Vettaiyan OTT: ರಜನಿಕಾಂತ್ 'ವೆಟ್ಟೆಯಾನ್' ಓಟಿಟಿ ಸ್ಟ್ರೀಮಿಂಗ್ ಎಲ್ಲಿ, ಯಾವಾಗ?

ಜ್ಞಾನವೇಲ್ ನಿರ್ದೇಶನದ ಕ್ರೈಂ ಸಸ್ಪೆನ್ಸ್ ಥ್ರಿಲ್ಲರ್ 'ವೆಟ್ಟೆಯಾನ್' ಬಿಡುಗಡೆಯಾಗಿ ಭರ್ಜರಿ ಪ್ರತಿಕ್ರಿಯೆ ಪಡೆದುಕೊಂಡಿದೆ. ಸಿನಿಮಾ ನೋಡಿದವರು ಮೆಚ್ಚಿಕೊಳ್ಳುತ್ತಿದ್ದಾರೆ. ರಜನಿಕಾಂತ್ ಮತ್ತೊಮ್ಮೆ ಗೆಲುವಿನ ನಗೆ ಬೀರಿದ್ದಾರೆ. ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಕೂಡ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದಭಿರುಚಿ ಸಿನಿಮಾ ಆಗಿ 'ವೆಟ್ಟೆಯಾನ್' ಹೊರ ಹೊಮ್ಮಿದೆ.

ಒಂದೊಳ್ಳೆ ಕಥೆ, ಚಿತ್ರಕಥೆ ಜೊತೆಗೆ ಕಮರ್ಷಿಯಲ್ ಅಂಶಗಳನ್ನು ಸೇರಿಸಿ 'ವೆಟ್ಟೆಯಾನ್' ಕಟ್ಟಿಕೊಡಲಾಗಿದೆ. ಪೊಲೀಸ್ ಎನ್‌ಕೌಂಟರ್ ಬಗ್ಗೆ ಚಿತ್ರದಲ್ಲಿ ಬೆಳಕು ಚೆಲ್ಲಲಾಗಿದೆ. ಮಲಯಾಳಂ ನಟ ಫಹಾದ್ ಫಾಸಿಲ್ ಹಾಗೂ ತೆಲುಗು ರಾಣಾ ದಗ್ಗುಬಾಟಿ ಕೂಡ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ. ಘಟಾನುಗಟಿ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಎಲ್ಲರಿಗೂ ಒಳ್ಳೆ ಪಾತ್ರಗಳನ್ನು ಚಿತ್ರಿಸಿ ಸೊಗಸಾದ ಸಿನಿಮಾ ಕಟ್ಟಿಕೊಡಲಾಗಿದೆ.

Vettaiyan OTT release When and where to watch Rajinikanth s action drama

ಒಂದು ಅತ್ಯಾಚಾರ ಮತ್ತು ಕೊಲೆಯ ಸುತ್ತಾ ಇಡೀ ಸಿನಿಮಾ ಕಥೆ ಸುತ್ತುತ್ತದೆ. ಆರೋಪಿಯನ್ನು ಎಸ್‌ಪಿ ಅಥಿಯಾನ್ (ರಜನಿಕಾಂತ್) ಎನ್‌ಕೌಂಟರ್ ಮಾಡುವುದು ಮಾಡುವುದು, ಮುಂದೆ ಅದರ ಪರಿಣಾಮ ಏನೆಲ್ಲಾ ಆಗುತ್ತದೆ ಎನ್ನುವ ಕಥೆ ಚಿತ್ರದಲ್ಲಿದೆ. ಲೈಕಾ ಪ್ರೊಡಕ್ಷನ್ಸ್ ಸಂಸ್ಥೆ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡಿದೆ. ಕಧಿರ್ ಛಾಯಾಗ್ರಹಣ, ಅನಿರುದ್ಧ್ ರವಿಚಂದರ್ ಮ್ಯೂಸಿಕ್ 'ವೆಟ್ಟೆಯಾನ್' ಚಿತ್ರಕ್ಕೆ ಪೂರಕವಾಗಿದೆ.

ಪ್ಯಾನ್ ಇಂಡಿಯಾ ಮಟ್ಟದಲ್ಲಿ 'ವೆಟ್ಟೆಯಾನ್' ಸಿನಿಮಾ ಬಿಡುಗಡೆಯಾಗಿದೆ. ಕನ್ನಡ ಸೇರಿ 5 ಭಾಷೆಗಳಲ್ಲಿ ಪ್ರೇಕ್ಷಕರ ಮುಂದೆ ಬಂದಿದೆ. ಕರ್ನಾಟಕದಲ್ಲಿ ಕೂಡ ದೊಡ್ಡ ಮಟ್ಟದಲ್ಲಿ ಸಿನಿಮಾ ತೆರೆಗೆ ಬಂದಿದೆ. ಬೆಳ್ಳಂ ಬೆಳಗ್ಗೆ 4 ಗಂಟೆಗೆ ರಾಜ್ಯದಲ್ಲಿ ಮೊದಲ ಪ್ರದರ್ಶನ ಆರಂಭವಾಗಿತ್ತು. ಚಿತ್ರಕ್ಕೆ ಎಲ್ಲೆಡೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ತಿದ್ದು ದಸರಾ ಸಂಭ್ರಮದಲ್ಲಿ ಸಿನಿಮಾ ದೊಡ್ಡದಾಗಿ ಸದ್ದು ಮಾಡುವ ನಿರೀಕ್ಷೆಯಿದೆ.

Vettaiyan OTT release When and where to watch Rajinikanth s action drama

'ವೆಟ್ಟೆಯಾನ್' ಓಟಿಟಿ ಸ್ಟ್ರೀಮಿಂಗ್ ಬಗ್ಗೆ ಚರ್ಚೆ ಆರಂಭವಾಗಿದೆ. ಯಾವುದೇ ಸಿನಿಮಾ ತೆರೆಕಂಡು 7 ವಾರಗಳ ಬಳಿಕ ಓಟಿಟಿಗೆ ಬರಬೇಕು ಎಂದು ಇತ್ತೀಚೆಗೆ ತಮಿಳು ಸಿನಿಮಾ ನಿರ್ಮಾಪಕರು ಆಗ್ರಹಿಸಿದ್ದರು. ಆದರೆ ಅದಕ್ಕೆ ಕ್ಯಾರೆ ಎನ್ನುವವರಿಲ್ಲ. ವಿಜಯ್ ನಟಿಸಿದ 'GOAT' ಸಿನಿಮಾ ಕೂಡ ಒಂದೇ ತಿಂಗಳಿಗೆ ಡಿಜಿಟಲ್ ಸ್ಟ್ರೀಮಿಂಗ್ ಆರಂಭಿಸಿದೆ. ಇನ್ನು 'ವೆಟ್ಟೆಯಾನ್' ಓಟಿಟಿ ರೈಟ್ಸ್ ಕೂಡ ಭಾರೀ ಮೊತ್ತಕ್ಕೆ ಬಿಕರಿಯಾಗಿದೆ.

ಅಮೇಜಾನ್ ಪ್ರೈಂ ವೀಡಿಯೋ ಸಂಸ್ಥೆ 'ವೆಟ್ಟೆಯಾನ್' ಡಿಜಿಟಲ್ ಹಕ್ಕುಗಳನ್ನು ಕೊಂಡುಕೊಂಡಿದೆ. ಬರೋಬ್ಬರಿ 90 ಕೋಟಿ ರೂ.ಗೆ ಡೀಲ್ ಕುದುರಿದೆ ಎನ್ನುವ ಚರ್ಚೆ ನಡೀತಿದೆ. ತಿಂಗಳ ಬಳಿಕ ಅಂದರೆ ನವೆಂಬರ್ 10ರ ನಂತರ ಸಿನಿಮಾ 5 ಭಾಷೆಗಳಲ್ಲಿ ಓಟಿಟಿಗೆ ಎಂಟ್ರಿ ಕೊಡುವ ನಿರೀಕ್ಷೆಯಿದೆ. ಇನ್ನು ಚಿತ್ರದ ಸ್ಯಾಟಲೈಟ್ ರೈಟ್ಸ್ ಸನ್ ಪಿಕ್ಚರ್ಸ್ ಪಾಲಾಗಿದೆ. ಓಟಿಟಿಗೆ ಬಂದ ಕೆಲವೇ ದಿನಗಳಲ್ಲಿ ಸಿನಿಮಾ ಸನ್ ಟಿವಿ ಹಾಗೂ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

'ವೆಟ್ಟೆಯಾನ್' ಬಳಿಕ 'ಲಾಲ್ ಸಲಾಂ' ಸಿನಿಮಾ ಮಾಡಿ ರಜನಿಕಾಂತ್ ಸೋತಿದ್ದರು. ಆ ಚಿತ್ರದಲ್ಲಿ ಹೀರೊ ಆಗಿ ಅಲ್ಲದೇ ಇದ್ದರೂ ಪ್ರಮುಖ ಪಾತ್ರದಲ್ಲಿ ಮಿಂಚಿದ್ದರು. ಐಶ್ವರ್ಯ ರಜನಿಕಾಂತ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಈ ಸಿನಿಮಾ ಕಾರಣಾಂತಗಳಿಂದ ಓಟಿಟಿಗೆ ಬರುವುದು ಕಷ್ಟವಾಗುತ್ತಿದೆ. ಇದೀಗ 'ವೆಟ್ಟೆಯಾನ್' ತೆರೆಕಂಡು ಪ್ರೇಕ್ಷಕರನ್ನು ರಂಜಿಸುತ್ತಿದೆ.

ಈ ಹಿಂದೆ ಜ್ಞಾನವೇಲ್ 'ಜೈಭೀಮ್' ಸಿನಿಮಾ ಕಟ್ಟಿಕೊಟ್ಟು ಗೆದ್ದಿದ್ದರು. ಲೀಗಲ್ ಡ್ರಾಮಾ ಕಥೆ ಹೇಳಿದ್ದರು. 'ವೆಟ್ಟೆಯಾನ್' ಚಿತ್ರದಲ್ಲಿ ಹೆಚ್ಚು ಕಮ್ಮಿ ಅದೇ ವಿಷಯದ ಬಗ್ಗೆ ಮಾತನಾಡಿದ್ದಾರೆ. ಆದರೆ ಒಂದಷ್ಟು ಬದಲಾವಣೆ ಜೊತೆಗೆ ರಜನಿಕಾಂತ್‌ ಇಮೇಜ್‌ಗೆ ತಕ್ಕಂತೆ ಕಥೆ ಮಾಡಿ ಸಿನಿಮಾ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಇದರಲ್ಲಿ ಭಾಗಶಃ ಗೆದ್ದಿದ್ದಾರೆ. ಮುಂದೆ ಏನಾಗುತ್ತದೆ ಎಂದು ಕಾದು ನೋಡಬೇಕಿದೆ.

Disclaimer:

ನವೆಂಬರ್ 2ನೇ ವಾರದಲ್ಲಿ ವೆಟ್ಟೆಯಾನ್ ಸಿನಿಮಾ ಓಟಿಟಿ ಬರುತ್ತದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಆದರೆ ಈ ಬಗ್ಗೆ ಪ್ರೈಂ ವೀಡಿಯೋ ಯಾವುದೇ ಮಾಹಿತಿ ನೀಡಿಲ್ಲ.

More from Filmibeat

English summary
Rajinikanth and Amitabh Bachchan starrer Vettaiyan OTT release details;
Read more about: rajinikanth ott amitabh bachchan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X