ಶೀಘ್ರದಲ್ಲೇ ಹೊಸ ಅವತಾರದಲ್ಲಿ ಅಭಿಮಾನಿಗಳ ಮುಂದೆ ಬರಲಿದ್ದಾರೆ ಸಮಂತಾ

ವರುಣ್ ಧವನ್ ಹಾಗೂ ಸಮಂತಾ ನಟನೆಯ 'ಸಿಟಾಡೆಲ್' ವೆಬ್‌ ಸೀರಿಸ್ ಕಾರಣಾಂತರಗಳಿಂದ ತಡವಾಗುತ್ತಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗೆ ಸ್ಟ್ರೀಮಿಂಗ್ ಆಗಬೇಕಿತ್ತು. ಮಯೊಸೈಟಿಸ್ ಸಮಸ್ಯೆಯಿಂದ ಬಳಲುತ್ತಿರುವ ಸ್ಯಾಮ್ ಅದರ ವಿರುದ್ಧ ಹೋರಾಡುತ್ತಲೇ ಕೆಲಸ ಮುಂದುವರೆಸಿದ್ದಾರೆ.

ಒಂದ್ಕಡೆ ಸಿನಿಮಾಗಳಲ್ಲಿ ಸ್ಟಾರ್ ನಟಿಯಾಗಿ ಮಿಂಚುತ್ತಿರುವ ಸಮಂತಾ ಮತ್ತೊಂದು ಕಡೆ ವೆಬ್ ಸೀರಿಸ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 'ಫ್ಯಾಮಿಲಿಮ್ಯಾನ್-2' ಸೀರಿಸ್‌ನಲ್ಲಿ ರಾಜಿ ಪಾತ್ರದಲ್ಲಿ ಆಕೆ ಕಮಾಲ್ ಮಾಡಿದ್ದರು. ಪವರ್‌ಫುಲ್ ಪಾತ್ರದಲ್ಲಿ ನಟಿಸಿ ಗೆದ್ದಿದ್ದರು. ಆಕೆಯ ನಟನೆಗೆ ಅಭಿಮಾನಿಗಳು ಫಿದಾ ಆಗಿದ್ದರು. ಇತ್ತೀಚೆಗೆ ಮಹಿಳಾ ಪ್ರಧಾನ ಪ್ರಾಜೆಕ್ಟ್‌ಗಳಲ್ಲಿ ಸ್ಯಾಮ್ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ.

Varun Dhawan and Samantha Starrer citadel web series Streaming Plans On april 2024

ಮಯೋಸಿಟಿಸ್‌ನಿಂದ ಬಳಲುತ್ತಿರುವ ಆಕೆ ಸದ್ಯ ವಿದೇಶದಲ್ಲಿ ಚಿಕಿತ್ಸೆ ಪಡೆದು ರಿಲ್ಯಾಕ್ಸ್ ಮೋಡ್‌ನಲ್ಲಿದ್ದಾರೆ. ಆಗಾಗ್ಗೆ ಆಧ್ಯಾತ್ಮಿಕ ಪ್ರವಾಸಕ್ಕೆ ಹೋಗಿ ಬರುತ್ತಿದ್ದಾರೆ. ಇತ್ತೀಚೆಗೆ ಶಾಲೆಯಲ್ಲಿ ಚಿಕ್ಕ ಮಕ್ಕಳ ಜೊತೆ ಕಾಣಿಸಿಕೊಂಡಿದ್ದರು. ಮಕ್ಕಳೊಂದಿಗೆ ಕೆಲವೊತ್ತು ಕಳೆದು ಇದನ್ನು ಆಕೆ ತನ್ನ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು. ಅಂದಹಾಗೆ ಜುಬಿಲಿ ಹಿಲ್ಸ್‌ನ ಪ್ರಿ-ಸ್ಕೂಲ್‌ನಲ್ಲಿ ನಡೆದ ಕ್ರೀಡಾ ದಿನಾಚರಣೆಯಲ್ಲಿ ಸ್ಯಾಮ್ ಭಾಗವಹಿಸಿದ್ದರು. ಅಭಿಮಾನಿಗಳ ಜೊತೆಗಿನ ಫೋಟೊ ಹಂಚಿಕೊಂಡು "ಒಂದು ಪುಸ್ತಕ, ಒಂದು ಪೆನ್ನು, ಒಂದು ಮಗು, ಒಬ್ಬ ಶಿಕ್ಷಕ ಮಾತ್ರ ಈ ಜಗತ್ತನ್ನು ಬದಲಾಯಿಸಬಲ್ಲರು' ಎಂದು ಪೋಸ್ಟ್ ಮಾಡಿದ್ದರು.

ಇನ್ನು 'ಫ್ಯಾಮಿಲಿಮ್ಯಾನ್' ಸೀರಿಸ್ ಕಟ್ಟಿಕೊಟ್ಟ ರಾಜ್ ಮತ್ತು ಡಿಕೆ ಜೋಡಿ 'ಸಿಟಾಡೆಲ್'ಗೂ ಸಾರಥ್ಯ ವಹಿಸಿಕೊಂಡಿದ್ದಾರೆ. ಈಗಾಗಲೇ ಹಾಲಿವುಡ್‌ನಲ್ಲಿ ಈ ಸೀರಿಸ್ ಬಂದು ಹೋಗಿದೆ. ಅದೇ ಕತೆಯನ್ನು ಹಿಂದಿ ಹಾಗೂ ಇನ್ನಿತರ ಭಾಷೆಗಳಲ್ಲಿ ಹೇಳುವ ಪ್ರಯತ್ನ ನಡೀತಿದೆ. ಈಗಾಗಲೇ ಭರದಿಂದ ಚಿತ್ರೀಕರಣ ಸಾಗುತ್ತಿದೆ.

Varun Dhawan and Samantha Starrer citadel web series Streaming Plans On april 2024

ಕೆಲ ದಿನಗಳ ಹಿಂದೆ ವಿದೇಶಕ್ಕೆ ತೆರಳಿ ವರುಣ್ ಧವನ್ ಹಾಗೂ ಸಮಂತಾ 'ಸಿಟಾಡೆಲ್' ಪ್ರಚಾರದಲ್ಲಿ ಭಾಗಿ ಆಗಿದ್ದರು. ಅಂದಹಾಗೆ ಅಮೇಜಾನ್ ಪ್ರೈಮ್‌ನಲ್ಲಿ ಈ ಆಕ್ಷನ್ ಅಡ್ವೆಂಚರಸ್ ವೆಬ್‌ ಸೀರಿಸ್ ಸ್ಟ್ರೀಮಿಂಗ್ ಆಗಲಿದೆ. ಕೊನೆಯದಾಗಿ ಸ್ಯಾಮ್ ನಟನೆಯ 'ಖುಷಿ' ಸಿನಿಮಾ ರಿಲೀಸ್ ಆಗಿತ್ತು. ಮಯೋಸೈಟಿಸ್‌ ಸಮಸ್ಯೆಗೆ ಗುರಿಯಾದ ಬಳಿಕ ಯಾವುದೇ ಹೊಸ ಪ್ರಾಜೆಕ್ಟ್ ಒಪ್ಪಿಕೊಂಡಿಲ್ಲ.

'ಚೆನ್ನೈ ಸ್ಟೋರೀಸ್' ಎನ್ನುವ ಇಂಗ್ಲೀಷ್ ಸಿನಿಮಾ ಶೂಟಿಂಗ್ ಮುಗಿಸಿದ್ದಾರೆ. ಇನ್ನುಳಿದಂತೆ ಆಕೆಯ ಸಂಪೂರ್ಣ ಗಮನ 'ಸಿಟಾಡೆಲ್' ವೆಬ್‌ ಸೀರಿಸ್ ಮೇಲಿದೆ. ಏಪ್ರಿಲ್‌ನಲ್ಲಿ ಇದು ಸ್ಟ್ರೀಮಿಂಗ್ ಆಗುತ್ತದೆ ಎನ್ನುವ ಮಾಹಿತಿ ಲಭ್ಯವಾಗುತ್ತಿದೆ. ಸದ್ಯ ಭರದಿಂದ ಚಿತ್ರೀಕರಣ ನಡೀತಿದೆ. ಸಣ್ಣ ಸಣ್ಣ ಶೆಡ್ಯೂಲ್‌ಗಳಲ್ಲಿ ಸೆರೆ ಹಿಡಿಯುವ ಪ್ರಯತ್ನ ಸಾಗಿದೆ.

ಇತ್ತೀಚೆಗೆ ಸಮಂತಾ ಸಾಕಷ್ಟು ಸಂಕಷ್ಟ ಎದುರಿಸುವಂತಾಯಿತು. ನಾಗಚೈತನ್ಯಾಗೆ ಡಿವೋರ್ಸ್ ನೀಡಿ ದೂರಾದರು. ಬಳಿಕ ಮಯೋಸೈಟಿಸ್ ಸಮಸ್ಯೆಗೆ ಗುರಿಯಾದರು. ಇತ್ತೀಚೆಗೆ ಯಾಕೋ ನಟಿಸಿದ ಸಿನಿಮಾಗಳೆಲ್ಲಾ ಸೋತು ಸುಣ್ಣವಾಗಿದೆ. ಇದೇ ವಿಚಾರದ ಬಗ್ಗೆ ಇತ್ತೀಚೆಗೆ ಒಂದು ಮ್ಯಾಗಝೀನ್ ಸಂದರ್ಶನದಲ್ಲಿ ಸ್ಯಾಮ್ ಮಾತನಾಡಿದ್ದರು.

"ನನಗೆ ಒಟ್ಟಿಗೆ ಮುರಿದ ದಾಂಪತ್ಯ, ನನ್ನ ಅನಾರೋಗ್ಯ ಮತ್ತು ಸಾಲು ಸಾಲು ಬಾಕ್ಸ್ ಆಫೀಸ್ ಸೋಲು ತೀವ್ರ ಪರಿಣಾಮ ಬೀರಿತ್ತು. ಅದು ಒಟ್ಟಿಗೆ ನನಗೆ ತ್ರಿವಳಿ ಹೊಡೆತದಂತಿತ್ತು. ಬೂಮ್, ಬೂಮ್, ಬೂಮ್" ಎಂದಿದ್ದರು.

"ನಿಮಗೆ ಗೊತ್ತಾ, ಜನರು ಕುಸಿಯುತ್ತಾರೆ ನಿಜ. ಆದರೆ, ಕಳೆದ 2 ವರ್ಷಗಳಿಂದ ನಾನು ಅನುಭವಿಸಿದ್ದು ಅದಕ್ಕಿಂತ ಹೆಚ್ಚು. ಆ ಸಮಯದಲ್ಲಿ, ನಾನು ಆರೋಗ್ಯ ಸಮಸ್ಯೆಗಳ ಜೊತೆಗೆ ಹೋರಾಡಿದ ಕಲಾವಿದರ ಬಗ್ಗೆ ಓದಿದ್ದೇನೆ. ಏಕೆಂದರೆ ಟ್ರೋಲಿಂಗ್ ಅಥವಾ ಆತಂಕ ಎದುರಿಸಲು ಅವರ ಕಥೆಗಳನ್ನು ಓದುವುದು ನನಗೆ ಸಹಕಾರಿಯಾಯಿತು" ಎಂದು ವಿವರಿಸಿದ್ದರು.

More from Filmibeat

English summary
Varun Dhawan and Samantha's Citadel from April 2024.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X