twitter
    For Quick Alerts
    ALLOW NOTIFICATIONS  
    For Daily Alerts

    ವನ್ನಿಯರ್ ಸಮುದಾಯದಿಂದ 'ಜೈ ಭೀಮ್'ಗೆ ನೊಟೀಸ್: 5 ಕೋಟಿ ಪರಿಹಾರಕ್ಕೆ ಒತ್ತಾಯ

    |

    ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿರುವ 'ಜೈ ಭೀಮ್' ಸಿನಿಮಾಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ನಿಜ ಘಟನೆಯನ್ನು ಆಧರಿಸಿ ನಿರ್ಮಿಸಿರುವ ಈ ಸಿನಿಮಾದಲ್ಲಿ ಸೂರ್ಯ ನಾಯಕ ನಟನಾಗಿ ನಟಿಸಿದ್ದಾರೆ. ಸಿನಿಮಾದಲ್ಲಿ ಅಸ್ಪೃಶ್ಯ ಸಮುದಾಯದ ಮೇಲೆ ನಡೆವ ದಬ್ಬಾಳಿಕೆ, ದೌರ್ಜನ್ಯದ ಹಸಿ-ಹಸಿ ಚಿತ್ರಣವಿದೆ.

    ಸಿನಿಮಾಕ್ಕೆ ಐಎಂಡಿಬಿಯು ಅತ್ಯುತ್ತಮ ರೇಟಿಂಗ್ ನೀಡಿದೆ. ಹಾಲಿವುಡ್‌ನ ಎವರ್‌ಗ್ರೀನ್ ಸಿನಿಮಾ 'ಶಾಷಂಕ್ ರಿಡಂಪ್ಷನ್‌'ಗಿಂತಲೂ ಹೆಚ್ಚಿನ ರೇಟಿಂಗ್ ಪಡೆದುಕೊಂಡಿದೆ. ಇತ್ತೀಚೆಗೆ ಅಮೆಜಾನ್ ಪ್ರೈಂನಲ್ಲಿ ಅತಿ ಹೆಚ್ಚು ವೀಕ್ಷಿಸಲಾದ ಸಿನಿಮಾ ಎಂಬ ದಾಖಲೆಯೂ 'ಜೈ ಭೀಮ್' ಪಾಲಾಗಿದೆ.

    ಸಿನಿಮಾದ ಬಗ್ಗೆ ಎಲ್ಲರೂ ಪ್ರಶಂಸೆಯ ಮಾತುಗಳನ್ನಾಡುತ್ತಿದ್ದಾರೆ. ಆದರೆ ತಮಿಳುನಾಡಿನ ವನ್ನಿಯರ್ ಸಮುದಾಯಕ್ಕೆ 'ಜೈ ಭೀಮ್'ದ ಮೇಲೆ ಅಸಮಾಧಾನ ಉಂಟಾಗಿದೆ. ಸಿನಿಮಾದಲ್ಲಿ ನಮ್ಮ ಸಮುದಾಯವನ್ನು ಕೆಟ್ಟ ರೀತಿಯಲ್ಲಿ ಬಿಂಬಿಸಲಾಗಿದೆ ಎಂದು ಆರೋಪಿಸಿದೆ.

    'ಜೈ ಭೀಮ್' ಸಿನಿಮಾದಲ್ಲಿ ಹಿಂದುಳಿದ ಜಾತಿಯ ವ್ಯಕ್ತಿಯೊಬ್ಬನಿಗೆ ಅವನು ಮಾಡದ ತಪ್ಪನ್ನು ಒಪ್ಪಿಕೊಳ್ಳುವಂತೆ ಪೊಲೀಸ್ ಠಾಣೆಯಲ್ಲಿ ಚಿತ್ರಹಿಂಸೆ ನೀಡಿ ಕೊಲ್ಲಲಾಗುತ್ತದೆ. ಆ ವ್ಯಕ್ತಿಗೆ ಹಿಂಸೆ ನೀಡುವ, ಜೀವ ಹೋಗಲು ಕಾರಣವಾದ ಪೊಲೀಸ್ ಅನ್ನು ಸಿಂಬಾಲಿಕ್ ಆಗಿ ವನ್ನಿಯರ್ ಸಮುದಾಯಕ್ಕೆ ಸೇರಿದವನು ಎಂದು ತೋರಿಸಲಾಗಿದೆ. ಇದಕ್ಕೆ ವನ್ನಿಯರ್ ಸಮುದಾಯದ ಸಂಘವು ಆಕ್ಷೇಪ ವ್ಯಕ್ತಪಡಿಸಿದೆ.

    ವಿಲನ್ ಪಾತ್ರಧಾರಿ ವನ್ನಿಯರ್ ಸಮುದಾಯದವನೆಂದು ಬಿಂಬಿಸಲಾಗಿದೆ

    ವಿಲನ್ ಪಾತ್ರಧಾರಿ ವನ್ನಿಯರ್ ಸಮುದಾಯದವನೆಂದು ಬಿಂಬಿಸಲಾಗಿದೆ

    'ಜೈ ಭೀಮ್' ಸಿನಿಮಾದಲ್ಲಿ ಹಿಂದುಳಿದ ಜಾತಿಯ ವ್ಯಕ್ತಿಯೊಬ್ಬನಿಗೆ ಅವನು ಮಾಡದ ತಪ್ಪನ್ನು ಒಪ್ಪಿಕೊಳ್ಳುವಂತೆ ಪೊಲೀಸ್ ಠಾಣೆಯಲ್ಲಿ ಚಿತ್ರಹಿಂಸೆ ನೀಡಿ ಕೊಲ್ಲಲಾಗುತ್ತದೆ. ಆ ವ್ಯಕ್ತಿಗೆ ಹಿಂಸೆ ನೀಡುವ, ಜೀವ ಹೋಗಲು ಕಾರಣವಾದ ಪೊಲೀಸ್ ಅನ್ನು ಸಿಂಬಾಲಿಕ್ ಆಗಿ ವನ್ನಿಯರ್ ಸಮುದಾಯಕ್ಕೆ ಸೇರಿದವನು ಎಂದು ತೋರಿಸಲಾಗಿದೆ. ಇದಕ್ಕೆ ವನ್ನಿಯರ್ ಸಮುದಾಯದ ಸಂಘವು ಆಕ್ಷೇಪ ವ್ಯಕ್ತಪಡಿಸಿದೆ.

    ವನ್ನಿಯರ್ ಸಮುದಾಯದ ವ್ಯಕ್ತಿ ಎಂದು ಸೂಚಿಸಲಾಗಿದೆ: ಆರೋಪ

    ವನ್ನಿಯರ್ ಸಮುದಾಯದ ವ್ಯಕ್ತಿ ಎಂದು ಸೂಚಿಸಲಾಗಿದೆ: ಆರೋಪ

    ''ಸಿನಿಮಾವು ನಿಜ ಘಟನೆಗಳನ್ನು ಆಧರಿಸಿದೆ, ನಿಜವಾದ ವ್ಯಕ್ತಿಗಳನ್ನು ಪಾತ್ರಗಳು ಪ್ರತಿನಿಧಿಸಿವೆ. ಆದರೆ ರಾಜಕ್ಕುನ್ ಪಾತ್ರಕ್ಕೆ ಚಿತ್ರಹಿಂಸೆ ನೀಡುವ ಪೊಲೀಸ್ ಪಾತ್ರಧಾರಿಯ ಹೆಸರನ್ನು ಬೇಕೆಂದೇ ಗುರುಮೂರ್ತಿ ಎಂದು ಬದಲಾಯಿಸಲಾಗಿದೆ. ಅಲ್ಲದೆ ಆತ ಕಾಣಿಸಿಕೊಳ್ಳುವ ದೃಶ್ಯದಲ್ಲಿ ಅಗ್ನಿ ಕುಂಡ ಚಿತ್ರ ಹೊಂದಿರುವ ಕ್ಯಾಲೆಂಡರ್ ಒಂದನ್ನು ಇಡಲಾಗಿದೆ. ಸಬ್ ಇನ್‌ಸ್ಪೆಕ್ಟರ್ ಪಾತ್ರಧಾರಿ ವನ್ನಿಯರ್ ಸಮುದಾಯದವನು ಎಂದು ಸೂಚಿಸಲೆಂದೇ ಹೀಗೆ ಮಾಡಲಾಗಿದೆ'' ಎಂದು ವನ್ನಿಯರ್ ಸಮುದಾಯದ ಅಧ್ಯಕ್ಷ ಆರೋಪಿಸಿದ್ದಾರೆ.

    ''ಲಾಕಪ್‌ ಡೆತ್‌ಗೆ ಕಾರಣವಾದ ಅಧಿಕಾರಿ ಹೆಸರು ಆಂಟೊನಿಸ್ವಾಮಿ''

    ''ಲಾಕಪ್‌ ಡೆತ್‌ಗೆ ಕಾರಣವಾದ ಅಧಿಕಾರಿ ಹೆಸರು ಆಂಟೊನಿಸ್ವಾಮಿ''

    ''ನಿಜ ಘಟನೆಯಲ್ಲಿ ಲಾಕಪ್‌ ಡೆತ್‌ಗೆ ಕಾರಣವಾದ ಪೊಲೀಸ್ ಅಧಿಕಾರಿ ಹೆಸರು ಆಂಟೊನಿಸ್ವಾಮಿ. ಆತ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದವನಾಗಿದ್ದ. ಆದರೆ 'ಜೈ ಭೀಮ್' ಸಿನಿಮಾದಲ್ಲಿ ಉದ್ದೇಶಪೂರ್ವಕವಾಗಿ ಆತನ ಸಮುದಾಯವನ್ನು ಬದಲಾಯಿಸಿ ವನ್ನಿಯರ್ ಸಮುದಾಯದ ಬಗ್ಗೆ ಕೆಟ್ಟ ಅಭಿಪ್ರಾಯ ಬರುವಂತೆ ಮಾಡಲಾಗಿದೆ'' ಎಂದಿದ್ದಾರೆ. ಸಮುದಾಯಕ್ಕೆ ಮಾಡಲಾಗಿರುವ ಮಾನಹಾನಿಗೆ 5 ಕೋಟಿ ಪರಿಹಾರ ನೀಡಬೇಕು ಎಂದು ವನ್ನಿಯರ್ ಸಂಘದ ಅಧ್ಯಕ್ಷ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ಸಿನಿಮಾದ ನಾಯಕ ಹಾಗೂ ನಿರ್ಮಾಪಕರೂ ಆಗಿರುವ ನಟ ಸೂರ್ಯಾ ಹಾಗೂ ಅಮೆಜಾನ್ ಪ್ರೈಂಗೆ ನೊಟೀಸ್ ನೀಡಲಾಗಿದೆ.

    ನಿಜ ಘಟನೆ ಆಧರಿಸಿದ ಸಿನಿಮಾ

    ನಿಜ ಘಟನೆ ಆಧರಿಸಿದ ಸಿನಿಮಾ

    'ಜೈ ಭೀಮ್' ಸಿನಿಮಾವು 1993ರಲ್ಲಿ ತಮಿಳುನಾಡಿನಲ್ಲಿ ನಡೆದ ನಿಜ ಘಟನೆಯನ್ನು ಆಧರಿಸಿ ನಿರ್ಮಾಣ ಮಾಡಲಾಗಿದೆ. ಇರುಳರ್ ಸಮುದಾಯದ ವ್ಯಕ್ತಿಯೊಬ್ಬನ ಮೇಲೆ ಆ ಊರಿನ ಪಂಚಾಯಿತಿ ಅಧ್ಯಕ್ಷನ ಮನೆಯಲ್ಲಿ ನಾಲ್ಕು ಗ್ರಾಂ ಚಿನ್ನ ಕದ್ದ ಆರೋಪದ ಮೇಲೆ ಪೊಲೀಸರು ಬಂಧಿಸಿರುತ್ತಾರೆ. ಆತ ಅಲ್ಲಿಂದ ನಾಪತ್ತೆಯಾಗುತ್ತಾನೆ. ಆತನ ಪತ್ನಿ ಸೆಂಗಿನಿ ಮದ್ರಾಸ್ ಹೈಕೋರ್ಟ್‌ನ ಚಂದ್ರು ಅವರನ್ನು ಸಂಪರ್ಕಿಸಿ ನ್ಯಾಯ ಕೊಡಿಸುವಂತೆ ಕೇಳುತ್ತಾಳೆ. ವಕೀಲ ಚಂದ್ರು ಹೇಬಿಯಸ್ ಕಾರ್ಪಸ್ ಅರ್ಜಿ ದಾಖಲಿಸಿ ನಾಪತ್ತೆಯಾದ ರಾಜಕ್ಕಣ್ಣು ಹುಡುಕಾಟ ಆರಂಭಿಸುತ್ತಾರೆ. ರಾಜಕ್ಕಣ್ಣು ಲಾಕಪ್ಪಿನಲ್ಲೇ ಕೊಲೆಯಾದ ವಿಷಯ ಹೊರಗೆ ಬರುತ್ತದೆ. ಆ ಪ್ರಕರಣದಿಂದ ತಮಿಳುನಾಡಿನಲ್ಲಿ ಅಲೆಮಾರಿ ಸಮುದಾಯ, ದಲಿತ ಸಮುದಾಯದ ಮೇಲೆ ಪೊಲೀಸರು ಮಾಡುತ್ತಿರುವ ದೌರ್ಜನ್ಯವೂ ಬೆಳಕಿಗೆ ಬರುತ್ತದೆ. ಇದೇ ಘಟನೆಯನ್ನು ಆಧಾರವಾಗಿಟ್ಟುಕೊಂಡು 'ಜೈ ಭೀಮ್' ಸಿನಿಮಾ ಮಾಡಲಾಗಿದೆ. ಪ್ರಕರಣ ವಾದಿಸಿದ ಚಂದ್ರು ಮುಂದೆ ನ್ಯಾಯಮೂರ್ತಿ ಚಂದ್ರು ಆಗಿ ಈಗ ನಿವೃತ್ತರಾಗಿದ್ದಾರೆ.

    English summary
    Vanniyar Sangam issue notice to Suriya about Jai Bhim movie. They alleged that Jai Bhim movie showed their community in bad light.
    Tuesday, November 16, 2021, 9:55
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X