For Quick Alerts
  ALLOW NOTIFICATIONS  
  For Daily Alerts

  'ಮನಿಹೈಸ್ಟ್' ವೆಬ್ ಸರಣಿ ಬಿಡುಗಡೆ ದಿನ ಸಿಬ್ಬಂದಿಗೆ ರಜೆ ಘೋಷಿಸಿದ ಸಂಸ್ಥೆ!

  By ಫಿಲ್ಮೀಬೀಟ್ ಡೆಸ್ಕ್‌
  |

  ಕಾರ್ಪೊರೇಟ್ ಕಂಪೆನಿಗಳು ಇರುವ ರಜೆಗಳನ್ನೇ ನೀಡುವುದು ಕಷ್ಟ. ವರ್ಕ್‌ ಫ್ರಮ್ ಹೋಮ್ ಸಂಸ್ಕೃತಿ ಬಂದ ಬಳಿಕವಂತೂ ಸಿಬ್ಬಂದಿಗೆ ಕೆಲಸದ ಒತ್ತಡ ಇನ್ನಷ್ಟು ಹೆಚ್ಚಾಗಿದೆ. ಇಂಥಹಾ ಸಂದರ್ಭದಲ್ಲಿ ಕಾರ್ಪೊರೇಟ್ ಕಂಪೆನಿಯೊಂದು ವೆಬ್ ಸರಣಿ ಬಿಡುಗಡೆ ಆಗುವ ದಿನದಂದು ತನ್ನ ಸಿಬ್ಬಂದಿಗೆ ರಜೆ ಘೋಷಿಸಿದೆ!

  ಹೌದು, ಜೈಪುರದ ವೆರ್ವೆಲಾಜಿಕ್ ಹೆಸರಿನ ಸಂಸ್ಥೆ, ನೆಟ್‌ಫ್ಲಿಕ್ಸ್‌ನಲ್ಲಿ 'ಮನಿ ಹೈಸ್ಟ್' ವೆಬ್ ಸರಣಿಯ ಐದನೇ ಸೀಸನ್ ಬಿಡುಗಡೆ ಆಗುವ ಸೆಪ್ಟೆಂಬರ್ 03 ರಂದು ತನ್ನ ಸಿಬ್ಬಂದಿಗೆ ರಜೆ ಘೋಷಿಸಿದೆ.

  ಸಂಸ್ಥೆಯ ಸಿಬ್ಬಂದಿ ವೆಬ್‌ಸರಣಿ ವೀಕ್ಷಿಸಲೆಂದೇ ಈ ರಜೆಯನ್ನು ಘೋಷಿಸಿದ್ದು, ರಜೆ ಘೋಷಣೆ ಬಗ್ಗೆ ಒಂದು ಪೋಸ್ಟರ್‌ ಸಹ ಹೊರಡಿಸಿದ್ದು, ಸಂಸ್ಥೆಯ ಸಿಬ್ಬಂದಿಗೆ ಕಳುಹಿಸಿದೆ.

  ಸೆಪ್ಟೆಂಬರ್ 03ರ ವರ್ಕ್‌ ಫ್ರಮ್ ಹೋಮ್ ಟಾಸ್ಕ್ ಲಿಸ್ಟ್‌ ಅನ್ನು ಸಂಸ್ಥೆಯು ಹೊರಡಿಸಿದ್ದು, ಬೆಳಿಗ್ಗೆ 10 ಗಂಟೆಗೆ ನೆಟ್‌ಫ್ಲಿಕ್ಸ್‌ಗೆ ಲಾಗಿನ್ ಆಗಿ. ಸಂಜೆ 5 ಗಂಟೆ ವರೆಗೆ 'ಮನಿಹೈಸ್ಟ್‌' ಸೀಸನ್ 5ನ ಎಲ್ಲ ಎಪಿಸೋಡ್‌ಗಳನ್ನು ನೋಡಿರಿ. 5 ರ ನಂತರ ನೆಟ್‌ಫ್ಲಿಕ್ಸ್‌ನ ಇತರೆ ವೆಬ್ ಸರಣಿಗಳನ್ನು ಸಹ ನೋಡಿರಿ ಎಂದಿದೆ ಸಂಸ್ಥೆ.

  'ಮನಿಹೈಸ್ಟ್' ಸೀಸನ್ 05 ಬಿಡುಗಡೆ ಆಗುವ ದಿನ ನಮಗೆ ರಜೆಗಾಗಿ ಬರಬಹುದಾದ ಸುಳ್ಳು ಇ-ಮೇಲ್‌ಗಳನ್ನು ತಡೆಯಲು ಸೆಪ್ಟೆಂಬರ್ 03ರಂದು ರಜೆ ಘೋಷಿಸುತ್ತಿದ್ದೇವೆ. ''ಕೆಲವು ಕಾಲದ ವಿಶ್ರಾಂತಿ, ಕೆಲಸದ ಸಮಯದಲ್ಲಿ ಎನರ್ಜಿ ಹೆಚ್ಚಿಸಲು ಸಹಕಾರಿ'' ಎಂದು ಸಂಸ್ಥೆ ಹೊರಡಿಸಿರುವ ಸುತ್ತೋಲೆಯಲ್ಲಿ ಹೇಳಲಾಗಿದೆ.

  ''ಪಾಪ್‌ಕಾರ್ನ್ ಮೆಲ್ಲುತ್ತಾ ಆರಾಮವಾಗಿ ಮನೆಯಲ್ಲಿ ಕುಳಿತು ಮನಿಹೈಸ್ಟ್ ವೆಬ್ ಸರಣಿಯ ಕೊನೆಯ ಸೀಸನ್ ನೋಡಿ. ನಮ್ಮೆಲ್ಲರ ಪ್ರೀತಿಯ ಫ್ರೊಫೆಸರ್‌ಗೆ ಗುಡ್‌ಬೈ ಹೇಳಿ' ಎಂದಿದೆ ಸಂಸ್ಥೆ. 'ಫ್ರೊಫೆಸರ್', 'ಮನಿಹೈಸ್ಟ್' ವೆಬ್ ಸರಣಿಯ ಮುಖ್ಯ ಪಾತ್ರ. 'ಮನಿಹೈಸ್ಟ್' ಸರಣಿಯ ಕೊನೆ ಸೀಸನ್ ಇದಾಗಿದ್ದು, ಸೀಸನ್ 5ರ ಬಳಿಕ ಮನಿಹೈಸ್ಟ್ ಮುಂದುವರೆಯುವುದಿಲ್ಲ.

  ''ಸಂಸ್ಥೆಯು ಕಷ್ಟದ ಸಮಯದಲ್ಲಿದ್ದಾಗ ನೀವೆಲ್ಲರು ಕಠಿಣ ಪರಿಶ್ರಮ ಹಾಕಿ ಸಂಸ್ಥೆಯನ್ನು ಕಠಿಣ ಪರಿಸ್ಥಿತಿಯಿಂದ ಹೊರಗೆ ತಂದ ನಿಮಗೆಲ್ಲ ಧನ್ಯವಾದ. ವರ್ಕ್‌ ಫ್ರಮ್ ಹೋಮ್‌ನಲ್ಲಿ ಸ್ಪೂರ್ತಿದಾಯಕವಾಗಿ ನೀವು ಕೆಲಸ ಮಾಡುತ್ತಿದ್ದೀರಿ. ಹೀಗಾಗಿ ಒಂದು ಬ್ರೇಕ್ ನಿಮಗೆ ಬೇಕಾಗಿದೆ' ಎಂದು ಸಂಸ್ಥೆಯು ಹೇಳಿದೆ.

  'ಮನಿಹೈಸ್ಟ್' ನೆಟ್‌ಫ್ಲಿಕ್ಸ್‌ನ ಬಹಳ ಜನಪ್ರಿಯ ವೆಬ್ ಸರಣಿಯಾಗಿದೆ. ವಿಶ್ವದಲ್ಲಿಯೇ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ವೆಬ್ ಸರಣಿ ಎಂಬ ಖ್ಯಾತಿಯನ್ನೂ ಈ ವೆಬ್ ಸರಣಿ ಹೊಂದಿದ್ದು, ಸೆಪ್ಟೆಂಬರ್ 03ರಂದು ವೆಬ್ ಸರಣಿಯ ಕೊನೆಯ ಸೀಸನ್‌ನ ಮೊದಲ ಭಾಗ ಬಿಡುಗಡೆ ಆಗಲಿದೆ.

  ಕೆಲವು ದಿನಗಳ ಹಿಂದಷ್ಟೆ 'ಮನಿಹೈಸ್ಟ್'ನ ಟ್ರೇಲರ್ ಬಿಡುಗಡೆ ಆಗಿದ್ದು, ಪೊಲೀಸರು, ಸೈನ್ಯವನ್ನು ಕರೆಸಿ ಮಿಂಟ್‌ನ ಒಳಗೆ ನುಗ್ಗಿಸಲು ಯತ್ನಿಸುತ್ತಾರೆ. ಮನಿ ಹೈಸ್ಟ್ ತಂಡ ಸಹ ಪ್ರೊಫೆಸರ್ ಬೆಂಬಲವಿಲ್ಲದೆ ಸರ್ಕಾರಿ ಸೈನಿಕರ ವಿರುದ್ಧ ಹೋರಾಟಕ್ಕೆ ನಿಲ್ಲುತ್ತದೆ. ಪ್ರೊಫೆಸರ್ ಬುದ್ಧಿವಂತಿಕೆಯಿಂದ ಪೊಲೀಸರ ಹಿಡಿತದಿಂದ ತಪ್ಪಿಸಿಕೊಂಡ ರಾಕೆಲ್ ಹೊರಾಟದ ಮುಂದಾಳತ್ವ ವಹಿಸಿಕೊಳ್ಳುತ್ತಾಳೆ. ಇಷ್ಟು ವಿಷಯ ಇದೀಗ ಬಿಡುಗಡೆ ಆಗಿರುವ ಟ್ರೇಲರ್‌ನಲ್ಲಿ ಕಾಣುತ್ತಿದೆ.

  ಸೀಸನ್‌ ನಾಲ್ಕರ ಅಂತ್ಯದಲ್ಲಿ ಪ್ರೊಫೆಸರ್‌ನ ಅಡುಗುತಾಣವನ್ನು ಅಮಾನತ್ತಾದ ಪೊಲೀಸ್ ಅಧಿಕಾರಿ ಅಲಿಸಾ ಪತ್ತೆ ಹಚ್ಚುತ್ತಾಳೆ. ಸೀಸನ್ 5ರ ಕತೆ ಅಲ್ಲಿಂದ ಆರಂಭವಾಗಲಿದೆ. ಟ್ರೇಲರ್‌ನಲ್ಲಿ ತೋರಿಸಿರುವಂತೆ ಅಲಿಸಾ, ಪ್ರೊಫೆಸರ್ ಅನ್ನು ಬಂಧಿಸಿ ಹಿಂಸೆ ಕೊಡುತ್ತಿದ್ದಾಳೆ. ಪ್ರೊಫೆಸರ್ ಬಂಧನಕ್ಕೆ ಒಳಗಾಗಿರುವ ವಿಷಯ ರಾಯಲ್ ಮಿಂಟ್ ಒಳಗಿರುವ ದರೋಡೆಕೋರರ ಗುಂಪಿಗೆ ತಿಳಿಯುತ್ತದೆ. ಅಲ್ಲಿಂದ ಐದನೇ ಸೀಸನ್ ಆರಂಭವಾಗಲಿದೆ.

  English summary
  Verve Logic company gave leave on September 03 to its employees to watch Money Heist season 05. This Netflix web series releasing on September 03.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X