ಬಾಲಯ್ಯ ನಿರೂಪಣೆಯ 'ಅನ್‌ಸ್ಟಾಪಬೆಲ್ ಬಾಲಯ್ಯ' ಎರಡನೇ ಸೀಸನ್‌ಗೆ ಸಿದ್ಧತೆ
ಓಟಿಟಿಯಲ್ಲಿ ಈಗ ಕೇವಲ ಸಿನಿಮಾಗಳು ಮಾತ್ರವಲ್ಲ, ವೆಬ್ ಸೀರಿಸ್‌ಗಳು ಸೇರಿದಂತೆ, ಲೈವ್ ಕಾನ್ಸರ್ಟ್‌ಗಳು, ಟಾಕ್ ಶೋಗಳು ಸೇರಿದಂತೆ ಹಲವು ಬಗೆಯಲ್ಲಿ ಮನೋರಂಜನೆ ವೀಕ್ಷಕರಿಗೆ ಸಿಗುತ್ತಿದೆ. ಓಟಿಟಿಯ ವಿಸ್ತರಣೆ ಕೂಡ ದೊಡ್ಡದಾಗುತ್ತಿದೆ. ಹೀಗಾಗಿ ಬೆಳ್ಳಿ ತೆರೆಯ ಮೇಲೆ ದೊಡ್ಡ ದೊಡ್ಡ ಸ್ಟಾರ್‌ಗಳಾಗಿ, ತಮ್ಮದೇ ತಾರಾ ವರ್ಚಸ್ಸು ಹೊಂದಿರುವ ಸ್ಟಾರ್ ನಟರು ಕೂಡಾ ಓಟಿಟಿಗೆ ಎಂಟ್ರಿ ನೀಡುತ್ತಿದ್ದಾರೆ. ಅಂತಹ ಒಂದು ಪ್ರಯತ್ನ ಎನ್ನುವಂತೆ ತೆಲುಗು ಸಿನಿರಂಗದ ದಿಗ್ಗಜ ನಟ ನಂದಮೂರಿ ಬಾಲಕೃಷ್ಣ ಕೂಡಾ ಓಟಿಟಿ ಯಲ್ಲಿ ಒಂದು ಟಾಕ್ ಶೋ ನಿರೂಪಣೆ ಮಾಡುತ್ತಿರೋದು ಎಲ್ಲರಿಗೂ ತಿಳಿದಿದೆ. ಅಲ್ಲದೇ ಈ ಟಾಕ್ ಶೋ ಉತ್ತಮ ಪ್ರತಿಕ್ರಿಯೆ ಕೂಡ ಪಡೆದುಕೊಳ್ಳುತ್ತಿದೆ, ಬಾಲಯ್ಯ ಅವರ ಮಾತಿನ ಶೈಲಿ ಕೂಡ ನೋಡುಗರಿಗೆ ತುಂಬಾ ಹಿಡಿಸಿದೆ.
ಅಖಂಡ ಸಿನಿಮಾದ ವಿಜಯದಿಂದ ಬೀಗುತ್ತಿರುವ ನಂದಮೂರಿ ಬಾಲಕೃಷ್ಣ ಅವರು ಸಿನಿಮಾ ರಂಗದಲ್ಲಿ ಸದ್ದು ಮಾಡವಾಗಲೇ, ಓಟಿಟಿಯಲ್ಲಿ ಅವರು ನಿರೂಪಣೆ ಮಾಡುತ್ತಿರುವ ಅನ್ ಸ್ಟಾಪಬಲ್ ವಿತ್ ಎನ್ ಬಿ ಕೆ ಶೋ ಕೂಡಾ ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿರುವ ಬಗ್ಗೆ ನಟ ಬಾಲಕೃಷ್ಣ ಕೂಡ ಈ ಹಿಂದೆ ಸಂತಸವ್ಯಕ್ತ ಪಡಿಸಿದ್ದರು. ಅಲ್ಲದೇ ನಟ ಬಾಲಕೃಷ್ಣ ಅವರು ಈ ಟಾಕ್ ಶೋ ಗಾಗಿ ಬಹು ದೊಡ್ಡ ಮೊತ್ತದ ಸಂಭಾವನೆಯನ್ನು ಪಡೆದುಕೊಂಡಿದ್ದಾರೆ ಎನ್ನುವ ಸುದ್ದಿಯೊಂದು ಈಗ ಟಾಲಿವುಡ್ ಅಂಗಳದಲ್ಲಿ ಹರಿದಾಡಿದೆ. ಇದೀಗ ಬಂದಿರೋ ವಿಚಾರ ಏನಪ್ಪ ಅಂದರೆ, ಅನ್ ಸ್ಟಾಪಬಲ್ ವಿತ್ ಎನ್‌ಬಿಕೆ ಶೋ ಪ್ರಖ್ಯಾತಿ ಪಡೆದ ನಿಟ್ಟಿನಲ್ಲಿ ಅನ್ ಸ್ಟಾಪಬಲ್ ವಿತ್ ಎನ್‌ಬಿಕೆ ಶೋನ ಎರಡನೇ ಸೀಸನ್ ಹೊರತರಲು ಕಾರ್ಯಕ್ರಮ ನಿಯೋಜಕರು ತಯಾರಿ ನಡೆಸಿದ್ದಾರೆ ಎಂಬುದು. ಅಲ್ಲದೇ ಮೊದಲ ಸೀಸನ್‌ಗಿಂತಲೂ ಎರಡನೇ ಸೀಸನ್‌ಗೆ ಬಾಲಕೃಷ್ಣ ಅವರ ಸಂಭಾವಣೆ ಕೂಡ ಏರಿಕೆ ಆಗಿದೆ.
ಹಿರಿಯ ನಟರು ಅದರಲ್ಲೂ ಸ್ಟಾರ್ ನಟರಾಗಿ ಚಿತ್ರರಂಗದಲ್ಲಿ ಮೆರೆದವರು, ದೊಡ್ಡ ಅಭಿಮಾನಿ ಬಳಗವನ್ನು ಹೊಂದಿ, ತಮ್ಮದೇ ಆದ ಛಾಪನ್ನು ಮೂಡಿಸಿರುವವರು ಕಿರುತೆರೆಗೆ ಬರುತ್ತಾರೆ ಎಂದರೆ ಅಲ್ಲೊಂದು ಕುತೂಹಲ ಸಹಜವಾಗಿಯೇ ಮೂಡುತ್ತದೆ. ಅವರು ಅತಿಥಿಯಾಗಿ ಕಾರ್ಯಕ್ರಮಕ್ಕೆ ಆಗಮಿಸಿದರೇನೇ ಬಹಳ ಆಸಕ್ತಿಯಿಂದ ನೋಡುವ ಅಭಿಮಾನಿಗಳು ಅದೇ ನಟರು ಕಾರ್ಯಕ್ರಮವೊಂದನ್ನು ನಿರೂಪಣೆ ಮಾಡಲಿದ್ದಾರೆ ಎಂದರೆ ಸಹಜವಾಗಿಯೇ ಉತ್ಸುಕರಾಗುತ್ತಾರೆ, ಅಂತಹ ಕಾರ್ಯಕ್ರಮಗಳು ಎಲ್ಲರ ಕುತೂಹಲ ಕೆರಳಿಸುತ್ತದೆ. ಹೀಗಾಗಿ ನಟ ನಂದಮೂರಿ ಬಾಲಕೃಷ್ಣ ಅವರು ಮೊದಲ ಬಾರಿಗೆ ಓಟಿಟಿ ವೇದಿಕೆಯಲ್ಲಿ ಟಾಕ್ ಶೋ ನಿರೂಪಣೆ ಮಾಡಿದ್ದಾರೆ.

ದಿ ಅನ್ ಸ್ಟಾಪಬಲ್ ಬಾಲಯ್ಯ ಎನ್ನುವ ಈ ಟಾಕ್ ಶೋ ದಲ್ಲಿ ಟಾಲಿವುಡ್ ನ ದಿಗ್ಗಜರು ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮದ ರಂಗನ್ನು ಹೆಚ್ಚಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಿನಿಮಾ ಪ್ರಮೋಷನ್ ಸೇರಿದಂತೆ ಹಲವ ಸಿನಿ ದಿಗ್ಗಜರು ಕೂಡ ಆಗಮಿಸಿ, ತಮ್ಮ ಸಿನಿ ಜರ್ನಿ ಸೇರಿದಂತೆ ಜೀವನ ಪಯಣದ ಬಗ್ಗೆ ಮಾತುಗಳನ್ನು ಹಂಚಿಕೊಳ್ಲುತ್ತಾರೆ. ಈ ಕಾರ್ಯಕ್ರಮವನ್ನು ಬಾಲಕೃಷ್ಣ ತಮ್ಮದೇ ಶೈಲಿಯಲ್ಲಿ ಅವರೊಡನೆ ಸಂವಾದ ನಡೆಸಿ ನೋಡುಗರ ಗಮನ ಸೆಳೆದಿದ್ದಾರೆ. ನಟನೆ ಮಾತ್ರವಲ್ಲದೆ ನಿರೂಪಣೆಯನ್ನು ಮಾಡಬಲ್ಲರು ಎಂಬುದನ್ನು ಪ್ರೂವ್ ಮಾಡಿದ್ದಾರೆ ಬಾಲಕೃಷ್ಣ.
ಬಾಲಕೃಷ್ಣ ಅವರ ನಿರೂಪಣೆಯ ಈ ಕಾರ್ಯಕ್ರಮಕ್ಕೆ ಸಿಕ್ಕ ಯಶಸ್ಸು ನಿರೀಕ್ಷೆಗೂ ಮೀರಿದ್ದಾಗಿತ್ತು. ಇನ್ನು ಈಗ ಮೊದಲ ಸೀಸನ್‌ಗೆ ಸಿಕ್ಕ ಭರ್ಜರಿ ಯಶಸ್ಸಿನ ಕಾರಣದಿಂದ ಈಗ ಮತ್ತೊಂದು ಹೊಸ ಸೀಸನ್ ಆರಂಭಮಾಡಲು ಶೋನ ನಿರ್ಮಾಪಕರು ತೀರ್ಮಾನ ಮಾಡಿದ್ದಾರೆ. ಮೊದಲ ಸೀಸನ್‌ಗೆ ನಟ ಬಾಲಕೃಷ್ಣ ಅವರಿಗೆ ಪ್ರತಿ ಎಪಿಸೋಡ್‌ಗೆ 25 ಲಕ್ಷ ರೂ ಸಂಭಾವನೆಯನ್ನು ನೀಡಲಾಗಿತ್ತು. ಪೂರ್ತಿ ಶೋ ನಡೆಸಿಕೊಡಲು ಅವರಿಗೆ ಐದು ಕೋಟಿ ರೂ. ನೀಡಲಾಗಿತ್ತು ಎಂದ ಹೇಳಲಾಗುತ್ತಿದೆ.
ಆದರೆ ಈಗ ಹೊಸ ಸೀಸನ್‌ಗೆ ಶೋನ ನಿರ್ಮಾಪಕರು ಬಾಲಕೃಷ್ಣ ಅವರ ಸಂಭಾವನೆಯನ್ನು ಹೆಚ್ಚಿಸುವ ನಿರ್ಧಾರವನ್ನು ಮಾಡಿದ್ದಾರಂತೆ. ಹೌದು, ಲಭ್ಯವಾಗಿರುವ ಮಾಹಿತಿಗಳ ಪ್ರಕಾರ ದಿ ಅನ್ ಸ್ಟಾಟಬಲ್ ಬಾಲಯ್ಯ ಎರಡನೇ ಸೀಸನ್‌ಗೆ ಸಿದ್ಧತೆ ಗಳನ್ನು ಶೀಘ್ರದಲ್ಲೇ ಆರಂಭಿಸಲಾಗಿದ್ದು, ಈ ಬಾರಿ ಬಾಲಕೃಷ್ಣ ಅವರಿಗೆ ಪ್ರತಿ ಎಪಿಸೋಡ್‌ಗೆ 40 ಲಕ್ಷ ರೂ. ಸಂಭಾವನೆ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ. ಈ ಮೂಲಕ ಬಾಲಕೃಷ್ಣ ಓಟಿಟಿಯಲ್ಲಿ ಸಹ ಈಗ ಹೊಸ ದಾಖಲೆ ಬರೆಯಲು ಸಜ್ಜಾಗಿದ್ದಾರೆ. ಅಭಿಮಾನಿಗಳು ಕೂಡ ಈ ಸುದ್ದಿ ತಿಳಿದು ಸಂತಸಗೊಂಡಿದ್ದಾರೆ.


Click it and Unblock the Notifications











