ಮಧ್ಯರಾತ್ರಿ 10ಕ್ಕೂ ಹೆಚ್ಚು ಹಿಟ್ ಚಿತ್ರಗಳು ಓಟಿಟಿಯಲ್ಲಿ ಸ್ಟ್ರೀಮಿಂಗ್; ಮಿಸ್ ಮಾಡ್ಬೇಡಿ
ವೀಕೆಂಡ್ ಬಂದ್ರೆ ಚಿತ್ರಮಂದಿರ ಮಾತ್ರವಲ್ಲ ಓಟಿಟಿ ವೀಕ್ಷಕರಿಗೂ ಭರ್ಜರಿ ಮನರಂಜನೆ ಕಾದಿರುತ್ತದೆ. ಕೆಲವೊಮ್ಮೆ ಅತ್ತ ಥಿಯೇಟರ್ ಇತ್ತ ಓಟಿಟಿ ಎರಡೂ ಕಡೆ ಒಳ್ಳೆ ಸಿನಿಮಾಗಳು ಬರಲ್ಲ. ಇನ್ನು ಕೆಲವೊಮ್ಮೆ ಒಟ್ಟೊಟ್ಟಿಗೆ ದೊಡ್ಡ ದೊಡ್ಡ ಚಿತ್ರಗಳು ಸ್ಟ್ರೀಮಿಂಗ್ ಆಗುತ್ತವೆ.
ಓಟಿಟಿಯಲ್ಲಿ ಆಗೊಮ್ಮೆ ಈಗೊಮ್ಮೆ ಹಿಟ್ ಸಿನಿಮಾಗಳು ರಿಲೀಸ್ ಆಗುತ್ತವೆ. ಈ ಶುಕ್ರವಾರ(ನವೆಂಬರ್ 8) ಕೂಡ ಚಿತ್ರಮಂದಿರಗಳಲ್ಲಿ ತೆರೆಕಂಡು ಗೆದ್ದ ಚಿತ್ರಗಳು ಅಪ್‌ಲೋಡ್ ಆಗುತ್ತಿದೆ. ಯಾವುದನ್ನು ನೋಡೋದು ಯಾವುದು ಬಿಡೋದು ಎನ್ನುವ ಮಟ್ಟಿಗೆ ಗೊಂದಲ ಮೂಡಿಸುವಂತ ಸಿನಿಮಾಗಳು ಲಿಸ್ಟ್‌ನಲ್ಲಿವೆ.

1. ಸಿಟಾಡೆಲ್: ಹನಿ ಬನ್ನಿ
ವರುಣ್ ಧವನ್ ಹಾಗೂ ಸಮಂತಾ ನಟನೆಯ 'ಸಿಟಾಡೆಲ್' ವೆಬ್ ಸೀರಿಸ್ ಫಸ್ಟ್ ಸೀಸನ್ ಸದ್ಯ ಸ್ಟ್ರೀಮಿಂಗ್ ಆರಂಭಿಸಿದೆ. ಮಧ್ಯರಾತ್ರಿಯಿಂದಲೇ ಪ್ರೈಂ ವೀಡಿಯೋದಲ್ಲಿ ಸಿನಿರಸಿಕರು ಸ್ಪೈ ಥ್ರಿಲ್ಲರ್ ಸೀರಿಸ್ ನೋಡಿ ಎಂಜಾಯ್ ಮಾಡುತ್ತಿದ್ದಾರೆ. ರಾಜ್ & ಡಿಕೆ ಜೋಡಿ ಇದಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ ನೋಡಿದವರು ಮೆಚ್ಚಿ ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.
2. ವೆಟ್ಟೆಯಾನ್
ಜ್ಞಾನವೇಲ್ ನಿರ್ದೇಶನದಲ್ಲಿ ರಜನಿಕಾಂತ್ ನಟನೆಯ 'ವೆಟ್ಟೆಯಾನ್' ಓಟಿಟಿ ಸ್ಟ್ರೀಮಿಂಗ್‌ಗೆ ಕ್ಷಣಗಣನೆ ಶುರುವಾಗಿದೆ. ಮಧ್ಯರಾತ್ರಿಯಿಂದಲೇ ಪ್ರೈಂ ವೀಡಿಯೋಗೆ ಸಿನಿಮಾ ಬರಲಿದೆ. ರಜನಿಕಾಂತ್ ಚಿತ್ರದಲ್ಲಿ ಎಸ್‌ಪಿ ಅಥಿಯಾನ್ ಆಗಿ ಅಬ್ಬರಿಸಿದ್ದಾರೆ. ಅಮಿತಾಬ್ ಬಚ್ಚನ್, ಫಹಾದ್ ಫಾಸಿಲ್, ರಾಣಾ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ. ಲೈಕಾ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಾಣದ 'ವೆಟ್ಟೆಯಾನ್' ತಕ್ಕ ಮಟ್ಟಿಗೆ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿತ್ತು.

3. ದೇವರ
ಜ್ಯೂ. ಎನ್‌ಟಿಆರ್ ನಟನೆಯ 'ದೇವರ' ಚಿತ್ರ ಕೂಡ ಮಧ್ಯರಾತ್ರಿಯಿಂದಲೇ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ. ಕನ್ನಡಕ್ಕೂ ಡಬ್ ಆಗಿ ಸಿನಿಮಾ ರಿಲೀಸ್ ಆಗಲಿದೆ. ಸೆಪ್ಟೆಂಬರ್ 27ಕ್ಕೆ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ತೆರೆಗೆ ಬಂದಿತ್ತು. ಮಿಶ್ರಪ್ರತಿಕ್ರಿಯೆ ಪಡೆದುಕೊಂಡಿತ್ತು. ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ನಿರ್ಮಾಣದ ಚಿತ್ರದಲ್ಲಿ ತಾರಕ್ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಮುಂದೆ ಚಿತ್ರದ ಸೀಕ್ವೆಲ್ ಕೂಡ ಬರಲಿದೆ. 300 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದ್ದ ಚಿತ್ರ 400 ಕೋಟಿ ರೂ. ಗಳಿಕೆ ಕಂಡಿದ್ದಾಗಿ ಹೇಳಲಾಗಿತ್ತು.
4. ವಿಜಯ್ 69
ಅನುಪಮ್ ಖೇರ್ ನಟನೆಯ 'ವಿಜಯ್ 69' ಸಿನಿಮಾ ನೇರವಾಗಿ ನೆಟ್‌ಫ್ಲಿಕ್ಸ್‌ಗೆ ಎಂಟ್ರಿ ಕೊಡ್ತಿದೆ. ಮಧ್ಯರಾತ್ರಿಯಿಂದಲೇ ಸ್ಟ್ರೀಮಿಂಗ್ ಆಗಲಿದೆ. ಅಕ್ಷಯ್ ರಾಯ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. 69 ನೇ ವಯಸ್ಸಿನಲ್ಲಿ ಒಬ್ಬ ವ್ಯಕ್ತಿ ಟ್ರಯಥ್ಲಾನ್ ಸ್ಪರ್ಧೆಯಲ್ಲಿ ಭಾಗವಹಿಸುವ ಕಥೆ ಚಿತ್ರದಲ್ಲಿದೆ.
5. ARM
ಮಲಯಾಳಂನ 'ಅಜಾಯನ್ತೇ ರಂದಂ ಮೋಷನಮ್' ಸಿನಿಮಾ ಕೂಡ ಶುಕ್ರವಾರವೇ ಓಟಿಟಿಗೆ ಬರ್ತಿದೆ. ಡಿಸ್ನಿ ಪ್ಲಸ್ ಹಾಟ್‌ಸ್ಟರ್‌ನಲ್ಲಿ ಸಿನಿಮಾ ವೀಕ್ಷಣೆಗೆ ಸಿಗಲಿದೆ. ಈ ಆಕ್ಷನ್ ಅಡ್ವೆಂಚರಸ್ ಕಾಸ್ಟ್ಯೂಮ್ ಡ್ರಾಮಾದಲ್ಲಿ ಟೊವಿನೊ ಥಾಮಸ್ ಜೊತೆ ಕೃತಿ ಶೆಟ್ಟಿ ಮಿಂಚಿದ್ದಾರೆ. ಮ್ಯಾಜಿಕ್ ಫ್ರೇಮ್ಸ್ ಹಾಗೂ
UGM ಎಂಟರ್‌ಟೈನ್‌ಮೆಂಟ್ ಸಂಸ್ಥೆಗಳು ಜಂಟಿಯಾಗಿ ಸಿನಿಮಾ ನಿರ್ಮಾಣ ಮಾಡಿದ್ದವು. ಅಂದಾಜು 30 ಕೋಟಿ ರೂ. ಬಜೆಟ್ ಸಿನಿಮಾ 100 ಕೋಟಿ ಗಳಿಕೆ ಕಂಡಿದ್ದಾಗಿ ವರದಿಯಾಗಿತ್ತು.
ಇನ್ನುಳಿದಂತೆ 'ಅನ್ಝೋಲೋ: ದಿ ಗಾನ್ ಗರ್ಲ್' ಇಂಗ್ಲೀಷ್ ಸಿನಿಮಾ, 'ಬ್ಯಾಕ್ ಅಂಡರ್ ಸೀಜ್' ಸ್ಪ್ಯಾನಿಷ್ ವೆಬ್ ಸೀರಿಸ್, 'ಇನ್ವೆಸ್ಟಿಗೇಶನ್ ಏಲಿಯನ್' ಇಂಗ್ಲೀಷ್ ವೆಬ್ ಸೀರಿಸ್, 'ಮಿ. ಪ್ಲಾಂಕ್ಟನ್' ಕೊರಿಯನ್ ವೆಬ್ ಸೀರಿಸ್ ಸೇರಿದಂತೆ ಹಲವು ಸಿನಿಮಾ ಹಾಗೂ ವೆಬ್ ಸೀರಿಸ್‌ಗಳು ಮಧ್ಯರಾತ್ರಿಯಿಂದಲೇ ಓಟಿಟಿಯಲ್ಲಿ ರಿಲೀಸ್ ಆಗುತ್ತಿವೆ. ವೀಕೆಂಡ್ ಓಟಿಟಿ ವೀಕ್ಷಕರಿಗೆ ಹಬ್ಬವೇ ಸರಿ.


Click it and Unblock the Notifications











