ರ ಈ ಸಿನಿಮಾ ಕಥೆ ಹೇಳಿದ್ದರು. ಕಲ್ಕಿ, ಸತ್ಯಯುಗ ಹೀಗೆ ಸಾಕಷ್ಟು ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ನಿಜವಾಗಿ ಬೇಕಿರುವುದನ್ನು ಬಿಟ್ಟು ಜನ ಬೇಡದ ವಿಚಾರಗಳ ಬಗ್ಗೆ ಚರ್ಚಿಸುತ್ತಾ ಕಾಲಹರಣ ಮಾಡುತ್ತಿದ್ದಾರೆ. ಮೊಬೈಲ್‌ನಲ್ಲೇ ಮುಳುಗಿ ಹೋಗಿದ್ದಾರೆ ಎಂದು ತಮ್ಮ ಶೈಲಿಯಲ್ಲಿ ರಿಯಲ್ ಸ್ಟಾರ್ ಚಾಟಿ ಬೀಸಿದ್ದಾರೆ.

ವೇಣು ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ 'ಯುಐ' ಚಿತ್ರಕ್ಕಿದೆ. ಚಿತ್ರದ ಎರಡು ಹಾಡುಗಳು ಸೂಪರ್ ಹಿಟ್ ಆಗಿತ್ತು. ಕಳೆದ ವರ್ಷ ವಿಶ್ವದಾದ್ಯಂತ ತೆರೆಕಂಡು ಭರ್ಜರಿ ಯಶಸ್ಸು ಗಳಿಸಿದ ಕನ್ನಡ ಸಿನಿಮಾ ಎಂದು ಚಿತ್ರತಂಡ ಘೋಷಿಸಿತ್ತು. ಕನ್ನಡದ ಬಳಿಕ ತೆಲುಗು, ತಮಿಳಿಗೆ ಕೂಡ ಸಿನಿಮಾ ಡಬ್ ಆಗಿ ರಿಲೀಸ್ ಆಗಿತ್ತು. ಉಪೇಂದ್ರ ತೆಲಂಗಾಣ, ತಮಿಳುನಾಡಿಗೆ ಹೋಗಿ ಪ್ರಚಾರ ಮಾಡಿ ಬಂದಿದ್ದರು.

'ಯುಐ' ಸಿನಿಮಾ ಬಾಕ್ಸಾಫೀಸ್ ಗಳಿಕೆ ಬಗ್ಗೆ ಅಧಿಕೃತ ಮಾಹಿತಿ ಚಿತ್ರತಂಡ ಕೊಡಲಿಲ್ಲ. Sacnilk.com ವೆಬ್‌ ಸೈಟ್ ವರದಿ ಪ್ರಚಾರ ಸಿನಿಮಾ ಅಂದಾಜು 30 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿತ್ತು ಎನ್ನಲಾಗುತ್ತಿದೆ. ಬಹಳ ದಿನಗಳ ಬಳಿಕ ರಿಯಲ್ ಸ್ಟಾರ್ ಉಪೇಂದ್ರ ಕಂಬ್ಯಾಕ್ ಮಾಡಿದ್ದರು.

'ಯುಐ' ಚಿತ್ರದ ಟೆಲಿವಿಷನ್ ಪ್ರೀಮಿಯರ್ ಡೇಟ್ ನಿಗದಿಯಾಗಿದ್ದರೂ ಓಟಿಟಿ ರಿಲೀಸ್ ಬಗ್ಗೆ ಖಚಿತ ಮಾಹಿತಿ ಇಲ್ಲ. 'ಮ್ಯಾಕ್ಸ್' ರೀತಿಯಲ್ಲೇ ಏಕಕಾಲಕ್ಕೆ ಟಿವಿ ಹಾಗೂ ಓಟಿಟಿಯಲ್ಲಿ ಸಿನಿಮಾ ಪ್ರದರ್ಶನ ಆರಂಭವಾಗುವ ಸಾಧ್ಯತೆಯಿದೆ. ಇತ್ತೀಚೆಗೆ ಇದು ಹೊಸ ಟ್ರೆಂಡ್ ಆಗುತ್ತಿದೆ. ಒಟಿಟಿ ಬರೀ ಚಿತ್ರಮಂದಿರಗಳಿಗೆ ಮಾತ್ರವಲ್ಲ ಮನರಂಜನಾ ವಾಹಿನಿಗಳಿಗೆ ಕೂಡ ಸೆಡ್ಡು ಹೊಡೆಯುತ್ತಿದೆ. ಜನ ಓಟಿಟಿಯಲ್ಲಿ ಸಿನಿಮಾ ವೀಕ್ಷಿಸಿದ ಬಳಿಕ ಟಿವಿಯಲ್ಲಿ ಪ್ರಸಾರವಾದಾಗ ನೋಡಲು ಹಿಂದೇಟು ಹಾಕುತ್ತಿದ್ದಾರೆ. ಇದು ಟಿಆರ್‌ಪಿ ರೇಟಿಂಗ್‌ನಲ್ಲಿ ಸ್ಪಷ್ಟವಾಗಿ ಗೊತ್ತಾಗುತ್ತಿದೆ.

ದೊಡ್ಡ ದೊಡ್ಡ ಸಿನಿಮಾಗಳು ಮೊದಲ ಬಾರಿ ಟಿವಿಯಲ್ಲಿ ಪ್ರಸಾರವಾದಾಗ ಭರ್ಜರಿ ಟಿಆರ್‌ಪಿ ಬರ್ತಿತ್ತು. ಆದರೆ ನಿಧಾನವಾಗಿ ಇದು ಕಮ್ಮಿ ಆಗುತ್ತಿದೆ. ಕಾರಣ ಓಟಿಟಿ ಎಂದು ಬಿಡಿಸಿ ಹೇಳಬೇಕಿಲ್ಲ. ಇದೇ ಕಾರಣಕ್ಕೆ ವಾಹಿನಿಗಳಿಗೆ ಸಿಗುವ ಜಾಹೀರಾತುಗಳ ಸಂಖ್ಯೆ ಕಮ್ಮಿ ಆಗುತ್ತಿದೆ. ಜನ ಟಿವಿಯಲ್ಲಿ ಜಾಹೀರಾತುಗಳ ನಡುವೆ ಸಿನಿಮಾ ನೋಡಲು ಆಸಕ್ತಿ ತೋರಿಸುತ್ತಿಲ್ಲ. ಟಿವಿ ರಿಮೋಟ್ ಅವರ ಕೈಯಲ್ಲೇ ಇರುತ್ತದೆ. ಟಿವಿಗೆ ಓಟಿಟಿ ಪ್ಲಾಟ್‌ಫಾರ್ಮ್‌ ಕನೆಕ್ಟ್ ಮಾಡಿಕೊಂಡು ಮನೆಮಂದಿ ಎಲ್ಲಾ ಕೂತು ಸಿನಿಮಾ ನೋಡುವಂತಾಗಿದೆ. ಹಾಗಾಗಿ ಸಿನಿಮಾ ಟಿವಿ ವಾಹಿನಿಗೆ ಬಂದಾಗ ರೆಸ್ಪಾನ್ಸ್ ಕಮ್ಮಿ ಇರುತ್ತದೆ.

ಸಾಮಾನ್ಯವಾಗಿ ಜೀ ಸಂಸ್ಥೆ ಯಾವುದೇ ಚಿತ್ರದ ಓಟಿಟಿ ಹಾಗೂ ಸ್ಯಾಟಲೈಟ್ ರೈಟ್ಸ್ ಎರಡನ್ನು ಕೊಂಡುಕೊಳ್ಳುತ್ತದೆ. ಇತ್ತೀಚೆಗೆ ಟಿವಿ ಹಾಗೂ ಓಟಿಟಿ ಅಂದರೆ ಜೀ ಕನ್ನಡ ವಾಹಿನಿ ಹಾಗೂ ಜೀ-5 ಓಟಿಟಿಯಲ್ಲಿ ಒಮ್ಮೆಲೆ ಸಿನಿಮಾ ಪ್ರದರ್ಶನ ಆರಂಭಿಸುತ್ತಿದೆ. ಈ ಮೂಲಕ ಮೊದಲ ಬಾರಿ ಟಿವಿಯಲ್ಲಿ ಪ್ರದರ್ಶನ ಆದಾಗ ಜನ ನೋಡುತ್ತಾರೆ ಎನ್ನುವ ಲೆಕ್ಕಾಚಾರ ಶುರುವಾಗಿದೆ. ಸುದೀಪ್ ನಟನೆಯ 'ಮ್ಯಾಕ್ಸ್' ಚಿತ್ರವನ್ನು ಇದೇ ರೀತಿ ರಿಲೀಸ್ ಮಾಡಿದ್ದರು.

ಕನ್ನಡದ 'ಮ್ಯಾಕ್ಸ್' ಮಾತ್ರವಲ್ಲ ತೆಲುಗಿನ 'ಸಂಕ್ರಾಂತಿಕಿ ವಸ್ತುನ್ನಾಂ' ಚಿತ್ರವನ್ನು ಕೂಡ ಏಕಕಾಲಕ್ಕೆ ಜೀ ತೆಲುಗು ಹಾಗೂ ಜೀ-5ನಲ್ಲಿ ವೀಕ್ಷಕರ ಮುಂದೆ ತರಲಾಗಿತ್ತು. ಇದೀಗ 'ಯುಐ' ಚಿತ್ರದ ವಿಚಾರದಲ್ಲೂ ಇದೇ ಪ್ಲ್ಯಾನ್ ಮಾಡುತ್ತಿರುವ ಸಾಧ್ಯತೆಯಿದೆ. ಕಾರಣ ಚಿತ್ರದ ಓಟಿಟಿ ರಿಲೀಸ್ ಡೇಟ್ ಕನ್ಫರ್ಮ್ ಆಗಿಲ್ಲ. ಹಾಗಾಗಿ ಮಾರ್ಚ್ 30ಕ್ಕೆ ಜೀ-5ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗುವ ಸಾಧ್ಯತೆ ದಟ್ಟವಾಗಿದೆ. ಮುಂದಿನ ದಿನಗಳಲ್ಲಿ ಇದು ದೊಡ್ಡ ಟ್ರೆಂಡ್ ಆಗುವ ಸಾಧ್ಯತೆಯಿದೆ.

ಓಟಿಟಿ ಬಂದ ಮೇಲೆ ಸಿನಿಮಾಗಳ ಸ್ಯಾಟಲೈಟ್ ರೈಟ್ಸ್‌ ಡಿಮ್ಯಾಂಡ್ ಕೂಡ ಕಮ್ಮಿ ಆಗುತ್ತಿದೆ. ಇನ್ನು ಓಟಿಟಿಗೆ ಬರೋಕು ಮುನ್ನ ಸಿನಿಮಾ ಪೈರಸಿ ಆಗುತ್ತಿದೆ. ಬಿಡುಗಡೆಯಾದ 15 ದಿನಕ್ಕೆ 'ಯುಐ' ಸಿನಿಮಾ ಲೀಕ್ ಆಗಿತ್ತು. ಸಾಕಷ್ಟು ಜನ ಪೈರಸಿ ಕಾಪಿಯನ್ನು ನೋಡಿಬಿಟ್ಟಿದ್ದಾರೆ.

ಒಟ್ಟಾರೆ ಚಿತ್ರರಂಗಕ್ಕೆ ಚಿತ್ರವಿಚಿತ್ರ ಸಮಸ್ಯೆಗಳು ಎದುರಾಗುತ್ತಿದೆ. ಕನ್ನಡ ಚಿತ್ರಗಳು ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತಿಲ್ಲ. ಸ್ಟಾರ್ ನಟರು ಹೆಚ್ಚು ಸಿನಿಮಾ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಸಿನಿರಸಿಕರು ಸಣ್ಣ ಸಿನಿಮಾಗಳನ್ನು ನೋಡಲು ಚಿತ್ರಮಂದಿರಗಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಸದ್ಯ ದೊಡ್ಡ ಸಿನಿಮಾಗಳಿಲ್ಲದೇ ಚಿತ್ರಮಂದಿರಗಳನ್ನು ಕೆಲ ದಿನ ಮುಚ್ಚಲು ಮಾಲೀಕರು ಚಿಂತನೆ ನಡೆಸುತ್ತಿದ್ದಾರೆ. ಇದೆಲ್ಲದರ ನಡುವೆ ಪೈರಸಿ ಭೂತ ಕಾಡುತ್ತಿದೆ.

'ಯುಐ' ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಬರುತ್ತಿದ್ದಂತೆ ಕೆಲವರು ಚಿತ್ರಮಂದಿರಕ್ಕೆ ಹೋಗಲು ಹಿಂದೇಟು ಹಾಕಿದ್ದರು. ಅವರೆಲ್ಲಾ ಓಟಿಟಿಯಲ್ಲಿ ಸಿನಿಮಾ ನೋಡಲು ಕಾಯುತ್ತಿದ್ದಾರೆ. ಈಗಾಗಲೇ ಸಿನಿಮಾ ನೋಡಿರುವ ಉಪೇಂದ್ರ ಅಭಿಮಾನಿಗಳು ಮತ್ತೊಮ್ಮೆ ಸಿನಿಮಾ ವೀಕ್ಷಿಸುವ ಲೆಕ್ಕಾಚಾರದಲ್ಲಿದ್ದಾರೆ. ಯುಗಾದಿ ಹಬ್ಬದ ರಜೆ ದಿನ ಸಿನಿಮಾ ಟಿವಿಗೆ ಬರ್ತಿದೆ. ಹಾಗಾಗಿ ಒಳ್ಳೆ ಟಿಆರ್‌ಪಿಯನ್ನು ನಿರೀಕ್ಷಿಸಲಾಗುತ್ತಿದೆ.

More from Filmibeat

English summary
Upendra starrer UI ott Release date; similar to the approach taken by Sudeep's Max
Read more about: upendra sudeep ui
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X