ಒಂದೇ ಎಪಿಸೋಡ್‌ಗೆ ಧೂಳೆಬ್ಬಿಸಿದ ಬಾಲಕೃಷ್ಣ: ಅನ್‌ಸ್ಟಾಪೆಬಲ್ 2 ಎಪಿಸೋಡ್ ವೈರಲ್

ಬೆಳ್ಳಿ ತೆರೆ ಮೇಲೆ ಅಬ್ಬರಿಸುವ ನಟ ನಂದಮೂರಿ ಬಾಲಕೃಷ್ಣ ಕಿರುತೆರೆಗೆ ಪ್ರವೇಶಿಸಿರುವುದು ಹೊಸ ವಿಷಯವೇನಲ್ಲ. ಆಹಾ ಒಟಿಟಿಯಲ್ಲಿ ಬಾಲಕೃಷ್ಣ ನಡೆಸಿಕೊಡುವ 'ಅನ್‌ಸ್ಟಾಪೆಬಲ್' ಟಾಕ್ ಶೋ ಭಾರಿ ಜನಪ್ರಿಯತೆ ಗಳಿಸಿತ್ತು.

ಇದೀಗ ಅದೇ ಟಾಕ್‌ ಶೋನ ಎರಡನೇ ಸೀಸನ್ ಬಂದಿದ್ದು, ಮೊದಲ ಎಪಿಸೋಡ್‌ ನಿನ್ನೆ ಪ್ರಸಾರವಾಗಿ ಭಾರಿ ವೈರಲ್ ಆಗಿದೆ. ಎಲ್ಲೆಲ್ಲೂ ಅದರದ್ದೇ ಚರ್ಚೆ.

ಅನ್‌ಸ್ಟಾಪೆಬಲ್ 2 ನ ಮೊದಲ ಎಪಿಸೋಡ್‌ನಲ್ಲಿ ಭರ್ಜರಿ ಅತಿಥಿಗಳನ್ನೇ ಬಾಲಕೃಷ್ಣ ಹಿಡಿದು ತಂದು ಮಾತನಾಡಿಸಿದ್ದಾರೆ. ಕಳೆದ ಸೀಸನ್‌ನಲ್ಲಿ ಬಹುತೇಕ ಸಿನಿಮಾ ನಟರನ್ನೇ ಕರೆತಂದಿದ್ದ ಬಾಲಕೃಷ್ಣ ಈ ಬಾರಿ ತನ್ನ ಬಾವ, ಮಾಜಿ ಸಿಎಂ ಚಂದ್ರಬಾಬು ನಾಯ್ಡು ಹಾಗೂ ಅವರ ಪುತ್ರ ಲೋಕೇಶ್ ಅನ್ನು ಕರೆತಂದಿದ್ದರು.

ಕೆಲವು ದಿನಗಳ ಹಿಂದೆ ಈ ಎಪಿಸೋಡ್‌ನ ಪ್ರೋಮೊ ಯೂಟ್ಯೂಬ್‌ನಲ್ಲಿ ಬಿಡುಗಡೆ ಆಗಿದ್ದಾಗಲೇ ದೊಡ್ಡ ಹಲ್‌-ಚಲ್ ಸೃಷ್ಟಿಸಿತ್ತು. ಒಂದೇ ಕುಟುಂಬದವರು, ಹಲವು ರಾಜಕೀಯ ಘಟನೆಗಳಿಗೆ ಕಾರಣರಾದವರು, ಸಾಕ್ಷಿಯಾದವರು ಬಹಿರಂಗವಾಗಿ ಪರಸ್ಪರ ಎದುರಾಗಿರುವುದಲ್ಲದೆ, ಕುಟುಂಬ ಹಾಗೂ ರಾಜಕೀಯದ ಬಗ್ಗೆ ಮಾತನಾಡಿರುವುದು ಭಾರಿ ಕುತೂಹಲ ಕೆರಳಿಸಿತ್ತು.

ಅಂತೆಯೇ ನಿನ್ನೆ (ಅಕ್ಟೋಬರ್ 14) ರಾತ್ರಿ ಮೊದಲ ಎಪಿಸೋಡ್ ಪ್ರಸಾರವಾಗಿದ್ದು, ನಿರೀಕ್ಷಿಸಿದಂತೆಯೇ ಈ ಎಪಿಸೋಡ್ ಭಾರಿ ವೈರಲ್ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇದರದ್ದೇ ಮಾತುಕತೆ ಜೋರಾಗಿ ನಡೆದಿದೆ.

ಅನ್‌ಸ್ಟಾಪೆಬಲ್ 2 ಮೊದಲ ಎಪಿಸೋಡ್

ಅನ್‌ಸ್ಟಾಪೆಬಲ್ 2 ಮೊದಲ ಎಪಿಸೋಡ್

ಸಂಬಂಧದಲ್ಲಿ ಬಾವ ಆಗಿದ್ದರೂ ಸಹ ಬಾಲಕೃಷ್ಣ ಚಂದ್ರಬಾಬು ನಾಯ್ಡುಗೆ ವಿನಾಯಿತಿಯನ್ನೇನೂ ನೀಡಿಲ್ಲ. ಕಠಿಣವಾದ ಪ್ರಶ್ನೆಗಳನ್ನೇ ಕೇಳಿದ್ದಾರೆ. ತಮ್ಮ ತಂದೆ ಎನ್‌ಟಿಆರ್ ಕಟ್ಟಿದ ಪಕ್ಷದಿಂದ ಅವರನ್ನೇ ಹೊರಹಾಕಿದ ಆರೋಪ ಹೊಂದಿರುವ ಚಂದ್ರಬಾಬು ನಾಯ್ಡು, ಎನ್‌ಟಿಆರ್ ಅನ್ನು ಪಕ್ಷದಿಂದ ಹೊರಗೆ ಹಾಕಿದ ತೆಲುಗು ರಾಜಕೀಯದ ಪ್ರಮುಖ ಘಟನೆಯ ಬಗ್ಗೆಯೂ ಮಾತನಾಡಿದ್ದಾರೆ. ಆ ಬಗ್ಗೆಯೂ ಚರ್ಚೆ ಜೋರಾಗಿ ನಡೆದಿದೆ.

ರಾಜಕೀಯ ಬಿಲ್ಡಪ್‌ಗೂ ಅವಕಾಶ

ರಾಜಕೀಯ ಬಿಲ್ಡಪ್‌ಗೂ ಅವಕಾಶ

ಪ್ರಶ್ನೆಗಳ ಜೊತೆಗೆ ಚಂದ್ರಬಾಬು ನಾಯ್ಡುಗೆ ರಾಜಕೀಯ ಬಿಲ್ಡಪ್ ನೀಡುವ ಕಾರ್ಯವನ್ನೂ ಬಾಲಕೃಷ್ಣ ತಮ್ಮ ಶೋ ಮೂಲಕ ಮಾಡಿದ್ದಾರೆ. ಸೈದರಾಬಾದ್ ನಿರ್ಮಾಣದ ಬಗ್ಗೆ ಬಾಲಕೃಷ್ಣ ಚಂದ್ರಬಾಬು ನಾಯ್ಡು ಅವರನ್ನು ಬಹಳ ಹೊಗಳಿದ್ದಾರೆ. ಚಂದ್ರಬಾಬು ನಾಯ್ಡು ಸಹ ಆಂಧ್ರದ ಬಗ್ಗೆ ತಮಗಿರುವ ಯೋಚನೆಗಳ ಬಗ್ಗೆಯೂ ಮಾತನಾಡಿದ್ದಾರೆ. ಚಂದ್ರಬಾಬು ನಾಯ್ಡು ಪುತ್ರ ಲೋಕೇಶ್ ಸಹ ತಮಗಿರುವ ಐಡಿಯಾಗಳ ಬಗ್ಗೆ ಶೋನಲ್ಲಿ ಮಾತನಾಡಿದ್ದಾರೆ.

ಚಿತ್ರದ ಬಗ್ಗೆ ನಾರಾ ಲೋಕೇಶ್‌ ಸ್ಪಷ್ಟನೆ

ಚಿತ್ರದ ಬಗ್ಗೆ ನಾರಾ ಲೋಕೇಶ್‌ ಸ್ಪಷ್ಟನೆ

ಇವುಗಳ ಜೊತೆಗೆ ವಿಪಕ್ಷದವರಿಗೆ ಟಾಂಗ್ ಕೊಡುವ ಕಾರ್ಯವನ್ನೂ ಈ ಶೋನಲ್ಲಿ ಮಾಡಲಾಗಿದೆ. ಜೊತೆಗೆ ಚಂದ್ರಬಾಬು ನಾಯ್ಡು, ತಾವು ಮಾಜಿ ಸಿಎಂ, ದಿವಂಗತ ರಾಜಶೇಖರ ರೆಡ್ಡಿ ಅವರೊಟ್ಟಿಗೆ ತಮಗಿದ್ದ ಬಂಧದ ಬಗ್ಗೆಯೂ ಮಾತನಾಡಿದ್ದಾರೆ. ಇದರ ಜೊತೆಗೆ ಚಂದ್ರಬಾಬು ನಾಯ್ಡು ಪುತ್ರ ಲೋಕೇಶ್, ತಮ್ಮ ವಿವಾದಾತ್ಮಕ ಚಿತ್ರದ ಬಗ್ಗೆಯೂ ಮಾತನಾಡಿದ್ದಾರೆ. ಫಾರಿನ್ ಬೆಡಗಿಯರೊಟ್ಟಿಗೆ ಸ್ವಿಮ್ಮಿಂಗ್‌ ಪೂಲ್‌ನಲ್ಲಿದ್ದ ತಮ್ಮ ಚಿತ್ರದ ಬಗ್ಗೆ ಲೋಕೇಶ್ ಸ್ವತಃ ಮಾತನಾಡಿದರು. ಅದರ ಬಗ್ಗೆ ಸ್ಪಷ್ಟನೆಯನ್ನೂ ನೀಡಿದ್ದಾರೆ.

ಚರ್ಚೆಗಳು ಆರಂಭವಾಗಿವೆ

ಚರ್ಚೆಗಳು ಆರಂಭವಾಗಿವೆ

ಈ ಎಪಿಸೋಡ್‌ ಬಗ್ಗೆ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹಾಗೂ ತೆಲುಗು ರಾಜ್ಯಗಳ ರಾಜಕೀಯ ವಲಯದಲ್ಲಿ ಭಾರಿ ಚರ್ಚೆ ಆರಂಭವಾಗಿದೆ. ಈಗಾಗಲೇ ಸಚಿವೆ ರೋಜಾ, ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, 'ಅನ್‌ಸ್ಟಾಪೆಬಲ್ 2' ಶೋನಲ್ಲಿ ಚಂದ್ರಬಾಬು ನಾಯ್ಡು ಹಾಗೂ ಲೋಕೇಶ್ ಹೇಳಿದ್ದೆಲ್ಲ ಸುಳ್ಳು ಎಂದಿದ್ದಾರೆ. ಇನ್ನೂ ಹಲವು ರಾಜಕಾರಣಿಗಳು 'ಅನ್‌ಸ್ಟಾಪೆಬಲ್ 2' ಎಪಿಸೋಡ್‌ ಬಗ್ಗೆ ಮಾತನಾಡಿದ್ದಾರೆ. ಕೆಲವರು ಮೆಚ್ಚಿದ್ದರೆ, ಕೆಲವರು ವಿರೋಧಿಸಿದ್ದಾರೆ.

More from Filmibeat

English summary
Unstoppable 2: Nandamuri Balakrishna Chandrababu Naidu episode one became viral. Talk show streaming on Aha OTT.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X