ಒಟಿಟಿಗೆ ಬಂತು 'ಉಪ್ಪೆನ': ಬಿಡುಗಡೆ ದಿನಾಂಕ ಪ್ರಕಟ

ಇತ್ತೀಚೆಗಷ್ಟೆ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿ ಸೂಪರ್-ಡೂಪರ್ ಹಿಟ್ ಆಗಿದ್ದಲ್ಲದೆ ವಿಮರ್ಶಕರಿಂದಲೂ ಮೆಚ್ಚುಗೆ ಗಳಿಸಿಕೊಂಡ ಹೊಸಬರ ತೆಲುಗು ಸಿನಿಮಾ 'ಉಪ್ಪೆನ' ಇದೀಗ ಒಟಿಟಿಗೆ ಬರಲಿದೆ.

'ಉಪ್ಪೆನ' ಸಿನಿಮಾದ ಡಿಜಿಟಲ್ ಪ್ರಸಾರ ಹಕ್ಕನ್ನು ಒಟಿಟಿ ದೈತ್ಯ ನೆಟ್‌ಫ್ಲಿಕ್ಸ್ ಖರೀದಿಸಿದೆ. ನೆಟ್‌ಫ್ಲಿಕ್ಸ್‌ನಲ್ಲಿ 'ಉಪ್ಪೆನ' ಸಿನಿಮಾವು ಏಪ್ರಿಲ್ 14 ರಂದು ಬಿಡುಗಡೆ ಆಗಲಿದೆ. ಈ ಬಗ್ಗೆ ನೆಟ್‌ಫ್ಲಿಕ್ಸ್‌ ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.

ಏಪ್ರಿಲ್‌ ತಿಂಗಳಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆಗಲಿರುವ ಸಿನಿಮಾ, ವೆಬ್ ಸರಣಿಗಳ ಪಟ್ಟಿಯನ್ನು ನೆಟ್‌ಫ್ಲಿಕ್ಸ್ ಪ್ರಕಟಿಸಿದ್ದು, ಹಲವು ಹಾಲಿವುಡ್, ಇತರೆ ಭಾಷೆಗಳ ಸಿನಿಮಾ, ವೆಬ್ ಸರಣಿಗಳ ಜೊತೆಗೆ 'ಉಪ್ಪೆನ'ದ ಹೆಸರು ಸಹ ಪಟ್ಟಿಯಲ್ಲಿದೆ.

 Uppena Movie Will Release On Netflix On April 14

'ಉಪ್ಪೆನ' ಸಿನಿಮಾವು ತೆಲುಗಿನ ಒಟಿಟಿ 'ಆಹಾ'ದಲ್ಲಿ ಬಿಡುಗಡೆ ಆಗಲಿದೆ ಎನ್ನಲಾಗಿತ್ತು. ಆದರೆ ಅದು ಸುಳ್ಳಾಗಿ ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದೆ.

'ಉಪ್ಪೆನ' ಸಿನಿಮಾದಲ್ಲಿ ಮೆಗಾಸ್ಟಾರ್ ಕುಟುಂಬದ ಸಾಯಿ ಧರಮ್ ತೇಜ್ ನಾಯಕನಾಗಿ ನಟಿಸಿದ್ದರೆ ಕನ್ನಡತಿ ಕೃತಿ ಶೆಟ್ಟಿ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾದಲ್ಲಿ ವಿಜಯ್ ಸೇತುಪತಿ ಸಹ ಇದ್ದಾರೆ. ಸಿನಿಮಾವನ್ನು ಬುಚ್ಚಿ ಬಾಬು ಸನಾ ನಿರ್ದೇಶನ ಮಾಡಿದ್ದು, ಇದು ಅವರ ಮೊದಲ ಸಿನಿಮಾ. ನಾಯಕ-ನಾಯಕ ಪಾತ್ರಧಾರಿಗಳಿಗೂ ಇದು ಮೊದಲ ಸಿನಿಮಾ.

ಫೆಬ್ರವರಿ 12 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾ ಭಾರಿ ಹಿಟ್ ಆಗಿತ್ತು. ಗಳಿಕೆಯಲ್ಲಿ ಕೆಲವು ದಾಖಲೆಗಳನ್ನು ಸಹ ಮುರಿಯಿತು. ಸಿನಿಮಾದ ನಾಯಕಿ ಕನ್ನಡತಿ ಕೃತಿ ಶೆಟ್ಟಿ ಅಂತೂ ಭಾರಿ ಖ್ಯಾತಿ ಗಳಿಸಿದರು. ಕೃತಿ ಶೆಟ್ಟಿ ಮುಂದೆ ಅವಕಾಶಗಳ ರಾಶಿಯೇ ಬಂದು ಬೀಳುವಂತೆ ಮಾಡಿತು 'ಉಪ್ಪೆನ'.

More from Filmibeat

English summary
Telugu super hit movie Uppena is going to release on Netflix on April 14. Intialy movie released in theaters on February 12 this year.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X