OTT Releases This Week: ವ್ಯಾಲಂಟೈನ್ಸ್ ಡೇ ಸಂಭ್ರಮದಲ್ಲಿ ಬ್ಲಾಕ್‌ಬಸ್ಟರ್ ಚಿತ್ರಗಳು ಓಟಿಟಿಗೆ ಎಂಟ್ರಿ; ಇಲ್ಲಿದೆ ಲಿಸ್ಟ್
ಸಿನಿಪ್ರೇಮಿಗಳಿಗೆ ವ್ಯಾಲಂಟೈನ್ಸ್ ಡೇ ಸಂಭ್ರಮದಲ್ಲಿ ಚಿತ್ರಮಂದಿರ ಹಾಗೂ ಓಟಿಟಿಯಲ್ಲಿ ಇಂಟ್ರೆಸ್ಟಿಂಗ್ ಸಿನಿಮಾಗಳ ಉಡುಗೊರೆ ಸಿಗುತ್ತಿದೆ. 'ಸೀತಾ ಪಯಣ' ಸೇರಿ ಒಂದಷ್ಟು ಸಿನಿಮಾಗಳು ಈ ವಾರ ಪ್ರೇಕ್ಷಕೆ ಮುಂದೆ ಬರ್ತಿವೆ. ಇತ್ತ ಓಟಿಟಿಯಲ್ಲಿ ಕೂಡ 15ಕ್ಕೂ ಅಧಿಕ ಸಿನಿಮಾಗಳು ಸ್ಟ್ರೀಮಿಂಗ್ ಆಗ್ತಿವೆ.
ಕಳೆದ ವಾರ 'ದಿ ರಾಜಾಸಾಬ್', 'ಪರಾಶಕ್ತಿ' ಸೇರಿ ಕೆಲ ಸಿನಿಮಾಗಳು ಓಟಿಟಿಗೆ ಬಂದು ಭರ್ಜರಿ ರೆಸ್ಪಾನ್ಸ್ ಗಿಟ್ಟಿಸಿಕೊಳ್ತಿವೆ. ಚಿತ್ರಮಂದಿರಗಳಲ್ಲಿ ಈ ಎರಡೂ ಚಿತ್ರಗಳಿಗೆ ನಿರಾಸೆ ಎದುರಾಗಿತ್ತು. ಸಂಕ್ರಾಂತಿ ಸಂಭ್ರಮದಲ್ಲಿ ಕೂಡ ದೊಡ್ಡಮಟ್ಟದಲ್ಲಿ ಪ್ರೇಕ್ಷಕರು ಸಿನಿಮಾ ನೋಡಲಿಲ್ಲ. ಆದರೆ ಓಟಿಟಿಯಲ್ಲಿ ದಾಖಲೆಯ ವೀಕ್ಷಣೆ ಕಾಣುತ್ತಿವೆ. 'ಪರಾಶಕ್ತಿ' ಚಿತ್ರದ ಅಂತೂ ಜೀ-5 ತಮಿಳು ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದೆ.

ಇನ್ನು ಈ ವಾರ ವಿವಿಧ ಓಟಿಟಿ ವೇದಿಕೆಗಳಲ್ಲಿ ಇಂಟ್ರೆಸ್ಟಿಂಗ್ ಸಿನಿಮಾ ಹಾಗೂ ವೆಬ್ ಸೀರಿಸ್ ಬಿಡುಗಡೆ ಆಗುತ್ತಿದೆ. ಅದರಲ್ಲಿ ಬ್ಲಾಕ್‌ಬಸ್ಟರ್ 'ಮನ ಶಂಕರವರಪ್ರಸಾದ್‌ಗಾರು' ಸಿನಿಮಾ ಕೂಡ ಇರುವುದು ವಿಶೇಷ.
1. 'ಮನ ಶಂಕರವರಪ್ರಸಾದ್‌ಗಾರು'
ಅನಿಲ್ ರಾವಿಪುಡಿ ನಿರ್ದೇಶನದ ಫ್ಯಾಮಿಲಿ ಕಾಮಿಡಿ ಡ್ರಾಮಾ 'ಮನ ಶಂಕರವರಪ್ರಸಾದ್‌ಗಾರು' ಸುಗ್ಗಿ ಸಂಭ್ರಮದಲ್ಲಿ ತೆರೆಗಪ್ಪಳಿಸಿ ದಾಖಲೆ ಬರೆದಿತ್ತು. 300 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿ ಸಂಚಲನ ಸೃಷ್ಟಿಸಿತ್ತು. ಬಹಳ ವರ್ಷಗಳ ಬಳಿಕ ಚಿರಂಜೀವಿಗೆ ಒಳ್ಳೆ ಬ್ರೇಕ್ ಕೊಟ್ಟಿದೆ. ಚಿರು ಜೋಡಿಯಾಗಿ ನಯನತಾರಾ ಮಿಂಚಿದ್ದಾರೆ.

ಸಂಕ್ರಾಂತಿ ಸಂಭ್ರಮದಲ್ಲಿ ಬಂದ ಅನಿಲ್ ರಾವಿಪುಡಿ ಚಿತ್ರಗಳು ಹಿಟ್ ಲಿಸ್ಟ್ ಸೇರಿವೆ. ಈ ವರ್ಷ ಅದೇ ಮ್ಯಾಜಿಕ್ ಮುಂದುವರೆದಿದೆ. ವಿಕ್ಟರಿ ವೆಂಕಟೇಶ್ ಕೂಡ ಅತಿಥಿ ಪಾತ್ರದಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ಕನ್ನಡ ಸೇರಿ 7 ಭಾಷೆಗಳಿಗೆ ಡಬ್ ಆಗಿ ಸಿನಿಮಾ ಫೆಬ್ರವರಿ 11ರಂದು ಜೀ-5ನಲ್ಲಿ ಬಿಡುಗಡೆ ಆಗಲಿದೆ.
2. ಬೇಬಿ ಗರ್ಲ್
ನಿವಿನ್ ಪೌಲಿ ನಟನೆಯ 'ಬೇಬಿ ಗರ್ಲ್' ಸಿನಿಮಾ 15 ದಿನಕ್ಕೆ ಓಟಿಟಿಗೆ ಬರ್ತಿದೆ. ಮೆಡಿಕಲ್ ಥ್ರಿಲ್ಲರ್ ಸಿನಿಮಾ ಜನವರಿ 23ರಂದು ತೆರೆಗೆ ಬಂದಿತ್ತು. ಸೋನಿಲಿವ್ ಓಟಿಟಿಗೆ ವೇದಿಕೆಯಲ್ಲಿ ಫೆಬ್ರವರಿ 12ರಂದು ಸಿನಿಮಾ ಸ್ಟ್ರೀಮಿಂಗ್ ಆರಂಭಿಸಲಿದೆ. ಅರುಣ್ ವರ್ಮಾ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು ಲಿಜೊಮೊಲ್ ಜೋಸ್, ಸಂಗೀತ್ ಪ್ರತಾಪ್, ಅಭಿಮನ್ಯು ತಿಲಕನ್ ಸೇರಿ ದೊಟ್ಟ ತಾರಾಗಣ ಚಿತ್ರದಲ್ಲಿದೆ. ಕನ್ನಡಕ್ಕೂ ಡಬ್ ಆಗಿ ಸಿನಿಮಾ ಓಟಿಟಿಯಲ್ಲಿ ವೀಕ್ಷಣೆಗೆ ಸಿಗಲಿದೆ.
3. ಅನಗನಗ ಒಕ ರೋಜು
ಸಂಕ್ರಾಂತಿ ಸಂಭ್ರಮದಲ್ಲಿ ಬಿಡುಗಡೆಯಾಗಿದ್ದ 'ಅನಗನಗ ಒಕ ರೋಜು' ಸಿನಿಮಾ ಕೂಡ ಹಿಟ್ ಆಗಿತ್ತು. ಮಾರಿ ನಿರ್ದೇಶನದ ಈ ಕಾಮಿಡಿ ಡ್ರಾಮಾ ಚಿತ್ರದಲ್ಲಿ ನವೀನ್ ಪೌಲಿಶೆಟ್ಟಿ, ಮೀನಾಕ್ಷಿ ಚೌಧರಿ ಸೇರಿ ದೊಡ್ಡ ತಾರಾಗಣವಿದೆ. ಸಿನಿಮಾ 50 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿರುವುದಾಗಿ ಹೇಳಲಾಗ್ತಿದೆ.
ಅಮೇಜಾನ್ ಪ್ರೈಂ
1. ಕ್ರಾಸ್ ಸೀಸನ್ 2(ಇಂಗ್ಲೀಷ್ ವೆಬ್ ಸೀರಿಸ್) ಫೆಬ್ರವರಿ 11
ಸನ್ ನೆಕ್ಸ್ಟ್
1. ಸೂರ್ಯ: ಪವರ್ ಆಫ್ ಲವ್(ಕನ್ನಡ ಸಿನಿಮಾ) ಫೆಬ್ರವರಿ 13
ಹಾಟ್‌ಸ್ಟರ್
1. ದಿ ಕಾಂಜೂರಿಂಗ್: ಲಾಸ್ಟ್ ರೈಟ್ಸ್(ಹಾಲಿವುಡ್ ಸಿನಿಮಾ) ಫೆಬ್ರವರಿ 13
2. ಪ್ರಿಡೇಟರ್: ಬ್ಯಾಡ್‌ಲ್ಯಾಂಡ್ಸ್(ಹಾಲಿವುಡ್ ಸಿನಿಮಾ) ಫೆಬ್ರವರಿ 12
ನೆಟ್ ಫ್ಲಿಕ್ಸ್
1. ಲವ್ ಈಸ್ ಬ್ಲೈಂಡ್ ಸೀಸನ್ 10 (ಇಂಗ್ಲೀಷ್ ವೆಬ್ ಸೀರಿಸ್) ಫೆಬ್ರವರಿ 11
2. ತಲೈವರ್ ತಂಬಿ ತಲೆಮಯಿಲ್(ತಮಿಳು ಸಿನಿಮಾ) ಫೆಬ್ರವರಿ 12
3. ಜೋಸ್ ಕಾಲೇಜ್ ರೋಡ್ ಟ್ರಿಪ್(ಇಂಗ್ಲೀಷ್ ಸಿನಿಮಾ) ಫೆಬ್ರವರಿ 13
4. ಮ್ಯೂಸಿಯಂ ಆಫ್ ಇನ್ನೊಸೆನ್ಸ್(ಟರ್ಕಿಶ್ ಸೀರಿಸ್) ಫೆಬ್ರವರಿ 13
5. ದಿ ಆರ್ಟ್ ಆಫ್ ಸಾರಾ(ಕೊರಿಯನ್ ಸೀರಿಸ್) ಫೆಬ್ರವರಿ 13
6. ಕೊಹ್ರಾ ಸೀಸನ್ 2(ಹಿಂದಿ ಸೀರಿಸ್) ಫೆಬ್ರವರಿ 11


Click it and Unblock the Notifications











