ಸೈಲೆಂಟ್‌ ಆಗಿ ಒಟಿಟಿಯಲ್ಲಿ ಬಿಡುಗಡೆ ಆದ ಪವನ್ ಕಲ್ಯಾಣ್ ಸಿನಿಮಾ

ನಟ ಪವನ್ ಕಲ್ಯಾಣ್ ಏನು ಮಾಡಿದರೂ ಸುದ್ದಿಯಾಗುತ್ತದೆ. ಕೋಟ್ಯಂತರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಪವನ್ ಕಲ್ಯಾಣ್‌ಗೆ ಇರುವ ಮಾರುಕಟ್ಟೆ ಮೌಲ್ಯ ಸಹ ನೂರಾರು ಕೋಟಿಗಳದ್ದು.

ಆದರೆ ಪವನ್ ಕಲ್ಯಾಣ್ ಹೊಸ ಸಿನಿಮಾವೊಂದು ಯಾವುದೇ ಸದ್ದು ಗದ್ದಲವಿಲ್ಲದೆ, ಹೆಚ್ಚು ಜಾಹೀರಾತುಗಳು ಪ್ರಚಾರಗಳು ಇಲ್ಲದೆ ಸೈಲೆಂಟ್ ಆಗಿ ಒಟಿಟಿಯಲ್ಲಿ ಬಿಡುಗಡೆ ಆಗಿದೆ.

ಏಪ್ರಿಲ್ 9 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದ ವಕೀಲ್ ಸಾಬ್ ಸಿನಿಮಾ ನಿನ್ನೆಯೇ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿದೆ. ಸಿನಿಮಾ ಬಿಡುಗಡೆ ಆಗಿ ತಿಂಗಳಾಗುವ ಮುಂಚೆಯೇ ಒಟಿಟಿಗೆ ಮಾರಲಾಗಿದೆ.

Vakeel Saab Movie Released On Amazon Prime

ಏಪ್ರಿಲ್ 9 ರಂದು ಬಿಡುಗಡೆ ಆಗಿದ್ದ 'ವಕೀಲ್ ಸಾಬ್' ಚಿತ್ರಮಂದಿರಗಳ ಮೇಲೆ ನಿರ್ಬಂಧ ಇದ್ದಾಗ್ಯೂ ಚೆನ್ನಾಗಿ ಪ್ರದರ್ಶನ ಕಾಣುತ್ತಿತ್ತು. ಆದರೆ ಹಲವು ರಾಜ್ಯಗಳಲ್ಲಿ ಚಿತ್ರಮಂದಿರಗಳನ್ನು ಪೂರ್ಣ ಬಂದ್ ಮಾಡಿದ ಕಾರಣ ಸಿನಿಮಾವನ್ನು ಒಟಿಟಿಗೆ ಬಿಡುಗಡೆ ಮಾಡಲಾಗಿದೆ.

ಕೇವಲ 20 ದಿನಗಳಲ್ಲಿ 'ವಕೀಲ್ ಸಾಬ್' ಸಿನಿಮಾವು 86 ಕೋಟಿಗೂ ಹೆಚ್ಚು ಹಣ ಗಳಿಸಿದೆ. ಅದು ಮಾತ್ರವೇ ಅಲ್ಲದೆ ರಿಲೀಸ್‌ಗೆ ಮುಂದೆ ಸಹ ಸ್ಯಾಟಲೈಟ್ ಹಾಗೂ ಆಡಿಯೋ ಹಕ್ಕುಗಳ ಮೂಲಕವು ದೊಡ್ಡ ಮೊತ್ತದ ಹಣವನ್ನೇ ಸಿನಿಮಾ ಗಳಿಸಿದೆ.

ಇದೀಗ ಅಮೆಜಾನ್‌ ಪ್ರೈಂನಲ್ಲಿ ಬಿಡುಗಡೆ ಆಗಿದ್ದು, ಸಿನಿಮಾದ ಡಿಜಿಟಲ್ ಹಕ್ಕನ್ನು ಅಮೆಜಾನ್‌ ಪ್ರೈಂ ದೊಡ್ಡ ಮೊತ್ತಕ್ಕೆ ಖರೀದಿಸಿದೆ ಎನ್ನಲಾಗುತ್ತಿದೆ.

'ವಕೀಲ್ ಸಾಬ್' ಸಿನಿಮಾವು ಹಿಂದಿಯ 'ಪಿಂಕ್' ಸಿನಿಮಾದ ರೀಮೇಕ್ ಆಗಿದ್ದು, ಪವನ್ ಕಲ್ಯಾಣ್ ಮ್ಯಾನರಿಸಂ ಹಾಗೂ ಅಭಿಮಾನಿಗಳನ್ನು ಗಮನದಲ್ಲಿಟ್ಟುಕೊಂಡು ಚಿತ್ರಕತೆಯನ್ನು ಬದಲಾವಣೆ ಮಾಡಲಾಗಿದೆ. ಸಿನಿಮಾದ ನಿರ್ದೇಶನವನ್ನು ವೇಣು ಶ್ರೀರಾಮ್ ಮಾಡಿದ್ದಾರೆ. ನಿರ್ಮಾಣ ಮಾಡಿರುವುದು ದಿಲ್ ರಾಜು ಹಾಗೂ ಸಿರಿಶ್. ಸಿನಿಮಾದಲ್ಲಿ ಪವನ್ ಜೊತೆಗೆ ಪ್ರಕಾಶ್ ರೈ, ನಿವೇತಾ ಥಾಮಸ್, ಅಂಜಲಿ, ಅನನ್ಯಾ ನಾಗಲ್ಲ ಹಾಗೂ ಅತಿಥಿ ಪಾತ್ರದಲ್ಲಿ ಶ್ರುತಿ ಹಾಸನ್ ನಟಿಸಿದ್ದಾರೆ.

More from Filmibeat

English summary
Pawan Kalyan's Vakeel Saab movie released on Amazon prime. Movie collected more than 86 crore rs in theaters.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X