Upadhyaksha OTT: ಸ್ಮಾಲ್‌ ಸ್ಕ್ರೀನ್‌ಗಳಲ್ಲಿ 'ಉಪಾಧ್ಯಕ್ಷ'ನ ಹಾವಳಿ; ಎಲ್ಲಿ, ಯಾವಾಗ ಸ್ಟ್ರೀಮಿಂಗ್ ಗೊತ್ತಾ?

ಈ ವರ್ಷದ ಮೊದಲ ಹಿಟ್ ಸಿನಿಮಾ 'ಉಪಾಧ್ಯಕ್ಷ'. ಅನಿಲ್ ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಚಿಕ್ಕಣ್ ಹೀರೋ ನಟಿಸಿ ಗೆದ್ದರು. ಉಮಾಪತಿ ಶ್ರೀನಿವಾಸ್ ಗೌಡ ನಿರ್ಮಾಣದ 'ಉಪಾಧ್ಯಕ್ಷ' ಚಿತ್ರ ಜನವರಿ 26ಕ್ಕೆ ತೆರೆಕಂಡಿತ್ತು. ಚಿತ್ರದಲ್ಲಿ ಮಲೈಕಾ ನಾಯಕಿಯಾಗಿ ಚಿಕ್ಕಣ್ಣಗೆ ಜೊತೆಯಾಗಿದ್ದರು.

ಚಿಕ್ಕಣ್ಣ ಹೀರೊ ಆಗಿ ನಟಿಸಿದ 'ಉಪಾಧ್ಯಕ್ಷ' ಸಿನಿಮಾ ಒಂದು ಹಂತಕ್ಕೆ ನಿರೀಕ್ಷೆ ಮೂಡಿಸಿತ್ತು. ತೆರೆಗೆ ಬಂದು ಆ ನಿರೀಕ್ಷೆ ಉಳಿಸಿಕೊಳ್ಳುವಲ್ಲಿ ಯಶಸ್ತಿಯಾಗಿತ್ತು. ಲಾಜಿಕ್‌ ಎಲ್ಲಾ ಪಕ್ಕಕ್ಕಿಟ್ಟು ಬರೀ ಮನರಂಜನೆಯನ್ನು ಕೇಂದ್ರವಾಗಿಟ್ಟುಕೊಂಡು ಸಿನಿಮಾ ಕಟ್ಟಿಕೊಡಲಾಗಿತ್ತು. ಅರ್ಜುನ್ ಜನ್ಯಾ ಸಂಗೀತ ಚಿತ್ರಕ್ಕೆ ಪ್ಲಸ್ ಆಗಿತ್ತು. ಚಿಕ್ಕಣ್ಣ ಕಾಮಿಡಿ ಜೊತೆಗೆ ಡ್ಯಾನ್ಸ್‌ನಲ್ಲೂ ಗಮನ ಸೆಳೆದರು.

Upadhyaksha OTT release When and where to watch Chikkanna starrer comedy drama

ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕಿಂಗ್ ಸ್ಟಾರ್ ಯಶ್, ಕಿಚ್ಚ ಸುದೀಪ್, ರಶ್ಮಿಕಾ ಮಂದಣ್ಣ ಸೇರಿದಂತೆ ಹಲವರು 'ಉಪಾಧ್ಯಕ್ಷ' ಚಿತ್ರಕ್ಕೆ ಬೆಂಬಲವಾಗಿ ನಿಂತರು. ನಟ ದರ್ಶನ್ ಕೂಡ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. 10 ವರ್ಷಗಳ ಹಿಂದೆ ಶರಣ್ ಹಾಗೂ ಚಿಕ್ಕಣ್ಣ ನಟನೆಯ 'ಅಧ್ಯಕ್ಷ' ಸಿನಿಮಾ ಹಿಟ್ ಆಗಿತ್ತು. ಅದರ ಮುಂದುವರೆದ ಭಾಗ ಎನ್ನುವಂತೆ ಅದೇ ಹಾದಿಯಲ್ಲಿ ಬಂದಿದ್ದ 'ಉಪಾಧ್ಯಕ್ಷ' ಪ್ರೇಕ್ಷಕರನ್ನು ರಂಜಿಸಿದ್ದ.

'ಉಪಾಧ್ಯಕ್ಷ' ಜೊತೆಗೆ ರಕ್ಷಿತ್ ಶೆಟ್ಟಿ ನಿರ್ಮಾಣದ 'ಬ್ಯಾಚುಲರ್ ಪಾರ್ಟಿ' ಕೂಡ ಬಿಡುಗಡೆ ಆಗಿತ್ತು. ಆದರೆ ಚಿಕ್ಕಣ್ಣ ಸಿನಿಮಾ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು.

Upadhyaksha OTT release When and where to watch Chikkanna starrer comedy drama

'ಗೆಜ್ಜೆಪುರ'ದ ಚಿತು ಸಂಘದ ಉಪಾಧ್ಯಕ್ಷ ನಾರಾಯಣ ಗೌಡ ಆಗಿ ಮತ್ತೊಮ್ಮೆ ಚಿಕ್ಕಣ್ಣ ಕಮಾಲ್ ಮಾಡಿದ್ದರು. 'ಅಧ್ಯಕ್ಷ' ಚಂದ್ರಶೇಖರ್ ಗೌಡ(ಶರಣ್) ಹೀಗೆ ಬಂದು ಹಾಗೆ ಹೋಗಿದ್ದರು. ಯಶ್, ದರ್ಶನ್ ಸೇರಿದಂತೆ ಕನ್ನಡದ ಸ್ಟಾರ್ ನಟರ ರೆಫರೆನ್ಸ್ ಕೂಡ ಅಲ್ಲಲ್ಲಿ ಇತ್ತು. ಎಲ್ಲಾ ಸೇರಿ ಪ್ರೇಕ್ಷಕರನ್ನು ರಂಜಿಸುವಲ್ಲಿ ಸಿನಿಮಾ ಗೆದ್ದಿತ್ತು. ಕೆಜಿಎಫ್ ರಾಕಿಭಾಯ್ ಗೆಟಪ್‌ನಲ್ಲಿ ಚಿಕ್ಕಣ್ಣ ಎಂಟ್ರಿಗೆ ಸಖತ್ ರೆಸ್ಪಾನ್ಸ್ ಸಿಕ್ಕಿತ್ತು.

ಆರ್ಮುಗ ರವಿಶಂಕರ್ ಮತ್ತೆ ಶಿವರುದ್ರೇಗೌಡ ಆಗಿ ಅಬ್ಬರಿಸಿ ಬಳಿಕ ಕಚಗುಳಿ ಇಡುತ್ತಾರೆ. ಇನ್ನು ಸಾಧುಕೋಕಿಲ, ವೀಣಾ ಸುಂದರ್, ಧರ್ಮಣ್ಣ ಕಡೂರ್ ಕಾಮಿಡಿ 'ಉಪಾಧ್ಯಕ್ಷ' ಚಿತ್ರದಲ್ಲಿ ಹೈಲೆಟ್ ಎನಿಸಿಕೊಂಡಿದೆ. ಚಿಕ್ಕಣ್ಣ ಹಾಗೂ ಮಲೈಕಾ ಕೆಮೆಸ್ಟ್ರಿ ವರ್ಕ್ ಆಗಿತ್ತು. ಬಜೆಟ್‌ಗೆ ಹೋಲಿಸಿದರೆ ಸಿನಿಮಾ ಕಲೆಕ್ಷನ್ ಚೆನ್ನಾಗಿಯೇ ಇತ್ತು. 'ಉಪಾಧ್ಯಕ್ಷ' ಈ ವರ್ಷದ ಮೊದಲ ಹಿಟ್ ಎನಿಸಿಕೊಂಡಿದೆ.

'ಉಪಾಧ್ಯಕ್ಷ' ಸಿನಿಮಾ ಫಸ್ಟ್ ವೀಕೆಂಡ್‌ನಲ್ಲೇ 5.27 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದೆ ಎನ್ನಲಾಗಿತ್ತು. ನಟ ಚಿಕ್ಕಣ್ಣ ಕೂಡ ಫಸ್ಟ್ ವೀಕೆಂಡ್ ಹಾಗೂ ಫಸ್ಟ್ ವೀಕ್ ಕಲೆಕ್ಷನ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಕೊಟ್ಟಿದ್ದರು. 200ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ಸಿನಿಮಾ 7.59 ಕೋಟಿ ರೂ. ಗಳಿಸಿಕೆ ಎಂದಿದ್ದರು. ಆದರೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಕಲೆಕ್ಷನ್ ಬಗ್ಗೆ ಮಾತನಾಡಲಿಲ್ಲ. ಒಟ್ನಲ್ಲಿ ಹಾಕಿದ ಬಂಡವಾಳಕ್ಕಿಂತ ಸಿನಿಮಾ ಉತ್ತಮ ಗಳಿಕೆ ಕಂಡಿರುವ ಲೆಕ್ಕಚಾರವಿದೆ. ಇನ್ನು ಹೀರೊ ಆಗಿ ಚಿಕ್ಕಣ್ಣ ಕೂಡ ಮೊದಲ ಪ್ರಯತ್ನದಲ್ಲಿ ಗೆದ್ದಿದ್ದಾರೆ.

ಸದ್ಯ 'ಉಪಾಧ್ಯಕ್ಷ' ಸಿನಿಮಾ ಓಟಿಟಿ ಸ್ಟ್ರೀಮಿಂಗ್‌ಗೆ ಸಜ್ಜಾಗಿದೆ. ಶಿವರಾತ್ರಿ ಹಬ್ಬದ ಸಂಭ್ರಮದಲ್ಲೇ ನಾಳೆ(ಮಾರ್ಚ್ 8) ಸಿನಿಮಾ ಸನ್‌ನೆಕ್ಸ್ಟ್‌ನಲ್ಲಿ ವೀಕ್ಷಣೆಗೆ ಸಿಗಲಿದೆ. ಶೀಘ್ರದಲ್ಲೇ ಉದಯ ಟಿವಿಯಲ್ಲಿ ಸಿನಿಮಾ ಪ್ರೀಮಿಯರ್ ಆಗಲಿದೆ.

ಥಿಯೇಟರ್‌ಗಳಲ್ಲಿ 'ಉಪಾಧ್ಯಕ್ಷ'ನ ಕಿತಾಪತಿಯನ್ನು ನೋಡಿದವರು ನೋಡದವರು ಕೂಡ ಓಟಿಟಿಯಲ್ಲಿ ನೋಡಿ ಎಂಜಾಯ್ ಮಾಡಬಹುದು. ಕನ್ನಡದಲ್ಲಿ ಕಾಮಿಡಿ ಸಿನಿಮಾಗಳ ಸಂಖ್ಯೆ ಕಮ್ಮಿಯಿದೆ. ಆಗೊಮ್ಮೆ ಈಗೊಮ್ಮೆ ಇಂತಹ ಪ್ರಯತ್ನ ನಡೆಯುತ್ತದೆ. ಹಬ್ಬದ ಸಂಭ್ರಮದಲ್ಲಿ ನೀವು ಮನೆಯಲ್ಲೇ ಸಿನಿಮಾ ನೋಡಿ ಎಂಜಾಯ್ ಮಾಡಿ.

More from Filmibeat

English summary
Upadhyaksha OTT Release Date: Platform, Cast, Story.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X