UI Ott: ಸೂಪರ್ ಹಿಟ್ 'ಯುಐ' ಓಟಿಟಿ ಡೇಟ್ ಫಿಕ್ಸ್? ಎಲ್ಲಿ ಸ್ಟ್ರೀಮಿಂಗ್ ಗೊತ್ತಾ?
ಬಾಕ್ಸಾಫೀಸ್‌ನಲ್ಲಿ ಗೆದ್ದ 'ಯುಐ' ಸಿನಿಮಾ ಓಟಿಟಿ ರಿಲೀಸ್ ಬಗ್ಗೆ ಚರ್ಚೆ ಶುರುವಾಗಿದೆ. ಉಪೇಂದ್ರ ನಿರ್ದೇಶಿಸಿ ನಟಿಸಿರುವ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾ ಡಿಸೆಂಬರ್ 20ಕ್ಕೆ ತೆರೆಗೆ ಬಂದಿತ್ತು. ಬಹಳ ದಿನಗಳ ಬಳಿಕ ಉಪ್ಪಿ ನಿರ್ದೇಶನದ ಸಿನಿಮಾ ಪ್ರೇಕ್ಷಕರ ಮುಂದೆ ಬಂದು ಸಕ್ಸಸ್ ಕಂಡಿದೆ.
ಮಿಶ್ರ ಪ್ರತಿಕ್ರಿಯೆ ಸಿಕ್ಕರೂ 'ಯುಐ' ಸಿನಿಮಾ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆದಿತ್ತು. ಸುದೀಪ್ ನಟನೆಯ 'ಮ್ಯಾಕ್ಸ್' ಸಿನಿಮಾ ರಿಲೀಸ್ ಬಳಿಕ ಉಪ್ಪಿ ಸಿನಿಮಾ ಸದ್ದು ಕೊಂಚ ಕಮ್ಮಿ ಆಗಿತ್ತು. ಆ ಬಳಿಕ ಕೂಡ ರಜೆ ದಿನಗಳಲ್ಲಿ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿತ್ತು. ಬರೀ ಬುಕ್‌ಮೈ ಶೋನಲ್ಲೇ ತಲಾ 1 ಲಕ್ಷದಂತೆ 3 ದಿನ ಟಿಕೆಟ್ ಬುಕ್ ಆಗಿತ್ತು. ಆ ಮೂಲಕ ಚಿತ್ರ ದಾಖಲೆ ಬರೆದಿತ್ತು.

ಕಳೆದ ವರ್ಷ ತೆರೆಕಂಡು ಸಿನಿಮಾಗಳಲ್ಲಿ ಅತ್ಯಧಿಕ ಗಳಿಕೆ ಕಂಡ ಕನ್ನಡ ಸಿನಿಮಾಗಳ ಪಟ್ಟಿಯಲ್ಲಿ 'ಯುಐ' 2ನೇ ಸ್ಥಾನಕ್ಕೇರಿದೆ. ಸಿನಿಮಾದೊಳಗಿನ ಸಿನಿಮಾ ನಾಮ ಚಿಹ್ನೆಯ ಕಥೆ ಹೇಳಿ ಉಪೇಂದ್ರ ಗೆದ್ದಿದ್ದಾರೆ. ಸತ್ಯ ಹಾಗೂ ಕಲ್ಕಿ ಆಗಿ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಅಷ್ಟೇ ಅಲ್ಲದೇ ನಿರ್ದೇಶಕ ಉಪೇಂದ್ರ ಆಗಿಯೂ ತೆರೆಮೇಲೆ ಬಂದಿದ್ದರು.
'ಯುಐ' ಸಿನಿಮಾ ನೋಡಿದ ಒಬ್ಬೊಬ್ಬರು ಒಂದೊಂದು ರೀತಿ ವಿಶ್ಲೇಷಣೆ ಮಾಡಿದ್ದಾರೆ. ಕೆಲವರು ಬಹಳ ಅದ್ಭುತ ಸಿನಿಮಾ ಎಂದು ಕೊಂಡಾಡಿದರು. ಮತ್ತೆ ಕೆಲವರಿಗೆ ಇಷ್ಟವಾಗಿಲ್ಲ. ಕೆಲವರು ಓಟಿಟಿ ಸ್ಟ್ರೀಮಿಂಗ್‌ಗಾಗಿ ಕಾಯುತ್ತಿದ್ದಾರೆ. ಶೀಘ್ರದಲ್ಲೇ ಸಿನಿಮಾ ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಎಂಟ್ರಿ ಕೊಡುತ್ತದೆ ಎಂದು ಹೇಳಲಾಗುತ್ತಿದೆ. ಇತ್ತೀಚೆಗೆ ದೊಡ್ಡ ದೊಡ್ಡ ಸಿನಿಮಾಗಳೇ 20 ದಿನಕ್ಕೆಲ್ಲಾ ಓಟಿಟಿಗೆ ಬರ್ತಿದೆ. ಅದೇ ರೀತಿ ಆದಷ್ಟು ಬೇಗ 'ಯುಐ' ಸ್ಟ್ರೀಮಿಂಗ್ ಆಗುವ ಸುಳಿವು ಸಿಕ್ಕಿದೆ.

ಜಿ. ಮನೋಹರ್ ಹಾಗೂ ಕೆ. ಪಿ ಶ್ರೀಕಾಂತ್ 'ಯುಐ' ಚಿತ್ರಕ್ಕೆ ಹಣ ಹೂಡಿದ್ದಾರೆ. ರೀಷ್ಮಾ ನಾಣಯ್ಯ ನಾಯಕಿಯಾಗಿ ಮಿಂಚಿದ್ದಾರೆ. ಆರ್ಮುಗ ರವಿಶಂಕರ್, ಸಾಧುಕೋಕಿಲ, ಅಚ್ಯುತ್‌ಕುಮಾರ್ ಚಿತ್ರದ ತಾರಾಗಣದಲ್ಲಿದ್ದಾರೆ. ಜನ ಬೇಕಿರುವ ವಿಚಾರಗಳನ್ನು ಬಿಟ್ಟು ಬೇಡದ ವಿಚಾರಗಳ ಬಗ್ಗೆ ತಲೆ ಕೆಡಿಸಿಕೊಂಡಿದ್ದಾರೆ. ಅವರನ್ನು ಬದಲಿಸುವುದು ಕಷ್ಟ ಎಂದು ಉಪ್ಪಿ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರೆ.
ಸಂಕ್ರಾಂತಿ ಸಂಭ್ರಮದಲ್ಲಿ 'ಯುಐ' ಸಿನಿಮಾ ಓಟಿಟಿಗೆ ಬರುತ್ತದೆ ಎನ್ನುವ ಊಹಾಪೋಹ ಶುರುವಾಗಿದೆ. ಜನವರಿ 15ಕ್ಕೆ ಸನ್‌ನೆಕ್ಸ್ಟ್‌ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗುತ್ತದೆ ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಶುರುವಾಗಿದೆ. ಮತ್ತೊಂದು ವಾದದ ಪ್ರಕಾರ ಜನವರಿ 30ರ ಒಳಗೆ ಸಿನಿಮಾ ಸ್ಮಾಲ್‌ಸ್ಕ್ರೀನ್‌ಗೆ ಎಂಟ್ರಿ ಕೊಡಲಿದೆ ಎನ್ನಲಾಗ್ತಿದೆ.
ಸನ್‌ನೆಕ್ಸ್ಟ್‌ನಲ್ಲಿ ಕನ್ನಡದ ದೊಡ್ಡ ಸಿನಿಮಾಗಳು ಸ್ಟ್ರೀಮಿಂಗ್ ಆಗುವುದು ಕಮ್ಮಿ. ಇತ್ತೀಚೆಗೆ ಗಣೇಶ್ ನಟಿಸಿದ 'ಕೃಷ್ಣಂ ಪ್ರಣಯ ಸಖಿ' ಸಿನಿಮಾ ಅಲ್ಲಿ ರಿಲೀಸ್ ಆಗಿತ್ತು. ಇದೀಗ 'ಯುಐ' ಬರುತ್ತದೆ ಎಂದು ಹೇಳಲಾಗುತ್ತಿದೆ. ಇನ್ನು ಚಿತ್ರದ ಕನ್ನಡ ಸ್ಯಾಟಲೈಟ್ ರೈಟ್ಸ್ ZEE ಕನ್ನಡ ಪಾಲಾಗಿದೆ ಎಂದು ವರದಿಯಾಗಿದೆ.
'ಯುಐ' ಚಿತ್ರದ ವಿಭಿನ್ನ ರಿವ್ಯೂ ಕೇಳಿದ ಕೆಲವರು ಓಟಿಟಿಯಲ್ಲಿ ನೋಡಲು ಬಯಸಿದ್ದಾರೆ. ಕೆಲವರು ಸಿನಿಮಾ ಅರ್ಥ ಆಗಲಿಲ್ಲ. ಮತ್ತೊಮ್ಮೆ ನೋಡಬೇಕು ಎನ್ನುತ್ತಿದ್ದರು. ಅಂತಹವರು ಡಿಜಿಟಲ್ ಸ್ಟ್ರೀಮಿಂಗ್‌ಗಾಗಿ ಕಾಯುತ್ತಿದ್ದಾರೆ.
ಬಾಕ್ಸಾಫೀಸ್ ಗಳಿಕೆ ವಿಚಾರಕ್ಕೆ ಬಂದರೆ 'ಯುಐ' ಸಿನಿಮಾ ದಾಖಲೆ ಬರೆದಿದೆ. ಭಾರತದಲ್ಲಿ ಸಿನಿಮಾ 30 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿದೆ ಎಂದು www.sacnilk.com ಎಂದು ವರದಿ ಮಾಡಿದೆ. ಕರ್ನಾಟಕ ಮಾತ್ರವಲ್ಲದೇ ಆಂಧ್ರ, ತೆಲಂಗಾಣ, ತಮಿಳುನಾಡಿನಲ್ಲಿ ಕೂಡ ಸಿನಿಮಾ ತಕ್ಕಮಟ್ಟಿಗೆ ಗಳಿಕೆ ಕಂಡಿದೆ. ವಿದೇಶಗಳಲ್ಲಿ ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ. ಓವರ್‌ಸೀಸ್‌ನಲ್ಲಿ ಈ ವರ್ಷ ಅತಿಹೆಚ್ಚು ಗಳಿಕೆ ಕಂಡ ಕನ್ನಡ ಸಿನಿಮಾ ಎನಿಸಿಕೊಂಡಿದ್ದಾರೆ.
Disclaimer; 'ಯುಐ' ಸಿನಿಮಾ ಓಟಿಟಿ ರಿಲೀಸ್ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ರಿಲೀಸ್ ಡೇಟ್ ಬಗ್ಗೆ ಚರ್ಚೆ ನಡೀತಿದೆ.


Click it and Unblock the Notifications











